Saturday 30 June 2018

What was that?

ಅದೇನು? ಏನಾಯಿತಂದು?
ನಿಜವೇ? ಕನಸೇ? ಕಲ್ಪನೆಯೇ? 
ತಿಳಿಯುತ್ತಿಲ್ಲ. ತಿಳಿವಾಸಕ್ತಿ ನನಗಿಲ್ಲ.
ಅದು ನಿಜವಾಗಿದ್ದಲ್ಲಿ, ತ್ರುಪ್ತಿ.
ಕನಸಾಗಿದಲ್ಲಿ, ಸಂತೋಷ.
ಕಲ್ಪನೆಯಾಗಿದ್ದಲ್ಲಿ, ಸಣ್ಣದೊಂದು ನಗು.

Tuesday 26 June 2018

ಉಸಿರೇ; ಎಲ್ಲವು ನಿನಗಾಗಿ

ಜೀವನದ ಒಂದೇ ಸತ್ಯ. ಅದು ನಿನ್ನ ಉಸಿರು. ನೀನು ಆಮ್ಲಜನಕ. ನೀನು ಹೃದಯದ ಬಡಿತ, ನೀನು ಮೆದುಳಿನ ಯೋಚನೆ, ನಿನಗಾಗಿ ನೀನು ಮಾಡುವ ಯೋಜನೆ. ಅದುವೆ ಜೀವನ.
" ಅಹಂ ಬ್ರಹ್ಮಾಸ್ಮಿ "
ನಿನಗೆ ನೀನೆ ಎಲ್ಲಾ, ನಿನಗೆ ನಿಂನ್ನಿದಲೆ ಎಲ್ಲಾ. ನೀನಿದ್ದರೆ ನಿನಗೆಲ್ಲ.
ಸಾಯುವವರೆಗೂ ಬದುಕಬೇಕುಯೆಂದು ನನ್ನಪ್ಪ ಯಾವಾಗಲು ಹೇಳುತ್ತಾರೆ.
ನನಗನಿಸಿದ ಹಾಗೆ, ನಮ್ಮ ಜೀವದಲ್ಲಿ ಎಲ್ಲದಕ್ಕೂ ಆಯ್ಕೆಗಳಿರುತ್ತದೆ. ನನ್ನಪ್ಪ ಹೇಳಿದ ಹಾಗೆ ನೋಡಿದರೆ, ನೀನು ಎಂಬುದು ಒಂದೇ ಸತ್ಯ! ನೀನು ಉಸಿರಾಡುತ್ತಿರುವೆ ಎಂಬುದೊಂದೇ ಸತ್ಯ. ನಿನಗೆ ಬದುಕಲು ಏನೇನು ಬೇಕು, ನೀನು ಹೀಗೇಗಿರಬೇಕು, ನೀನು ಏನೇನು ಮಾಡಬೇಕು ಎಲ್ಲವನ್ನು ನೀನು ಬಣ್ಣಿಸುತ್ತಾ ಹೋಗುತ್ತೀಯ. ಎಲ್ಲವೂ ನಿನ್ನಆಯ್ಕೆಗಳು. ಆ ಆಯ್ಕೆಗಳೆಲ್ಲ ಕೇವಲ ನೀನು ಸಾಯುವವರೆಗೂ ಬದುಕಲ್ಲಿಕೋಸ್ಕರ. ಅದು ಏನೇ ಇರಬಹುದು.
ಸಂಭಂದಗಳು, ಭಾವನೆಗಳು, ಜೀವನ ಶೈಲಿ, ಓದುವುದು, ಬರೆಯುವುದು, ಊರೂರು ಸುತ್ತುವುದು, ದೇಹ ಸೌಂಧರ್ಯಭಿವೃದಿ ಮಾಡಿಕೊಳ್ಳುವುದು, ಆರೋಗ್ಯ ಕಾಯ್ದುಕೊಳ್ಳುವುದು, ಹಣ ಗಳಿಸುವುದು, ಹೆಸರುಗಳಿಸುವುದು, ಮದುವೆ, ಸಂಸಾರ, ಇನ್ನು ಏನೇ ಇರಬಹುದು ಎಲ್ಲವೂ ನೀನು ಸಾಯುವವರೆಗೂ ಬದುಕಲು ಮಾಡಿಕೊಳ್ಳುವು ನಿನ್ನ ಆಯ್ಕೆಗಳು. ಕುವೆಂಪುರವರು ಹೇಳಿದ ಹಾಗೆ, ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ. ಎಲ್ಲಾ ನಮ್ಮಲ್ಲಿಯೇ ಇದೆ. ಸ್ವಲ್ಪ ಯೋಚಿಸಬೇಕಷ್ಟೆ.
ಸಮಾಜದ ಮುಂದೆ ಹೀಗಿರಬೇಕು, ಹಾಗಿರಬೇಕು ಎಂಬ ನಮ್ಮ ಕಲ್ಪನೆಗಳನ್ನೇ ಜೀವನವೆಂದು ಬದುಕುತ್ತೇವೆ, ನಮಗಾಗಿ ನಾವು ಆಯ್ಕೆಗಳನ್ನು ಮಾಡುವುದಕ್ಕಿಂತ ಬೇರೆಯವರ ಮುಂದೆ ಪ್ರದರ್ಶಿಸಲು ಆಯ್ಕೆಯನ್ನು ಮಾಡುತ್ತೇವೆ, ಅದು ಕೂಡ ತಪ್ಪೇನಲ್ಲ, ಅದು ನಿನ್ನ ಆಯ್ಕೆ, ನಿನ್ನ ಜೀವನ, ನಿನ್ನ ಇಷ್ಟ. ಆದರೆ ನಾ ಹೇಳಭಯಸುವುದು ಇಷ್ಟೇ , ನಿನ್ನ ಜೀವನ ನಿನ್ನದು, ಅವರ ಜೀವನ ಅವರದ್ದು. ಜೀವಿಸು, ಜೀವಿಸಲು ಬಿಡು. 

Until then

ನೆನ್ನೆ ಕಳೆದು ಇಂದಾಗುವವರೆಗೂ ನನಗಿದು ತಿಳಿದಿರಲ್ಲಿಲ್ಲ.
ನೆನ್ನೆ ಕಳೆದು ಇಂದಾಗುವವರೆಗೂ ನನಗಿದು ತಿಳಿದಿರಲ್ಲಿಲ್ಲ.
ಅದೊಂದು ಸುಂದರ ಕ್ಷಣವಾಗಿತ್ತೆಂದು.
ನಾನಿಂದು ನೆನೆಯಲಿರುವೆ ಆ ಕ್ಷಣವನ್ನೆಂದು.  

He made it better.

It was one beautiful countryside summer night!
green grass spread out to the horizon
producing cool countryside summer's musical breeze,
white painted crescent summer moon, glittering stars
glistening water.
It was one simple beautiful countryside summer night.
Until I turned my face and saw his eyes!!

Sunday 24 June 2018

ಕೆಲವೊಮ್ಮೆ

ಕೆಲವೊಮ್ಮೆ ಪ್ರಶ್ನೆ ಸುಲಭವಾಗಿರುತ್ತದೆ.
ಉತ್ತರವೂ ಸುಲಭವೇ.
ಪ್ರಶ್ನೆಯನ್ನು ಸುಲಭವಾಗಿ ಸ್ವೀಕರಿಸುವ ಕ್ಷಮತೆ ಬೇಕಷ್ಟೆ. 

ಅಸ್ತಿತ್ವ

ಯಾವುದರ ಅಸ್ತಿತ್ವ ಯಾವುದು?
ಇಲ್ಲಿ ಯಾವುದಕ್ಕೂ, ಯಾರಿಗೂ, ಏನಕ್ಕೂ ಅಸ್ತಿತ್ವದ ಅರಿವಿಲ್ಲ.
ಎಲ್ಲವೂ ಕೇವಲ ನಂಬಿಕೆ.
ಆದರೆ ಈ ನಂಬಿಕೆ ಕೇವಲವಲ್ಲ. 

A virgin thought!

ಎಲ್ಲವೂ ಇಲ್ಲಿ ಒಂದಕೊಂದು ಮಿಳಿತಗೊಂಡಿವೆ.
ಯಾವುದರ ಹುಟ್ಟು ಎಲ್ಲಿ?
ಯಾವುದರ ಸಾವು ಹೇಗೆ?
ಯಾವುದು ನನ್ನದು?
ನನ್ನದು ಎಂಬುದೇ ಇಲ್ಲವೇ?
ಎಲ್ಲವು ಇಲ್ಲಿ ಒಂದರಿಂದೊಂದು ಪ್ರಭಾವಿತಗೊಂಡವುಗಳೇ.
ಹೊಸತೇನಿದೆ? ಹಳತ್ತುಯಾವುದು?
ಎಲ್ಲಾರ ಹುಂ ಗೆ ನನ್ನ ಹುಂ.
ಹುಂ ಗೆ ಹುಂ ಸಾಂಗತ್ಯ.
ಪ್ರಕೃತಿಯ ನಿಯಮವೇ ಹಾಗೆ; ಕ್ರಮಬದ್ಧತ್ತೆ, ಏಕರೂಪತೆ.
ಎಲ್ಲವೂ ಇಲ್ಲಿ ಒಂದೇ, ಆದರೂ ಯಾವುದು ಒಂದರಂತೆಯೇ ಇಲ್ಲ.
ಒಮ್ಮೊಮ್ಮೆ ಬಲವಾದ ನಂಬಿಕೆ ನೀಡುವ ಗಟ್ಟಿ ನೆಲವೇ ಕೆಲವೊಮ್ಮೆ
ಕಿತ್ತು ಹಗುರಾಗಿ ಗಾಳಿಯಲ್ಲಿ ತೇಲಿಯೋಗಿ ನಮ್ಮನು ಪಾತಾಳಕ್ಕೆ ಬೀಳಿಸುವುದುಂಟು.
ಏನಿದು?
ಇದೊಂದು ಜಾಲ.
ಬಿಡಿಸುತ್ತ ಹೋದಷ್ಟು ಜಟಿಲಗೊಳ್ಳುವ ಜಾಲ.
ಎಲ್ಲವೂ ಕಲುಷಿತ.
ಸ್ವಂತತೆಎಂಬುದೇ ಕಲುಷಿತ.
ಆದಿ ಅರಿಯಲು ಬಿಡದ ಎಲ್ಲಾ ಯೋಚನೆಗಳು ವ್ಯರ್ಥ.
ಕೆಲವೊಮ್ಮೆ ಅನಿಸುತ್ತದ್ದೆ ನಮ್ಮ ಯೋಚನೆಗಳಿಗೆ ಆದಿ ಅಂತ್ಯಗಳಿಲ್ಲ.
ಶುದ್ಧವಾಗಿ ಒಮ್ಮೆ ಹರಿದಿರಬಹುದೇನೊ ಗಂಗೆ.
ಈಗಲೂ ಅವಳು ಶುದ್ಧಳೆಂದು ನಂಬಿಸಿಹರು ಎಲ್ಲರೂ ಇಲ್ಲಿ.
ನಾವು ನಂಬಿದ್ದೇವೆ.
ಮುಂದೆ ಇನ್ನೊಬರನ್ನು ನಂಬಿಸುತ್ತೇವೆ.
ಇದು ನಿರಂತರ.
ಕೆಲವೊಮ್ಮೆ ಹರಿವ ನೀರು ಪತ ಬದಲಿಸಿ ನಾನು ಶುದ್ಧಳೆಂದು ಹೇಳಬಹುದು.
ನಾನು ಪವಿತ್ರಳೆನ್ನಬಹುದು. ನಾವು ನಂಬಲು ಬಹುದು, ಅದು ಸತ್ಯವು ಆಗಿರಬಹುದು, ಹಾಗೆ ಸುಳ್ಳು ಕೂಡ.
ಎಲ್ಲವೂ ಇಲ್ಲಿ ಒಂದಕೊಂದು ಮಿಳಿತಗೊಂಡಿವೆ. 


Saturday 23 June 2018

More is less

ಹೆಚ್ಚು ಭಾವುಕರು ಕ್ರಮೇಣವಾಗಿ ಭಾವುಕತೆಯನ್ನು ಕಳೆದುಕೊಳ್ಳುತ್ತಾರೆ. 
ಹೆಚ್ಚೆಚ್ಚು ಜೀವನವನ್ನು ಅರಿಯುತ್ತಾ ಹೋದಷ್ಟು ಜೀವನದಿಂದ ಎಲ್ಲವನ್ನು ಕಮ್ಮಿ ಕಮ್ಮಿ ಬಯಸುತ್ತ, ಹೆಚ್ಚೆಚ್ಚು ನಶ್ವರದೆಡೆಗೆ ಸಾಗತ್ತ ಹೋಗುತ್ತಾರೆ.  
ಹೆಚ್ಚು ಓದಿದಷ್ಟು, ಜಗತ್ತು ಚಿಕ್ಕದಾಗುತ್ತಾ ಹೋಗುತ್ತದೆ. 
ಹೆಚ್ಚು ಕೆಲವೊಮ್ಮೆ ಕಮ್ಮಿ. 

Sometimes

Sometimes,
sometimes I just want to stay quiet,
sometimes I want to talk a lot,
sometimes I want to be alone,
sometimes I want to be with you,
sometimes I want to hold you tight,
sometimes I want to get held.
sometimes I run away,
sometimes I stay back,
sometimes I afraid of dark,
sometimes I love being in dark,
sometimes I cry,
& sometime's list continues!
the best of my sometimes are the sometimes which you are part of. 



Thursday 21 June 2018

ಎಲ್ಲಿ ಹೋಗಿದ್ದೆ? where you went?

ಬಹಳ ಸಮಯವಾಗಿತ್ತು ಅವನು ದೂರ ಅದೆಲ್ಲೋ ಹೋಗಿ.
ಇಲ್ಲಿ ಬಹಳ ಸೆಖೆ ಸೆಖೆಯೆಂದು ಅವನಂದು ಹೇಳಿದ್ದ.
ಕಡೆಗೂ ಇಂದು ಹಿಂತುರಿಗಿ ಬಂದ.
ಭಾವನೆಗಳೆಲ್ಲ ಹಿಡಿತ ತಪ್ಪಿ ಪದಗಳಾಗಿ ನಾಮುಂದೆ ತಾಮುಂದೆ ಎಂದು ಗುದ್ದಾಡುತ್ತ ಹೊರಬರಲು,
ಏನು ಮಾತನಾಡುತ್ತಿರುವೆ ಎಂಬಾ ಅರಿವೇ ಅವಳಿಗಿರಲ್ಲಿಲ್ಲ.
ಪದಗಳ ಕೈಯಲ್ಲಿ ಭಾವನೆಗಳನ್ನಿತ್ತು ಪ್ರಯೋಜನವಿಲ್ಲವೆಂಬ ಅರಿವು ಅವಳಿಗೆ ಮೂಡುವಷ್ಟರಲ್ಲಿ,
ಭಿಗಿಯಾದ ಅಪ್ಪುಗೆಯ ಬಂದಿಯಾಗಿದ್ದಳು.
ಕೊಟ್ಟ ನಾಲ್ಕು ಪೆಟ್ಟು ಅವನ ಎದೆಯ ಮೇಲಾದರೂ, ಒದ್ದೆಯಾದದ್ದು ಅವಳ ಕಂಗಳು.
ಖುಷಿಯಿಂದ, ದುಃಖ್ಖದಿಂದ, ಮನಸ್ಸಮಾಧಾನದಿಂದ, ಅಸಮಾಧಾನದಿಂದ, ಕೋಪದಿಂದ, ಪ್ರೀತಿಂದ,
ಅನುಭವಸಿದ ನೋವಿನಿಂದ, ವಿರಹದಿಂದ, ಅವನಿಂದ, ಅವನ ನಗುವಿನಿಂದ, ಏನೋ ತಲೆಯೆಲ್ಲ ಸುತ್ತಿದಂತೆ. 
ಬಿಟ್ಟು ಬಿಡದಾಟ ಮುಂದುವರಿದಿರಲು ಬೆಳಕು ಜಾರಿ ಕತ್ತಲಾಗಿತ್ತು, 
ಅಮಾವಾಸೆಯ ರಾತ್ರಿಯಾದರೂ ಚಂದ್ರನಿಂದು ಅವಳ ಕಂಗಳಲ್ಲಿ ಉದಯಿಸಿದ್ದ,
ಸೂರ್ಯನಲ್ಲದ ಅವಳ ಸೂರ್ಯನ ರಶ್ಮಿಗೆ ತಾವರೆಯಾಗಿ ಅರಳಿದಳು.
ಕತ್ತಲು ಬೆಳಕಾಟ ಸಾಗುತ್ತಲ್ಲೇಯಿತ್ತು,
ಕತ್ತಲು ಕರಗಿ ಮತ್ತೆ ಬೆಳಕರಿದಿತ್ತು,
ಬೆಳಕು ಜಾರಿ ಕತ್ತಲು.
ಸುಡುತ್ತಿದ್ದ ಭಾವೆನೆಗಳಿಗೆಲ್ಲ ಅಲ್ಪವಿರಾಮ ನೀಡುತ ತಣ್ಣೀರು ಎರಚಿತ್ತು.


Saturday 16 June 2018

ಪಾತ್ರ

ಎಲ್ಲಾರು ಇಲ್ಲಿ ಪಾತ್ರದಾರಿಗಳು. ತಮ್ಮತಮ್ಮ ಪಾತ್ರವ ನಿರ್ವಹಿಸುವವರು.

ದಿನಕೊಂದು ಪಾತ್ರ ನಿಮಿಷಕೊಂದು ಪಾತ್ರ, ಹೌದೇ? ಅಲ್ಲ.
ದಿನಕೊಂದು, ನಿಮಿಷಕೊಂದು ಪಾತ್ರವಾಗಿ ಬದಲಾಗುವುದೇ ಈ ಪಾತ್ರಗಳ ವಿಶೇಷ.

ಒಳಗಿಂದ ಒಂದು ಪಾತ್ರ, ಹೊರಗಿನಿಂದ ಒಂದು. ಹೌದೇ? ಅಲ್ಲ.
ಒಳಗಿಂದ ಒಂದು, ಹೊರಗಿನಿಂದ ಒಂದರಂತೆ ವರ್ತಿಸುವುದೇ ಈ ಪಾತ್ರದ ಕೆಲಸ.

ಒಬ್ಬರಿಗೊಂದು, ಮತ್ತೊಬ್ಬರಿಗೆ ಇನ್ನೊಂದು. ಹೌದೇ? ಅಲ್ಲ.
ಒಬ್ಬರಿಗೊಂದು, ಮತ್ತೊಬ್ಬರಿಗೆ ಇನ್ನೊಂದಾಗಿ ಕಾಣಿಸಿಕೊಳ್ಳುವುದೇ ಪಾತ್ರಗಳ ಪಾತ್ರ.

ಎಲ್ಲರೂ ಪಾತ್ರದಾರಿಗಳೇ, ಎಲ್ಲವೂ ಒಂದು ಪಾತ್ರವೇ.
ನಮ್ಮ ನಮ್ಮ ಪಾತ್ರಗ ನಿರ್ವಸಿವುದು ನಮ್ಮ ಪಾತ್ರ.
ಹೌದು,
ನಾನು ಕೆಲವೊಮ್ಮೆ ಸುಳ್ಳಿ.
ಹೌದು,
ನಾನು ಕೆಲವರಿಗೆ ಮೋಸಗಾತಿ,
ಹೌದು,
ನಾನು ಕೊಬ್ಬಿನಾ ಹುಡುಗಿ.
ಹೌದು,
ನಾನು  ತಿಂಡಿ ಪೋತಿ,
ನಾನು ಕೋತಿ,
ನನಗೆ ಮನಸೇಂಬುದೇ ಇಲ್ಲಾ,
ನಾನು ಸೋಂಭೇರಿ,
ನಾನು ಕೊಳಕು,
ನಾನು ಕೆಟ್ಟವಳು,
ಭೂತ.
ಹೌದು,
ನಾನು ನನ್ನಪ್ಪನಿಗ ಮಗಳು,
ನಾನೊಬ್ಬಳು ನನ್ನಮ್ಮನ ಮುದ್ದುಮರಿ,
ಇನ್ನು ಕೆಲವರಿಗೆ ನಾನು,
ತಂಗಿ,
ಸೊಸೆ,
ಅತ್ತಿಗೆ,
ವಿದ್ಯಾರ್ಥಿ,
ಶಿಕ್ಷಕಿ,
ಸ್ನೇಹಿತೆ,
ಸುಂದರಿ,
ಒಳ್ಳೆಯವಳು,
ದೇವತೆ.
ಸಾವಿರಾರು ಬಣ್ಣಗಳೊಳಗೊಂಡ ಪಾತ್ರ ನನ್ನದು, ನಮ್ಮೆಲ್ಲರದು.
ಹೌದು,
ನಾನು ನಾನೇ.
ಏನೇಯಾದರು, ಹೇಗೆಯಿದ್ದರೂ ಅದು ನಾನು.
ಅದು ನನ್ನ ಪಾತ್ರ.
ಬೇರೆ ಪಾತ್ರ ಹಾಗಿದೆ ಹೀಗಿದೆ ಎಂದು ಕೆಲವೊಮ್ಮೆ ಹೇಳುವುದು ನನ್ನ ಪಾತ್ರ.
ಇನ್ನು ಕೆಲವೊಮ್ಮೆ ಯಾವುದೇ ಪಾತ್ರವನ್ನಾಗಲಿ ಅಳೆಯುವುದು ತಪ್ಪೆಂದು ಹೇಳುವುದು ನನ್ನ ಪಾತ್ರವೇ.
ನಾನೊಂದು ಪಾತ್ರ.

Friday 15 June 2018

& a rainy season.

ಮಳೆಗಾಲ ಬಂತಯ್ಯ, ಮಳೆಗಾಲ.
ಹಳೆಯ ಶಾಲಾದಿನಗಳು ನೆನಪಾಗುತ್ತಿದೆ. ರಜೆಯ ದಿನಗಳು ಮುಗಿದು ಶಾಲೆ ಶುರುವಾಗುವ ಸಮಯವದು. ರೈನಕೋಟ್ ಧರಿಸಿ, ಪುಟ್ಟ ಪುಟ್ಟ ಕೈಗಳಲ್ಲಿ ದೊಡ್ಡ ಕೊಡೆಹಿಡಿದು, ತೂಕದ ಚೀಲವ ಹೆಗಲಿಗೇರಿಸಿ ಕೆಸರು ನೀರಿನಲ್ಲಿ ಪಚಪಚ ಮಾಡುತ್ತ ಶಾಲೆಗೋಗುವುದು, ಮನೆಗೆ ವಾಪಾಸ್ ಬರುವುದು ಇದುವೇ ದಿನಚರಿ!! ಮಳೆಗಾಲವೆಂದರೆ ಆಗಿನಿಂದಲೇ ಪ್ರೀತಿ. ಮಳೆಯಲ್ಲಿ ನೆನೆಯುವುದು, ಅಮ್ಮನ ಬಳಿ ಬೈಸಿಕೊಳ್ಳುವುದು. ಒದ್ದೆಯಾದ ಪುಸ್ತಕಗಳು, ಕಿತ್ತು ಹೋಗುತಿದ್ದೆ ಹೊಸ ಶೂಗಳು, ಮಳೆ ನೀರಿನಿಂದ ವಾಸನೆ ಬರುತ್ತಿದ್ದ ಸಾಕ್ಸ್ಗಳು ಎಲ್ಲವೂ ಖುಷಿಯೇ. ಈ ಖುಷಿಯ ನಡುವೆ ಮಳೆಗಾಲವೆಂದರೇನೋ ಭಯ! ಈಗಲೂ ಈ ಭಯ ಹಾಗೆಯೇ ಇದೆ. ಸೂರ್ಯನ ಸುಳಿವಿವೆ ಇಲ್ಲ, ಆದರೂ ನೆರಳೊಂದು ಹಿಂಬಾಲಿಸಿದಂತೆ. ಸಣ್ಣ ವಾಸಿನಿಂದಲೇ ಈ ಭಯ ಹಾಗೆಯೇ ಮನಸಿನ್ನಲ್ಲಿ ಬೇರೂರಿಬಿಟ್ಟಿದೆ. ಈ ಭಯಕ್ಕೆ ಕರಣವೇನಿರಬಹುದೆಂದು ಈಗಲೂ ಕೆಲವೊಮ್ಮೆ ಯೋಚಿಸುವುದುಂಟು.

ನನಗನಿಸಿದ ಪ್ರಕಾರ:
ಸಣ್ಣವಲ್ಲಿದಾಗ ಬದಲಾವಣೆಯೆಂದರೆ ನನಗಷ್ಟು ಇಷ್ಟವಿರಲ್ಲಿಲ್ಲ. ಮಳೆಗಾಲದಲ್ಲಿ ಶಾಲೆ ಶುರುವಾಗುತ್ತಿದ್ದದ್ದು. ಮಳೆಗಾಲವೆಂದರೆ ಬದಲಾವಣೆಯ ಸಮಯವೆಂದೇ ಆ ಪುಟ್ಟ ವಯಸ್ಸಿನ್ನ ಮುಗ್ದಮಗುವಿನ ಅನಿಸಿಕೆಯಾಗಿತ್ತು. ವರ್ಷಕೊಮ್ಮೆ ಬದಲಾಗುತಿಯಿದ್ದ ಶಾಲಾ ಶಿಕ್ಷಕರು, ಹೊಸ ಪಠ್ಯ ಪುಸ್ತಕ, ಹೊಸ ಹೊಸ ಪಾಠಗಳು,  ಬರಬರುತ್ತ ಹೆಸರುಗಳು ನೆನಪಿನ್ನಲ್ಲಿಡಲು ಕಷ್ಟವಾಗಿ ಸೋಶಿಯಲ್ ಸ್ಟಡೀಸ್ ಪಾಠಗಳು ಕಠಿಣವಾಗುತ್ತಿದ್ದದ್ದು, ಶಾಲೆಯಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲ್ಲಿಲ್ಲವೆಂದರೆ ಅಮ್ಮನಿಗೆ ಬೇಜಾರಾಗುವುದೆಂಬ ಯೋಚನೆಗಳು, ಹೀಗೆ ಸುಮಾರು ಸಣ್ಣ ಸಣ್ಣ ವಿಷಯಗಳು ಸೇರಿ ದೊಡ್ಡದಾಗಿ ನನ್ನನ್ನು ಹೆದರಿಸುತ್ತಿದ್ದವು. ಪ್ರೈಮರಿ ಕ್ಲಾಸ್ ಮುಗಿದು ಸೆಕೆಂಡರಿ ಕ್ಲಾಸ್ ಸೇರುವಾಗ ಶಾಲೆ ಬದಲಾಯಿತು, ಗೆಳೆಯರು ಬದಲಾದರು. ನಾನು ದೊಡ್ಡವಳಾದರು ನನ್ನ ಸಣ್ಣವಸಿನ್ನ ಭಯವನ್ನು ಹಾಗೆ ನನ್ನೊಂದಿಗೆ ಬಚ್ಚಿಟ್ಟುಕೊಂಡು ಮುಂದೆ ಸಾಗಿದ್ದೇ. ಹೊರಪ್ರಪಂಚಕ್ಕೆ ಹೆಚ್ಚು ಪರಿಚಯವಾಗುತ್ತಾ ಹೋದಂತೆ ಸಣ್ಣದಾಗಿದ್ದ ಭಯಗಳು ಬರಬರುತ್ತ  ದೊಡ್ಡಗುತ್ತಿತೇನೋ ಒಳಗೊಳಗೇ, ಅಪ್ಪ ಅಮ್ಮನಿದ್ದ ಕಾರಣ ಅಷ್ಟಾಗಿ ಗೊತ್ತಾಗುತ್ತಿರಲ್ಲಿಲ್ಲ. ಈರೀತಿಯ ಭಯ ಈಗಲೂ ನನ್ನಲ್ಲಿಯೇ ಕೊಂಚ ಉಳಿದು ಹೋಗಿದೆ. ಹೆದರುವ ಅವಶ್ಯಕತೆಯಿಲ್ಲವೆಂಬ ಅರಿವಿದ್ದರೂ, ಅರಿವಿಗೆ ನಿಲುಕದ ಭಾವವೊಂದು ನನ್ನೊಳಗೆಯೇ ಶಾಶ್ವತವಾಗಿ ಗೂಡುಕಟ್ಟಿ ಮಲಗಿದೆ. ಹಾಗಾಗಿ ಮಳೆಗಾಲವೆಂದರೆ ಖುಷಿಯ ಜೊತೆಗೆ ಕೊಂಚ ಭಯವನ್ನು ಹೊತ್ತುತರುತ್ತದೆ.
ಕತ್ತಲ್ಲು ಗಟ್ಟಿದ ಸಂಜೆಯ ಮೋಡವೊಂದು ಅತ್ತಾಗ, ಇಹಲೋಕ ತೊರೆದ ಅಜ್ಜನ ನೆನಪು ಕಾಡುತ್ತದೆ. ಕಿಟಕಿಯ ಬಳಿ ಕಾಲುಮಡಚಿ ಕೂತಿರಲು ತಂಪಾದ ಗಾಳಿ  ಮೈಸೋಕಿ ನನ್ನಜ್ಜಿಯೇ ತೊಟ್ಟಿಲ್ಲ ತೂಗುತ್ತ ಪದವಾಡಿಹಳು ಎನ್ನಿಸುತ್ತದೆ.
 ಕಿರುಗುಟ್ಟುವ ಬಾಗಿಲುಗಳು ಹಳ್ಳಿ ಮನೆಯ ಕತ್ತಲೆ ಕೋಣೆಯ ನೆನಪು ತರಿಸುತ್ತದ್ದೆ. ಹೀಗೆ ಏನೇನೋ ಮಿಶ್ರಿತ ಭಾವನೆಗಳು ತಲೆತುಂಬೆಲ್ಲ ಸುಳಿದಾಡುವಾಗ, ಒಂದೊಳ್ಳೆ ಸಣ್ಣ ನಿದ್ದೆ ಕೂತಲ್ಲಿಯೇ ಮುಗಿದಿರುತ್ತದೆ.




"Gud-bud"

ಎಲ್ಲವೂ ಬೇಗ ಬೇಗಾಗಬೇಕು,
ನಮ್ಮ ಪೀಳಿಗೆಯವರಲ್ಲಿ ತಾಳ್ಮೆಯ ಅಭಾವ,
ಯಾವುದಕ್ಕೂ ಕಾಯುವುದಿಲ್ಲ, ಯಾರಿಗಾಗಿಯೂ ಕಾಯುವುದಿಲ್ಲ.
************
ತಂತ್ರಜ್ಞಾನ ಅಭಿವೃದ್ಧಿ ಆದಂತೆಯೇ ಎಲ್ಲವೂ ಸುಲಭವಾಗಿ ಬಿಟ್ಟಿದೆ.
************
ಸ್ಲ್ಯಾಂಗ್ ಇಸ್ ನ್ಯೂ ಟ್ರೆಂಡ್.
************
ಎಲ್ಲಾ ಕೆಲಸಗಳ್ಳಲ್ಲಿಳು ಶಾರ್ಟ್ಕಟ್ ಕಂಡುಕೊಳ್ಳುವುದು ನಮಗಭ್ಯಾಸವಾಗಿಬಿಟ್ಟಿದೆ.
************
ನನ್ನಜ್ಜ ಪಿಜ್ಜರ ಕಾಲದಲ್ಲಿ ತಂತಿಸುದ್ದಿ ಕಳುಹಿಸುತ್ತಿದ್ದದ್ದರ ಬಗ್ಗೆ ಅಪ್ಪ ಹೇಳಿದ್ದು ಕೇಳಿದ್ದೆ.
ಆದಷ್ಟು ಸಣ್ಣದಾಗಿ, ಕೇವಲ ಹೇಳಬೇಕಾದ ಮುಖ್ಯ ವಿಷಯವನ್ನು ಮಾತ್ರ ಸಂಕ್ಷಿಪ್ತವಾಗಿ ಹೇಳುವುದು ಅದರುದ್ದೇಶ.
************
ನಮ್ಮ ಈ ಪೀಳಿಗೆ ಅವರು ಹಾಗಲ್ಲ, ಬೇಕಾದ್ದು, ಬೇಡದ್ದು (ಅದುವೂ ನಮಗೆ ಬೇಕಾದದ್ದೆ) ಎಲ್ಲವನ್ನು ಶಾರ್ಟ್ ಕಟ್ ನಲ್ಲೆ ಬರೆದು ಕಳಿಸುವುದು ಅಭ್ಯಾಸವಾಗಿಬಿಟ್ಟಿದ್ದೆ.
**************
ಮೆಸ್ಸೆಂಜರ್ ಆಪ್ ಗಳು ಸಾವಿರಾರು.
ಇಂಗ್ಲಿಷ್ ಪದಗಳೆಲ್ಲ ಶಾರ್ಟ್ ಶಾರ್ಟ್ ಆಗಿ, ನಿಜವಾದ ಸ್ಪೆಲ್ಲಿಂಗ್ಸ್ ಅಂಡ್ ಶಾರ್ಟ್ ಕಟ್ ಸ್ಪೆಲ್ಲಿಂಗ್ಸ್ನ ನಡುವೆ ವ್ಯತ್ಯಾಸದ ಅರಿವೇ ಕಮ್ಮಿಯಾಗುತ್ತಾ ಬಂದಿದೆ.
What ಈಗ wat/wt
ಹೀಗೆ ಹತ್ತು ಹಲವು.
**************
ಇಷ್ಟೆಲ್ಲಾ ಪೀಠಿಕೆಯ ಹಿಂದೆ ಒಂದು ಸಣ್ಣ ಕಾರವಿದೆ, ಅದುವೇ "Gud-Bud" ಕಹಾನಿ.

ನನ್ನಿಬ್ಬ ಸ್ನೇಹಿತೆಯರು ಹಾಗು ನಾನು, 
ಮೊನ್ನೆ ಹಾಗೆ ಸುಮ್ಮನೆ ಚಹಾ ಕುಡಿಯುತ್ತ ಹರಡಲೆಂದು ವಿಜಯನಗರದಲ್ಲಿ ಸೇರಿದ್ದವು. 
ಸೆಲ್ಫಸರ್ವಿಸ್ ಇದ್ದ ಹೋಟೆಲ್ ಅದು.
ಕೌಂಟರ್ ಬಳಿಯಲ್ಲಿ ದಿನದ ಸ್ಪೆಷಲ್ ಏನೆಂದು ಬರೆದ ಒಂದು ಬೋರ್ಡ್ ತಗೆಲು ಹಾಕಿತ್ತು.
ಮೊನ್ನೆದಿನದ ಸ್ಪೆಷಲ್
"Gud-bud" (Ice-cream)
ಅದನ್ನು ಒಬ್ಬ ಸ್ನೇಹಿತೆ "ಗುಡ್-ಬುಡ್" ಯೆಂದು ಹಾಗು ಇನ್ನೊಬ್ಬ ಸ್ನೇಹಿತೆ "ಗುಡ್-ಬ್ಯಾಡ" ಯೆಂದು ಓದಿದರೂ.
ಚಹಾದೊಂದಿಗೆ ಒಂದಷ್ಟು ನಗು ಉಚಿತವಾಗಿ ಸಿಕ್ಕಿತ್ತು.
***************
Note: ನನ್ನದು ಶಾರ್ಟ್ಕಟ್ ಪೀಳಿಗೆ, ಹಾಗಾಗಿ ನನ್ನ ಬರವಣಿಗೆಯು ತುಣುಕು ತುಣುಕಾಗಿದೆ. 😉😉😉😅
***************

ಎಲ್ಲವೂ ತಾರುಮಾರು. !!!!
ಎಲ್ಲರೂ ತಾರುಮಾರು. !!!!

Thursday 14 June 2018

ಅಳುವು

ಉಪ್ಪಿನಾ ನೀರು, ಉಕ್ಕುಕ್ಕಿ ಬಂದಿತ್ತು.
ಅವನಂದು ಮುತ್ತಿಟ್ಟ ಗಲ್ಲದಾ ಮೇಲೆ ಉರುಳುರುಳಿ ಹೋಗಿತ್ತು.
ತಪ್ಪುಯಾರದ್ದು? ಅವನದ್ದೇ? ಇವಳದ್ದೇl?
ಹೊಂ ಹೂ .. ಪದಗಳದ್ದು, ಸಮಯದ್ದು.
ಅವನ ಪದಗಳಾರ್ಥ ಬೇರೆಯೇಯಿತ್ತು,
ಅದರ ಅರಿವು ಅವಳಿಗೂ ಇತ್ತು.
ಆದರೂ ಹೇಳದೆ ಕೇಳದೆ ಅಳುವೊಂದು ಜಿನುಗಿತ್ತು.
ಏತಕ್ಕಾಗಿ ಮನ ನೊಂದಿತ್ತು?
ಉತ್ತರದ ಅರಿವಿಲ್ಲ.
ಅನಿಸುತ್ತಿದೆ!!
ಈ ಪ್ರೆಶ್ನೆಯೇ ಸರಿಯಿಲ್ಲ.
ಕೆಲವೊಮ್ಮೆ ಮನಿಸ್ಸಿನ ಕೈಗೊಂಬೆಯಾಗಿಬಿಡಬೇಕು.
ಮಗುವಂತೆ ಅತ್ತುಬಿಡಬೇಕು.


Wednesday 6 June 2018

Sweet and bitter truth

I don't own me completely.
I don't know whether to be happy about it or sad.
But I know, I don't want someone else to take my life's decision.
Even if my decisions lead me to the worst, it'll be my own and I'll never regret it.
But the sad news is my decisions will never be mine. 

Singing my own song

ಅವನಿಗಿಷ್ಠವಾದ ಹಾಡದು,
ಅದು ನನ್ನ ಹಾಡು.
ಬರೆದವುರು ಯಾರಾದರೇನು,
ಹಾಡಿದವರು ಯಾರಾದರೇನು,
ಅವನದೇ ಪದವೆನಿಸಿಹುದು,
ಅವನದೇ ರಾಗ.
ಅವನಿಗಿಷ್ಠವಾದ ಹಾಡದು
ಅದು ನನ್ನ ಹಾಡು.

ನನ್ನದೊಂದು ಸಣ್ಣ ಕ್ಷಮೆ,
ದೊಡ್ಡದೊಂದು ನಮನ ಆ ಪದ್ಯ ಬರೆದವರಿಗೆ.
ಕೃತಿ ಚೌರ್ಯವಲ್ಲವಿದು.
ಮೆಚ್ಚುಗೆಯ ಅಭಿನಂದನೆಗಳಿದು.
ಅವನಿಗಿಷ್ಠವಾದ ಹಾಡದು
ಅದು ನನ್ನ ಹಾಡು.

ಗುನುಗುತಿರಲು ಆ ನನ್ನ ಹಾಡನು,
ಕೇಳುತಿಹುದು ಅವನದೇ ದನಿ.
ನನ್ನೊಳು, ನನ್ನ ಸ್ವರದೊಳು,
ಅವನಿಗಿಷ್ಠವಾದ ಹಾಡದು
ಅದು ನನ್ನ ಹಾಡು.

Monday 4 June 2018

Orphan; emotionally

Subconsciously she was wishing that someone unconsciously start loving her for what she was!!; not anymore.

Sunday 3 June 2018

Hostage

I'm a hostage of my own life. 

Living a lie

What can I talk about others when I'm living a lie.
When I'm living a lie. 
Breathing behind the mask.
Looking the world behind the shades.
Hiding the words behind the silence.
Smiling materialistically.
Crying hard with no tears.
Standing behind the bars.
Having thinking barriers.
====================================
Filters everywhere.
Everywhere.
====================================
Why people judge?
Why can't people trust people?
Where am I?
What am I doing?
====================================
Standing all alone in the dark, waiting,
waiting for my spiritual guide,
who ties me to the humankind and 
lead me to the light. ++++++++++++++++++++++++++++++++++++

Family and friends

In particular, (not in general)
Family members can never be friends
and friends are the family.