Saturday, 16 June 2018

ಪಾತ್ರ

ಎಲ್ಲಾರು ಇಲ್ಲಿ ಪಾತ್ರದಾರಿಗಳು. ತಮ್ಮತಮ್ಮ ಪಾತ್ರವ ನಿರ್ವಹಿಸುವವರು.

ದಿನಕೊಂದು ಪಾತ್ರ ನಿಮಿಷಕೊಂದು ಪಾತ್ರ, ಹೌದೇ? ಅಲ್ಲ.
ದಿನಕೊಂದು, ನಿಮಿಷಕೊಂದು ಪಾತ್ರವಾಗಿ ಬದಲಾಗುವುದೇ ಈ ಪಾತ್ರಗಳ ವಿಶೇಷ.

ಒಳಗಿಂದ ಒಂದು ಪಾತ್ರ, ಹೊರಗಿನಿಂದ ಒಂದು. ಹೌದೇ? ಅಲ್ಲ.
ಒಳಗಿಂದ ಒಂದು, ಹೊರಗಿನಿಂದ ಒಂದರಂತೆ ವರ್ತಿಸುವುದೇ ಈ ಪಾತ್ರದ ಕೆಲಸ.

ಒಬ್ಬರಿಗೊಂದು, ಮತ್ತೊಬ್ಬರಿಗೆ ಇನ್ನೊಂದು. ಹೌದೇ? ಅಲ್ಲ.
ಒಬ್ಬರಿಗೊಂದು, ಮತ್ತೊಬ್ಬರಿಗೆ ಇನ್ನೊಂದಾಗಿ ಕಾಣಿಸಿಕೊಳ್ಳುವುದೇ ಪಾತ್ರಗಳ ಪಾತ್ರ.

ಎಲ್ಲರೂ ಪಾತ್ರದಾರಿಗಳೇ, ಎಲ್ಲವೂ ಒಂದು ಪಾತ್ರವೇ.
ನಮ್ಮ ನಮ್ಮ ಪಾತ್ರಗ ನಿರ್ವಸಿವುದು ನಮ್ಮ ಪಾತ್ರ.
ಹೌದು,
ನಾನು ಕೆಲವೊಮ್ಮೆ ಸುಳ್ಳಿ.
ಹೌದು,
ನಾನು ಕೆಲವರಿಗೆ ಮೋಸಗಾತಿ,
ಹೌದು,
ನಾನು ಕೊಬ್ಬಿನಾ ಹುಡುಗಿ.
ಹೌದು,
ನಾನು  ತಿಂಡಿ ಪೋತಿ,
ನಾನು ಕೋತಿ,
ನನಗೆ ಮನಸೇಂಬುದೇ ಇಲ್ಲಾ,
ನಾನು ಸೋಂಭೇರಿ,
ನಾನು ಕೊಳಕು,
ನಾನು ಕೆಟ್ಟವಳು,
ಭೂತ.
ಹೌದು,
ನಾನು ನನ್ನಪ್ಪನಿಗ ಮಗಳು,
ನಾನೊಬ್ಬಳು ನನ್ನಮ್ಮನ ಮುದ್ದುಮರಿ,
ಇನ್ನು ಕೆಲವರಿಗೆ ನಾನು,
ತಂಗಿ,
ಸೊಸೆ,
ಅತ್ತಿಗೆ,
ವಿದ್ಯಾರ್ಥಿ,
ಶಿಕ್ಷಕಿ,
ಸ್ನೇಹಿತೆ,
ಸುಂದರಿ,
ಒಳ್ಳೆಯವಳು,
ದೇವತೆ.
ಸಾವಿರಾರು ಬಣ್ಣಗಳೊಳಗೊಂಡ ಪಾತ್ರ ನನ್ನದು, ನಮ್ಮೆಲ್ಲರದು.
ಹೌದು,
ನಾನು ನಾನೇ.
ಏನೇಯಾದರು, ಹೇಗೆಯಿದ್ದರೂ ಅದು ನಾನು.
ಅದು ನನ್ನ ಪಾತ್ರ.
ಬೇರೆ ಪಾತ್ರ ಹಾಗಿದೆ ಹೀಗಿದೆ ಎಂದು ಕೆಲವೊಮ್ಮೆ ಹೇಳುವುದು ನನ್ನ ಪಾತ್ರ.
ಇನ್ನು ಕೆಲವೊಮ್ಮೆ ಯಾವುದೇ ಪಾತ್ರವನ್ನಾಗಲಿ ಅಳೆಯುವುದು ತಪ್ಪೆಂದು ಹೇಳುವುದು ನನ್ನ ಪಾತ್ರವೇ.
ನಾನೊಂದು ಪಾತ್ರ.

No comments:

Post a Comment