Tuesday 1 June 2021

Sorry for not feeling sorry.

ಬ್ರಾಹ್ಮಣ ಸಮಾಜಕ್ಕೆ ಸೇರಿದವಳು ಎಂದು ಕರೆಸಿಕೊಳ್ಳಲ್ಲು ಎಲ್ಲಿಲ್ಲದ ವಿಚಿತ್ರ ಕೋಪ ಅಥವಾ ಬೇಜಾರು? ಈ ಭಾವನೆಗೆ ಏನೆಂದು ಕರೆಯಬೇಕು ತಿಳಿಯುತ್ತಿಲ್ಲ. ಒಟ್ಟು ಹೇಳಬೇಕೆಂದರೆ ಹೃದಯಕ್ಕೆ ಯಾರೋ ಚೂರಿ ಹಿರಿದಂತಾಗುತ್ತದೆ. ಎಲ್ಲಾ ಸಹಾಯವನ್ನು ಮಾಡುವವರು ಶೂದ್ರರು, ಆದರೆ ಅವರಿಗೆ ಊಟ ನಮ್ಮ ಮನೆ ಬಚ್ಚಲ ಬಳಿ, ಅವರಿಗೆ ಕೆಲಸ ಮಾಡಲು ಸ್ಥಳ ಬಿಸಿಲಿನಲ್ಲಿ, ಮನೆಯ ಹೊರ ಜಗಲಿಯಲ್ಲಿ. ಕಸಗುಡಿಸಲು ಬರುವ ಕೆಲಸದವಳಿಗೆ ದೇವರ ಕೋಣೆ, ಅಡಿಗೆ ಮನೆಗೆ ಪ್ರವೇಷವಿಲ್ಲ. ಹೊರಗಿನ ಬಾಗಿಲಲ್ಲಿ ಹೊರ ಒಳ ಓಡಾಡಬೇಕು. ತಣ್ಣಗಾಗಿರುವ ಅನ್ನ ತಿನ್ನಬೇಕು. ನಾನು ಎಷ್ಟೋ ಬಾರಿ ಆಕೆಗೆ ನಮ್ಮ ಮನೆಯ ಒಳಗೆ ಊಟ ಮಾಡಲು ಹೇಳಿದ್ದೇನೆ. ಆದರೆ ಅವರೇ ಒಳಗೆ ಬರುವುದಿಲ್ಲ. ನಾನು, ಕೆಲಸದವರನ್ನು ತಲೆ ಮೇಲೆ ಕುರಿಸಿಕೊಳ್ಳಬೇಕು ಅಂತ ಹೇಳುವುದಲ್ಲವಾದರೂ  ದಯವಿಟ್ಟು ಕಾಲ ಬಳಿ ಇರಿಸಬೇಡಿ. ನನಗಂತೂ ಇತ್ತೀಚೆಗೆ ಯಾವುದು ಸರಿ, ಯಾಕೆ ಹೀಗೆಲ್ಲಾ ನಡೆಯುತ್ತಿದೆ ಎಂದು ಯೋಚಿಸಿದರೆ ಖಿನ್ನತೆ ಮೂಡುತ್ತದೆ. 

 

No comments:

Post a Comment