Wednesday 26 July 2017

ಮಮತೆ

ಇದು ೧೪-ಜುಲೈ-೨೦೧೭ರ ಮಾತು.
ಭಾಗ ೧,
ಉದಿಯಪ್ಪಗ ೭ಕ್ಕೆ ಧಡಭಡ ಹೆರಟು ಹೊರಟೆ. ಇಂದು ನನ್ನ ಪಯಣ CENSE ಗೆ, ೩೩೩ಸಿ ಬಸವನಗರದಿಂದ ಹೊರಟು ಮೆಜೆಸ್ಟಿಕ್ ಗೆ ಹೋಗುವ ಬಸ್ ಇತ್ತಿಲ್ಲೆ. ಹಾಂಗಾಗಿ ವಿಜ್ಞಾನನಾಗರಂದ ಮೆಜೆಸ್ಟಿಕ್ ಹೋಗುವ ಬಸ್ ಹತ್ತಕಾಗಿ ಬಂತು. ಹೋಪ ದಾರಿಲಿ ಲಿಡೋ ಥಿಯೇಟರ್ ಬಳಿ "ಜಗ್ಗ ಜಾಸೂಸ್" ಸಿನೆಮಾದ ಪೋಸ್ಟರ್ ಹಾಕಿತ್ತಿದವು. ಕಳೆದ ವಾರವಷ್ಟೇ ಆ  ಸಿನೆಮಾದ ಟ್ರೈಲರ್ ನೋಡಿತ್ತಿದ್ದೆ. ನೋಡಿಕ್ಕಿ ಫ್ರೆಂಡ್ಸ್ ಹತ್ತರೆ ಹೋಪ ಈ ಸಿನೆಮಾಕ್ಕೆ ಹೇಳಿ ಹೇಳಿತ್ತಿದ್ದೆ. ಫ್ರೆಂಡ್ಸ್ ಗೆ ಹೇಳಿ ಲಿಡೋಲಿಯೆ ನೋಡುವ ಅಂಬಗ ಹೇಳಿ ಗ್ರೇಶಿಗೊಂಡೆ.

ಭಾಗ ೨,
ನೆನ್ನೆ, ಹೇಳಿದರೆ ೧೩-ಜೂಲೈ-೨೦೧೭ ರಂದು, LBB ಯವರ ಆರ್ಟಿಕಲ್ ಫೇಸ್ಬುಕ್ಕಿನಲ್ಲಿ ಓದಿತ್ತಿದೆ, ತಿಪ್ಪಸಂದ್ರ ಬಳಿ "ಬ್ರಾಂಡೆಡ್ ಶೂಸ್ ಶೋರೂಮ್" ಎಂಬ ಹೆಸರಿನ ಅಂಗಡಿ ಇದ್ದು  ಅಲ್ಲಿ ಡಿಸ್ಕೌಂಟ್ನಲ್ಲಿ ಒಳ್ಳೆ ಸ್ನೀಕರ್ಸ್ ಸಿಕ್ಕುತ್ತು ಹೇಳಿ. ಆದಿ ಇಂಡಿಯಾಗೆ ಬಂದ ಮತ್ತೆ ಅವನೊಂದಿಗೆ ಹೋಪ ಹೇಳಿ ಗ್ರೇಶಿಗೊಂಡೆ.

ಭಾಗ ೩,
CENSE ನಲ್ಲಿ ಹೋದ ಕೆಲಸ ಆಯ್ದಿಲ್ಲೆ. ಬೇಕಪ್ಪ ಇನ್ಸ್ಟ್ರುಮೆಂಟ್ ಡೌನ್ ಆಗಿತ್ತಿದು.
ಅಣ್ಣ IISc SBI ಲಿ ರಜ ಕೆಲಸ ಹೇಳಿತ್ತಿದ. ಅದರ ಮುಗಿಶಿಕ್ಕಿ, ಅನಿಲ್ನ ಭೇಟಿ ಮಾಡಿಕ್ಕಿ, ಒಂದು ಮೀಟಿಂಗ್ ಇತ್ತಿದು ಅದರ ಮುಗಿಶಿಕ್ಕಿ ಅಲ್ಲಿಂದ ಹೊರಟೆ.

ಭಾಗ ೪,
ಶುಕ್ರವಾರವಾದ ಅಂದು ಡಿಪಾರ್ಟ್ಮೆಂಟ್ ಹೋಪಲೆ ಮನಸ್ಸಿಲ್ಲದೆ ಮನೆಗೆ ಹೋಪ ಹೇಳಿ ಡಿಸೈಡ್ ಮಾಡಿದ್ದಾತು. ಆದರೆ ಸಮಯ ಇನ್ನು ೧. ೩೦ ಮಧ್ಯಾಹ್ನ. ಹೆಂಗೋ ಇರಲಿ , ವರಗಿದರಂತೂ ಮನೇಲಿ.

ಭಾಗ ೫,
ಮೆಜೆಸ್ಟಿಕ್.
ಕಾಡುಗೋಡಿ ಬಸ್? ಮೆಟ್ರೋ? ಅಥವಾ ವಿಜ್ಞಾನನಾಗರದ  ಬಸ್ ? ಹೇಗೆ ಹೋಗಲಿ ಮನೆಗೆ.
ಸರಿ ಅಂಬಗ ವಿಜ್ಞಾನನಾಗರ ಬಸ್ಸಿಲಿ ಹೋಪ. ಆದರೆ ಜಗ್ಗ ಜಾಸೂಸ್, ಇಲ್ಲದ್ದಾರೆ ತಿಪ್ಪಸಂದ್ರಲ್ಲಿ ಒಂದು ಶೂ ತೆಕೊಂಬದು.

ಭಾಗ ೬,
ವಿಜ್ಞಾನನಾಗರದ ಬಸ್.
ಪೆಟಿಎಂ ನಲ್ಲಿ ಸಿನೆಮಾ ಟಿಕೆಟ್ ಬುಕ್ ಮಾಡುವ ಹೇಳಿ ನೋಡಿದೆ. ಪೂರಾ ಥಿಯೇಟರ್ ಕಾಲಿ ಇದ್ದು !! ಫಸ್ಟ್ ಡೇ??
ಅಂಬಗ ಡೈರೆಕ್ಟ್ ಲಿಡೋ ಥಿಯೇಟರ್ ಟಿಕೆಟ್ ತೆಕ್ಕೊoಬಾ! ೩.೩೦ ರ ಶೋ.
ಬಸ್ ರಿಚ್ಮಂಡ್ ನಂತರದ ಯಾವುದೊ ಬಸ್ ಸ್ಟಾಪ್ ಬಳಿ ಬಂದತ್ತು . ಬೆರಣಿಗೆ ಉಪ್ಪಿನಕಾಯಿ ತುಂಬುವಾನ್ಗೆ  ಬಸ್ ಲಿ ಜನ ತುಂಬಿತ್ತು. ಹೆಚ್ಚಿನವು ಸಣ್ಣ ಸಣ್ಣ ಮಕ್ಕ. ಮತ್ತೆ ಅವರ ಅಮ್ಮಂದ್ರು.

ಭಾಗ ೭,
ಒಂದು ಪುಟಾಣಿ ಎನ್ನ ಕಾಲು ಮೆಟ್ಟಿದ . ಅವನ ಸೊಂಟ ಹಿಡುದು ರಾಜ ಮೇಲೆತ್ತಿ ಅವನ ಆಚೊಡೆ ಬಿಡುವ ಹೇಳಿ ಗ್ರೇಶಿ ಯೆತ್ತಿದೆ. ಅವ ನೋಡಿದರೆ ಎನ್ನ ಮೊಟ್ಟೆಮೇಲೆ ಬಂದು ಕುದುಗೊಂಡ. ಅಂಬಗ ಕುರ್ಸಿಗೊಂಡೆ. ಲಿಡೋ ಹತ್ತರತ್ತರೆ ಎತ್ತಿತು, ಆದರೆ ಆ ಮಾಣಿಯ ಬಿಟ್ಟು ಹೋಪಲೆ ಮನಸ್ಸಾಗದೆ ಅವನ ತಲೆ ನೇವರಿಸುತ್ತಾ ಕೂತು ಬಿಟ್ಟೆ. ಸೆನೇಮ ಕ್ಯಾನ್ಸಲ್.
ತಲೆ ನೇವರಿಸುತ್ತಾ ನೇವರಿಸುತ್ತಾ ಇದ್ದಂತೆ ಮಾಣಿ ಮೆಲ್ಲಂಗೆ ಎನ್ನ ಎದೆಗೆ ವರಾಗಿ ಅಲ್ಲಿಯೇ ವರಾಗಿ ಬಿಟ್ಟ.
ಆ ಮಮತೆಯೇ ಭಾವ! ಬೆಚ್ಚನೆಯ ಪ್ರೀತಿ..ಅಬ್ಬಾ !!! ತಲೆ ತಟ್ಟಿ ಇನ್ನು ಲಾಯ್ಕಲ್ಲಿ ವರಾಗಿಸಿದೆ. ಕಡೆಯ ಸ್ಟಾಪ್ ಬರುವ ವರೆಗೂ ಮಾಣಿಯ ಮನೆ ಸಿಗದಿರಲಿ ಎಂಬ ಆಸೆ..

ಭಾಗ ೮,
ಎನಗೊಬ್ಬ ಸ್ನೇಹಿತ. ಅವನಂದ್ರೆ ಪ್ರೀತಿಗಿಂತ ಹೆಚ್ಚು ಮಮತೆ. ಅವನಿಗೆ ಆನ್ನಿಟ್ಟ ಹೆಸರು ಚಿoಪಿ :)
ಪುಟ್ಟ ಮಕ್ಕ ಕಾಂಬಗ ಅವರಲ್ಲಿ ಇವನೇ ಕಾಣ್ತಾ!! ಎಷ್ಟೋ ಬಾರಿ ಅವನಲ್ಲಿ ಹೇಳಿದುಂಟು, ನಿನ್ನಮ್ಮನ ಬಳಿ ಕೇಳಿ, ನಿನ್ನ ದತ್ತು ತೆಕ್ಕೊಳ್ಳೆಕ್ಕಾ ಹೇಳಿ! ಯನ್ನ ಯಾವಮತಿ೦ಗೂ ಬೆಲೆ ಇಲ್ಲೇ ಇಲ್ಲಿ. ಯನ್ನ ಯಾವ ಮಮತೆಗೂ ಸ್ಥಾನವಿಲ್ಲೆಇಲ್ಲಿ. ಯೆನ್ನದೇ ಯಾವುದೊ ಲೋಕವಾದರೆ, ಅವನ್ನದೆ ಯಾವುದೋ ಲೋಕ. ಯನ್ನ ಮಮತೆ ಯನ್ನ ಕಲ್ಪನೆಗೆ ಸೀಮಿತ.

ಭಾಗ ೯,
ನಿನ್ನೆ ಹೇಳಿದರೆ ೨೫-ಜೂಲೈ-೨೦೧೭,
೧೪ನೆ ತಾರೀಕಿನ ಘಟನೆ ಅದೆಂತಗೊ ತಲೆಗೆ ಬಂತು. ಅಂಬಗ ಆನಿದರ ಬರೆದು ಮಾಡುಗೆಕ್ಕು ಹೇಳಿ ಗ್ರೇಶಿಗೊಂಡೆ. ಸಮಯ ಸಿಕ್ಕಿದಿಲ್ಲೆ. ಸುಂಗನ (ಶ್ವೇತಾಳ ಅಡ್ಡ ಹೆಸರು) ಟ್ರೀಟ್ ಇತ್ತಿದು.

ಭಾಗ ೧೦,
ಇಂದು.
ಉದಿ ಉದಿ ಯಪ್ಪಗ ಎದ್ದಿಕ್ಕಿ, ಮೀವಲೆ ನೀರು ಬೆಶಿ ಮಾಡ್ಲೆ ಕಾಯಿಲ್ ಹಾಕಿದೆ. ಹಾಕಿಕ್ಕಿ ಬಂದು ವರಾಗಿದೆ.
ಒಕ್ಕು ಬಂತು.
ಕನಸು.
ಕನಸಿನಲ್ಲಿ ಅಮ್ಮ.
ನಮ್ಮ ಮನೆ. ಮನೆಯ ಪಕ್ಕದಲ್ಲಿ ಮತ್ತೊಂದು ಮನೆ. ಅಲ್ಲಿ ೩೦-೩೫ ದರ ಅಸು ಪಾಸಿನ ಮಹಿಳೆ. ಮನೆಯಲ್ಲಿ ವಯಸದ ಅತ್ತೆ ಮಾವ. ಸಾಫ್ಟ್ವೇರ್ ಯಜಮಾನರು. ಒಂದು ಮುದ್ದಾದ ಮಗು.
ಅದಕ್ಕೆ(ಆ ಹೆಂಗಸಿಗೆ) ತುಂಬಾ ಮನೆ ಕೆಸಲ. ಬಚ್ಚುವಷ್ಟು, ಪುರುಸೊತ್ತು ಸಿಕ್ಕದಷ್ಟು. ಮಗುವಿನ ಸರಿ ನೋಡಿಗೊಂಬಲೂ ಪುರ್ಸೊತ್ತಿಲ್ಲೆ. ಇದರ ಮದ್ಯೆ ಅವಳು ಸಹ "ವರ್ಕಿಂಗ್ ವುಮನ್, ಹೂ ವರ್ಕ್ಸ್ ಫ್ರಮ್ ಹೋಂ".

ಹಿಂಗಿಪ್ಪಗ ಒಂದು ದಿನ ಅವಳ ಮಗುವಿಗೆ ತಲೆಗೆ ಮೀಶಿಕ್ಕಿ ಮುಂಡಾಸು ಸಮೇತ ಅವಳನ್ನು ಶಾಲೆಯ ಬಸ್ ಹತ್ತಿಸಲು ಗೇಟ್ ಬಳಿ ಬಂದತ್ತು. ಅಂಬಗ ಎನ್ನ ತಲೆ ಕೂದಲು ಅಮ್ಮ ವುದ್ದಿಗೊಂಡಿತ್ತು (ಆನುದೇ ಅಂದು ತಲೆಗೆ ಮಿಂದಿತ್ತಿದೆ). ಅಮ್ಮಂಗೆ ತಡವಲಾತಿಲ್ಲೆ. ಹೋಗಿ ಆ ಹೆಂಗಸತ್ತರೆ ಹೇಳಿತ್ತು. ಎಷ್ಟೇ ಕೆಲಸವಿದ್ದರೂ ಮಕ್ಕಳನ್ನು ಚೆಂದಕ್ಕೆ ನೋಡಿಗೊಳ್ಳೆಕ್ಕು. ತಲೆ ಸರಿ ವುದ್ದದರೆ ಶೀತ ಅಕ್ಕು ಅದಕ್ಕೆ, ಹೇಳಿಕ್ಕಿ , ಅಮ್ಮನೇ ಆ ಮಗುವಿನ ತಲೆ ಉದ್ದಿತ್ತು.

ಭಾಗ ೧೧,
ನಿದ್ದೆಯಿಂದ ಎದ್ದು ಮೀವಲೋದೆ,
ತಲೆಗೆ ಮಿಂದೆ.  (ಇದೆ ಕಾರಣಕ್ಕೆ ಕನಸ್ಸಿಲಿ ಹಂಗೆಲ್ಲಾ ಬಂದದು ಹೇಳಿ ಗೊಂತಾತು)
ಅಮ್ಮನ ನೆನಪು ಬಹಳ ಕಾಡಿತು.
(ಎನಗೆ ಆಲ್ಮೋಸ್ಟ್ ೨೦ ವರ್ಷ ಅಪ್ಪಲೊರೆಗುದೆ ಯೆನ್ನ ತಲೆ ಉದ್ದಿದು. ನಂತರದ ದಿನಗಳಲ್ಲಿ ಅವಕ್ಕೆ ಡಯಾಬೆಟಿಸ್ ಕಾರಣದಿಂದ ಫ್ರೋಜನ್ ಶೋಲ್ಡ್ರ್ ಆಗಿ ಕೈ ಮೇಲಂಗೆ ಯೆತ್ತುಲೆ ಆಯ್ಕೊಂಡಿತ್ತಿಲ್ಲೆ. ಹಾಗಾಗಿ ತಲೆ ಉದ್ದುದು ನಿಲ್ಲಿಸಿದವು.)

ಏಕೋ ಇಂದು ಯೆನಗೆ ಬೇಜಾರಾತು,ಬೇಜಾರು ನೊವಿಂಗೆ ಬದಲಿ ತಿಂಡಿತಿಂಬಲಾಯ್ದಿಲ್ಲೆ.
ಮನೆಯಿಂದ ದೂರ ಇಪ್ಪಲೆ ಬೇಜಾರು. ಹಾಂಗೇಳಿ ಕೆಲಸದೆ ಬಿಡ್ಲೇ ಗೊಂತಿಲ್ಲೆ.

ಆತು ರಜ್ಜ ಸಮಯ ಚಿoಪಿಯೊಂದಿಗೆ ಇಪ್ಪ ಹೇಳಿ ಹೋದೆ. ಅವ ಇತ್ತಿದಾಇಲ್ಲೆ . ರಜ್ಜ ಹೊತ್ತು ಕಾದೆ. ಕಾದ ನಂತರ ಬಂದ.
ಕೂಗಿಸಿದ. ಬುದ್ದಿ ಇಲ್ಲದೆ ಆನುದೆ ಕೂಗಿದೆ.
ಯಾವಗದೆ ಇದೆ ಅಪ್ಪದು, ಗೊಂತಿದ್ದರು ಅನುದೆ ಹಂಗೆ ಮಾಡ್ತೆ, ಅವಂದೇ ಹಂಗೆ ಮಾಡ್ತಾ.
ಅಣ್ಣಂದೇ ಹಿಂಗೇ. ಎನ್ನ ಕುಗ್ಸುದ್ರಲ್ಲಿ ಎಕ್ಸ್ಪರ್ಟ್.
ಮಣಿಯಂಗಳೇ ಹಂಗೆ ಕಾಣ್ತು






   

Wednesday 19 July 2017

೨ ಲೋಟ ಹಾಲಿನ ಕಥೆ

ಹಸಿವಾಗಿತ್ತು.
ಬೆಳ್ಳಿಗೆ ೭ ಘಂಟೆಗೆ ಮನೆ ಇಂದ ಹೊರೆಟು ಲ್ಯಾಬ್ ಗೆ ಬಂದಿದ್ದೆ.
ಗೇಟಿನ ಬಳಿ ಕಾರ್ತಿಕನ ಕುದುರೆ (ಅವನ ಬೈಕ್) ಕಂಡು, ಅವುನು ಡಿಪಾರ್ಟ್ಮೆಂಟ್ ಗೆ ಬಂದಿದ್ದನೆಂದು ತಿಳಿಯಿತು.

ಕ್ಯಾಂಟೀನ್ ಮಹೇಶಣ್ಣ  ೨ ಲೋಟ ಶುಗರ್ಲೆಸ್ ಹಾಲು ಕೊಡಿ ಅಂದೇ.
ಕಾರ್ತಿಕ್ ಗೆ ಕರೆ ಮಾಡಿ ಕ್ಯಾಂಟೀನ್ ಬಳಿಬಾ ಅಂದೇ.



ಕಾಯುವಿಕೆಗೂ ಮುಪ್ಪು ಬಂದಿತ್ತು.
ಮನಸಲ್ಲಿ ನೂರಾರು ಭಾವ ಮನೆ ಮಾಡಿತ್ತು.
ಕಣ್ಣಂಚಲಿ ಹನಿಯೊಂದು ಜಿನುಗಿತ್ತು.
ತುಟಿಯಂಚಲಿ ಸಣ್ಣದೊಂದು ನಗೆಯಿತ್ತು.
ಹಾಲು ತಣ್ಣಗಾಗಿ ಕೆನೆಕಟ್ಟಿತು.
ಕಡೆಗೆ ೨ ಲೋಟ ಹಾಲನ್ನು ಒಬ್ಬಳೇ ಕುಡಿದು ಬಂದೆ 😋😉😐

Sunday 16 July 2017

ನನ್ನ ಖುಷಿ

ಫೇಸ್ಬುಕ್ ನಲ್ಲಿ ಹ್ಯಾಪಿನೆಸ್ ಪೇಜ್, ಹ್ಯಾಪಿನೆಸ್ ಇಸ್.. , ದಿ ಹ್ಯಾಪಿ ಪೇಜ್ ಹೀಗೆ ಸುಮಾರು ಪೇಜ್ಸ್ ಇದ್ದು, ಅವುಗಲ್ಲಿ ಖುಷಿ ಎಂದರೇನು ಅಂತ ಸಣ್ಣಸಣ್ಣ ಸರಳ ವಾಕ್ಯಗಳಲ್ಲಿ, ಮುದ್ದು ಮುದ್ದು ಡೂಡಲ್ ಆರ್ಟ್ ನೊಂದಿಗೆ ಪೇಜ್ ಅಡ್ಮಿನ್, ಅವರಿಗೆ ಖುಷಿ ಅಂದರೇನು ಅಂತ ಹೇಳಿಕೆಕೊಳುತ್ತಾರೆ ಈ ಮೂಲಕ ಓದುಗರಿಗೆ ಖುಷಿ ಹಂಚುತ್ತಾರೆ.  ಅವುಗಲ್ಲಿ ಕೆಲವುಗಳು ಸಾಮಾನ್ಯವಾಗಿ ಎಲ್ಲರಿಗೂ ಅನ್ವಯಿಸುತ್ತದೆ. ಹಾಗಾಗಿ ಈ ಪೇಜ್ ಗಳು ಫಾಸಬುಕ್ನಲ್ಲಿ ಫೇಮಸ್.
ಇಂದೇಕೋ ಈ ಪೇಜ್ ಬಗ್ಗೆ ಯೋಚನೆ ಬಂತು, ಈ ಪೇಜ್ ನಲ್ಲಿ ಬರುವ ಪೋಸ್ಟ್ಗಳು ಅಡ್ಮಿನ್ ನ ಖುಷಿಗಳಾದರೆ ನನ್ನ ಖುಷಿಗಳು ಯಾವುವು? ನಾನು ನನ್ನ ಖುಷಿಗಳನ್ನು ಸಣ್ಣ ಸಣ್ಣ ಸರಳ ವಾಕ್ಯಗಳಲ್ಲಿ ಹೇಳುವುದಾದ್ರೆ ಹೇಗೆ ಹೇಳ್ತೀನಿ ?
ತಿಳ್ಕೊ ಬೇಕಾ? ಹಾಗಾದ್ರೆ ಮುಂದೆ ಓದಿ, ಬರಿತಾ ಬರಿತ ನಾನು ತಿಳ್ಕೋತೀನಿ.
ಬೋರಿಂಗ್  ಅನ್ನಿಸ್ತಾ ? ಹಾಗಾದ್ರೆ ಬ್ಲಾಗ್ ಕ್ಲೋಸ್ ಮಾಡಿ. ನಿಮ್ಗೆ  ಇಂಟೆರೆಸ್ಟಿಂಗ್ ಅನ್ಸಿದುನ್ನ ಮಾಡಿ.

ಖುಷಿ ಅಂದಕೂಡ್ಲೇ ನೆನಪಾಗೋದು ಅಮ್ಮ, ನಾನು ಮನೆಗೆ ಬರ್ತೀನಿ ಅಂದಾಗೆಲ್ಲ ನಂಗಿಷ್ಟವಾದ ದೋಸೆ, ಬದ್ನೇಕಾಯಿ ಕೊದಿಲು ಮಾಡಿರ್ತರೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿನೇ ಅಲ್ವ? ಒಳ್ಳೆ ರುಚಿಕರ ಆಹಾರ ತಿನ್ನಕ್ಕೆ ಸಿಕ್ರೆ ನಂಗೆ ಖುಷಿ .
ನಮ್ಮಪ್ಪ ನಾನು ಮನೆಗೆ ಬರುವ ದಿನವನ್ನು ಕಾಯುತ್ತಾರಲ್ಲ, ಅದು ನಿಜವಾದ ಖುಷಿ. ಮನೆಯ ಬಾಗಿಲು ತಟ್ಟುವಮುನ್ನ ಮನೆಯ ಬಾಗಿಲು ತೆರೆದು 'ಮಗಳೇ, ಬಂದ್ಯಾ' ಅಂತರಲ್ಲ ಅದು ಸಾರ್ಥಕತೆಯ ಖುಷಿ. (ನಮ್ಮ ಅಪಾರ್ಟ್ಮೆಂಟ್ ಲಿಫ್ಟ್ ಸೌಂಡ್ ಇಂದಲೋ ಅಥವ ಇನ್ನ್ಹೆಗೊ ನಾನು ಬಂದದ್ದು ಬಾಗಿಲು ತಟ್ಟುವ ಮುನ್ನ ನಮ್ಮಪ್ಪನಿಗೆ ತಿಳಿಯುತ್ತದೆ).
ಇವಳು ನನ್ನ ತಂಗಿ ಅಂತ ಅಣ್ಣ ಹೇಳುವುದು ನನಗೆ ಹೆಮ್ಮೆಯ ಖುಷಿ.
ಹೀಗೆ ಹತ್ತು ಹಲವು ಖುಷಿಗಳು. ಜೀವನದ ಸಣ್ಣ ಸಣ್ಣ ಖುಷಿಗಳು.
ಹಳೆಯ ಗೆಳತಿಯಾ ಕರೆ, ಮಳೆಯಲ್ಲಿ ನೆನೆದು ಬಂದಾಗ ಅಮ್ಮನ ಬೈಗುಳ, ಅಪ್ಪನ ಕಿವಿ ಮಾತು, ಸ್ನೇಹಿತರ ಗಿಫ್ಟ್ಸ್, ಅಂದೆಲ್ಲೋ ಕೇಳಿದ ಹಾಡು, ಇಂದೆಲ್ಲೋ ಸುತ್ತಲೂ ಹೋದ ದಾರಿ, ಎಂದೋ ಗೀಚಿದ ಸಾಲುಗಳು ಏನನ್ನೋ ಹುಡುಕುವಾಗ ಸಿಕ್ಕರೆ ಆಗುವ ಖುಷಿಗಳು..
ಕಾರ್ತಿಕನ ನಗು,
ಆದಿಯ ಕವನ,
ಶಾಂಭವಿ ಮಾಡಿದ  ಚಿತ್ರಾನ್ನ,
ಅಪ್ಪನ ಹಾಡುಗಳು,
ಅಣ್ಣ ಮಾಡಿಕೊಟ್ಟ ಟೀ,
ನ್ಯಾನೋ ಪಾರ್ಟಿಕಲ್ಸ ಮೊದಲ ಬರಿ ಮಾಡಿದ್ದೂ,
ಇಂಜಿನಿಯರ್ ಮಕ್ಕಳಿಗೆ ಪಾಠ ಮಾಡಿದ್ದೂ,
ನನ್ನ ಮೊದಲ ಶಿಷ್ಯವರ್ಗ,
ರಂಬೀರ್ನ ಕ್ಯೂಟೆನೆಸ್ಸ್,
ಟಾಮ್ ಕ್ರ್ಸ್ ನ ಹಾಟ್ನೆಸ್,
ಸುದೀಪ್ ನ ವಾಯ್ಸ್,
ಟ್ವಿನ್ಕುವಿನಾ ಸಿಲ್ವಿ(ಬೈಕ್),
ಕವಿಗೋಷ್ಠಿ, ಕಪಿಯೊಂದಿಗೆ (ಚನ್ನ),
ಪೋಲಾರ್ ಬೇರ್ ನ ಡಿಬಿಸಿ,
ಲಾವಣ್ಯನೊಂದಿಗಿನ ಪ್ರತಿ ದಿನ,
ರಘುವಿನ ಮಗಳ ಭೇಟಿ,
ಹೀಗೆ ಹತ್ತು ಅಲವು ...

ವಾ ಇದನ್ನೆಲ್ಲ ನೆನಪಿಸಿಕೊಂಡು, ಅದರ ಬಗ್ಗೆ ಈಗ ಬರೀಬೇಕಾರೆ ಆಗುತ್ತಿರುವ ಸಂತೃಪ್ತಿಯ ಖುಷಿ ..
ನನ್ನ ನಗು, ನನ್ನ ಮುದ್ದು (ಚಿಂಪಿ) ನಾನು ಖುಷಿಯ ಬಗ್ಗೆ ಬರೆಯುತ್ತಿರವಾಗ ಕರೆಮಾಡಿ ಮಾತನಾಡಿದಾಗ ಆಗುವ ನೆಮ್ಮದಿಯ ಖುಷಿ.
   ತಂಪಾದ ಗಾಳಿಗೆ ಮೈಯೊಡ್ಡಿ ನಿಂತಾಗ, ಕಿವಿಯಲ್ಲಿ ಗಾಳಿ ಪಿಸುಗುಟ್ಟಿದಾಗ, ಆದಿ ಬರೆದ ಚಂದ್ರಮನ ಆರ್ಟಿಕಲ್ ಪದೇ ಪದೇ ಓದಿದಗಾ ( http://adarshabs.blogspot.in/2017/02/blog-post.html ) , ಫಣಿಯಾ ಫೋಟೋಗ್ರಫಿಯ ಬಗ್ಗೆ ಆದಿ ನಾನು ಜಗಳವಾಡಿದಾಗ, ಸಣ್ಣ ಸಣ್ಣ ಹುಸಿ ಮುನಿಸುಗಳು, ಮುದ್ದಾದ ಮಗುವೊಂದು ನಕ್ಕಾಗ, ನಾನೆಟ್ಟ ಗಿಡದಲ್ಲಿ ಹೂವೊಂದು ಅರಳಿದಾಗ, ಅತ್ತಿಗೆ ನಾನು ಸೇರಿ ಅಡಿಗೆ ಮಾಡಿದಾಗ, ಮನೆಯವರೆಲ್ಲ ಒಟ್ಟಿಗೆ ಶಾಪಿಂಗ್ ಮಾಡಿದಾಗ, ಅಬ್ಬಾ .... ಹೇಯ್ ನಾನು ತುಂಬಾ ಲಕ್ಕಿ ಅನ್ನಿಸುತ್ತಿದೆ :) ಖುಷಿ ಆಗ್ತಿದೆ, ಇಷ್ಟೆಲ್ಲ ವಿಷಯಗಳಿಗೆ ಖುಷಿ ಪಡುವ ನಾನು ನನ್ನ ಜೀವನದೊಂದಿಗೆ ಕೋಪ ಮಾಡಿಕೊಂಡಿರುವುದಾದರು ಯೇಕೆ? ಅಥವಾ ಇದು ಹುಸಿ ಕೋಪ ವಿರಬಹುದು (ಕೋಪವಲ್ಲದ ಕೋಪಕ್ಕೆ ಕೋಪವೆಂದು ಹೆಸರಿಟ್ಟಿರಬಹುದು) , ಅಥವಾ ಸಾಧನೆಯ ತುಡಿತದ ಕಿಚ್ಚಿರಬಹುದು. ಗೊತ್ತಿಲ್ಲ. ಸದ್ಯಕ್ಕೆ ಖುಷಿಯಾಗಿದ್ದೇನೆ. ನೀವು ಖುಷಿಯಾಗಿರಿ. ನಮ್ಮಲ್ಲೇ ಖುಷಿ ಅಡಗಿದೆ ನಮಗದು ತಿಳಿಯುವುದಿಲ್ಲ. ತಿಳಿದರು ಬೆಲೆ ಕೊಡುವುದಿಲ್ಲ, ತಿಳಿದರು ತಿಳಿಯದಂತೆ ವರ್ತಿಸಿ ಅವಮಾನಿಸುತ್ತೇವೆ. ಕಾಣದ, ಗೊತ್ತಿಲ್ಲ ಖುಷಿಯಲ್ಲದ ಖುಷಿಗೆ ಖುಷಿಯೆಂದು ಹೆಸರಿಟ್ಟು ಅದನ್ನು ಪಡೆವ ಹಂಬಲದಲ್ಲಿ ಶ್ರಮಿಸಿ ಸೋತು ಹತಾಷರಾಗುತ್ತೇವೆ.

Tuesday 11 July 2017

ತೋಚಿದ್ದನ್ನು ಗೀಚು

ಅದೊಂದು ಸುಂದರ ಸಂಜೆ (೨೪-೧-೨೦೧೭). ಎಂದಿನಂತೆ ಚನ್ನ ನನ್ನೊಂದಿಗೆ ಚಹಾ ಕುಡಿಯಲೆಂದು ನಮ್ಮ physics department ಕ್ಯಾಂಟೀನ್ಗೆ  ಬಂದ. ನಮ್ಮ ಕ್ಯಾಂಟೀನ್ ಓನರ್ ಮಹೇಶಣ್ಣನ್ನ ಜೊತೆ ಒಂದ್ದಷ್ಟು ತರಲೆ ಮಾತಾಡಿ ಚಹಾ ಕುಡಿದು ಅಲ್ಲಿಂದ ಹೊರೆಟೆವು.

ನನ್ನದು, ಚನ್ನದು ಒಂದು ಅಭ್ಯಾಸವಿತ್ತು.
ದಿನ ಸಂಜೆ ಜೊತೆಯಲಿ ಚಹಾ ಕುಡಿದು, ಒಂದಷ್ಟು ಸಾಮಾಜಿಕ ಹಾಗು ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡುತ್ತ, ನಡೆಯುತ್ತಾ ಬಸ್ ಸ್ಟಾಪ್ ವರೆಗೂ ಹೋಗಿ ಚನ್ನನನ್ನು ಬಸ್ ಹತ್ತಿಸಿ ಬರುವುದು.

ಅದರಂತೆ ನಮ್ಮ ಆ ದಿನದ ಚರ್ಚೆ ನೊಬೆಲ್ ಪ್ರಶಸ್ತಿಯಬಗ್ಗೆ.
ಚರ್ಚಿಸುತ್ತ ನಡೆಯುತ್ತಿದ್ದ ನಮಗೆ ದಾರಿ ಕಳೆದ್ದದೆ ತಿಳಿಯಲಿಲ್ಲ. ನಮ್ಮ ಚರ್ಚೆಗೆ ತೆರೆ ಎಳೆಯುವ ಸಮಯ ಬಂದಾಯ್ತು. ಆದರೆ ಅಂದೇಕೋ ಅಷ್ಟು ಬೇಗ ವಿದಾಯ ಹೇಳಲು ಮನಸಾಗದೆ ಅಡ್ಮಿನ್ ಬ್ಲಾಕ್ ಬಳಿ ಕಟ್ಟುತಿದ್ದ ಕಾಂಪೌಂಡ್ ಮೇಲೆ ಕುಳಿತೆವು. ಬಾಯಾಡಿಸಲು ಅಲ್ಲಿಯೇ ಮಾರುತಿದ್ದ ಪಾನಿ ಪುರಿ ಕೊಂಡೆವು.
ತಂಪಾದ ಗಾಳಿ,
ಕಣ್ಣಮುಂದೆ ಸೂರ್ಯಾಸ್ತಮದ ಸುಂದರ ನೋಟ.
ಬಣ್ಣ ಬದಲಾಯಿಸುತ್ತಿದ್ದ ಬಾನು.
ಎಲ್ಲವೂ ಸುಂದರವಾಗಿತ್ತು.
ಮುಖ ಪ್ರೇಕ್ಷರಂತೆ ಸುಮ್ಮನೆ ಕುಳಿತು ಪ್ರಕೃತಿ ಸೌಂದರ್ಯವನ್ನು ಸವಿದೆವು.
ಕೈಯ್ಯಲ್ಲಿದ್ದ ಪಾನಿ ಪೂರಿ ತಣ್ಣಗಾಗಿತ್ತು.
ಕೈ ಘಡಿಯಾರ ಸಮಯ ೬.೧೫ ಪಿಎಂ ಎಂದು ತೋರಿಸುತ್ತಿತ್ತು.
ಸರಿ ಪಾನಿ ಪುರಿ ನೀನೆ ಕಾಲಿಮಾಡು ಬೇಗ, ಹೋಗಣ, ಲೇಟ್ ಅಯ್ತು ಅಂದೇ.
ಅದೇಕೋ ಏನೋ, ಇದ್ದಕಿದಂತೆ ಚನ್ನ ಹೇಳಿದ "ಮಧು, ನಿನಗೆ ತೋಚಿದ್ದನ್ನು ಗೀಚಿಡು"

ಸರಿ ಎನಿಸಿತ್ತು.
ಆದರೆ ವ್ಯಕ್ತ ಪಡಿಸದೆ ನಕ್ಕು ಸುಮ್ಮನಾಗಿದ್ದೆ. 

Monday 10 July 2017

ಟಿಕ್ ಟಿಕ್

ನಾನು ಸುಮ್ನೆ ಟಿವಿ ಮುಂದೆ ಕುಡ್ಕೊಂಡು ಸಮಯ ಹಾಳು ಮಾಡ್ತಿದ್ರೆ ನಮ್ಮಪ್ಪ ಅದುನ್ನ ಗಮನಿಸಿ ಆವಗಾವಾಗ  ಒಂದು ಹಾಡೆಳ್ತಾರೆ "ಜಿಪುಣ ಅಂದ್ರೆ ಜಿಪುಣ ಈ ಕಾಲ".
ಅವತೊಂದು ದಿನ ನ ಕೇಳ್ತಿದ್ದೆ , ಯಾಕಪ್ಪ ನಾನು ಕುಡ್ಕೊಂಡು ಟಿವಿ ನೋಡ್ತಿದ್ರೆ ಹಾಡ್ಹೇಳ್ತೀರಾಆಆ .
ನೋಡ್ಬಾರ್ದ ಟಿವಿನ ಹಾಗದ್ರೆ ನಾನು?
ಟಿವಿ ನೋಡ್ಬಾರ್ದು ಅಂತಲ್ಲ ಮಗಳೇ,
ನಾವು ಏನ್ ಮಾಡ್ತಿದಿವಿ ಯಾಕೆ ಮಾಡ್ತಿದೀವಿ ಅಂತ ಗೊತಿರ್ಬೇಕು ಅಷ್ಟೇ.
ಸಮಯದ ಬೆಲೆ ಅರಿತು ನಡೆದರೆ ಕಾರ್ಯ ಸಿದ್ಧಿಯು ಖಂಡಿತಾ ಅಂತಾರೆ ಅಪ್ಪ.
ಹೋ ಹಾಗಾದ್ರೆ ಟಿವಿ ನೋಡದೆ ನಾನು ಯಾವಾಗ್ಲೂ ಓದ್ಕೊಂಡು ಕುರ್ತಿಬೇಕಾ?
ಅನ್ನೋ ನನ್ನ ವಿತಂಡ ವಾದಕ್ಕೆ ನಮ್ಮಪ್ಪ ಹೀಗೆ ಹೇಳ್ತಾರೆ,
ನಿನ್ನ ಜೀವನದಿಂದ ನಿಂಗೇನು ಬೇಕು ಅಂತ ನೀನೆ ನಿರ್ಧಾರ ಮಾಡಬೇಕು.
ಟಿವಿ ನೋಡ್ಬೇಕು ಅನ್ಸಿದ್ರೆ ನೋಡು.
ನಂಗೇನು ತೊಂದ್ರೆ ಇಲ್ಲ.
ಮಗಳು ಮುಂದೆ ಬಂದ್ರೆ, ಖುಷಿಯಾಗಿದ್ರೆ ನಂಗೆ ಖುಷಿ, ಅಷ್ಟುಬಿಟ್ಟು ನಂಗೆ ಬೇರೆ ಏನು ಲಾಭ ಇಲ್ಲ.
ಲಾಭ ಏನಾದ್ರು ಇದ್ರೆ ಅದು ನಿಂಗೇನೇ ಹೊರೆತು ನಂಗು ಹಾಗು ನಿನ್ನ ಅಮ್ಮಂಗಲ್ಲ.
ಕಳೆದು ಹೋದ ಸಮಯ ಎಷ್ಟೇ ಹುಡ್ಕಿದ್ರು ಸಿಗಲ್ಲ.
ಮತ್ತೆ ವಾಪಾಸ್ ಬರಲ್ಲ.
ಟಿವಿ ನೋಡ್ಬೇಡ, ಕುತ್ಕೊಂಡು ಓದು ಅಂತ ಅಲ್ಲ ನನ್ನ ಮಾತಿನ ಅರ್ಥ,
ಓದೋದುನ್ನು ಬಿಟ್ಟು ಅದರ ಹೊರಗೂ ಸಾವಿರ ಕೆಲಸ ಇದೆ ಕಲಿಯೋಕ್ಕೆ ಹಾಗು ಮಾಡೋಕ್ಕೆ, ಆಸಕ್ತಿ ಇದ್ರೆ.

ಇಲ್ಲಿಗೆ ನಂದು ಅಪ್ಪಂದು ಈ ವಿಷಯದ ಬಗ್ಗೆ ಕಿತ್ತಾಟ ನಿಲಿಲ್ಲ.
ಒಂದಿನ ನಮ್ಮಪ್ಪ ಏನೋ  ಒಂದು ಕೆಲಸ ಮಾಡಕ್ಕೆ ಹೇಳಿದ್ರು ನಂಗೆ.
ಆಗ ನ ಹೇಳ್ದೆ, ಏ ಹೋಗಪ್ಪ ಟೈಮ್ ವೇಸ್ಟ್ , ನಾ ಮಾಡಲ್ಲ ಆ ಕೆಲ್ಸಯೆಲ್ಲ.
ಅವಾಗ ನಮ್ಮಪ್ಪ ನಂಗೆ ಹೇಳಿದ ಮಾತಿಗೆ ಎಷ್ಟು ತುಕವಿತ್ತು ಅಂದ್ರೆ, ಇಡೀ ರಾತ್ರಿ ನಮ್ಮಪ್ಪನ ಮತಿನ  ಬಗ್ಗೆ ಯೋಚನೆ ಮಾಡಿದ್ದೆ.
ಅವರು ಹೇಳಿದ್ದು ಇಷ್ಟೇ , "ಟೈಮ್ ವೇಸ್ಟ್ ಅಂದ್ಯಲ್ಲ, ಹಾಗಾದ್ರೆ  ಫ಼ಾರ್ ವಾಟ್ ಪರ್ಪಸ್ ಯೂ ಆರ್ ಯೂಸಿಂಗ್ ದಿಸ್ ಟೈಮ್ ಫಾರ್ ? ಎನಿ ಪ್ರೊಡೆಕ್ಟಿವ್ ತಿಂಗ್? ಫಸ್ಟ್ ಆಫ್ ಆಲ್ ವಾಟ್ ಡು ಯು ಮೀನ್ ಬೈ ವೇಸ್ಟ್ ಅಪ್ ಟೈಮ್? ಟೈಮ್ ವೇಸ್ಟ್ ಅಂದ್ರೆ ಏನು ಅಂತ ಮೊದ್ಲು ನೀನು ಸರಿಯಾಗಿ ಅರ್ಥ ಮಾಡ್ಕೋಬೇಕು"

ಅವರ ಮಾತು ನಿಜ.
ನಮಗೆ ಇಷ್ಟವಾದದ್ದು ಏನಾದ್ರು ಮಾಡ್ತಾ ಇರ್ಬೇಕು ಸುಮ್ನೆ ಕೂರಬಾರದು ಅನ್ನೋದು ನಮ್ಮಪನ ವದ ಅಂತ ಅರ್ಥ ಆಯಿತು. ಆದ್ರೆ ನಾಯಿ ಬಾಲ ಡೊಂಕೇ. ಐ ಲವ್ ಟು ವೇಸ್ಟ್ ಟೈಮ್. ಸುಮ್ನೆ ಕೂತಿರ್ತಿನಿ ಕೆಲವೊಮ್ಮೆ,  ಯಾವುದೋ ಯೋಚನೆಯಲ್ಲಿ ಮುಳುಗಿ ಹೋಗಿರ್ತಿನಿ .
ಯಾಕೋ ಗೊತ್ತಿಲ್ಲ, ಇದ್ರು ಬಗ್ಗೆ ಅಪ್ಪನ ಹತ್ರ ಮಾತಾಡ್ಬೇಕು ಅನ್ಸಿ ಕೇಳ್ದೆ,
ಏನು ಮಾಡದೇ ಸುಮ್ನೆ  ಕುತ್ಕೊಳದು ಟೈಮ್ ವೇಸ್ಟ್ ಆ ?
ಹಿಸ್ ಆನ್ಸರ್ ವಾಸ್ ಬಿಟ್ ಷಾಕಿಂಗ್, ಹಿ ಟೋಲ್ಡ್,
ಇಲ್ಲ ಮಗಳೇ. ನಮ್ಮೊಂದಿ ನಾವು ಸುಮ್ಮನೆ ಕೂತು ಸ್ವಲ್ಪ ಕಾಲ ಕಳೆಯಬೇಕು. ಅದು ಒಳ್ಳೆಯ ಅಭ್ಯಾಸ.
ಸಮಯದ ಒಳ್ಳೆಯ ಉಪಯೋಗ ಹೀಗೆ ಮಾಡ್ಬೇಕು ಹಾಗೆ ಮಾಡ್ಬೇಕು ಅಂತ ಇರೋದಿಲ್ಲ, ಕಾಲಕ್ಕೆ ತಕ್ಕಂತೆ ಸಮಯದ ಒಳ್ಳೆಯ ರೀತಿಯ ಬಳಕೆಯ ವ್ಯಾಖ್ಯಾನವು ಬದಲಾಗುತ್ತದೆ. ಇಟ್ಸ್ ಆಲ್ ಅಬೌಟ್ ಪ್ರಿಯೋರಿಟಿಸ್ ಅಂಡ್ ಹೌ ಯು ಡೆಫಿನೇ ಇಟ್.

ಇಟ್ ಮೇಕ್ಸ್ ಸೆನ್ಸ್. ಸುಮ್ನಾದೆ.

ಈ ಘಟನೆಗಳೆಲ್ಲ ನಡೆದು ಬಹಳ ವರ್ಷಗಳೇ ಆದವು.

ಯಾಕೋ ಗೊತ್ತಿಲ್ಲ ಈ ಸಂದರ್ಭದಲ್ಲಿ ರಣಬೀರ್ ಕಪೂರ್ "yeh jawaani hai deewani" ಫಿಲ್ಮ್ ಅಲ್ಲಿ ಹೇಳಿದ ಡೈಲಾಗ್ ನೆನಪಾಗತಿದೆ  "ಮೈ ವುಡ್ನ ಚಾಹ್ತಾ ಹ್ಞೂ, ದೌಡ್ನ ಚಾಹ್ತಾ ಹ್ಞೂ, ಗಿರ್ನ ಭೀ ಚಾಹ್ತಾ ಹ್ಞೂ, ಬಸ್ ರುಕ್ನ ನಹಿ ಚಾಹ್ತಾ ಹ್ಞೂ ". ಎಷ್ಟು ಸತ್ಯ ಅಲ್ವ ಇದು ?  ಈ ಡೈಲಾಗ್ ತುಂಬಾನೇ ಇಂಪ್ರೆಸ್ ಮಾಡಿತ್ತು ನನಗೆ. ದಿನ ನಮ್ಮ ಜೀವನದಲ್ಲಿ ಹೊಸತೇನರು ಕಲಿತ ಇರ್ಬೇಕು, ಆವಾಗ್ಲೇ ಮಜಾ. ಅಲ್ವ ?

ಟಿಕ್ ಟಿಕ್ ಅಂತ ಶಬ್ಧ ಮಾಡ್ತಾ ಓಡೋ ಸಮಯದ ಬಗ್ಗೆ ಇಂದು ಇದ್ದಕಿದಂತೆ ನಾನು ಬರಿಯಾಕ್ಕೆ ಕಾರಣವಿದೆ. ಒಂದು ವಾರದಿಂದ ಯೂನಿವರ್ಸಿಟಿ ಕಡೆ ತಲೆ ಹಾಕಿರಲಿಲ್ಲ. IISc ಯಲ್ಲಿ ಯಾವುದೊ ರೆಸೆರ್ಚ್ ವರ್ಕ್ ನಲ್ಲಿ ಬಿಜಿಯಾಗಿದ್ದೆ. ಇಂದು ಯೂನಿವರ್ಸಿಟಿ ಗೆ ಬಂದ ನಾನು ನನ್ನ ಮುದ್ದುವಿನ (ನನ್ನ ಸ್ನೇಹಿತ, ಅವನಂದ್ರೆ ತುಂಬಾ ಪ್ರೀತಿ) ದರ್ಶನ ಮಾಡಲೆಂದು ಅವನ ಲ್ಯಾಬ್ ಗೆ ತೆರಳಿದೆ. ಕೇವಲ ಹಯ್ ಹೇಳಿ, ರಘು (ನನ್ನ ಸ್ನೇಹಿತ) ಹೇಳಿದ ಕೆಲವು ವಿಷಯದ (exam invigilation duty) ಬಗ್ಗೆ ಮಾತಾಡಿ ಐದು ನಿಮಿಷಕ್ಕೆ ವಾಪಸು ಬರಬೇಕೆಂದುಕೊಂಡಿದ್ದೆ. ಆದರೆ ಸುಮಾರು ಎರೆಡು ಘಂಟೆಗಳ ಕಾಲ ಕೂತು ಮಾತಾಡಿ ಬಂದೆ. ರಿಸರ್ಚ್ ವರ್ಕ್ ಬಗ್ಗೆಯಲ್ಲ, ಜೀವನದ ಬಗ್ಗೆಯೂ ಅಲ್ಲ, ಸಮಾಜದ ಆಗು ಹೋಗುಗಳ ಬಗ್ಗೆ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಘಟನೆಯ ಬಗ್ಗೆ (University administration).
ಮಾತು ಮುಗಿಸುವ ಮುನ್ನ ಕಪೀಶ ಹೇಳಿದ, ನನ್ನ ಸಮಯ ನಿನ್ನ ಸಮಯ ಇಬ್ರುದು ವೇಸ್ಟ್ ಅಯ್ತು, ಹೋಗು ಕೆಲಸ ಮಡ್ಹೋಗು ಅಂದ. ಸರಿ ಎಂದು ನಾನು ಹೊರಟು ಬಂದೆ.

ಅವನೊಂದಿಗೆ ಕಳೆದ ಯಾವ ಸಮಯವೂ ವ್ಯರ್ಥವಲ್ಲ ಅಂತ ಯಾರು ಅವನಿಗೆ ಬಿಡಿಸಿ ಹೇಳ್ತಾರೆ?


Saturday 8 July 2017

ದಿ ಮೊಮೆಂಟ್ ( ಘಳಿಗೆ)

ಲೀವ್ ಲೈಫ್ ಇನ್ ಮೊಮೆಂಟ್ಸ್.
ದಿಸ್ ಇಸ್ ವಾಟ್ ಐ ಲರ್ನಟ್ ಇನ್ ರೀಸೆಂಟ್ ಫ್ಯೂ ಇಯರ್ಸ್.

ನೋವು, ನಲಿವು, ಸುಖ, ದುಃಖ ಅಥವಾ ಮನುಷ್ಯನ ಯಾವುದೇ ಇನ್ನಿತರ ಭಾವನೆಗಳಾಗಲಿ ಆಯಾ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ. ಇಷ್ಟಲ್ಲದೆ ನಮ್ಮ ಹಿರಿಯರು ಹೇಳ್ತಿದ್ರೆ, ಬದಲಾವಣೆ ಜಗದ ನಿಯಮ ಅಂತ.

ನಮ್ಮಪ್ಪ ಯಾವಾಗ್ಲೂ ಹೇಳ್ತಾರೆ 'ಕಾಲಕ್ಕೆ ತಕ್ಕಂತೆ ಕೋಲಾ' ಅಂತ . ಎಲ್ಲವೂ ಅಷ್ಟೇ, ಎಲ್ಲಾರು ಅಷ್ಟೇ, ಸಮಯಕ್ಕೆ ತಕ್ಕಂತೆ ಬದಲಾಗುತ್ತಾರೇ , ಅದು ತಪ್ಪಲ್ಲ. ಬದಲಾವಣೆ ಅನಿವಾರ್ಯ. ಆದರೆ ನನ್ನ ಆಸೆ ಇಷ್ಟೇ ಯಾವುದೇ ಬದಲಾವಣೆಗಳಾಗಲಿ ಅದು ನಮ್ಮನಮ್ಮ ಇಂಪ್ರೂವ್ಮೆಂಟ್ಗೆ ಮತ್ತು ಜಗದ ಸುಧಾರಣೆಗಾಗಿ ಆಗಿರಬೇಕು.

ಚಿಕ್ಕವಳಿದಾಗ ನಮ್ಮ ಮನೆಯ ಗೋಡೆಯಲ್ಲಿ ತಗುಲು ಹಾಕಿದ್ದ ಕ್ಯಾಲೆಂಡರ್ನಲ್ಲಿ ಒಂದು ಸುಂದರ ಜಲಪಾತದ ಚಿತ್ರವಿತ್ತು. ಅದರ ಕೆಳಗೆ ಒಂದು quote, "nothing is permanent except change, change is a continuous process but not an event" (ಇದರರ್ಥ ಸ್ಪಷ್ಟವಾಗಿ ಅರ್ಥವಾಗಲು ಇನ್ನೊಂದಾಷ್ಟು ವರ್ಷಗಳು ಬೇಕಾಗಬಹುದು). ಆ ಚಿತ್ರವೇನನ್ನು ಬಿಂಬಿಸುತಿತ್ತು? ನಮ್ಮ ಜೀವನವನ್ನೇ? ಮನುಷ್ಯನ ಯೋಚನಾ ಲಹರಿಯನ್ನೇ? ಸೃಷ್ಟಿಯ ನಿಯಮವನ್ನೇ? ಗೊತ್ತಿಲ್ಲ. ಹಾಗಾದರೆ ಯಾವುದು ಶಾಶ್ವತವಲ್ಲದ ಈ ನಶ್ವರದ ಬದುಕ್ಕಲ್ಲಿ ಖುಷಿಯನ್ನ ಹುಡುಕುವುದೆಲ್ಲಿ ? ಅಂಡ್ ಮೋಸ್ಟ ಆಪ್ ಆಲ್, ಜೀವನವೆಂದರೇನು ? ಈ ಪ್ರಶ್ನೆಗಳು ಬಹಳ ವರ್ಷಗಳ ಹಿಂದೆ ನನ್ನನ ಬಹಳವಾಗಿ ಕಾಡಿತ್ತು. ಈಗಳು ಕೆಲವೊಮ್ಮೆ ಕಾಡುತ್ತದೆ.

ನನ್ನ ಸುತ್ತ ಇರುವ ಜನರನ್ನೆಲ್ಲ ನೋಡಿದಾಗ, ಇವರೆಲ್ಲ ಖುಷಿಯಾಗಿದ್ದಾರೆಯೇ? ಖುಷಿಯಾಗಿದ್ದರೆ ಅದಕ್ಕೆ ಕಾರಣ ಏನು? ಖುಷಿಯಾಗಿಲ್ಲದಿದ್ದರೆ ಅದಕ್ಕೆ ಕಾರಣವೇನು ? ಹಾಗಾದರೆ ಖುಷಿಗೆ ಪರ್ಟಿಕ್ಯುಲರ್ ಡೆಫಿನಿಷನ್ ಇದೆಯೇ? ಇಲ್ಲ. ಇಟ್ಸ್ ಆಲ್ ಇನ್ ಅವರ್ ಪೆರ್ಸ್ಪೆಕ್ಟಿವ್. ಖುಷಿ ನಮ್ಮಲಿಯೇ ಅಡಗಿದೆ.  ಹಾಗಾದರೆ ನಮ್ಮ ಯಾವ ಭಾವನೆಗಳಿಗೂ ತನ್ನದೇಯಾದ ನಿರ್ಧಿಷ್ಟ ವ್ಯಾಖ್ಯಾನವಿಲ್ಲವೇ? ಹೀಗಿರುವಾಗ ಯಾವುದೇ ವ್ಯಕ್ತಿಯ ನಡುವಳಿಕೆಯನ್ನು ಜಡ್ಜ್ ಮಾಡುವ ಅಧಿಕಾರ ಯಾರಿಗೂ ಇರುವುದಿಲ್ಲ, ಅಲ್ಲವೇ?

ನಮ್ಮ ಶಂಕರ್ ಭಟ್ರು (ನಮ್ಮಪ್ಪ) ಹೇಳ್ತಾರೆ ಉರೋರಿಗೆ ಒಂದು ದಾರಿ ಆದ್ರೆ ಪೊರರಿಗೊಂದು ದಾರಿ, ನಮ್ಮ ಯೋಚನೆಗಳು ಯೋಜನೆಗಳು ಏನೇ ಇರಬಹುದು, ಒಂದು ಸಮಾಜದಲ್ಲಿ ನಾವು ಜೀವಿಸುವಾಗ ಸಂಪೂರ್ಣವಾಗಿ ಅಲ್ಲದಿದ್ದಾದರೂ, ಆದಷ್ಟು  ಸಮಾಜದೊಂದಿ ಹೊಂದಿಕೊಂಡು ಸಮಾಜದೊಂದಿ ಬದುಕಬೇಕು, ಹಾಗು ಸಮಾಜದೊಂದಿಗೆ ಇದ್ದು ನಮ್ಮ ಯೋಚನೆಗಳು ಯೋಜನೆಗಳು ಜಾಣತನದಿಂದ ಯಾರಿಗೂ ತೊಂದರೆಯಾಗದಂತೆ ಎಕ್ಸಿಕ್ಯೂಟ್ ಮಾಡಬೇಕು. ಎಂದಿಗೂ ಪೋರರ ದಾರಿ ಹಿಡಿಯ ಬಾರದು. ಯಾವ ವಿಷಯಕ್ಕಾಗಲಿ ಯಾರನ್ನು ದ್ವೇಷಿಸಬಾರದು, ತಲೆ ಕೆಡಿಸಿಕೊಂಡು ನೋವನಿಭವಿಸ ಬಾರದ. ಜೆಸ್ಟ್ ಇಗ್ನೋರ್ ವಿಚ್ ಇಸ್ ನಾಟ್ ರಿಲೆತೆಡ್ ಟು ಯು.
ಆದರೆ ಬೇರೆಯವರಿಗೆ ಉಪಕಾರ ಮಾಡು. ಆಗಲ್ವ? ಹಾಗಾದ್ರೆ ಉಪದ್ರ ಅಂತೂ ಮಾಡ್ಬೇಡ ತೆಪ್ಪಗಿರು.
ಪ್ರೀತಿಯೊಂದೇ ಸತ್ಯ. ಮಿಕ್ಕಿದೆಲ್ಲ ಅದರ ಡೇರಿವೆಟಿವ್ಸ್ ಅಷ್ಟೇ .
ಸರಿ ಅನಿಸುತ್ತದೆ.

ತುಂಬ ಭಾವುಕಳಾದ ನಾನು ಸಣ್ಣ ಪುಟ್ಟ ವಿಷಯಗಳನ್ನು ತಲೆಗೆ ತುಂಬಿಕೊಂಡು ನೋವನುಭವಿಸುತ್ತಿದ್ದ ಕಾಲವೊಂದಿತ್ತು. ಸಂಪೂರ್ಣವಾಗಿ ಅದರಿಂದ ಹೊರ ಬರದಿದ್ದರೂ, ಐ ಹ್ಯಾವ್ ಲರ್ನಟ್ ಟು ಲೆಟ್ ಗೋ ದಿ ತಿಂಗ್ಸ್ ವಿಚ್ ಆರ್ ನಾಟ್ ಇನ್ ಮೈ ಹ್ಯಾಂಡ್.  ಐ ಲರ್ನಟ್ ಟು ತಿಂಕ್ ಔಟ್ಸೈಡ್ ದಿ ಬಾಕ್ಸ್. ನನ್ನ ನೋಟವನ್ನು ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ.

ಯಾವುದೇ ವಿಷಯಕ್ಕಾಗಲಿ ಘಟನೆಗಳಿಗಾಗಲಿ ಎರೆಡು ಮುಖವಿರುತ್ತದೆ. ಒಂದು ನಾವು ಕಂಡು ಅರ್ಥಯಿಸಿಕೊಂಡ್ಡದು, ಮತ್ತೊಂದು ನಿಜ ಸಂಗತಿ. ನಾವು ಕಂಡು ಅರ್ಥಯಿಸಿಕೊಂಡ್ಡದು ಯಾವಾಗಲು ನಿಜ ಸಂಗತಿಯಾಗಿರುತ್ತದೆ ಅನ್ನುವುದು ನಮ್ಮವಾದವಾಗಿರುತ್ತದೆ, ಹಾಗಾಗಿಯೇ ಈ ಜಗಳಗಳು, ಮನಸ್ತಾಪಗಳು. ದುಡುಕುವಮುನ್ನ ನಿಜ ಸಂಗತಿಯ ಅರ್ಥಯ್ಸಿಕೊಳ್ಳುವ್ವ ವ್ಯವಧಾನ ನಮ್ಮಲ್ಲಿ ಬೆಳೆಯ ಬೇಕು. ಆಗ ಮಾತ್ರ ಮನಸು ನೆಮ್ಮದಿಯಿಂದಿರುತ್ತದೆ. ಖುಷಿಯಾಗಲಿ ದುಃಖ್ಖವಾಗಲಿ ಯೆಲ್ಲವು ಕ್ಷಣಿಕ. ಬಂದದ್ದನ್ನು ಅನುಭವಿಸುವ ಧಿಟ್ಟತನ ನಮ್ಮಲಿರಬೇಕು. ನಥಿಂಗ್ ಲಾಸ್ಟ ಫೋರೆವೆರ್.

ಈಗ ಖುಷಿಯಾಗಿರುವೆ? ಹಾಗಾದರೆ ಎಲ್ಲ ಚಿಂತೆ ಬಿಟ್ಟು ಎಂಜಾಯ್ ದಿ ಮೊಮೆಂಟ್.ಜೀವನ ಪೂರ್ತಿ ಆ ಗಳಿಗೆ ಇರುವುದಿಲ್ಲ, ಕೇವಲ ನೆನಪೊಂದೆ ನಿಜ ಸಂಗಾತಿ. ಹಾಗಾಗಿ ಮೇಕ್ ಎವ್ರಿ ಮೊಮೆಂಟ್ ಮೆಮೊರೇಬಲ್ ಅಂಡ್ ಬ್ಯೂಟಿಫುಲ್.  ಅತಿ ಆಸೆ ಬೇಡ.
ಅಥವಾ ಈಗ ಕಷ್ಟದಲ್ಲಿರುವೆಯ?  ಹಾಗಾದರೆ ಚಿಂತೆಪಡದೆ ಅದಕ್ಕೆ ಸೊಲ್ಯೂಷನ್ ಹುಡುಕು. ಒಟ್ಟಿನಲ್ಲಿ ಜೀವನವನ್ನು ಜೀವಿಸು. ಚಿಂತೆ ಚಿತೆ. ಚಿಂತೆ ನಿಂತ ನೀರು. ಅದರಿಂದ ಕಾಯಿಲೆಗಳೇ ಹೊರತು, ಪ್ರಯೋಜನ ವಿಲ್ಲಾ. ಕಷ್ಟಗಳಿಗೆ ಆದಷ್ಟು ಕಷ್ಟಗಳು ಎಂಬ ಹಣೆಪಟ್ಟಿ ಕೊಡದಿರಲು ಪ್ರಯತ್ನಿಸು. ಆಗ ಪ್ಯಾನಿಕ್ ಅಗದೆಯೇ ಒಳ್ಳೆಯ ಸೊಲ್ಯೂಷನ್ ಹುಡುಕಲು ಸಹಾಯವಾಗುತ್ತದೆ.

ನಮ್ಮ ನಮ್ಮ ಭಾವಕ್ಕೆ ತಕ್ಕಂತೆ ನಮ್ಮ ನಮ್ಮ ಬಾಳು. ಇಟ್ಸ್ ಆಲ್ ಇನ್ ಅವರ್ ಹ್ಯಾಂಡ್.
ಲೈಫ್ ಇಸ್ ಸೋ ಬ್ಯೂಟಿಫುಲ್ ಅಂಡ್ ಮ್ಯೂಸಿಕಲ್. ನಾವು ಕಣ್ತೆರೆದು ನೋಡಬೇಕಾಗಿದೆ ಹಾಗು ಕಿವಿಕೊಟ್ಟು ಕೇಳಬೇಕಾಗಿದ.
ದಿ ಅಲ್ಟಿಮೇಟ್ ಗೋಲ್ ಆಫ್ ಲೈಫ್ ಐಸ್ ಟು ಬಿ ಹ್ಯಾಪಿ ಅಂಡ್ ಇಫ್ ಪಾಸಿಬಲ್ ಮೇಕ್ ಅದರ್ ಪೀಪಲ್ ಹ್ಯಾಪಿ. ದಟ್ಸ್ ವಾಟ್ ಲೈಫ್ ಐಸ್ ಆಲ್ ಅಬೌಟ್. 

Friday 7 July 2017

ದೋಸೆ.

ಮಲೆನಾಡಿನ ಹವ್ಯಕ ಜನಗಳೆ ಹಾಗೇ. ಮೂಲತಹ ಸಸ್ಯಾಹಾರಿಗಳಾದ ಇವರು ವೆರೈಟಿ ವೆರೈಟಿಯಾಗಿ ಅಡಿಗೆ ಮಾಡಿ ತಿಂತಾರೆ. ಯಾವುದೇ ಜನಾಂಗಗಳ ಆಹಾರ ಪದ್ಧತಿಗಳಾಗಲಿ ಅವರವರ ಸಂಪ್ರದಾಯ, ಅವರಿರುವ ಪರಿಸರದ ಅನುಗುಣವಾಗಿ ಬೆಳೆದು ಬಂದಿರುತ್ತದೆ.  ನಮ್ಮ ಮಲೆನಾಡಿಗರ ಆಹಾರ ಪದ್ಧತಿಗಳು ಹಾಗೆಯೇ. ಉಷ್ಣತೆಯನ್ನು ನಿಯಂತ್ರಿಸಲು ಕೂಸುಗಲಕ್ಕಿ ಗಂಜಿಮಾಡಿ ತಿಂತಾರೆ. ಸುತ್ತಮುತ್ತ ಬೆಳೆಯುವ ತರಕಾರಿ, ಹಣ್ಣುಹಂಪಲು, ಸೊಪ್ಪುಸದೆಯನ್ನು ಬಳಸಿ ತಿಂಡಿ ಅಡಿಗೆ ಮಾಡ್ತಾರೆ. ಇವರದ್ದು ಬಹಳ ರುಚಿಕರ ಹಾಗು ಆರೋಗ್ಯಕರ ಆಹಾರ ಪದ್ಧತಿ. ಅಯ್ಯೋ ಯಾಕೆ ಇಷ್ಟೆಲ್ಲಾ ಪೀಟೀಲು ಕುಯ್ತಿದಿನಿ ಅಂತ ಕೇಳ್ತಿದಿರಾ? ಅದಕ್ಕೆ ಕಾರಣ ಇಷ್ಟೇ, ಇವತ್ತು ಬ್ರೇಕ್ಫಾಸ್ಟ್ಗೆನಮ್ಮನೇಲಿ ಹಲಸಿನಕಾಯಿ ದೋಸೆ. ಅಮ್ಮ ಲಾಸ್ಟ ವೀಕ್ ಊರಿಗೆ (ಪುತ್ತೂರು) ಹೋಗಿದ್ರು, ಪಾಪಾ ಬಡಪಾಯಿಗಳಾದ ಅವರ ಮಕ್ಕಳು ಅಂದ್ರೆ ನಾನು,ನಮ್ಮಣ್ಣ, ಹಾಗು ಅತ್ತಿಗೆಗೆ (ಒಹ್ ಈಗ ಲಿಸ್ಟ್ ಸ್ವಲ್ಪ ದೊಡ್ಡ ಆಗಿದೆ) ಹಲಸಿನ ಕಾಯಿ ದೋಸೆ ಇಷ್ಟ. ಬೆಂಗಳೂರಲ್ಲಿ ಇವ್ರಿಗೆ ಇವೆಲ್ಲ ಸಿಗದು ರೇರ್ ಅಂತ ಬರ್ತಾ ಒಂದತ್ತು ಹಲಸಿನಕಾಯಿ ಸೊಳೆ ತಂದಿದ್ರು, ದೋಸೆ ಮಾಡಿಕೋಡ್ಬೋದಲ್ಲ ಅಂತ ಅವರ ಉದ್ದೇಶವಾಗಿತ್ತು. ಅದರೊಂತೆಯೇ ಟುಡೇ ಬ್ರೇಕ್ಫಾಸ್ಟ್ಗೆಹಲಸಿನಕಾಯಿ ದೋಸೆ. ಹಲಸಿನಕಾಯಿ ದೋಸೆಗೆ ತೆಂಗಿನೆಣ್ಣೆ, ಮಾವಿನಕಾಯಿ ಚಟ್ನಿಮತ್ತು ಜೇನು ಹಾಕೊಂಡು ತಿಂದ್ರೆ ವಾಹ್ ಮಜಾನೋ ಮಜಾ ಯಾಮ್. 


ಇಷ್ಟು ಮಾತ್ರ ಅಲ್ಲ ನಮ್ಮೂರಲ್ಲಿ ಸಕ್ಕತು ವೆರೈಟಿ ದೋಸೆಗಳು ಮಾಡ್ತಾರೆ. ಫಾರ್ ಎಕ್ಸಾಮ್ಪ್ಲೆ 
  • ಉದ್ದಿನಬೇಳೆ ದೋಸೆ 
  • ಮೆಂತ್ಯಕಾಳು ದೋಸೆ 
  • ಹಲಸಿನಹಣ್ಣಿನ ದೋಸೆ 
  • ಪಪ್ಪಾಯ ದೋಸೆ 
  • ಮುಳ್ಳು ಸವ್ತೆ ದೋಸೆ 
  • ಮಂಗಳೂರು  ಸವ್ತೆ ದೋಸೆ 
  • ನೀರು ದೋಸೆ 
  • ಈರುಳ್ಳಿ ದೋಸೆ 
  • ಕಾರ ದೋಸೆ 
  • ಗೋದಿ, ರಾಗಿ, ನವಣೆ etc ದೋಸೆ 
  • ಕ್ಯಾರಟ್, ಬೀಟ್ರೂಟ್ ದೋಸೆ 
ಇನ್ನು ಹತ್ತು ಹಲವು. ಇದರಲ್ಲಿ ನಂಗೆ ಹಲಸಿನಕಾಯಿ ದೋಸೆ ಮತ್ತು ನೀರು ದೋಸೆ ಅಂದ್ರೆ ಫುಲ್ ಫವ್ರೆಟ್.
ಮಜಾ ಗೊತ್ತ ? ಮಲೆನಾಡ ಹವ್ಯಕರು ದೋಸೆಯಲ್ಲಿ ಮಾತ್ರ ಇಷ್ಟು ವೆರೈಟಿ ಮಾಡಲ್ಲ, ದೇ ಪ್ರಿಪೇರ್ ಲಾಟ್ ಮೊರೆ. ದೇ ಆರ್ ಎಕ್ಸ್ಪರ್ಟ್ ಇನ್ ಪ್ರೆಪ್ರಿಂಗ್ ವೆರೈಟೀಸ್ ಆಫ್  ಪತ್ರಡೆ, ಕೊಟ್ಟಿಗೆ, ಪಡ್ಡು, ಉಂಡೆ, ತಂಬುಳಿ, ಕೊದಿಲು, ಅವಿಲು, ಕಾಯಿಮೆಣಸು etc.... ಇದು ನಿಲ್ಲದಜ್ಜಿ ಕಥೆ. ಲಿಸ್ಟ್ ತುಂಬಾ ಇದೆ. 

ಹೇಯ್ ಇನ್ನೊಂದು ವಿಷ್ಯ ನಾನು ಹೇಳ್ಳೇಬೇಕು,ನಮ್ಮನೇಲಿ (ಯಾವುದೇ) ದೋಸೆ ಮಾಡಿದಾಗೆಲ್ಲಾ ನಮ್ಮಪ್ಪ ಒಂದು ಹಾಡೇಳ್ತಾರೆ "ನನ್ನ ಆಸೆ ಮಸಾಲಾ ದೋಸೆ" ಅಂತ. ಆಗ ನಮ್ಮಮ ಮುಗಳ್ನಕ್ತರೇ. 💗😄

Thursday 6 July 2017

ಮೊದಲ ದಿನ

ಮೊದಮೊದಲು ಯಾವುದೇ ಕೆಲಸ ಶುರು ಮಾಡಿದ್ರು ಮೊದಲ ಕೆಲವು ದಿನಗಳಲ್ಲಿ  ಇರುವಷ್ಟು ಆಸಕ್ತಿ ಆಗಲಿ ಚೈತನ್ಯ ವಾಗಲಿ ಮತ್ತಿನ ದಿನಗಳಲ್ಲಿ ಉಳಿಯುವುದಿಲ್ಲ. ಇದ್ದಕ್ಕೆ ಕಾರಣ?? ದೇವರಾಣೆ ಗೊತ್ತಿಲ್ಲ. ಹ್ಯೂಮನ್ ಪ್ಸ್ಯಚೋಲೊಜಿಯೇ ಹಾಗೆ. ಇದು ಎಲ್ಲಾ ವಿಷಯಗಳಲ್ಲೂ ವಾಲಿಡಿ. ಫಾರ್ ಎಕ್ಸಾಮ್ಪ್ಲೆ ವಾಟ್ಸಪ್ಪ್ ಅಲ್ಲಿ ಪ್ರೈಮರಿ ಫ್ರೆಂಡ್ಸ್ , ಹೈ ಸ್ಕೂಲ್ಸ್ ಫ್ರೆಂಡ್ಸ್, ಬ್ಲ ಬ್ಲ ಬ್ಲ ಅಂತೆಲ್ಲ  ಗ್ರೂಪ್ಸ್ ಮಾಡತಾರೆ ಆದ್ರೆ ಅದರಲ್ಲಿ ಮಾತಾಡುವವರು ಯಾರು ಇಲ್ಲ. ಅದರಲ್ಲಿ ತಪ್ಪು ಇಲ್ಲ ಬಿಡಿ, ಅವರವರ ಕೆಲಸದಲ್ಲಿ ಅವರವರ ಬ್ಯುಸಿ ಇರ್ತರೆ .. ಹಾಗಂತ ಆಸಕ್ತಿನೇ ಕಳ್ಕೊಬಾರ್ದು ಅನ್ನೋದು ನನ್ನ ವಾದ. ಯಾರೋ ಒಬ್ರು ನಮಗೆ ಗೊತ್ತಿರೋರು ಮಾತನಾಡುತಿದ್ದರೆ ಅಂದಾಗ ಸ್ವಲ್ಪ ಆದರೂ ಪ್ರತಿಕ್ರಿಯೆ ಕೊಡಬೇಕು. ಹ್ಮ್ಮ್ ಇರ್ಲಿ ಬಿಡಿ ಇದೆಲ್ಲ ಯಾಕೆ ಈಗ... ನಾನು ಈ ಆರ್ಟಿಕಲ್ ಬರೀತೀರೋ ಉದ್ದೇಶ ಅದಲ್ಲ. ನನ್ನ ಉದ್ದೇಶ ಇಸ್ಟೇ . ಇಂದು ನನ್ನ ಮೊದಲ ದಿನ ಈ ಬ್ಲಾಗ್ನಲ್ಲಿ .. ಯಾವಾಗ ಆಸಕ್ತಿ ಹೋಗೋತ್ತೋ ಗೊತ್ತಿಲ್ಲ. ಸೊ ಏನುಕ್ಕು ಇನ್ನೊಂದಷ್ಟು ಬರಿಯಣಅಂತ ...ಹಾಹಾ

ಕೆಲವರು ಹಾಗೆ, ಕಾರಣವೇ ಇಲ್ದೆ ಇಷ್ಟ ಆಗ್ತಾರೆ, ಅಥವಾ ನಮಿಗೆ ಆ ಕಾರಣಗಳು ಗೊತ್ತಾಗಲ್ಲವೋ ಏನೋ . ನನಗೆ ಫೇಸ್ಬುಕ್ ಅಲ್ಲಿ ಫಣಿ ಆಲೂರು ಅಂತ ಫ್ರೆಂಡ್ ಇದಾರೆ, ಚೆಂದ ಬರೀತಾರೆ. ಯಾಕೋ ಏನೋ ಅವರ ನೆನಪು ಈ ಆರ್ಟಿಕಲ್ ಬರೀತಾ ಇರ್ಬೇಕರೇ ಅಯ್ತು , ಮಧ್ಯಕ್ಕೆ ಬರಿಯದು ನಿಲ್ಸಿ ಫೇಸ್ಬುಕ್ ಓಪನ್ ಮಾಡಿ ಅವರ ಪ್ರೊಫೈಲ್ ನೋಡಿದೆ. ನನ್ನ ಅಂದಾಜು ಸರಿ ಆಯಿತು. ಹೀ ಐಸ್ ಆಲ್ಸೋ ಎ ಬ್ಲಾಗರ್!! ಒನ್ತರ ಖುಷಿ ಆಯಿತು. ಅವರ ಬ್ಲಾಗ್ ಓಪನ್ ಮಾಡಿ ನೋಡಿದೆ.!! ಹೀ ಐಸ್ ಹ್ಯೂಮನ್, ಅಭ್ವಿವ್ ಹೀ ಸ್ಟಾಪ್ಡ್ ಬ್ಲಾಗಿಂಗ್ ಸೊ ಲಾಂಗ್ ಎಗೋ 😞😞 .... ಮೇಬಿ ದಿಸ್ ಐಸ್ ವಾಟ್ ಹೆಪ್ಪೆನ್ಸ್ ವಿತ್ ಮೋಸ್ಟ ಆ ಅಸ್. 


ಹಾಗೆ ಸುಮ್ಮನೆ

ಬರಿಬೇಕಂತ ಆಸೆ ಆದರೆ ಎಲ್ಲರೂ ಓದುವಂತದನ್ನ ಏನು ಬರೆಯದು ಎಂಬ ಪ್ರಾಶ್ನೆ ಯಾವಾಗ್ಲೂ ಕಾಡುತ್ತೆ. ಹಾಗಂತ ಸುಮ್ನೆ ಕುರಕಾಗ್ಲಿಲ್ಲ. ಅದಕ್ಕೆ ಬಸ್ ಯುಂಹಿ ಬ್ಲಾಗ್ ನ ಓಪನ್ ಮಾಡಿದೇ , ೧ ವರ್ಷ ಆಗ್ತಾ ಬಂತು. ಆದ್ರೂ ಏನು ಬರಿಲಿಲ್ಲ. ನನ್ನ ಯೋಚನೆಗಳು ಚಿಂತನೆಗಳು ನನಗೆ ಹಾಗು ನನ್ನ ಪುಸ್ತಕಕ್ಕೆ ಸೀಮಿತವಾಗಿ ಉಳಿದು ಬಿಟ್ಟಿದೆ. ಏನನ್ನೋ ಯೋಚಿಸುತ್ತ ಕುಳಿತಿದ್ದ ಇಂದು ನನಗೆ ನೆನಪಾದದ್ದು ೧ ವರ್ಷಗಳ ಹಿಂದೆ ತೆರೆದ ಈ ಬ್ಲಾಗ್.  ಸೊ ಹಿಯರ್ ಐ ಆಮ್ . ಇಂದಿನಿಂದ ನಿಲ್ಲದೆ ಸಾಗಲಿ ಈ ಪಯಣ ಅಂತ ನನಗೆ ನಾನೇ ಆಶಿಸುತ್ತಾ ನನ್ನ ಈ ಫಸ್ಟ್ ಪೋಸ್ಟ್ನ ಪೋಸ್ಟ್ ಮಾಡ್ತಿದೀನಿ.