Thursday 21 December 2017

ಬಹುದಿನಗಳ ನಂತರ

ನನ್ನಅಪ್ಪ ಅದೊಂದು ದಿನ ಹೇಳಿದ್ರು,
ಯೋಚಿಸಿ ಬರೆಯುವುದು ಕವಿತೆಯಲ್ಲ, ಕಥೆಯಲ್ಲ, ಕೇವಲ ಪ್ರಶ್ನೆಗೆ ಉತ್ತರವ, ಯೆಂದು. 
ಎಷ್ಟು ಸತ್ಯದ ಮಾತು. ಪದಗಳೆಲ್ಲ ಎಲ್ಲೊ ಅವಿತು ಕುಳಿತಿರುತ್ತವೆ, ಅಕ್ಷರಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಅರ್ಥಹೀನವಾಗಿ ಬಿದ್ದು ಒದ್ದಾಡುತಿರುತ್ತವೆ. ಅದನ್ನೆಲ್ಲಾ ಕೂತು ಒಂದಾಗಿ, ಒಂದೊಂದಾಗಿ ಜೋಡಿಸಿ, ಅವಿತಪದಗಳ ಹುಡಿಕಿ ತರಲು ನೀನು ಜೊತೆಯಲಿ ಬೇಕು. ನಿನ್ನ ನಗುವೆಂಬ ಬೆಳಕಿನ ಆಸರೆ ಬೇಕು.ನಿನ್ನ ತುಂಟಾಟ ಬೇಕು, ನೀನು ಕೊಡುವ ನೋವು, ನಲಿವು ಬೇಕು, ದುಃಖ ಬೇಕು, ಖುಷಿ ಬೇಕು, ಏನಾದರೊಂದು ಭಾವನೆ ಬೇಕು. ಕಡೇಪಕ್ಷ ನಿನ್ನ ನೆನಪುಗಳಾದರು ನಗುವಿನ ಜೊತೆಯಲಿ ಬಹಳವಾಗಿ ಬೇನೆ ನೀಡಬೇಕು. ನೀನಿಲ್ಲದೆ ಬರಿಯ ಉಸಿರಾಡುವ ಬೊಂಬೆ ನಾನು. ನೋವಿಲ್ಲದ, ನಲಿವಿಲ್ಲದ, ನಗುವಿಲ್ಲದ ಬರಿಯ ಉಸಿರಾಡುವ ಬೊಂಬೆ ನಾನು. 

ಅಕ್ಷರ

ಉಣಿಸಿದಾ ಕೈತುತ್ತು ಮರಳಿಸಿತು ಕಳೆದು ಹೋದ ಮಾತ್ತೊಂದ,
ತನ್ನೆಲ್ಲ ಭಾವುಕತೆಯಂಬ ಅಕ್ಷರವ ತುಂಬುತ.
ಮರೆತುಹೋದ ನನ್ನವಳೆಯಾದ, ನನ್ನ ನಗು,
ನನ್ನ ಸ್ನೇಹಿತೆಯಾ ನೆನಪಿಸುತ.
ಹಗುರಾಯ್ತು ಜೀವ ಬಹಳ ಕಾಲದನಂತರ.
ನನ್ನವರೆಲ್ಲ ಒಟ್ಟಾಗಿ ನಿನ್ನಲ್ಲಿ ಸಿಕ್ಕಾಗ.
ನನ್ನೊಡನೆ ನೀ ಕೂತು ನಕ್ಕಾಗ. 

Monday 11 December 2017

Anantha (Infinity)

ಅವನನ್ನು ಪ್ರೀತಿಸಲು ಕಾರಣವಿರಲಿಲ್ಲ.
ಪ್ರೀತಿಸಲು ಕಾರಣವಿರುವುದೇ?
ಅಪ್ಪನನ್ನು ಕೇಳಿದ್ದೆ. ಅವರ ಪ್ರಕಾರ ಪ್ರೀತಿಯಂಬುದೇ ಇಲ್ಲ!!!, ಹೇಳಿ ಮುಗುಳ್ನಕ್ಕಿದರು.
ಯಾವರೀತಿಯಲ್ಲಿ ಹೇಳಿದರೆಂದು ಅರ್ಥಹಿಸಿಕೊಳ್ಳಲಾಗಳಿಲ್ಲ.
ಅವರ ಮುಗುಳ್ನಗೆ ಬಹಳ ಘಾಡವಾಗಿತ್ತು, ಅವರ ಮಾತಿನಂತೆ. 

Scream

Need help...
Need help...
Really? Do I?...
I scream...
I scream in silence...
Non can understand...
Coz, I never let them understand...
And not want them to...
It's completely fine, fine to go mad, to lose mind, to yell harder sometime...
I'm the pain...
I'm the heal...
And I'll be fine soon...
Need help...
Need help...
I scream...
I scream in silence...








Wednesday 6 December 2017

Enlightenment

Don't take life seriously.
Know yourself.
Laugh, be happy.
Just breathe. 

ಯದ್ ಭಾವವಂ ತದ್ ಭವತಿ

ನೀ ಹೇಗೆ, ಹಾಗೆ ಎಲ್ಲರು.
ನಿನ್ನ ಪ್ರಪಂಚದಲ್ಲಿ ನಿನ್ನ ಬಿಟ್ಟು ಬೇರೆಯಾರಿಲ್ಲ.
ಮರೆಯ ಬೇಡ. 

ಯೋಚನೆ

ಮಕ್ಕಳು ರಚ್ಚೆ ಮಾಡುವರು, ಹಾಗಂತ ತಾಯಿ ಎಂದಿಗೂ ಅವರಿಂದ ದೂರಾಗಳು.
(ಚಿಂಪುವಿನ ಕಾದಾಟ)

Don't fool yourself

ನಿನ್ನೊಂದಿಗೆ ಸಾಧಕಾಲ ಬಾಳುವುದು ನೀನು. ನಿನಗೆ ನೀ ವಂಚಿಸುತ್ತ ಮೂರ್ಖಳಾಗಬೇಡ.. ಬದಲಾಯಿಸಲು ಸಾಧ್ಯವಿಲ್ಲದ್ದು  ಯಾವುದು ಇಲ್ಲವೆಂಬಾ ನಿನ್ನ ವಾದ ತಪ್ಪೆಂದು ನಾನು ಹೇಳುವುದಲ್ಲ, ಇದರಿಂದು ನೀನು ಹೊರತೇನಲ್ಲ. ಏನನ್ನೋ ಬದಲಾಯಿಸ ಹೋಗಿ ನಿನ್ನ ನೀನು ಎಷ್ಟು ಬದಲಿಸಿಕೊಂಡಿರಿವೆ ಎಂಬ ಅರಿವಿದೆಯೆ ನಿನಗೆ?
ಸತ್ಯವ ಕಣ್ತೆರೆದು ನೋಡು. ನಿನ್ನ ಅರಿವಿಗೆ ನಿಲುಕಿದ ಸತ್ಯವ ಕಣ್ತೆರೆದು ನೋಡು. ಕಣ್ಣಿದ್ದು ಕುರುಡಾಗ ಬೇಡ. 

Sunday 3 December 2017

Uncertainty (ಅನಿಶ್ಚಿತತೆ)


It's a paradox.
Certainty doesn't exists in this world.
Time is the only real unit, which defines the certainty, certainty of that moment.
Even, your thought keeps evolving all the time.
Today's thought may crap for tomorrow and tomorrow's for day after tomorrow.
That is the growth.
Life is uncertain and uncertainty makes life difficult and difficulty makes life challenging and challeng keeps life interesting.
That's the beauty of nature. 

ಮೌನ


ತನ್ನೊಳಗೆ ನೂರಾರು ಭಾವನೆಗಳ ತುಂಬಿಕೊಂಡಿರು ಮೌನ.
ಚೀರಿ ಚೀರಿ ತನ್ನ ಭಾವನೆ ಹಂಚಿಕೊಳ್ಳುವ ಮೌನ.
ಸಾವಿರಾರು ಪ್ರೆಶ್ನೆಗಳ ಕೇಳುವ ಮೌನ.
ಸಾವಿರಾರು ಉತ್ತರಗಳ ನೀಡುವ ಮೌನ.
ಅಸಹಾಯಕತೆಯ ಮೌನ.
ಸಹಾಯಕತೆಯ ಮೌನ.
ನೋವಿನ ಮೌನ.
ಸಾರ್ಥಕತೆಯ ಮೌನ.
ನೆಮ್ಮದಿಯ ಮೌನ.
ಪ್ರೌಢತೆಯ ಮೌನ.
ಜ್ಞಾನೋದಯದ ಮೌನ.
ನೀರವ ಮೌನ, ಮೌನ, ಮೌನ.

ಮೌನಿ


ನನ್ನ ಮಾತುಗಳನ್ನು ಅರ್ಥಸಿಕ್ಕೊಳ್ಳಲಾಗದವರ ಎದುರಿಗೆ ಮೌನಿ ನಾನು.
ಬೇರೆಯವರ ಮಾತುಗಳ್ಲಲಿ ಹುರುಳಿಲ್ಲವೆನಿಸಿದಾಗ ಮೌನಿ ನಾನು.
ಕೋಪವೆಂಬ ಚಂಡಮಾರುತ ನನ್ನಲ್ಲಿ ಏಳುವಾಗ ಮೌನಿ ನಾನು.
ಹೃದಯದಲ್ಲಿ ಪ್ರೀತಿಯ ಅಲೆಗಳು ಮೂಡಿದಾಗ ಮೌನಿ ನಾನು.
ಮನದಲ್ಲಿ ವಿಚಾರಧಾರೆಗಳು ಅಲೆದಾಡುವಾಗ ಮೌನಿ ನಾನು.
ನನಗೇನು ಅರಿಯದಾಗ ಮೌನಿ ನಾನು.
ನಿಲ್ಲಿಸಿಲಾಗದಷ್ಟು ಮೌನದಿ ಮಾತನಾಡುವ ಮೌನಿ ನಾನು.
ಮೌನಿ ನಾನು, ಮೌನಿ ನಾನು.