Thursday, 21 June 2018

ಎಲ್ಲಿ ಹೋಗಿದ್ದೆ? where you went?

ಬಹಳ ಸಮಯವಾಗಿತ್ತು ಅವನು ದೂರ ಅದೆಲ್ಲೋ ಹೋಗಿ.
ಇಲ್ಲಿ ಬಹಳ ಸೆಖೆ ಸೆಖೆಯೆಂದು ಅವನಂದು ಹೇಳಿದ್ದ.
ಕಡೆಗೂ ಇಂದು ಹಿಂತುರಿಗಿ ಬಂದ.
ಭಾವನೆಗಳೆಲ್ಲ ಹಿಡಿತ ತಪ್ಪಿ ಪದಗಳಾಗಿ ನಾಮುಂದೆ ತಾಮುಂದೆ ಎಂದು ಗುದ್ದಾಡುತ್ತ ಹೊರಬರಲು,
ಏನು ಮಾತನಾಡುತ್ತಿರುವೆ ಎಂಬಾ ಅರಿವೇ ಅವಳಿಗಿರಲ್ಲಿಲ್ಲ.
ಪದಗಳ ಕೈಯಲ್ಲಿ ಭಾವನೆಗಳನ್ನಿತ್ತು ಪ್ರಯೋಜನವಿಲ್ಲವೆಂಬ ಅರಿವು ಅವಳಿಗೆ ಮೂಡುವಷ್ಟರಲ್ಲಿ,
ಭಿಗಿಯಾದ ಅಪ್ಪುಗೆಯ ಬಂದಿಯಾಗಿದ್ದಳು.
ಕೊಟ್ಟ ನಾಲ್ಕು ಪೆಟ್ಟು ಅವನ ಎದೆಯ ಮೇಲಾದರೂ, ಒದ್ದೆಯಾದದ್ದು ಅವಳ ಕಂಗಳು.
ಖುಷಿಯಿಂದ, ದುಃಖ್ಖದಿಂದ, ಮನಸ್ಸಮಾಧಾನದಿಂದ, ಅಸಮಾಧಾನದಿಂದ, ಕೋಪದಿಂದ, ಪ್ರೀತಿಂದ,
ಅನುಭವಸಿದ ನೋವಿನಿಂದ, ವಿರಹದಿಂದ, ಅವನಿಂದ, ಅವನ ನಗುವಿನಿಂದ, ಏನೋ ತಲೆಯೆಲ್ಲ ಸುತ್ತಿದಂತೆ. 
ಬಿಟ್ಟು ಬಿಡದಾಟ ಮುಂದುವರಿದಿರಲು ಬೆಳಕು ಜಾರಿ ಕತ್ತಲಾಗಿತ್ತು, 
ಅಮಾವಾಸೆಯ ರಾತ್ರಿಯಾದರೂ ಚಂದ್ರನಿಂದು ಅವಳ ಕಂಗಳಲ್ಲಿ ಉದಯಿಸಿದ್ದ,
ಸೂರ್ಯನಲ್ಲದ ಅವಳ ಸೂರ್ಯನ ರಶ್ಮಿಗೆ ತಾವರೆಯಾಗಿ ಅರಳಿದಳು.
ಕತ್ತಲು ಬೆಳಕಾಟ ಸಾಗುತ್ತಲ್ಲೇಯಿತ್ತು,
ಕತ್ತಲು ಕರಗಿ ಮತ್ತೆ ಬೆಳಕರಿದಿತ್ತು,
ಬೆಳಕು ಜಾರಿ ಕತ್ತಲು.
ಸುಡುತ್ತಿದ್ದ ಭಾವೆನೆಗಳಿಗೆಲ್ಲ ಅಲ್ಪವಿರಾಮ ನೀಡುತ ತಣ್ಣೀರು ಎರಚಿತ್ತು.


No comments:

Post a Comment