ನೀಲಿಯಾಕಾಶವ ಮರೆಮಾಚಿದ ಬೂದು ಬಣ್ಣದ ಮೋಡ.
ಮಬ್ಬು ಬೆಳಕು. ಈ ಮಬ್ಬಿನ ನಡುವೆ ಬಣ್ಣ ಬಣ್ಣಗ ಮಿಂಚು.
ಗಾಢ ನೀಲಿ, ಪಚ್ಚೆ ಹಸಿರು, ತಿಳಿ ಹಸಿರು, ನೇರಳೆ ನೀಲಿ,
ಚಿನ್ನದ ಹಳದಿ, ಬೆಳ್ಳಿಯ ಬಿಳಿ, ರಾಮಾ ಇನ್ನು ಅದೆಷ್ಟೋ ಬಣ್ಣಗಳು.
ಬಣ್ಣವೋ ಬಣ್ಣ. ಬಣ್ಣದೋಕುಳಿ.
ಗರಿಬಿಚ್ಚಿ ಕುಣಿದ ನಾಟ್ಯ ಶಂಕರ,
ಸೌಂದರ್ಯದ ಘಣಿ. ಮುದ್ದಾದ ಗಂಡು ನವಿಲು.
**********************************************
ಬಡ್ಡ ನೊಬ್ಬ ದೂಳು ಮೆತ್ತಿಕೊಂಡು ಕುಳಿತ್ತಲ್ಲಿಯೇ ಕುಳಿತಂತ್ತೆ ತೋರುತ್ತಿದ್ದ ಬಾನೆತ್ತರದ ಬೆಟ್ಟಗಳು.
ದಟ್ಟ ಕಾಡು, ಎಲ್ಲೆಡೆ ಹಸಿರು, ಆಗಲೇ ಬಂದೋದ ಮಿಂಚೊ೦ದು,
ನೂರಾರು ಕೀಟಗಳ ನಿನಾದ, ಪ್ರಾಣಿಗಳ ವಿಚಿತ್ರ ಶಬ್ದ,
ಗುಟರ್ಗು ಮಾಡುತ್ತಿರುವೆ ಗೂಬೆ. ವಟರುಗುಟ್ಟುವ ಕಪ್ಪೆ.
ಇಷ್ಟೆಲ್ಲ ಶಬ್ದಗಳನಡುವೆಯೂ ಅದೇನೋ ಅರಿವಿಗೆ ನಿಲುಕದ ಸುಂದರವಾದ ನಿಶಬ್ದ.
ಇನ್ನೇನು ಮಳೆಬರುವ ಮುನ್ಸೂಚನೆಗಳು.
ಈ ಮಾಯಾಜಾಲದಲ್ಲಿ ಕಳೆದುಹೋದ ನನ್ನನ್ನು ಎಬ್ಬಿಸಲೆಂದ ಗುಡುಗಿದ ಮೋಡ,
ಅರೇ! ಶುರುವಾಗಿಯೇ ಹೋಯ್ತು. ಮೋಡಗಳ ಚೀರಿಕೊಂಡು,
ಪಟ ಪಟವೆಂದು ನೀರ ಹನಿಗಳು ಮರದ ಎಲೆಗಳ ಮೇಲೆ ಬಿದ್ದು,
ಜುಐ ಯೆಂದು ಜಾರಿ ನೆಲಕುರುಳಿದೆ.
ಜೋರಾಯ್ತು ಮಳೆ ಈಗ.
ಹನಿ ಹನಿ ಸೇರಿ ಝರಿಯಾಗಿ ಎಲ್ಲೆಡೆಯೂ ಹರಿಯುತ್ತಿದೆ.
ಬಡ್ಡನ ಮೈ ತೊಳೆಯುತ್ತಿದೆ.
************************************************
ಜೀವನವೆಷ್ಟು ವಿಚಿತ್ರ.
ನಮ್ಮ ಜೀವಸೊಂಕುಲನದ ವಿಕಾಸನವಾಗಿರುವುದೇ ಹೀಗೆ. ನಾವೇನು ಮಾಡುವುದು.
ಭಾಹ್ಯ ಸೌಂದರ್ಯಕ್ಕಿಲ್ಲಿ ಹೆಚ್ಚು ಬೆಲೆ.
ತಪ್ಪೇನಿಲ್ಲ. ದೇಹ ಸೌಂದರ್ಯ ಆರೋಗ್ಯದ ಲಕ್ಷಣ.
ಪುಕ್ಕ ಬಿಚ್ಚಿ ಗಂಡು ನವಿಲು (ಬಹುತೇಕ ಎಲ್ಲಾ ಪಕ್ಷಿ ಪ್ರಭೇದಗಳನ್ನು ಪ್ರತಿನಿದಿಸುತ್ತ/ ಕೆಲವೊಮ್ಮೆ ಎಲ್ಲಾ ಉನ್ನತ ಜೀವ ಪ್ರಭೇದಗಳೆನ್ನಬಹುದು) ಕುಣಿಯಲೇ ಬೇಕು,
ತಾನೆಷ್ಟು ಚೆಂದವೆಂದು ಹೆಣ್ಣುನವಿಲಿಗೆ ತೋರಿಸಲೇ ಬೇಕು.
***********************************************
ಅಷ್ಟೊಂದು ಉದ್ದಉದ್ದವಾದ ಸುಂದರವಾದ ಗರಿಗಳನ್ನೊರಲು, ನವಿಲಿಗೆ ಭಾರವೆನಿಸುವುದಿಲ್ಲವೇ?
ಸೌಂದರ್ಯವೆಂಬುದು ಕಷ್ಟವೇ/ಭಾರವೇ? ಅಷ್ಟು ಕಷ್ಟದವಶ್ಯಕತೆ ಇದೆಯೇ?
ಅಥವ ಸೌಂದರ್ಯದಿಂದ ಸೌಂದರ್ಯಕ್ಕೆ ಕಷ್ಟವೇ?
ಬಿಡಿಸಿಕೊಂಡಷ್ಟು ಕಗ್ಗಂಟಾಗುವ ಪ್ರೆಶ್ನೆಗಳು. ಉತ್ತರಗಳು.
ಸುಂದವಾಗಿರುವುದನ್ನು ಯಾರಿಗೂ ಬಿಟ್ಟುಕೊಡಲು ಮನಸ್ಸಿರುವುದಿಲ್ಲ.
ಸೌಂದರ್ಯದೊಂದಿಗೆ ಸ್ವಾರ್ಥದ ಜನನ.
***********************************************
ಮಳೆಯೀಗ ನಿಂತಿದೆ. ಬಾನೀಗ ನಿರಾಳ.
ಮತ್ತದೇ ನೀಲಿ ನೀಲೀ,
ಆದರೆ ಅಲ್ಲಲ್ಲಿ ಛಿದ್ರ ಛಿದ್ರವಾಗಿ ಹರಡಿರುವ ಬೆಳ್ಳಿಯ ಮೋಡಗಳು.
ಚೆದುರಿದ ನಮ್ಮ ಕಲ್ಪನೆಗಳಂತೆ.
***********************************************