Tuesday, 1 May 2018

A boring story; Untold.

ಚಿಕ್ಕದಾಗಿ,ಚೊಕ್ಕವಾಗಿ ಹೇಳಲು ಪ್ರಯತ್ನಿಸುತ್ತೇನೆ.

೦೬-೦೨-೧೯೯೨; ೧.೪೪ P.M.
"ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ" ಅಂತಾರಲ್ಲ ಹಾಗೆ, ಇವತ್ತು ನಾನು ಹುಟ್ಟಿದೆ. ನನ್ಗೆ ಮನಸಿತ್ತೋ ಇಲ್ವೋ ಹುಟ್ಟಕ್ಕೆ ಗೊತ್ತಿಲ್ಲ, ಆದ್ರೆ ನನ್ನಮ್ಮನಿಗೆ ಒಂದೇ ಮಗು ಸಾಕಿತ್ತಂತೆ (ಅಣ್ಣನೊಬ್ಬ), ಅಪ್ಪನಿಗೆ ಇನ್ನೊಂದು ಮಗು ಬೇಕಂತ ಇದ್ದ ಕಾರಣ ನನ್ನ ಜನನ. ಹೆಣ್ಣು ಮಕ್ಕಳೆಂದರೆ ಅಮ್ಮನಿಗೆ ಏನು ದ್ವೇಷವಿಲ್ಲ, ಆದರೆ ನಾನು ಹೆಣ್ಣು ಮಗುವೆಂದು ತಿಳಿದು ಅಮ್ಮನಿಗೆ ಸ್ವಲ್ಪ ಬೇಜಾರಾಗಿತ್ತಂತೆ. ಕಾರಣ; ಇವಳು ಮುಂದೊಂದುದಿನ ನನ್ನ ಹಾಗೇ ಸಮಾಜದಲ್ಲಿ ಕಷ್ಟ ಪಡಬೇಕಲ್ಲವೆಂಬುದೇ ಹೊರತು ಬೇರೇನಲ್ಲ. ಎಷ್ಟೇ ಆದರೂ ಹೆಣ್ಣುಮಕ್ಕಳ್ಳಿಗೆ ಗಂಡು ಮಕ್ಕಳಷ್ಟು ಸ್ವಾತಂತ್ರ್ಯವಿಲ್ಲವಲ್ಲ ಅಂತ ಯಾಕಾದರೂ ನಾನು ಹೆಣ್ಣು ಮಗುವಾಗಿ ಹುಟ್ಟಿದೆ ಯೆಂದು ಅತ್ತಿದ್ದರಂತೆ. ಜಗದ ವಾಡಿಕೆ; ಗಂಡು ಮಕ್ಕಳೆಂದರೆ ತಾಯಿಗೆ ಪ್ರೀತಿ ಹೆಚ್ಚು, ತಂದೆಗೆ ಮುದ್ದು ಮಗಳೆಂದರೆ.. ಆದರೆ ನಮ್ಮ ಮನೆಯಲ್ಲಿ ಸ್ವಲ್ಪ ಉಲ್ಟ. ಅಪ್ಪನಿಗೆ ನನ್ನ ಮೇಲೆ ಪ್ರೀತಿಯಿಲ್ಲವೆಂದಲ್ಲ. ಆದರೆ ಅಮ್ಮನಷ್ಟು ನನ್ನ ಬೇರೆಯಾರು ಪ್ರೀತಿಸಲು ಸಾಧ್ಯವಿಲ್ಲ. ಇದರ ಹಿಂದೆಯೂ ಅಮ್ಮನದೊಂದು ಲಾಜಿಕ್ ಇದೆ, "ಹೆಣ್ಣು ಮಕ್ಕಳು ಮದ್ವೆಯಾಗಿ ನಮ್ಮನ್ನು ಒಂದಲ್ಲ ಒಂದು ದಿನ ಬಿಟ್ಟು ಹೋಗುತ್ತಾರೆ, ಅಲ್ಲಿ ನಂತರ ಅವರ ಜೀವನ ಹೇಗಿರುತ್ತೋ ಏನೋ, ನಮ್ಮೊಂದಿ ಇದ್ದಷ್ಟು ದಿನ ತುಂಬಾನೇ ಖುಷಿಯಾಗಿರಬೇಕು ಅಂತ". ಇಷ್ಟಲ್ಲದೆ ಹೇಳ್ತರೆಯೇ? "ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಾಸಿ ಯೆಂದು". ನನ್ನಮ್ಮ ಅಧ್ಭುತ. ಅವರು ನನ್ಪ್ರೀತಿ. ಆದ್ರೂ ಅವರಜೊತೆ ಆಡೋಅಷ್ಟು ಜಗಳ, ಬೇರೆ ಯಾರೊಂದಿಗೂ ಆಡಿಲ್ಲ.

****************************************************
Age 3 - Age 12

ನಾನಿನ್ನು ಪುಟ್ಟಿ. ಶ್ರುತಿ ನನ್ನ ಬಾಲ್ಯದ ಗೆಳತಿ, ಪಕ್ಕದ ಮನೆಯವಳು. ನನಗಿಂತ ಒಂದೊರ್ಷ ದೊಡ್ಡವಳು. ಅವಳು ಶಾಲೆಗೆ ಸೇರಿದಳೆಂದು ಹಠಮಾಡಿ ನಾನು ಶಾಲೆಗೆ ಸೇರಿದೆ. ೩, ೪ ನೆ ತರಗತಿಯೊರೆಗಿನ ಸುದ್ದಿ ಅಷ್ಟಾಗಿ ನೆನಪಿಲ್ಲ. ತಲೆಯ ಕೂದಲಲೊಂದು ಕೃಷ್ಣನ ಜುಟ್ಟು, ಅದಕ್ಕೊಂದು ಪಿಪಿ (ಮಕ್ಕಳ ಭಾಷೆ; ಹೂವು), ಸೋರುವ ಮೂಗು ವರೆಸಲೆಂದು ಅಂಗಿಯಲ್ಲಿ ಪಿನ್ನಿನ ಸಹಾಯದಿಂದ ಸಿಕ್ಕಿಸಿದ್ದ ಕೈ(ಕರ)ವಸ್ತ್ರ. ನೋಡು ನೋಡುತ್ತಲ್ಲೇ ದೊಡ್ಡವರಾಗಿ ಬೆಳೆದುಬಿಟ್ಟೆವು. ದೊಡ್ಡವರಾಗುತ್ತಾ ಆಗುತ್ತಾ ಸಣ್ಣವರಾದೆವು. ಆಗದು ಮಕ್ಕಳಾಟಿಕೆ ಅಷ್ಟೇಯಾದರು, ಮುಂದೊಂದು ದಿನದ ದೊಡ್ಡ ದೊಡ್ಡ ದಡ್ಡ ತನಕ್ಕದುವೆ ನಾಂದಿ. ಯೆಲ್ಲೆಡೆ ಸ್ಪರ್ಧೆ ಸ್ಫರ್ಧೆ. ಶಾಲೆಯಲ್ಲಿ ಮೊದಲನೇ ಸ್ಥಾನ ಪಡೆಯುವುದರಿಂದ ಹಿಡಿದು ಹೋಮ್ ವರ್ಕ್ ಪುಸ್ತಕದಲ್ಲಿ ಎಷ್ಟು ಗುಡ್ ಪಡೆದಿದ್ದೇವೆ ಅನ್ನುವವರೆಗು. ಬೆಂಚ್ ಲೀಡರ್ ಅಲ್ಲದೆ, ಸ್ಕೂಲ್ ಲೀಡರ್ ಆಗಲು ಪೈಪೋಟಿ. ಗುಂಪುಗಾರಿಕೆ, ಜಗಳ, ಮನಸ್ಥಾಪ, ಸೋಲು, ಗೆಲುವು, ಪಾರ್ಷಿಯಾಲಿಟಿ ಮಾಡುತ್ತಿದ್ದ ಶಿಕ್ಷಕರು(ಮನಸಿಲ್ಲದ ಮನಸಿನ್ನಲ್ಲಿ ಹೇಳುತ್ತಿರುವ ಕಟು ಸತ್ಯ).  ನನಗು ನನ್ನ ಗೆಳತಿ ಶ್ರುತಿಗು ಪಾಠ ಓದಿಸಿ, ಹೋಮ್ವರ್ಕ್ ಮಾಡಿಸುತ್ತಿದ್ದದ್ದು ನನ್ನಮ್ಮ. ನನಗೆ ಶ್ರುತಿಅಂದರೆ ತುಂಭಾ ಇಷ್ಟ. ಅದೇನು ಕಾರಣವೆಂದು ಗೊತ್ತಿಲ್ಲ, ಅವಳಿಗೆ ನನ್ನಕಂಡರೆ ಅಸೂಯೆ, ಕೋಪ (ಸಣ್ಣ ವಯಸ್ಸಿನಲ್ಲಿ, ಈಗಲ್ಲ) ಆದರೂ ಅಗಾಧ ಪ್ರೀತಿ. ನನಗಿಂತ ಕಮ್ಮಿ ಅಂಕ ಬಂತೆಂದು ಯಾವಾಗಲು ಅವರಮ್ಮ ಅಪ್ಪನನಿಂದ ಪೆಟ್ಟು ತಿನ್ನುತಿದ್ದಲ್ಲು. ಇದೇ ಕಾರಣವಿರಬೇಕು, ಅವಳು ನನ್ನ ಕಂಡರೆ ಸಿಡಿಯುತ್ತಿದ್ದಲ್ಲು. ಕೆಲವೊಮ್ಮೆ ಶಾಲೆಗೆ ಬಿಟ್ಟು ಹೋಗುತ್ತಿದ್ದಳು. ಅವಳ್ಳಿಲ್ಲವೆಂದರೆ ಶಾಲೆಗೆ ಹೋಗಲ್ಲ ಅಂತ ನಾನು ಮನೆಯಲ್ಲಿ ರಾಂಪಮಾಡುತ್ತಿದ್ದದ್ದು ಇನ್ನು ಕಣ್ಮುಂದೆ ಹಾಗೆಯೇ ಕಾಣುತ್ತದ್ದೆ.
ನಾವು ವಾಸವಿದ್ದ ಸ್ಥಳ ಒಂದು ವಠಾರದ ಬೀದಿಯಂತ್ತಿತ್ತು. ಸಂಜೆಯಾಯಿತೆಂದರೆ ವಠಾರದ ಹೆಂಗಳೆಯರೆಲ್ಲ ಹೊರಬಂದು ಬಾಗಿಲ್ಲಲ್ಲಿ ಕುಳಿತು ಮಾತನಾಡುತ್ತಿದ್ದರು. ಕತ್ತಲಾದ ನಂತರವಷ್ಟೇ  ಅವರ ಮಾತುಕತೆಗೆ ಬೀಗ ಜಡೆಯುತ್ತಿತ್ತು. ಕೆಲವೊಮ್ಮೆ ಪವರ್ ಕಟ್ ಇದ್ದರೆ ಮೀಟಿಂಗ್ ಪವರ್ ಬರುವವರೆಗೂ ಮುಂದುವರೆಯುತ್ತಿತ್ತು. ಹೀಗೆ ವಠಾರದ ಹೆಂಗಸರೆಲ್ಲ ಹರಡುವಾಗ, ನಮ್ಮ ಬಚ್ಚಾ ಪಾರ್ಟಿ ಆಟವಾಡುವುದರಲ್ಲಿ ಕಳೆದು ಹೋಗುತ್ತಿದ್ದೆವು. ನಮ್ಮದೊಂದು ೯ ೧೦ ಜನರ ಗುಂಪು. ಅದರಲ್ಲಿಯೂ ನನ್ನ ಮೇಲೆ ಹಠಸಾದಿಸುವವರೇ ಹೆಚ್ಚಿದರೂ. ನನ್ನನು ಆಟಕ್ಕೆ ಸೇರಿಕೊಳ್ಳದೆ ಇರುವುದು. ಅವರವರೇ ಗುಂಪು ಮಾಡಿಕೊಳ್ಳುವುದು, ಚಾಡಿ ಹೇಳುವುದು, ಆಟಕ್ಕೆ ಸೇರಿಸಿಕೊಂಡರು ಆಟಕುಂಟು ಲೆಕ್ಕಕಿಲ್ಲವೆಂಬತೆ ವರ್ತನೆ. ಇದಕ್ಕೂ ಕಾರಣ ಇದುವರೆಗೂ ಅರ್ಥವಾಗಿಲ್ಲ ನನಗೆ. ನಾನು ಆಡ್ ಮ್ಯಾನ್ ಔಟ್ ಯಾವಾಗಲು. ಇದ್ದ ಒಬ್ಬ ಅಣ್ಣನು ದೂರವೆಲ್ಲೋ ರೆಸಿಡೆನ್ಸಿ ಶಾಲೆಯಲ್ಲಿ ಓದುತ್ತಿದ್ದ. ರಜಾದಿನಗಲ್ಲಿ ಮನೆಗೆ ಬಂದರೆ ನನಗದು ಸಂಭ್ರಮ. ಆದರೆ ಆ ಸಂಭ್ರಮವು ಕ್ಷಣಿಕ. ನಾನು ಅಣ್ಣ ಹಾಗು ಶ್ರುತಿ ಹೆಚ್ಚಾಗಿ ಕ್ರಿಕೆಟ್ ಆಡುತ್ತಿದೆವು. ಯಾವಾಗಲು ಬೌಲಿಂಗ್ ಅಥವಾ ಫೀಲ್ಡಿಂಗ್ ನನಗೆ, ಬ್ಯಾಟಿಂಗ್ ಅಣ್ಣ ಅಥವಾ ಶ್ರುತಿಗೆ.
ಇನ್ನು ಅಜ್ಜಿಯ ಮನೆ ವಿಷಯ ಬಂದರೆ ಚಿನ್ಮಯ (ನನ್ನ ಸೋದರಮಾವನ ಮಗ) ನನ್ನ ಗೆಳೆಯ. ಬೇರೆ ಕಜಿನ್ಸ್ ಗಳೆಲ್ಲ ವಾಸಿನಲ್ಲಿ ನಮಗಿಂತ ದೊಡ್ಡವರು. ಇವನೊಬ್ಬ ನನ್ನ ವಯಸ್ಸಿನವ. ಯಾವಾಗಲು ಆಟದಲ್ಲಿ ಅವನೇ ಗೆಲ್ಲುಬೇಕಿತ್ತು. ನನ್ನನ್ನು ಅದೆಷ್ಟು ಭಾರಿ ಅಳಿಸಿದ್ದರೋ ನನ್ನಣ್ಣ ಹಾಗು ಇವನು, ಲೆಕ್ಕವೇ ಇಲ್ಲಾ. ಪದಗಳಲ್ಲಿ ಹೇಳಲಾಗದ ಎಷ್ಟು ಸಿಹಿಕಹಿ ನೆನಪುಗಳು ಮನದಲ್ಲೇ ಹುದುಗಿಹೋಗಿವೆ. ನನ್ನ ಪ್ರೈಮರಿ ಸ್ಕೂಲಿಂಗ್ ಅಲ್ಲಿ ಸಿಹಿಘಟನೆ ೪೦% ಆದರೆ ೬೦% ಇರ್ರಿಟೇಟಿಂಗ್/ನೋವಿನಿಂದ ಕಳೆಯಿತು. ಸಣ್ಣವಸಿನಲ್ಲಿ ಅಟೆನ್ಷನ್ ಬಯಸುವುದೇ ಸರ್ವೇ ಸಾಮಾನ್ಯವಲ್ಲವೇ, ಅದು ದೊರಕದೆ ಇದ್ದಲ್ಲಿ ಆಗುವ ಬೇನೆ ಅಷ್ಟಿಷ್ಟಲ್ಲ. ರಾಮಾಯಣದಲ್ಲಿ ಪೀಟಿಕಾಯಣವೆಂಬಂತೆ ಬಹಳಷ್ಟು ಸಣ್ಣ ಸಣ್ಣ ಮಜವಾದ ಘಟನೆಗಳಿವೆ. ಸದ್ಯಕದು ಬೇಡ.

****************************************************
Age 12 - Age 15

ತುಂಬಾ ಖುಷಿಯಾಗಿದ್ದ ದಿನಗಳು. ಎಲ್ಲಾ ಗುರುಗಳ ಅಚ್ಚುಮೆಚ್ಚು ಶಿಸ್ಯೆ. ಒಳ್ಳೊಳ್ಳೆ ಸ್ನೇಹಿತರು. ಸಿಗಬೇಕಾದ ಎಲ್ಲಾ ಗೌರವವು ಸಿಕ್ಕಿತ್ತು. ಜ್ಯೂನಿಯರ್ಸ್ನ ಫೆವರೇಟ್ ಸೀನಿಯರ್. ಸಿನಿಯರ್ಸ್ನ ಮುದ್ದು ಜೂನಿಯರ್. ಒಂದಷ್ಟು ಮನಸ್ತಾಪ. ಬೇಕಾದಷ್ಟು ಮನಸ್ತ್ರುಪ್ತಿ. ಜೀವನದ ಅದ್ಭುತ ದಿನಗಳು.

****************************************************
Age 15 -Age 17

ನಾನು ಬಹಳವಾಗಿ ಇಷ್ಟ ಪಟ್ಟಿದ್ದ ನನ್ನಣ್ಣ, ಶ್ರುತಿ, ಚಿನ್ಮಯ ತಮ್ಮದೇಯಾದ ಲೋಕದಲ್ಲಿ ಕಳೆದು ಹೋಗಿದ್ದರು. ನಾನು ನನ್ನ ಲೋಕದಲ್ಲಿ ಕಳೆದು ಹೋಗಿದ್ದೆ. ಆಗ ಜೊತೆ ಸಿಕ್ಕವನೇ ಮಧು. ನನ್ನ ಟೀನ್ ಏಜ್ ಪುಟಗಳ ಬಹುಮುಖ್ಯಭಾಗ. ನನ್ನ ಸ್ನೇಹಿತ. ನನ್ನೊಂದಷ್ಟು ಸ್ನೇಹಿತೆಯರಿಗೆ ಅವನ ಮೇಲೆ ಕ್ರ್ಶ್ ಇದ್ದಿತು. ಅವನು ನನ್ನ ಸ್ನೇಹಿತನೆಂದು ನನ್ನ ಮೇಲೆ ಅವರಿಗೆಲ್ಲ ಕೋಪ. ತಡೆಯಲಾರದ ಮಾನಸಿಕ ಹಿಂಸೆ ಅನುಭವಿಸಿದ ಕಾಲವದು. ಹುಡುಗಿರೆಂದರೆ ಕೋಪ ಬಂದ ಕಾಲವದು. ಹೆಸರೇಳುವ ಮನಸಿಲ್ಲ, ಕಾರಣ ಅವರೆಲ್ಲ ಈಗ ನನ್ನ ಒಳ್ಳೆಯ ಸ್ನೇಹಿತೆಯರೇ, ಆ ವಯಸ್ಸು ಅಂತಹದು. ಹಾಗಾಗಿ ನನ್ನೊಂದಿಗೆ ಅಷ್ಟು ಕಟುವಾಗಿನಡೆದು ಕೊಡರೇನೋ. ಜೀವನವೇ ಸಾಕು ಅನಿಸಿದ್ದು ಉಂಟು. ಇದೆಲ್ಲದರ ನಡುವೆ ಒಂದಷ್ಟು ಕಮ್ಮಿಯಂಕ (ತುಂಬಾ ಕಮ್ಮಿಯೇನಲ್ಲ, ೮೦% ಬಂದಿತ್ತು.) ಬೇರೆ ತೆಗೆದು ಕೊಂಡೆ. ಅಮ್ಮನಿಗೆ ನನ್ನನ್ನು ಡಾಕ್ಟಾರ್ ಮಾಡಬೇಕೆಂಬ ಆಸೆ ಇತ್ತು. ಆದರೆ ಅಪ್ಪನಿಗೆ ಹೆಣ್ಣುಮಗಳನ್ನು ದೂರ ಕಳುಹಿಸಲು ಮನಸಿರಲಿಲ್ಲ. ಹಾಗು ನನ್ನ ವಯಸ್ಸಿನ್ನ ಮೇಲೆ ನಂಬಿಕೆ ಇರಲ್ಲಿಲ್ಲ. ಹಾಗಾಗಿ ಬಿ.ಎಸ್ ಸಿ. ಗೆ ಸೇರಿಸಿದರು.(ನಾನು ಸಹ ಅಪ್ಪನೇಳಿದ ಮಾತಿಗೆ ಇದುವರೆಗೂ ಇಲ್ಲಾ ಅನ್ನದೆ ನಡೆದಿದ್ದೆನ್ನೆ. ಕೆಲವೊಮ್ಮೆ ಕೆಲವು ವಿಷಯದಲ್ಲಿ ಪಶ್ಚಾತಾಪವು ಪಡುತ್ತಿದ್ದೇನೆ.) ಮನೆಯಿಂದಲೇ ಕಾಲೇಜ್ಗೆ ಹೋಗಿಬಂದು ಮಾಡುತ್ತಿದ್ದೆ.

****************************************************
Adulting

ಯುವರಾಜ; ನಾವು ಯಶು ಎಂದು ಕರೆಯುತ್ತಿದ್ದೆವು; ಅವನು ನನ್ನ ೮-೧೦ ತರಗತಿಯ ಬೆಸ್ಟ್ ಫ್ರೆಂಡ್, ಹಾಗು ನನ್ನ ನೈಬರ್; ಪಿಯುಸಿ ಯನ್ನು ಮೂಡಬಿದಿರೆಯಲ್ಲಿ ಮಾಡುತಿದ್ದ. ಚಾಚು ತಪ್ಪದ್ದೆ ಕಾಯಿನ್ ಫೋನ್ ಬಳಸಿ ನನಗೆ ವಾರಕ್ಕೊಮ್ಮೆ ಯಾದರು ಕರೆ ಮಾಡುತ್ತಿದ್ದ. ಪಿಯುಸಿ ಯಲ್ಲಿ ಮ್ಯಾತ್ (math) ಫೈಲ್ ಆದ ಕಾರಣ, ನನ್ನ ಬಳಿ ಮ್ಯಾತ್ ಹೇಳಿಸಿಕೊಳ್ಳಲು ಬರುತ್ತಿದ್ದ. ನಾನಾಗ ಪ್ರಥಮ ಬಿ.ಎಸ್ ಸಿ. ಅವನೆಂದರೆ ತಿಳಿಯದ ಆಕರ್ಷಣೆ. ಕಪ್ಪು ಮೈಬಣ್ಣ. ೬ ಅಡಿ ಉದ್ದ. ಸಪೂರ ಮೈ. ದಪ್ಪ ದ್ವನಿ. ಅವನೊಮ್ಮೆ ನನ್ನ ಪಕ್ಕದ ಮನೆ ಆಂಟಿಯೊಂದಿಗೆ ಮಾತನಾಡುತ್ತ; "ಮಧು ನನ್ನ ಬೆಸ್ಟ್ ಫ್ರಂಡ್ ಆಂಟಿ, ಯಾರನ್ನ ಬಿಟ್ಟರು ಇವಳಿಂದ ದೂರ ಹೋಗಲ್ಲ, ಇವ್ಳಳನ್ನು ಬಿಡಲಾರೆ" ಅಂದ್ದಿದ್ದ. ಇಂದು ಕಿವಿಯಲ್ಲಿ ಗುಯ್ನ್ಗುಟ್ಟುತ್ತದೆ ಆ ಮಾತುಗಳು. ಈಗ ಅದೆಲ್ಲಿ ಮರೆಯಾಗಿ ಮೂಕನಾದನೋ ಅರಿಯದು. ನಮ್ಮಣ್ಣ ಈಗಲೂ ಕೆಲವೊಮ್ಮೆ ಅವನ್ನನ್ನು ನಿಮ್ಮ ಹುಡುಗ ಅಂತ ರೇಗಿಸುವುದುಂಟು. ನಾನು ನಗುವುದುಂಟು.

ಗ್ರಾಜುಯೇಷನ್ ಮಾಡುತ್ತಿದ್ದ ಸಮಯವನ್ನು ಮರೆಯುವಹಾಗೆ ಇಲ್ಲಾ. ನನ್ನದೇ ರಾಜ್ಯಭಾರ. ನನ್ನದೇ ಒಂದು ಗುಂಪು. ಮಾಡದ ತರಲೆಗಳಿಲ್ಲ. ಒಂದಷ್ಟು ತೊಂದರೆಗಳ್ಳನ್ನು ಮಯ್ಯಾಮೇಲೆ ಎಳೆದುಕೊಂಡ್ಡದ್ದು ಉಂಟು. ಕಾಲೇಜು ಟಾಪರ್. ಎಲ್ಲಾ ಗುರುಗಳ ಪೆಟ್ ಸ್ಟೂಡೆಂಟ್. ಒಂದಷ್ಟು ಫಾಲೋಯರ್ಸ್ . ಒಂದಷ್ಟು ಸನ್ಮಾನ, ಪ್ರಶಸ್ತಿಗಳು, ಕೆಲವೊಮ್ಮೆ ಕಾಡಿಸಿ ನೋಯಿಸಿ ಹೋಗುತ್ತಿದ್ದ ಅಣ್ಣನ ಹಾಗು ಯಶುವಿನ ನೆನಪುಗಳು(ಅವಾಗವಾಗ ಊರಿಗೆ ಬಂದು ಮುಖ ತೋರಿಸಿ ನೆನಪುಗಳನ್ನು ಕೆದಕಿ ಹೋಗುತ್ತಿದ್ದದೇ ಇದಕ್ಕೆಲ್ಲ ಕಾರಣ). ಒಟ್ಟಿನ್ನಲ್ಲಿ ಜಮ್ಮ್ ಅಂತ ಜೀವನ ಸಾಗಿತ್ತು. ಕಾಲೇಜು ಜೀವನದ ೭೦% ಎಲ್ಲಾ ಬಣ್ಣವನ್ನು ಕಂಡಾಗಿತ್ತು. 
ರಾಣಿಯಂತೆ ನೋಡಿಕೊಳ್ಳುತ್ತಿದ್ದ ಅಪ್ಪ. ಕೇಳಿದೆಲ್ಲ ಕೊಡಿಸುತ್ತಿದ್ದ ಅಮ್ಮ. (ಹಾಗಂತ ಎಂದಿಗೂ ನನ್ನ ಇತಿಮಿತಿಗಳ ಮೀರಿಲ್ಲ.)

****************************************************
Adult (ಎಂ. ಎಸ್ ಸಿ. ಸಮಯ)

ಅಪ್ಪ ನನ್ನನ್ನು ಹೊರ ಕಳಿಸಲು ಯೋಗ್ಯಳೆಂದು ಒಪ್ಪಿದ ಕಾಲವದು. ಏನು ತಿಳಿಯದ ನಾನು. ಗೊತ್ತಿಲ್ಲದ ಊರು. ಜೀವನದ ಅತಿ ಅಮೂಲ್ಯವಾದ ಸಮಯವದು. ೨ ವರ್ಷ ಹೇಗೆ ಕಳೆಯಿತೆಂದೇ ತಿಳಿಯಲ್ಲಿ. ಗಳಿಸಿದ ಜ್ಞಾನಕಿಂತ ಕಳೆದುಕೊಂಡದ್ದೇ ಹೆಚ್ಚೇನೋ ಎಂದು ಇಂದಿಗೂ ಕೆಲವೊಮ್ಮೆ ಅನಿಸುತ್ತದ್ದೆ. ಏನು ಕಲಿಯಲ್ಲಿ. ಕೇವಲ ಮಾರ್ಕ್ ಶೀಟ್ ನಲ್ಲಿ ದೊಡ್ಡ ದೊಡ್ಡ ಅಂಕ. ನೆಂಟರ ಬಳಿ ಹೇಳಿಕೆಕೊಳ್ಳಲ್ಲು ಪ್ರಶಸ್ತಿಗಳು. ಬಹುಮಾನಗಳು. ಮುಂದೇನು ಎಂಬ ಸರಿಯಾದ ನಿರ್ಧಾರಗಳಿಲ್ಲ. ತಿಳಿಹೇಳ ಬೇಕಿದ್ದ ಅಣ್ಣ ಏನು ಸಲಹೆ ನೀಡಲಿಲ್ಲ. ಅಪ್ಪನು ಸುಮ್ಮನಾಗಿದ್ದರು. ಏನು ತೋಚದ ಕಾಲವದು. ತುಂಬಾ ಕೇರ್ಲೆಸ್ ಆಗಿ ಜೀವನದ ೨ ವರ್ಷವ ಹಾಳು ಮಾಡಿಕೊಂಡಿದ್ದೆ ಎಂಬ ಭಾಸ. ಕಣ್ಣ ಮುಂದೆ ಕತ್ತಲಾವರಿಸಿ ದಾರಿಯೇ ಇಲ್ಲವೇ ಎಂಬಂತೆ ಗೋಚರಿಸುತ್ತಿತ್ತು. ಫಿಕಲ್ ಮೈಂಡೆಡ್ ಆಗಿದ್ದೆ. (ಈಗಲೂ ಸಹ ಕೆಲವೊಮ್ಮೆ). ಕೆಲಸ ಮಾಡುವೆನೆಂದರೆ ಕೆಲಸ ಕೊಡುವವರು ೧೦೦ ಮಂದಿ ಇದ್ದರು. ಆದರೆ ನಾನು ಜೀವನದಿಂದ ಬಯಸುತ್ತಿರುವುದು ಏನೆಂದು ತಿಳಿಯುತ್ತಿರಲಿಲ್ಲ. ನನ್ನ ಗುರುಗಳ (NKL) ಸಲಹೆಯ ಮೇರೆಗೆ ರಿಸರ್ಚ್ ಗೆ ಸೇರಿಕೊಂಡೆ. ೩ ವರ್ಷಗಳು ಕಳೆಯಿತು. ಇಷ್ಟೆಲ್ಲ (೨+೩) ವರ್ಷಗಳು ಕಳೆದ ನಂತರ ಒಂದು ಚೂರು ಚೂರು ಬುದ್ದಿ ಬರುತ್ತಿದೆ, ಎಂದೆನಿಸುತ್ತಿದೆ.

ಅಣ್ಣನಿಗೆ ಮದುವೆ ಆಯ್ತು. ಅತ್ತಿಗೆ ಬಂದಳು. ಫೈನಲಿ ಅಣ್ಣನೊಂದಿಗೆ ಒಂದಷ್ಟು ಸಮಯ ಕಳೆಯುವಂತಾಯಿತು.
ಕಳೆದುಕೊಂಡದ್ದು ಏನು ಇಲ್ಲ. ಸುಮ್ಮನೆ ಏನನ್ನೋ ಹುಡುಕುತ್ತಿದ್ದೆ ಯೆಂದು ಅರಿವು ಮೂಡುತಿದ್ದೆ. ಇರುವುದ್ದೇಲ್ಲ ಇಂದಿಗೂ ನನ್ನೊಂದಿಗೆಯೇ ಇದೆ. ಕಾಣುವ ಕೊರತೆಯಾವುದು ಇಲ್ಲಾ. ಆದರೂ ನಾನು ಸಂಪೂರ್ಣವೆಂದು ಅನಿಸುತ್ತಿಲ್ಲ. ನನಗಿಷ್ಟವಿರುವ ಕೆಲಸಕ್ಕೆ ಸೇರುವವರೆಗೂ ಈ ಭಾವನೆಯಿಂದ ಮುಕ್ತಳಾಗಲು ಸಾಧ್ಯವಿಲ್ಲ. ಇನ್ನು ೧ ರಿಂದ ೨ ವರ್ಷಗಳ ತಪ್ಪಸ್ಸು ಬಾಕಿಯಿದೆ.

****************************************************
Matured?!!

ಸಧ್ಯಕಿದು ಕಾಲಿ ಜಾಗ. ಮುಂದೊಂದು ಸುದಿನ ಬರಲಿದೆ, ಜಾಗ ಭರ್ತಿಮಾಡಲು.


****************************************************


No comments:

Post a Comment