Wednesday 23 June 2021

ಕರೋನ


ಈ ಕರೋನ ಯಾಕಾದರೂ ಹುಟ್ಟಿಕೊಂಡಿತೋ? ಕರೋನದ ಬಾಹುಹಸ್ತದಿಂದ ನನ್ನ ಸಂಸಾರದವರನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ನಾನು ಸೋತು ಸುಣ್ಣವಾಗುತ್ತಿದ್ದೇನೆ. ಕರೋನದೊಂದಿಗೆಗಿನ ಹೊರಟವನ್ನಾದರೂ ನಾ ಜಯಿಸಬಲ್ಲೆ. ಆದರೆ ಅದರಿಂದ ನನ್ನವರನ್ನು ರಕ್ಷಿಸಿಕೊಳ್ಳುವ ಹೋರಾಟದಲ್ಲಿ ನನ್ನವರೊಂದಿಗಿನ ಈ ಹೋರಾಟವನ್ನು ಹೇಗೆ ಗೆಲ್ಲಲ್ಲಿ? ಕಪ್ಪೆಯನ್ನು ತೆಗೆದು ತಕ್ಕಡಿಯ ಮೇಲೆ ಕುರಿಸಿದಂತಾಗಿದೆ. ಒಬ್ಬರಿ ಮನೆ ಇಂದ ಆಚೆ ಹೋಗಿ ಊರಿಡೀ ಸುತ್ತಿ ಸ್ನೇಹಿತರೊಂದಿಗೆ ಆಟವಾಡುವಾಸೆ. ಎಳೆ ವಯಸ್ಸು. ತಿಳಿ ಹೇಳುವುದಾದರೂ ಎಷ್ಟು? ಇನ್ನೊಬರಿಗೆ ನೆಂಟರಿಸ್ಟುಗಳ ಮನೆಗೆ ಹೋಗಿ ಕಾರ್ಯಕ್ರಮಗಳ್ಳಿ ಭಾಗವಹಿಸುವಾಸೆ. ದೊಡ್ಡವರಿರಬಹುದು ಅವರು, ಆದರೆ ಅವರ ಭಾವನೆಗಳಿಗೆ ತಿಳುವಳಿಕೆ ಹೇಗೆ ತಾನೇ ಮೂಡಿಸಲಿ? ಮತ್ತೊಬರದ್ದು ಬೇರೆಯದೇ ಸಮಸ್ಯೆ. ೫ ಜನಕ್ಕೆ ಅಡಿಗೆ ಮಾಡಿ ಬಡಿಸುವುದೇ ದೊಡ್ಡ ಕೆಲಸ. ಸಹಾಯಕ್ಕೆ ಕೆಲಸದವರು ಬೇಕಂತೆ. ಎಷ್ಟು ದಿನವೆಂದು ಕೆಲಸದವರ ಮನೆಗೆ ಬರುವುದನ್ನು ತಡೆಯಲಿ? ಕರೋನ ಬೇಗ ಹೋಗು. ನನ್ನ ಮೇಲೆ ಕೃಪೆ ತೋರು.  

ಈ ಹೋರಾಟದಲ್ಲಿ ಸೋತು ಸತ್ತವರು ಅದೆಷ್ಟೋ! ನೆನೆದರೆ ತಾಳಲಾಗದ ಸಂಕಟ. 

ಇನ್ನು ಏನೇನೋ ಹೇಳಬೇಕೆನಿಸುತ್ತಿದೆ. ಆದರೆ ಈಗ ಸಮಯದ ಅಭಾವ. ಮತ್ತೆ ಸಿಗುತ್ತೇನೆ. ಅಲ್ಲಿವರೆಗೂ ಕ್ಷೇಮ. ಎಷ್ಟೇ ಸುಸ್ತಾದರು, ಸೋತು ಸುಣ್ಣವಾದರೂ, ಹೋರಾಟ ನಿಲ್ಲಿಸಬೇಡಿ. ನೀವು ಮಾಡುತ್ತಿರುವ ಹೋರಾಟ ನಿಮ್ಮವರಿಗಾಗಿ. ಮರೆಯಬೇಡಿ. 

ಸಣ್ಣ ವಿಷಯ ದೊಡ್ಡ ಪರಿಣಾಮ.


ಜಗತ್ತು ಎಷ್ಟೇ ದೊಡ್ಡದಿರಲಿ. ಸಣ್ಣ ಸಣ್ಣ ಅಣುವಿನಿಂದ ಮಾಡಲ್ಪಟ್ಟಿದೆ, ಅಲ್ಲವೇ? ಹಾಗೆಯೆ ಈ ಸಂಸಾರ ಸಾಗರವು ಸಣ್ಣ ಸಣ್ಣ ಸೂಕ್ಶ್ಮ ಭಾವನೆಗಳಿಂದ ಎಣೆಯಲ್ಪಟ್ಟಿದ್ದೇ. ಹೇಗೆ ನನಗೆ ಮನೆ ಮನವನ್ನು ಶುಚಿಯಾಗಿ ಇಡಬೇಕೆಂಬ ಆಸೆ ಇದೆಯೋ ಹಾಗೆ ನನ್ನ ಅತ್ತೆಗೆ ಹಳೆಯ ರೀತಿ ನೀತಿಗಳನ್ನು ನೀರಾಕಿ ಬೆಳೆಸುವಾಸೆ. ಮುಸರೆ ಯನ್ನು ಎಷ್ಟು ಶಿಸ್ತಿನಿಂದ ಪಾಲಿಸುತ್ತಾರೆಂದರೆ ನನಗೆ ಕೋಪದ ಜೊತೆಯಲ್ಲಿ ಕರುಣೆಯು ಮೂಡುತ್ತದೆ. ನನ್ನ ಆದರ್ಶಗಳ ವಿರುದ್ಧ ಹೋಗಬೇಕಲ್ಲ ಎಂಬ ಸಂಕಟ ಒಂದೆಡೆಯಾದರೆ, ನನ್ನ ಪ್ರೀತಿಯ ಅತ್ತೆ ವಿರುದ್ಧ ಹೋಗಿ ಅವರ ಮನನೋಯಿಸಿದರೆ ಎಂಬ ಆತಂಕ. ಅವರ ಆದರ್ಶಗಳ ವಿರುದ್ಧಹೋಗುವ ಪ್ರತಿಕ್ಷಣವೂ ಅವರಿಗೆ ನೋವಾಗುವುದಕ್ಕಿಂತ ಹೆಚ್ಚು ನನ್ನ ಎದೆ ನೋವಾಗುತ್ತದೆ. (ಇದು ರೂಪಕಾಲಂಕಾರವಲ್ಲ. ನಿಜವಾಗಿಯೂ ತಲೆ ಬಿಸಿ ಆಗಿ ಎದೆ ಬಡಿತ ಹೆಚ್ಚಾಗಿ ಎದೆ ನೋವು ಬರುತ್ತದೆ, ಒಂದಷ್ಟು ಖರ್ಚು ಮಾಡಿ ಒಳ್ಳೆಯ ಆಸ್ಪತ್ರೆ ವರಗೆ ಹೋಗಿ ಬಂದೆ. ಅಷ್ಟರಮಟ್ಟಿಗೆ ಇದೆ ಯೆಂದರೆ ನೀವೇ ಇದರ ತೀಕ್ಷ್ಣತೆಯನ್ನು ಅರಿಯಿರಿ).  ಹೋಗಲಿ ಬಿಡು ಅವರಿಚ್ಛೆಯಂತೆ ಇರೋಣ ಅಂದರೆ ಅದು ನನ್ನ ಆದರ್ಶಗಳ ವಿರೋಧ. ಆಯ್ತು ನನ್ನ ಆದರ್ಶವನ್ನೇ ಪಾಲಿಸೋಣವೆಂದರೆ  ನನ್ನ ಆರೋಗ್ಯ ನನ್ನ ಕೈಬಿಟ್ಟು ಎದೆ ನೋವು ತರಿಸಿಕೊಳ್ಳುತ್ತದೆ. ಇದೊಂತರ ನಿಲ್ಲದ ಉತ್ತರ ಸಿಗದ ಪ್ರಶ್ನೆ, ಈ ಪರೀಕ್ಷೆಗೆ ಕೊನೆ ಇಲ್ಲವೇ? 

Tuesday 1 June 2021

Sorry for not feeling sorry.

ಬ್ರಾಹ್ಮಣ ಸಮಾಜಕ್ಕೆ ಸೇರಿದವಳು ಎಂದು ಕರೆಸಿಕೊಳ್ಳಲ್ಲು ಎಲ್ಲಿಲ್ಲದ ವಿಚಿತ್ರ ಕೋಪ ಅಥವಾ ಬೇಜಾರು? ಈ ಭಾವನೆಗೆ ಏನೆಂದು ಕರೆಯಬೇಕು ತಿಳಿಯುತ್ತಿಲ್ಲ. ಒಟ್ಟು ಹೇಳಬೇಕೆಂದರೆ ಹೃದಯಕ್ಕೆ ಯಾರೋ ಚೂರಿ ಹಿರಿದಂತಾಗುತ್ತದೆ. ಎಲ್ಲಾ ಸಹಾಯವನ್ನು ಮಾಡುವವರು ಶೂದ್ರರು, ಆದರೆ ಅವರಿಗೆ ಊಟ ನಮ್ಮ ಮನೆ ಬಚ್ಚಲ ಬಳಿ, ಅವರಿಗೆ ಕೆಲಸ ಮಾಡಲು ಸ್ಥಳ ಬಿಸಿಲಿನಲ್ಲಿ, ಮನೆಯ ಹೊರ ಜಗಲಿಯಲ್ಲಿ. ಕಸಗುಡಿಸಲು ಬರುವ ಕೆಲಸದವಳಿಗೆ ದೇವರ ಕೋಣೆ, ಅಡಿಗೆ ಮನೆಗೆ ಪ್ರವೇಷವಿಲ್ಲ. ಹೊರಗಿನ ಬಾಗಿಲಲ್ಲಿ ಹೊರ ಒಳ ಓಡಾಡಬೇಕು. ತಣ್ಣಗಾಗಿರುವ ಅನ್ನ ತಿನ್ನಬೇಕು. ನಾನು ಎಷ್ಟೋ ಬಾರಿ ಆಕೆಗೆ ನಮ್ಮ ಮನೆಯ ಒಳಗೆ ಊಟ ಮಾಡಲು ಹೇಳಿದ್ದೇನೆ. ಆದರೆ ಅವರೇ ಒಳಗೆ ಬರುವುದಿಲ್ಲ. ನಾನು, ಕೆಲಸದವರನ್ನು ತಲೆ ಮೇಲೆ ಕುರಿಸಿಕೊಳ್ಳಬೇಕು ಅಂತ ಹೇಳುವುದಲ್ಲವಾದರೂ  ದಯವಿಟ್ಟು ಕಾಲ ಬಳಿ ಇರಿಸಬೇಡಿ. ನನಗಂತೂ ಇತ್ತೀಚೆಗೆ ಯಾವುದು ಸರಿ, ಯಾಕೆ ಹೀಗೆಲ್ಲಾ ನಡೆಯುತ್ತಿದೆ ಎಂದು ಯೋಚಿಸಿದರೆ ಖಿನ್ನತೆ ಮೂಡುತ್ತದೆ.