Thursday 31 August 2017

A tale of two best friends. (Chap. 2)

ಮಚ್ಚಾ, ಮಚಿ.

ಯೋ ಯೋ ಸಪ್ ?- ಮಚಿ
(whatsapp msg sent. double tic, blue tic.)
ನಥಿಂಗ್ ಲೇ. ಮನೆ ಇಂದ ಹೊರಗೆ ಬಾ.- ಮಚ್ಚ
(whatsapp msg sent. double tic, blue tic.)

[a cup of tea, and a puffs (forgetting all stuffs). a small walk and lots of talk.]

ಮಚಿ ನೆನ್ನೆ ನೀನು ಕಿರ್ಚಾಡ್ತಿದ್ದೆ ಅಲ್ವ.  -ಅವನು
ಒಹ್ ಕರೆಕ್ಟ್ ಅಲ್ವ. -ಅವಳು
ಹೇಯ್ ಈ ಪಿಕ್ ಹೇಗಿದೆ? - ಅವನು
ಲೋ ಸಕ್ಕತು. ಆದ್ರೆ ಸ್ವಲ್ಪ ರೈಟ್ ಇಂದ ಕ್ಲಿಕ್ ಮಾಡ್ಬೇಕಿತ್ತು. -ಅವಳು
ಗೇಮ್ ಆಪ್ ತೋರ್ನ್ಸ್ ಮುಗೀತೇ. - ಅವನು
ಶೇ ಪಾಪಾ. - ಅವಳು.
ಹೇಯ್ ಇದುನ್ನ ನೋಡು. (ಯೌಟ್ಯೂಬ್ ಅಲ್ಲಿ ವಿಡಿಯೋ ಪ್ಲೇ)- ಅವನು
ಸೂಪರ್ ಕಣೋ. ನಾನು ಮಾಡನ. -ಅವಳು.
......
......
...............
........
..
..................................
....
..... ಅವನು.
...... ಅವಳು.

ಅದ್ಸರಿ ನೆನ್ನೆ ಜಗಳ ಅಡಿದ್ದೋ ಅಲ್ವ. - ಅವಳು.
ಹೌದ ಮಚಿ , ನೆನಪಾಗ್ತಾ ಇಲ್ಲ. - ಅವನು.
ನೀನು ಕಿರ್ಚಾಡ್ಡಿದು ಮಾತ್ರ ನೆನ್ಪಾಗ್ತಿದೆ. ಆ ಕರ್ಕಶ ಧ್ವನಿ ಹೇಗೆ ಮರಿಯದು ಅಲ್ವ. - ಅವನು.

ಛಟೀರ್ (ಬೆನ್ನ ಮೇಲೆ ಜೋರಾದ ಪೆಟ್ಟು.)

ನಿನ್ನ ಕಯ್ಯೇ ನೋವಾಗೋದು- ಅವನು.

ಒಂದಷ್ಟು ನಗು, ರಾಶಿ ಖುಷಿ.






Wednesday 30 August 2017

A tale of two best friends. (Chap 1)

ಅವನು, ಅವಳು.

ಪಲ್ಲವಿ:

ಅವಳು: ತುಂಬಾ ಮೂಡಿ,ನಕ್ಚಡಿ, ಕುಪೋಷ್ಠಿತ ಮಗುವಂತೆ ಆಡುತ್ತಲೇ. ಎಮೋಷನಲ್, ಸ್ವಲ್ಪ ಹೆಚ್ಚೇ ಸೆನ್ಸಿಟಿವ್ & ಸ್ನೇಹಿತರ ವಿಷಯದಲ್ಲಿ ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಇರ್ರೆಸ್ಪೋನ್ಸಿಬಲ್.  ಅವಳು ಸ್ನೇಹಿತರನ್ನು ಮಾಡಿಕೊಳ್ಳುವುದೇ ಕಡಿಮೆ. ಹೀಗಾಗಿ ಆಕೆಗೆ ಕೇವಲ ಬೆರಳೆಣಿಕೆಯಷ್ಟು ಸ್ನೇಹಿತರು. ಹೈಲಿ ಪೊಸೆಸಿವೆ ಅಬೌಟ್ ಹರ್ ಫ್ರೆಂಡ್ಸ್. ಇವಳ ಕೆಟ್ಟ ಹವ್ಯಾಸವೆಂದರೆ, ತಾನು ಹೇಳದೆಯೇ ತನ್ನ ಸ್ನೇಹಿತರು ಅವಳ ಮನದಾಸೆಯನ್ನು ಅರಿಯಬೇಕೆಂದು!! ಹೀಗಾಗಿ ಶಿ ಈಸ್ ವೆರಿ ಬ್ಯಾಡ ಇನ್ ಹಂಡೆಲ್ಲಿಂಗ್ ರಿಲೇಷನ್ಶಿಪ್ಸ್.

ಅವನು: ಬಹಳ ತುಂಟ. ಸಂಘ ಜೀವಿ. ಎಮೋಷನಲಿ ತುಂಭ ಸ್ಟ್ರಾಂಗ್. ತನಗೆ ತಾನು ನೋವಾಗಲು ಬಿಡುವುದಿಲ್ಲ, ಅಕಸ್ಮಾತ್ ನೋವಾದರೆ ಅದರಿಂದ ಬೇಗ ಹೊರ ಬರುವ. ಹಾಗೆ ಸ್ನೇಹಿತರ ವಿಷಯ ಬಂದರೆ ಹೈಲಿ ರೆಸ್ಪೋನ್ಸಿಬಲ್. ಲಿಟಲ್ ಪೊಸೆಸಿವೆ ಕೂಡ ಹೌದು. ಇಷ್ಟಪಟ್ಟ ವ್ಯಕ್ತಿ ಸರಿಯಾಗಿ ಉತ್ತರಿಸದಿದ್ದರೆ ಕೋಪಿಷ್ಠನಾಗಿ ಬಿಡುವ. ಕೋಪಕ್ಕೆ ಕಾರಣ ಪ್ರೀತಿ, ವಿಶ್ವಾಸ. ಸ್ವಲ್ಪ ಹೊಟ್ಟೆ ಉರಿ ಆದ್ರೂ, ಅವನು ತನ್ನ ಸ್ನೇಹಿತರ ಒಳ್ಳೆಯ ಬೆಳವಣಿಗೆ (ಅಭಿವೃದ್ಧಿ )ಯನ್ನು ಯಾವಾಗಲು ಬಯಸುತ್ತಾನೆ. ಖುಷಿ ಪಡುತ್ತಾನೆ. ಧಟ್ಸ್ ದಿ ಬೆಸ್ಟ್ ಪಾರ್ಟ್ ಆಪ್ ಹಿಮ್.

ಹೇಳುತ್ತಾ ಹೋದರೆ ಬಹಳಷ್ಟಿವೆ. ಆದರೆ ಇವರಿಬ್ಬರ ಬಗ್ಗೆ ಈ ಸಣ್ಣದೊಂದು ಪರಿಚಯ ಸಾಕು.

ಅನುಪಲ್ಲವಿ:

ಅವಳು: ಜೀವನದ ಅತ್ಯಂತ ಸೂಕ್ಷ್ಮ ಹಾಗು ನಿರ್ಣಾಯಕ ಹಂತದಲ್ಲಿದ್ದಾಳೆ. ಮನೆಯಲ್ಲಿ ತಂದೆ ತಾಯಿಗೆ ಆರೋಗ್ಯ ಸರಿಯಿಲ್ಲ. ಅವಳ ತಾಯಿಗೆ ಒಂದೇ ಚಿಂತೆ. ಮಗಳನ್ನು ದಡ ತಲುಪಿಸಬೇಕೆಂದು. ಹೇಗೋ ಒಂದಷ್ಟು ದಿನ ನಾನು ನೀನು ಕಷ್ಟಪ್ಪಟ್ಟ ಪರಿಣಾಮವಾಗಿ ಅಣ್ಣನಿಗೆ ಮದುವೆ ಆಯ್ತು. ನೀನು ಬೇಗ ಮದುವೆ ಮಾಡಿಕೊ ಮಗಳೇ ಅಂತ ದಿನನಕ್ಕೆ ೨ ಬಾರಿ ಯಾದರು ಹೇಳುತ್ತಲೇ ಇರುತ್ತಾರೆ. ಇನ್ನು ಅವಳ ತಂದೆ! ಅವರು ಬೈರಾಗಿ. ಅವರು ಅವಳಿಗೆ ತಮ್ಮ ಜೀವನದಲ್ಲಿ ಕಂಡು ಅನುಭವಿಸಿದ, ಓದಿ ತಿಳುದುಕೊಂಡ ಅನುಭವಗಳ್ಳನು ಅವಳಿಗೆ ಹೇಳುತ್ತಾ ಬೆಳಿಸಿದ್ದಾರೆ. ತಂದೆ ತಾಯಿ ಇಬ್ಬರದ್ದು ಬೇರೆ ಬೇರೆ ಯೋಚನೆಗಳು. ಒಬ್ಬರು ಆಧ್ಯಾತ್ಮ ಯೆಂದರೆ, ಮತ್ತೊಬ್ಬರು ಜೀವಾತ್ಮ ಎನ್ನುತ್ತಾರೆ. ಒಬ್ಬರು ಬಂಧು ಬಾಂಧವರು ಅಂದರೆ ಮತ್ತೊಬ್ಬರು ಬಂಧ ಮುಕ್ತಳಾಗು ಅಂತಾರೆ. ಇವರಿಬ್ಬರ ಯೋಚನೆಗಳು ಮಿಳಿತಗೊಂಡು, ಅವಳ ಎಡಬಿಡಂಗಿ ತನಕ್ಕೆ ಕಾರಣವಾಗಿದೆ . ಈಗಷ್ಟೇ ಇದರಿಂದ ಚೇತರಿಸಿಕೊಂಡು ಬೆಳಕಿನೆಡೆಗೆ, ತನಗೆ ಸರಿ ಎನಿಸಿದಕಡೆಗೆ ಸಾಗುವ ಪ್ರಯತ್ನದಲ್ಲಿದ್ದಾಳೆ. ಇದರ ಮದ್ಯೆ ಉಗುಳಗದ ತುಪ್ಪವಾಗಿ ಅವಳ ಓದು ನಡೆಯುತ್ತಿದೆ.

ಅವನು: ಅವಳು ಅನುಭವಿಸಿದ ಘಡಿ ಧಾಟಿ, ದಡ ತಲುಪಿಯಾಗಿದೆ. ಜೀವನದಲ್ಲಿ ತುಂಭಾ ಅನುಭವವಿಲ್ಲದಿದ್ದರು, ಅವಳಿಗಿಂತ ವಾಸಿ.

ಇವರಿಬ್ಬರು ಸ್ನೇಹಿತರಾದಾಗ?!!!

ಚರಣ:

ಇಬ್ಬರಿಗೂ ತಾಳ್ಮೆ ಸ್ವಲ್ಪಕಮ್ಮಿ. ಮುಗೀನ ತುದಿಯಲ್ಲಿ ಕೋಪ.
ಒಬ್ಬರಮೇಲೊಬ್ಬರಿಗೆ ಅಭಿಮಾನ, ಪ್ರೀತಿ.
ಇದಕ್ಕೆ ಬುನಾದಿ ನಂಭಿಕೆ ಹಾಗು ವಿಶ್ವಾಸ.
ಇಂದು ಆ ನಂಭಿಕೆಯ ತಳಪಾಯ ಅಲುಗಿದೆ. ಮುರಿದು ಬಿದ್ದಿಲ್ಲ. ಬೀಳುವುದು ಇಲ್ಲ. ಆದರೆ ದೇರ್ ಇಸ್ ಆನ್ ಅಕ್ವಾರ್ಡ್ ಸೈಲೆನ್ಸ್ ಇನ್ ಬಿಟ್ವೀನ್ ದೆಮ್. ಮೊದಲಿನಂತೆಯೇ ಎಲ್ಲಾ ಸರಿ ಹೋಗುವುದೇ?? ನಂಭಿಕೆ ಇನ್ನು ಕುಂದಿಲ್ಲ. ಇಬ್ಬರಿಗೂ ತಿಳುವಳಿಕೆ ಇದೆ. ವಿವೇಕವುಳ್ಳವರು.
ಎಂದಿಗೂ ಮೂಡಬಾರದಿದ್ದ ಅಂತರವೊಂದು ಮೂಡಿದೆ. ತುಂಬವ ಪ್ರಯತ್ನ ಭರದಿಂದ ಸಾಗಿದೆ.
ಕಾಲವೆಂಬಾ ಕಾಲನ ಮುಂದೆ ಎಲ್ಲವೂ ನಶ್ವರ.
ಈ ನಶ್ವರದ ಬಾಳಲ್ಲಿ ಶಾಶ್ವವಾತ ಈ ಸ್ನೇಹ.

ಹಿತೋಕ್ತಿ:
ಜೀವನದಲ್ಲಿ ಯಲ್ಲರಿಗೂ ತಮ್ಮದೇಯಾದ ಮಿತಿಗಳು, ತೊಂದರೆಗಳು ಇದ್ದೆ ಇರುತ್ತದೆ. ಅದನ್ನೆಲ್ಲ ಮೀರಿ ಆದಷ್ಟು ಸರಳವಾಗಿ, ಒಳ್ಳೆಯರೀತಿಯಲ್ಲಿ ಬದುಕಬೇಕು. ಮಾನವೀಯತೆಯೇ ನಮ್ಮನ್ನು ಮಾನವರನ್ನಾಗಿಸುವುದು.
ಸ್ನೇಹ: ಬಂದನವಿಲ್ಲದ ಬಂಧವಿದು. ಉಗುರು ಬೆರಳಿನ ಸಂಭಂದ. ಅತಿಯಾಗಿ ಕತ್ತರಿಸಿದರು ನೋವು. ಅತಿಯಾಗಿ ಉದ್ದ ಬೆಳಸಿದರು ತೊಂದರೆ. Handel with care ಎಂಬ ಟ್ಯಾಗ್ ಲೈನ್ ನೊಂದಿಗೆ ಏಲ್ಲೆಡ್ದೆ ಚಲಿಸುತ್ತದೆ. So handel with it carefully. ಹಾಗಂತ Dont be a Slave of  relationship, be a Saviour, be D King. Cherish the treasure.

Saturday 26 August 2017

೬೦ ಗಂಟೆಗಳು

ಜೀವನದಲ್ಲಿ ದೊಡ್ಡ ದೊಡ್ಡ, ಹಾಗು ಮುಖ್ಯವಾದ ಸಂದರ್ಭಗಳು ಬರುತ್ತದೆ. ಅದರನ್ನು ಎಲ್ಲ ನೆನೆಯುತ್ತಾರೆ.
ಯಾರು ಅಷ್ಟಾಗಿ ಜೀವನದ ಸಣ್ಣ ಸಣ್ಣ ತುಣುಕನ್ನು ಮೆಲುಕುಹಾಕುವವರಿಲ್ಲ.
ಥ್ಯಾಂಕ್ಸ್ ಟು ಡೈಸ್ ಪ್ರೋಡ್ಯೂಕ್ಷನ್ಸ್. ನನ್ನ ಹಾಗೆ ಯೋಚಿಸುವವರು ಯಾರೋ ಇದ್ದಾರೆಂಭ ಖುಷಿಕೊಟ್ಟಿದ್ದಕ್ಕಾಗಿ.

ಕೆಲವೊಮ್ಮೆ ನಮ್ಮ ಮಹತ್ವದ ಅರಿವು ಯಾರಿಗೂ ಇರುವುದಿಲ್ಲ. ನಮಗೂ ಕೂಡ.
ಕೆಲವೊಮ್ಮೆ ಸ್ವಾಸ್ತ್ಯ ಜೀವನಕ್ಕೆ ಅಪ್ಪ್ರಿಶಿಯೇಷನ್ ಮುಖ್ಯವಾಗುತ್ತದ್ದೆ. ಅಪ್ಪ್ರಿಶಿಯೇಟ್ ಮಾಡುವವರಿಲ್ಲದಿರುವಾಗ ಸೆಲ್ಫ್ ಅಪ್ಪ್ರಿಶಿಯೇಷನ್ ಮಾಡ್ಕೊಳಿ, ಮಜಾ ಮಾಡಿ, ಆರೋಗ್ಯವಾಗಿರಿ. ಲವ್ ಯುವರ್ಸೆಲ್ಫ್.

ನನ್ನ ಕಳೆದ ೬೦ ಗಂಟೆಗಳ ಜೀವನ ಚಿತ್ರವನ್ನು ಇಲ್ಲಿ ಚಿತ್ರಿಸುವ ಸಣ್ಣ ಪ್ರಯತ್ನದಲ್ಲಿ...
ಯಾವುದೊ ಅಡ್ವೆಂಚರ್ ಸ್ಟೋರಿ ಅಲ್ಲ. ಆದರೆ ತುಂಬಾ ಬಣ್ಣಗಳ್ಳನು ಒಳಗೊಂಡ ನನ್ನ ದಿನನಿತ್ಯ ಜೀವನದ ತುಣುಕು.
 

೨೩-೮-೧೭ (ರಾತ್ರಿ)
ಸ್ವಲ್ಪ ಜ್ವರ. ಸ್ವಲ್ಪ ಅಲ್ವ ಯಾರಿಗು ಹೇಳ್ಲಿಲ್ಲ.
ಅಮ್ಮಂಗೆ ಹುಷಾರಿಲ್ಲ ಅಂತ ಬೇರೆ ತಲೆಬಿಸಿ. ನಿದ್ದೆನು ಸರಿಯಾಗಿ ಬರ್ಲಿಲ್ಲ.

೨೪-೮-೧೭ (ಗೌರಿ ಹಬ್ಬ)
ಅಮ್ಮನಿಲ್ಲದೆ ಮನೆ ಬಿಕೋ ಅಂತಿತ್ತು. ಎಲ್ಲರೂ ಇದ್ರು ಕಾಲಿ ಕಾಲಿ ಅನ್ಸೋ ಮನೆ ಮನ. ಮನೆಯವರನ್ನೆಲ್ಲ ಒಂದಾಗಿಸಿ ಇಡುವ ಕೊಂಡಿ ಅಂದ್ರೆ ಅಮ್ಮ.
ಅಮ್ಮ ಬೆಳಗ್ಗಿನ ೯.೦೦ ರ ಬಸ್ಸಿಗೆ ಪುತ್ತೂರು ಬಿಟ್ಟು ಸಂಜೆ ೫.೩೦ ತಕ್ಕೆ ಬೆಂಗಳೂರು ತಲುಪೂವರಿದ್ದರು.
ಅಮ್ಮನ ಕರೆತರಲು ನಾನು ಮೆಜೆಸ್ಟಿಕ್ ಬಸ್ಸು ನಿಲ್ದಾಣಕ್ಕೆ ಹೋಗಬೇಕಿತ್ತು.

ಸಂಜೆ ೪.೩೦
ನಿದ್ದೆಯಿಂದಯೆದ್ದು ಅಮ್ಮನ ಕರೆತರಲು ಹೊರಟೆ. ಜ್ವರದ ಅಮಲು, ನಿದ್ದೆ ಬೇರೆ ಸರಿಯಾಗಿರಲ್ಲಿಲ್ಲ. ಜೊತೆಯಲ್ಲಿ ಇಡೀ ದಿನ ಮೊಬೈಲ್ ಗುರುಟ್ಟಿದ್ದೆ. ಕಣ್ಣುಗಳು ಸುಸ್ತಾಗಿದ್ದವು. (ಕಳೆದ ೨ ವಾರಗಳಿಂದ ಮೊಬೈಲ್ ಸಹವಾಸ ಹೆಚ್ಚಾಗಿದೆ)
ಓಲಾ, ಊಬರ್ ಯಾವ್ದ್ರಲ್ಲೂ ಕ್ಯಾಬ್ಸ್ ಇಲ್ಲ.
(ಅಯ್ಯೋ ದೇವ್ರೇ!!! ಲೇಟ್ ಆಯ್ತು).
ಫೈನ್ನ್ಲಲಿ ಕ್ಯಾಬ್ ಸಿಕ್ತು.
೫.೧೫ ದಕ್ಕೆ ಮನೆ ಬಿಟ್ಟೆ. ೬.೩೫ ಕ್ಕೆ ಇಂದಿರಾನಗರ ಮೆಟ್ರೋ ಸ್ಟೇಷನ್ ತಲುಪಿದೆ!!!! ೧.೩೦ ಘಂಟೆ !!
(ದೇವ್ರೇ. ನಮ್ಮ ಬೆಂಗಳೂರ ಕಥೆ ಯಾರಿಗೆ ಅಂತ ಹೇಳೋದು. ಅಮ್ಮ ಮೆಜೆಸ್ಟಿಕ್ ತಲುಪಿದ್ದಾರೆ ಸುಮ್ನೆ ಪ್ಯಾನಿಕ್ ಆಗ್ತಾರಲ್ಲ. )
ಅಮ್ಮನಿಗೆ ಕರೆ ಮಾಡಿದೆ. ಅವರ ಬಸ್ಸು ಸಹ ಲೇಟ್. ಖುಷಿ ಆಯ್ತು.
ಮೆಟ್ರೋ ಸ್ಟೇಷನ್ ಒಳ ಬಂದರೆ ಮತ್ತೊಂದು ನರಕ ಪ್ರದರ್ಶನ ನನಗಾಗಿ ಕಾದಿತ್ತು. ನಮ್ಮ ಪುತ್ತೂರು ಜಾತ್ರೆಯಲ್ಲೂ ಇಷ್ಟು ಜನ ಸೇರಲ್ವೇನೋ.. ಅಷ್ಟೊಂದು ಜನಸಾಗರ. ಚೆಕ್ ಇನ್ ಆಗುವಷ್ಟರಲ್ಲಿ ಸಾಕು ಸಾಕಾಗಿತ್ತು. ರೈಲು ಫುಲ್ಲಿ ಪ್ಯಾಕ್ಡ್. ಉಸಿರಾಡಲು ಜಾಗವಿರಲಿಲ್ಲ. ಪಕ್ಕದಲ್ಲೇ ಅಂಟಿ ನಿಂತಿದ್ದ ಅಜ್ಜನೊಬ್ಬ ನಾನೊಂದಿ ಕಥೆ ಬೇರೆ ಕುಯ್ಯುತಿದ್ದರು. ಆದರೆ ನನ್ನ ತಲೆ ಪೂರಾ ಅಮ್ಮನ ಕಡೆಯೇ ಇದ್ದಕಾರಣ ಹೂ ಹಾನ್ ಬಿಟ್ಟು ಬೇರೇನೂ ಮಾತನಾಡಲಿಲ್ಲ.
ಅಂತೂ ಇಂತೂ ಮೆಜೆಸ್ಟಿಕ್ ಬಂತು. ಅಮ್ಮ ಕೂಡ ಮೆಟ್ರೋ ಸ್ಟೇಷನ್ ಬಳಿಯೇ ನಿಂತಿದ್ದರು.
ಬಹಳ ಹಸಿವಾಗಿದೆ ಅಂದ್ರು. ಹೊಟೇಲ್ ಹೋದ್ರೆ ಪಕ್ಕ ಲೇಟ್ ಆಗುತ್ತೆ ಅಮ್ಮಾ. ಮನೆ ತಲುಪಲು ಕಷ್ಟ ಇದೆ ಇಂದು ಅಂದೇ. ಪಕ್ಕದಲ್ಲೇ ಇದ್ದ ಫ್ರೂಟ್ ಬೌಲ್ ಖರೀದಿಸಿ ಕೊಟ್ಟು ಕ್ಯಾಬ್ ಬುಕ್ ಮಾಡಿದೆ. ಮಧ್ಯಾಹ್ನ ಊಟ ಸರಿ ಸೇರದ ಕಾರಣ ನನಗು ಹಸಿವಾಗಿತ್ತು. ಆದರೆ ಹಣ್ಣುತಿನ್ನುವ ಮನಸಿರಲಿಲ್ಲ. ಕ್ಯಾಬ್ ಬರಲು ಹೇಗೂ ೧೦ನಿಮಿಷ ಸಮಯವಿದ್ದ ಕಾರಣ, ಅಮ್ಮನನ್ನು ಅಲ್ಲಿಯೇ ನಿಲ್ಲಿಸಿ, ಅಲ್ಲೇ ಸ್ವಲ್ಪ ದೂರದಲ್ಲಿದೆ ಮಾರುತ್ತಿದ್ದ ಕಡ್ಲೆ ಕಾಯಿಯನ್ನು ತಂದೆ.

ಕ್ಯಾಬ್ ಹತ್ತಲ್ಲೂ ಮತ್ತೊಂದು ಸಾಹಸ. ಟ್ರಾಫಿಕ್ ಹೆಚ್ಚಿದ್ದ ಕಾರಣ, ಕ್ಯಾಬ್ ಡ್ರೈವರ್ ನಮ್ಮನ್ನೇ ರಸ್ತೆ ಧಾಟಿ ಬರುವಂತೆ ಸೂಚಿಸಿದರು. ರಾತ್ರಿಯ ಕತ್ತಲ್ಲನ್ನು ಓಡಿಸುವ ವಾಹನಗಳ ಬೆಳಕು. ದೊಡ್ಡದ ರಸ್ತೆ. ಹುಷಾರಿಲ್ಲದ ಅಮ್ಮ. ಎರೆಡು ಬ್ಯಾಗ್ಸ್. ಹೆವಿ ಟ್ರಾಫಿಕ್, ಜೊತೆಯಲ್ಲಿ ಪಿರಿ ಪಿರಿ ಮಳೆ. ರಸ್ತೆ ದಾಟುವುದು ಒಂದು ಸಹವೇ ಸರಿ. ಕ್ಯಾಬ್ ಹತ್ತುವವರೆಗೂ ಅಮ್ಮನಿಗೆ ತಳಮಳ. ಇನ್ನು ಯಾಕೆ ಕರೆ ಮಾಡಿಲ್ಲವೆಂಭ ಚಿಂತೆ ಮನೆಯಲ್ಲಿದ್ದ ಅಪ್ಪನಿಗೆ. ಕರೆಯ ಮೇಲೆ ಕರೆ ಬರುತ್ತಲ್ಲೇ ಇತ್ತು. ಕರೆ ಸ್ವೀಕರಿಸುವ ಸ್ಥಿತಿಯಲ್ಲಿ ನಾವಿಲ್ಲ. ಇಷ್ಟೆಲ್ಲಾ ತೊಂದರೆಗಳನ್ನು ಧಾಟಿ ಕಾರ್ ಹತ್ತಿ ಕುಳಿತೆವು. ಅಮ್ಮನೊಂದಿಗೆ ನಿಲ್ಲದ ಮಾತುಕಥೆ ಶುರುವಾಯ್ತು. ಇಟ್ಸ್ ಮಮ್ಮಿ ಡಾಟರ್ ಟೈಮ್. ಜೊತೆಯಲ್ಲಿ ಅಪ್ಪನಿಗೊಂದು ಕರೆ. ಗೆಳಯನಿಗೊಂದು ಸಂದೇಶ. ಸಮಯ ಹೋದದ್ದೇ ತಿಳಿಯಲ್ಲಿಲ. ದಿನದ ಬಚ್ಚಲ್ಲೆಲ್ಲ ಕಳೆದು ಹೋಗಿ ನೆಮ್ಮದಿ ಅನಿಸಿತ್ತು. ಅಂತೂ ಇಂತೂ ಮನೆ ತಲುಪಿದೆವು.
ಮತ್ತೊಂದಷ್ಟು ಮನೆ ಮಂದಿಯೊಂದಿಗೆ ಹರಟೆ. ಊಟ, ಮನೆಕೆಲಸ, ನಿದ್ದೆ.
(ಇಂದು ಮತ್ತೆ ತಡವಾಗಿ ಮಲಗಿದೆ).

೨೫-೮-೧೭
ನಿನ್ನೆ ಮದ್ಯಾಹ್ನ (೨೪-೮-೧೭, ಸರಿ ಸುಮಾರು ೧೨.೦೦ ಗಂಟೆ) ಮುರಳಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ (IISc) ಬಯೋಲಾಜಿಕಲ್ಲ್ಲಿ ಸೈನ್ಸ್ ಡಿಪಾರ್ಟ್ಮೆಂಟ್ ನಲ್ಲಿ ಲ್ಯಾಬ್ ಟೆಕ್ನಿಶಾನ್ ಆಗಿ ಕಾರ್ಯ ನಿರ್ವಹಿಸುವವರು, ಹಾಗು ನನ್ನ ಸ್ನೇಹತ.) ಕರೆ ಮಾಡಿ ಲ್ಯಾಬ್ ಗೆ ಬರುವಂತೆ ಸೂಚಿಸಿದರು. ಆದರೆ ನಾನು ಮನೇಲಿದ್ದ ಕಾರಣ, ಅಮ್ಮನನ್ನು ಪಿಕ್ ಮಾಡಬೇಕಿದ್ದ ಕಾರಣ, ಇಂದು ಸಾಧ್ಯವಿಲ್ಲ, ನಾಳೆ ಬರುವೆ ಅಂದಿದ್ದೆ. ನನಗಾಗಿ ಅವರು ಗಣೇಶಾ ಚತುರ್ಥಿ ಇದ್ದರು ಕೆಲಸ ಮಾಡಲು ಒಪ್ಪಿದ್ದರು.

ಬೆಳ್ಳಿಗೆ ೬ ಗಂಟೆ ಯೆದ್ದು ಮನೆಯಿಂದ ಹೊರಟೆ. ಬೆಂಗಳೂರು ವಿಶ್ವವಿದ್ಯಾನಿಲಯ ತಲುಪಲು ಮೂರರಿಂದ ಐದು ಬಸ್ಸು ಬದಲಾಯಿಸ ಬೇಕು. ೮.೩೦ ಕ್ಕೆ ಡೆಪಾರ್ಮೆಂಟ್ತಲುಪಿದೆ. ಯಾರು ಇಲ್ಲದ ಕಾರಣ ಗೇಟ್ಅನ್ನು ನಾನೇ ತೆರೆಯಬೇಕಾಯ್ತು. ನನ್ನ ಲ್ಯಾಬ್ ನಿಂದ ಸ್ಯಾಂಪಲ್ ಸಂಗ್ರಹಿಸಿ, ಹೊರಡುವಷ್ಟರಲ್ಲಿ, ಡಿಪಾರ್ಟ್ಮೆಂಟ್ ಗೇಟ್ ತೆರದಿದ್ದ ಕಾರಣದಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಒಳ ಬಂದುಬಿಟ್ಟಿದ್ದರು.
ಜನ ಮರುಳೋ ಜಾತ್ರೆ ಮರುಳೋ ಅಂತ ನಮ್ಮಪ್ಪ ಯಾವಾಗ್ಲೂ ಹೇಳ್ತಾರೆ. ನಮ್ಮ ಯೂನಿವರ್ಸಿಟಿ ಒಳಗೆ ಬಹಳ ಹಾವಿನ ಹುತ್ತಗಳಿದ್ದು, ಯಾವುದೇ ಹಬ್ಬಗಳು ಬರಲಿ, ದೂರ ದೂರದಿಂದ ಜನರು ಬಂದು ಹುತ್ತಕ್ಕೆ ಪೂಜೆ ಮಾಡುತ್ತಾರೆ. ಇಂದು ಸಹ ಅದರಿಂದ ಹೊರತೇನಲ್ಲ. ಆದರೆ ಇಂದು ಸ್ವಲ್ಪ ಹೆಚ್ಚೇ ಡಿಮಾಂಡ್ಸ್ ಹುತ್ತಗಳಿಗೆ. ಕ್ಯೂ ಸಿಸ್ಟಮ್ ಅಲ್ಲಿ ಜನರ ಪೂಜೆ ಸಾಗಿತ್ತು.  ಈ ಇಬ್ಬರು ಅಪರಿಚಿತ ವ್ಯಕ್ತಿಗಳು ಪೂಜೆಗಾಗಿಯೇ ಬಂದವರು. ಅವರಲ್ಲಿ ಒಬ್ಬರು ಕುಡಿಯುವ ನೀರಿಗಾಗಿ ಬಂದಿದಾರರು. ಮತ್ತೊಬ್ಬರು ಹೇಳದೆ ಕೇಳದೆ ಮಹಡಿಯನ್ನು ಹತ್ತಿ ಹೋಗಿದ್ದರು. ನೀರು ಕೇಳಿದವರಿಗೆ ನೀರು ಕೊಟ್ಟು ಕಳಿಸುವಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ಎಲ್ಲು ಕಾಣಿಸಲಿಲ್ಲ. ಜೋರು ಜೋರು ಏರಿದ ಧ್ವನಿಯಲ್ಲಿ ಅವರನ್ನು ಕರೆಯುತ್ತ ಅಲೆದು. ಯಾವ ಪ್ರತಿಕ್ರಿಯೆ ಬರಲಿಲ್ಲ. ದೂರದಿಂದಲೇ ಮಹಡಿಯನ್ನು ಹುಡುಕಿದ್ದೆ. ಎಲ್ಲೂ ಕಾಣಿಸಲಿಲ್ಲ. ಡಿಪಾರ್ಟ್ಮೆಂಟ್ ಅಲ್ಲಿ ನನ್ನ ಬಿಟ್ಟು ಬೇರೆ ಯಾರಿಲ್ಲ. ಒಬ್ಬಳೇ ಮಹಡಿ ಹತ್ತುವುದು ಬೇಡವೆಂದು, ಕಾರ್ತಿಕ್ ಗೆ ಕರೆಮಾಡುವ ಅಂದುಕೊಂಡೆ. ಆದರೆ ಅವನು ಯಾವಕೆಲಸದಲ್ಲಿ ಬ್ಯುಸಿ ಇರುವನೋ ಅಂತ ಸುಮ್ಮನಾದೆ. ಎಲ್ಲಿಲ್ಲದ ಪಿತ್ತ ಕೆದರಿತ್ತು. ಗೇಟಿಗೆ ಬೀಗ ಜಡಿದು ಅಲ್ಲಿಂದ ಹೊರಟೆ. ಆದರೆ ಮನಸು ತಡೆಯದೆ ಮತ್ತೆ ಗೇಟ್ ತೆಗೆದು ಒಳ ಬಂದು ಮಹಡಿ ಹತ್ತಿ ಅವರನ್ನು ಹುಡುಕಲಾರಂಭಿಸಿದೆ. ಎಲ್ಲಿಯೂ ಕಾಣಲಿಲ್ಲ. ಹಿಂತಿರುಗಿ ಬರುವಷ್ಟರಲ್ಲಿ ಅವರು ಕಂಡರೂ. ಅವರನ್ನು ಪ್ರಶ್ನಿಸಿದ ಬಳಿಕ ತಿಳಿಯಿತು, ಗಣಪತಿ ಪೂಜೆಗಾಗಿ ಮಾವಿನ ಸೊಪ್ಪು ಹುಡುಕಿ ಬಂದಿದ್ದರೆಂದು. ಹೀಗೆಲ್ಲ ಬರುವ ಹಾಗಿಲ್ಲ ಅಂತ ಹೇಳಿ ಕಳುಹಿಸಿದೆ. (ಏನಕ್ಕೂ ಇರಲಿ ಎಂದು ನನ್ನ ಮತ್ತೊಬ್ಬ ಸ್ನೇಹಿತನಿಗೆ ಕರೆ ಮಾಡಿ ಕೈಯ್ಯಲ್ಲಿ ಮೊಬೈಲ್ ಹಿಡಿದು ಕೊಂಡಿದ್ದೆ.)

ಇಷ್ಟಕ್ಕೆ ಮುಗಿಯಲಿಲ್ಲ. ಡೆಪಾರ್ಮೆಂಟ್ ಗೇಟ್ ಜಾಮ್ ಆಗಿ, ಎಷ್ಟೇ ಎಳೆಯಲು ಪ್ರಯತ್ನಿಸಿದರು ಆಗುತ್ತಿರಲಿಲ್ಲ. ಒಂದಷ್ಟು ಹೊತ್ತುಗಳ ಸಾಹಸದ ನಂತರ ಹೇಗೋ ಗೇಟ್ ಲಾಕ್ ಮಾಡಿದೆ.

ಇಂದು ಹಬ್ಬವಿದ್ದ ಕಾರಣ ನಿಯಮಿತ ಬಸ್ಸುಗಳು. ಬಹಳ ಹೊತ್ತು ಕಾದ ನಂತರ ಕೆ.ರ್.ಮಾರ್ಕೆಟ್ ಬಸ್ಸು ಬಂತು. ಹತ್ತಿದೆ. ಹೆಂಗಸರು ಕೂರುವ ಸ್ಥಳದಲ್ಲೇಲ ಗಂಡಸರು ಕುಳಿತಿದ್ದರು. ಹೀಗಾಗಿ ಕೆಲವು ಹೆಂಗಸರು ನಿಂತಿದ್ದರು. ನಾನು ಒಬ್ಬ ಹುಡುಗನನ್ನ ಸೀಟ್ನಿಂದ ಏಳಿಸಿ ಅಲ್ಲಿ ಕುಳಿತೆ. ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಒಂದು ಮಗುವನ್ನು ಸೊಂಟದಲ್ಲಿ, ಮತ್ತೊಂದ್ದು ಮಗುವನ್ನು ಕೈಯ್ಯಲ್ಲಿ ಹಿಡಿದು ಒಬ್ಬ ಮಹಿಳೆ ಬಸ್ಸು ಹತ್ತಿದರು. ಯಾರು ಯೆದ್ದು ಸ್ಥಳ ಬಿಟ್ಟು ಕೊಡಲಿಲ್ಲ. ಮತ್ತೊಬ್ಬರನ್ನು (ಮಹಿಳೆಯರಿಗೆಂದು ಮೀಸಲಿದ್ದ ಸ್ಥಳದಲ್ಲಿ ಕುಳಿತಿದ್ದ ಗಂಡಸನ್ನು) ಎಬ್ಬಿಸಲು ಮನಸಾಗದೆ ನಾನೇ ಯೆದ್ದು ಆಕೆಗೆ ಕೂರಲು ಸ್ಥಳ ಕೊಟ್ಟೆ. ಅದನ್ನು ಕಂಡ ಬಸ್ ಕಂಡಕ್ಟರ್ ತಮ್ಮ ಸ್ಥಳದಲ್ಲಿ ಕೂರುವಂತೆ ನನಗೆ ಸೂಚಿಸಿದರು. (ಪುಣ್ಯ ಡ್ರೈವರ್ ತಮ್ಮ ಸ್ಥಳಬಿಟ್ಟುಕೊಡಲ್ಲಿಲ).

ಕಥೆ ಇನ್ನು ಇದೆ ಕಣ್ರೀ. ಮುಗಿಲಿಲ್ಲ.

ಮೈಸೂರ್ ಸರ್ಕಲ್ ಅಲ್ಲಿ ಬಸ್ ಇಳಿದೆ. ಸಮಯ ಸುಮಾರು ೯.೩೦. ಮೆಜೆಸ್ಟಿಕ್ ಬಸ್ಸಿಗಾಗಿ ಕಾಯ್ಯುತ್ತಿದೆ. ವಯಸ್ಸಾದ ಮಹಿಳೆಯೊಬ್ಬರು ಬಂದ ಬಸ್ಸುಗಳ ಎಲ್ಲಾ ಕಂಡಕ್ಟರ್ಸ್ ಬಳಿ ಹೋಗಿ ಮೆಜೆಸ್ಟಿಕ್ ಹೋಗುತ್ತಾ ಯೆಂದು ಕೇಳುತ್ತಿದ್ದರು. ಅವರನ್ನು ನೋಡಲಾಗಲಿಲ್ಲ. ಹಾಗಂತೂ ಅವರನ್ನು ಹೆಚ್ಚು ಮಾತನಾಡಿಸುವ ಮನಸಂತೂ ನಂಗಿರ್ಲಿಲ್ಲ. ನಾನು ಮೆಜೆಸ್ಟಿಕ್ ಹೋಗ್ತಿರದು, ನಾನು ಹತ್ತುವ ಬಸ್ಸು ಹತ್ತಿ ಅಂದು ಸುಮ್ಮನಾದೆ. ಹೂ ಅಂದರು. ಬಸ್ಸು ಬಂತು. ಹತ್ತಿದೆ. ಆದರೆ ಆಕೆ ಬಸ್ಸು ಹತ್ತಲು ಕಷ್ಟ ಪಡುತ್ತಿದ್ದರು. ಸರಿ ಇನ್ನೇನು ಮಾಡದು ಅಂತ ಕೈಯ್ಯಿ  ಹಿಡಿದು ಹತ್ತಿಸಿದಯ್ತು.

ಮೆಜೆಸ್ಟಿಕ್ ತಲುಪಿದೆ. ಅಲ್ಲಿಂದ IISc. ಮುರಳಿಗೆ ಕರೆ ಸಿಗಲಿಲ್ಲ. ಅವರನ್ನು ಕಾಯುತ್ತ ನಿಂತಿರುವಾಗ, ಕಣ್ಣಿಗೆ ಬಣ್ಣ ಬಣ್ಣದ ಚಿಟ್ಟೆಗಳು ಕಂಡವು. ಅವುಗಳ್ಳನು ನೋಡುತ್ತಾ ಇದ್ದಾಗ ಇವನಿಗೆ ತೋರಿಸಬೇಕೆನಿಸಿ ವಿಡಿಯೋ ಮಾಡಿದೆ. ಕಳುಹಿಸಿದೆ.
ಅಷ್ಟರಲ್ಲಿ ಮುರಳಿ ಬಂದರು. ಕೆಲಸ ಮುಗಿಸಿ ಮದ್ಯಾಹ್ನ ಮನೆಗೆ ಹೊರಟೆ.  ಜೋರು ಹಸಿವಾಗಿತ್ತು. ಹಬ್ಬದ ದಿನ ಮನೆಯವರೊಂದಿಗೆ ಊಟ ಮಾಡವು ಎಂದು ಗ್ರೇಶಿದ್ದೆ. ಆದರೆ ಮನೆ ತಲುಪುವಷ್ಟರಲ್ಲಿ ಎಲ್ಲರೂ ಊಟ ಮಾಡಿ ಮಲಗಿದ್ದರು.
ಇವನಿಗೆ ಮೆಸೇಜ್ ಮಾಡಿದೆ, ಇವನು ಬ್ಯುಸಿ ಇದ್ದ . ಸುಸ್ತಾಗಿತ್ತು, ಹಶುವಾಗಿತ್ತು, ಸ್ವಲ್ಪ ಜ್ವರ ಬೇರೆ, ಇದರ ಮಧ್ಯ ಒಬ್ಬಳೆ ಊಟ ಮಾಡಿ ಬಂದು ನಾನು ಮಲಗಿದೆ.

Tuesday 22 August 2017

& I'm done

I have no clue... what I'm talking abt, & what I'm doing here, in this early morning. n why? .......
have you ever felt the same, like d way I'm feeling right now!!! I wonder.
I wonder what I'm wondering abt and is it necessarily be like this. I wonder.
I tried to figure it out. went for a long walk. (5.40am-7.15am)
a long walk to search something. what I was searching for? I wonder.
tried talking to myself but what shall I talk. I wonder. I'm blank.
blank, blank like I never before.
totally lost it...

I just wanna know am I done, done with myself.??!!!!!
s. & I'm done. 

Sunday 20 August 2017

ಕೆಂಪು ಮುದ್ದಣ

Mirror, mirror, on the wall who is the prettiest of them all? ಎಂದು ಆಕೆ ಕೇಳಿದಳು.
ಕನ್ನಡಿಗೆ ಇಂದೇಕೊ ಗರ್ವ ಆಕೆಯನ್ನು ಪ್ರತಿಬಿಂಭಿಸಲು. ಆಕೆಯ ಸೌಂದರ್ಯಕಿಂದದೇನೋ ಗರಿಮೂಡಿದೆ. ಸುಂದರ ಮೊಗದಲ್ಲೆರೆಡು ಕೆಂಪು ಮುದ್ದಣ (ಮೊಡವೆ) ನಿಲುಕಿ ನೋಡಿವೆ.

ಎಂದಿನಂತೆ ಇಂದುಸಹ  ಆಕೆಯ ಪಯಣ ತನ್ನ ಗೆಳೆಯನ ನೋಡಿ, ಮಾತನಾಡಿಸಿ ದಿನದ ಶುಭಾರಂಭದೆಡೆಗೆ ಸಾಗಿದೆ.
ನಿರ್ಧರಿಸಿದ ಸ್ಥಳದಲ್ಲಿ ಅವರಿಬ್ಬರ ಭೇಟಿ. ಎಂದಿನಂತೆ ಅವಳ ಕಂಗಳು ಹೊಳೆದಿವೆ, ತುಟಿಗಳು ಅರಳಿವೆ,ಕೆನ್ನೆಯಲ್ಲಿ ಗುಳಿಬೇರೆ.

ಗೆಳೆಯನ ತುಂಟತನದ ಪೆಟ್ಟೊಂದು ತಿಳಿಯದೆ ಮುದ್ದಣ್ಣಿಗೆ ತಾಕಿರಲು, ಅವಳಿಗೆ ಬಲು ಬೇನೆ. ಹುಸಿಕೋಪದಿಂದ ಅವನನ್ನು ಆಕೆ ದಿಟ್ಟಿಸಿರಲು, ನಸುನಕ್ಕನವನು. ಎಂದಿನಂತೆ ಅವನ ಕೈ ಅವಳ ಕೆನ್ನೆ ಸೋಕಿರಲು, ಮುದ್ದಣ ನಾಚಿ ಅವನ ಕೈಗೆ ಚುಂಬಿಸಿತು. ಗೆಳೆಯನ ಬೆಚ್ಚಗಿನ ಕೈಶಾಖದಿಂದ ಮುದ್ದಣ ಕೆಂಪಾಯಿತು. ಹಿತವಾದ ನೋವೆಂದರೆ ಇದುವೆಯಾ? ಗ್ರೇಶಿ ನಕ್ಕಾಳು ಅವಳು.

ಅವಳು ಕೆಲಸಕ್ಕೆ ಹೊರಡುವ ಸಮಯ. ಜೀವನದ ಅತ್ಯಂತ ಕ್ರೂರ ಕ್ಷಣಗಳು. ವಿಧಾಯದ ಸಿಹಿಯೊಂದ ಕೆನ್ನೆಗಿತ್ತ. ಅವನ ಬಿಸಿ ಉಸಿರಿಗೆ ಮುದ್ದಣ ಹಣ್ಣಾಯಿತು. ಅವಳು ಹೊರಟಳು.

ದೂರವಿದ್ದಷ್ಟೂ ಹತ್ತಿರಕ್ಕೆ ಹೋಗಲು ಮನ ಚಡಪಡಿಸುತ್ತದೆ. ಹತ್ತಿರವಾದಾಗ ಸಮಯ ಬೇಗ ಸಾಗುತ್ತದೆ. ಮತ್ತೆ ದೂರಹೋಗುವ ಸಮಯ. ದೂರಹೋಗುವ ಸಮಯ ಎಷ್ಟೇ ಬೇನೆ ನೀಡಿದರು ಮತ್ತೆ ಸಿಗುವೆವೆಂಬ ಖುಷಿ ನೀಡುತ್ತದೆ. 

Thursday 10 August 2017

💗 A chat over coffee 💗

ಕೆಲವೊಮ್ಮೆ ಪೂರ್ತಿ ಕಥೆಯ, ಚಿತ್ರವೇ ಹೇಳಿಬಿಡುತ್ತದೆ.
ಪಕ್ಕದಮನೆಯ ಮಹಡಿಮೇಲಿನ ಚಿತ್ರಣ. 
ನನ್ನನ್ ಬಿಡಿ ಸೂರ್ಯನೇ ನಿಕ್ಲಿ ನೋಡ್ತಿದ್ದ. 

Tuesday 8 August 2017

ಒಂದು ಕಥೆಯ ಕಥೆ

ನನಗೆ ಕಥೆ ಕೇಳೋದು ಅಂದ್ರೆ ತುಂಬಾ ಇಷ್ಟ!!
ಕಥೆ ಅಂದ್ರೆ ನೆನಪಾಗೋದೆ ಅಜ್ಜ, ಅಜ್ಜನ ಕಾಲದ ಅದೇ ಹಳೆಯ ಸಾಲುಗಳು, 'ಒಂದೂರಲ್ಲಿ ಒಬ್ಬ ರಾಜ ಇದ್ದ .......'
ಆದ್ರೆ ನನಗೆ ಕಥೆ ಹೇಳ್ಬೇಕಾದ ನನ್ನಜ್ಜ ನನ್ನನ್ನು ಬೇಗ ಅಗಲಿದರು.

ಹೀಗಿರುವಾಗ ನನಿಗೊಬ್ಬ ಅಜ್ಜ ಸಿಕ್ಕಿದ್ದ, ವಯಸ್ಸು ೨೮. ಅಜ್ಜನಿಲ್ಲದ ನನಗೆ ಅವನೇ ಏಂಜಲ್ ಅಜ್ಜ....
ಅಯ್ಯೋ ನಿಮ್ಗು ನನ್ನ ತರಾನೇ ಗೊಂದ್ಲಾನಾ ? ಗೊಂದಲಕೊಳಗಾಗಬೇಡಿ, ನಾನು ಅಜ್ಜ ಅಂದಿದ್ದು ನನ್ನ ಒಬ್ಬ ಗೆಳೆಯನನ್ನ.

ಅವ್ನು ಅಷ್ಟೇ, ಕಥೆ ಹೇಳೋ ಅಂತ ನಾನು ಕೇಳಿದಾಗಲೆಲ್ಲ, ಒಂದೂರಲ್ಲಿ ಒಬ್ಬ ರಾಜ ಇದ್ದ, ಅವನಿಗೆ ಹೆಂಡ್ತಿ ಇದ್ಲು, ಅವಳೇ ರಾಣಿ ಗೊತ್ತಾ!! ಅವ್ರ್ಗೆ ಇಬ್ರು ಮಕ್ಳು....... ಹೀಗೆ ಅದು ಇದು ಅಂತ ಅವನೇ ಕಥೆ ಕಟ್ಟಿ ಕಥೆ ಹೇಳ್ತಿದ್ದ.

ಅಯ್ಯೋ ಸಾಕಾಯ್ತು, ನಿಲ್ಲಿಸೋ. ಈ ಕಥೆ ಸಾಕು, ಯಾವದಾದ್ರು ಜೋಕ್ ಹೇಳು ಅಂದ್ರೆ,
'ಒಂದೂರಲ್ಲಿ ಒಬ್ಬಳು ಅಜ್ಜಿ ಇದ್ದಳಂತೆ, ಅವಳು ಚಿಕ್ಕ ವಯಸ್ಸಿನಲ್ಲೇ ಸತ್ತು ಹೋದಳಂತೆ. ಹಹಹ ...  ' ಎಂದು ನಕ್ಕುಬಿಡ್ತಿದ್ದ.
ಆಗ ನಾನು ಲೋ, ಜೋಕ್ ಹೇಳು ಅಂತ ಹೇಳಿದ್ದು ಅಂದ್ರೆ, ತಗೋಳಪ್ಪಾ, ಅವಗಲು ಮತ್ತೆ ಅದೇ ರಾಗ ಅದೇ ತಾಳ . 'ಒಂದೂರಲ್ಲಿ ಒಬ್ಬಳು ಅಜ್ಜಿ ಇದ್ದಳಂತೆ, ಅವಳು ಚಿಕ್ಕ ವಯಸ್ಸಿನಲ್ಲೇ ಸತ್ತು ಹೋದಳಂತೆ'.

ಅವನು ಹೇಳಿದ್ದನ್ನೇ ಹೇಳ್ತಿದ್ದ. ಆದ್ರೂ ನಾನು ಕೇಳದು ನಿಲ್ಲಿಸಿರಲಿಲ್ಲ. ಅವನು ಹೇಳೋದು ನಿಲ್ಲಿಸಿರಲಿಲ್ಲ.
ನಿಜ ಏನು ಗೊತ್ತ? ನನಗೆ ಆ ಕಥೆ ಮತ್ತು ಆ ಜೋಕ್ ತುಂಬಾನೆ ಇಷ್ಟ. ಅದನ್ನು ಕೇಳಿದಾಗಲೆಲ್ಲ ಖುಷಿಯಿಂದ ನಗುತ್ತಿದ್ದೆ. ದಿನದ ಬೇಸರ, ಸುಸ್ತೆಲ್ಲ ಒಂದೇ ಘಳಿಗೆಯಲ್ಲಿ ಮಾಯಾ ಆಗ್ತಿತ್ತು. ಹೇಳ್ಬೇಕು ಅಂದ್ರೆ ಈಗ್ಲೂ ನಗು ಬರ್ತಿದೆ. ಆದ್ರೆ ಖುಷಿ ಇಲ್ಲಾ. ಈಗ್ಲೂ ಕಥೆ ಹೇಳುತಿದ್ದ ಅಜ್ಜನ ಧ್ವನಿ ಕಿವಿಯಲ್ಲಿ ಪಿಸುಗುಟ್ಟಿದಂತಾಗುತ್ತದೆ, ಆದರೆ ಕಚಗುಳಿಯಿಲ್ಲ.

ಬೇಡದ ಜೀವನದ ಜಂಜಾಟಕ್ಕೆ ಸಿಲುಕಿ ಕಾಣೆಯಾದ ಮುಗ್ದ ಮನುಸುಗಳೆಷ್ಟೋ? ನಾನು ಅವರಲ್ಲಿ ಒಬ್ಬಳೇ?
ಇಲ್ಲಾ, ನಾನವಳಲ್ಲ. ನಾನವರಲ್ಲಿ ಒಬ್ಬಳಲ್ಲ.

ಇನ್ನೆಷ್ಟು ಕಾಲ ಅಜ್ಜನಿಗೆ ತೊಂದರೆ ಕೊಡೋದು, ಅಲ್ವಾ? ಹಾಗಾಗಿ ಸುಮ್ಮನಾಗಿರುವೆ ಅಷ್ಟೇ.

ಕೇಳುವ ಕಿವಿಗಳ್ಳಿದ್ದರೆ ಸಾಕೆ? ಹಾಡುವ ಧ್ವನಿಯು ಬೇಕಲ್ಲವೇ?



Monday 7 August 2017

Huge respect.

೧೩-೦೨-೨೦೧೭:
ಯಪ್ಪಾ ಮಧು, ಬೇಗ ಛತ್ರಿ ತಗಿಯೇ ಅಂದ್ಲು ಹರ್ಷಾ. ಹೌದು ನಂಗು ಹಾಗೆ ಅನ್ನಿಸ್ತಿತ್ತು. ಸಿಕ್ಕಪ್ಪಟ್ಟೆ ಬಿಸಿಲು. ಒಂದೇ ನಿಮಿಷದಲ್ಲಿ ಬೆಂದೋಗುವಸ್ಟು ಶಾಖ, ಸೆಖೆ. ಜೊತೆಯಲ್ಲಿ ಧಟ್ಟ ಹೋಗೆ ಬಿಡುತ್ತ ಪೀ ಪೀ ಯೆಂದು ಹಾರ್ನ್ ಹಾಕುತ್ತ ಶಬ್ದ ಮಾಡುತ್ತಿರುವ ವಾಹನಗಳು. ಮತ್ತೊಂದು  ಕಡೆ ಮೆಟ್ರೋ ಕಾಮಗಾರಿ.
ಇದು ಮಧ್ಯಾಹ್ನ ಸರಿ ಸುಮಾರು ೨ ಘಂಟೇ , ಬೆಂಗಳೂರಿನ ರಾಜರಾಜೇಶ್ವರಿ ವೃತ್ತದ  ಬಳಿಯ ಚಿತ್ರಣ. ನಾನು ಹರ್ಷಾ ನಾಯಂಡನಹಳ್ಳಿ ಮೆಟ್ರೋ ಸ್ಟೇಷನ್ ಹೋಗುವ ಸಲುವಾಗಿ ಬಸ್ಗಾಗಿ ಕಾಯುತ್ತ ನಿಂತಿದ್ದೆವು. ನಮ್ಮ ಮೆಟ್ರೋ ಪರ್ಪಲ್ ಲೈನ್ ಸದ್ಯಕ್ಕೆ ನಾಯಂಡನಹಳ್ಳಿಯಿಂದ ಬೈಯ್ಯಪ್ಪನಹಳ್ಳಿವರೆಗೂ ಸಾರ್ವಜನಿಕರ ಪ್ರಯಾಣಕ್ಕೆ ತೆರೆದಿದೆ. ಇದರ ಎಕ್ಸಟೆನ್ಶನ್ ವರ್ಕ್ ಭರದಿಂದ ಸಾಗಿದೆ.

{ ಅಕಸ್ಮಾತಾಗಿ  ಇಂದು (೧೩-೦೨-೨೦೧೭) ಹರ್ಷಾ, ಅವಳ ಯಾವುದೊ ಕೆಲಸದ ಸಲುವಾಗಿ ಯೂನಿವರ್ಸಿಟಿ ಕಡೆ ಬಂದಿದ್ದಳು , ಒಂದು ವಾರದ ಹಿಂದೆ ಅಂದರೆ ೦೭-೦೨-೨೦೧೭ ರಂದು ಕೆಲವು ವಯಕ್ತಿಕ ವಿಷಯಗಲ್ಲಿಂದ ಬಹಳವಾಗಿ ನೊಂದಿದ್ದೆ. ಈ ಕಾರಣ, ಡೆಪಾರ್ಮೆಂಟ್ಗೆ ಒಂದೆರೆಡು ದಿನ ರಜೆ ಹಾಕಿ ಹರ್ಷಾಳೊಂದಿಗೆ ನಮ್ಮ ಮನೆಯಲ್ಲಿ ಕಾಲ ಕಳೆಯಲು ನಿಶ್ಚಯಿಸಿ ಅವಳೊಂದಿಗೆ ಮಾರತಹಳ್ಳಿ ಬಳಿ ಇರುವ ನಮ್ಮ ಮನೆಗೆ ಹೊರಟ್ಟಿದೆವು.  }

ಪಾಪ ಕಣ್ರೀ ಸಿವಿಲ್ ಇಂಜಿನಿಯರ್ಸ್ ಮತ್ತು ಈ ಗಾರೆ ಕೆಲ್ಸದವರು. ಎಷ್ಟು ಕಷ್ಟದ ಕೆಲಸ ಅವರ್ದು.
ಈ ಉರಿ ಬಿಸಿಲಲ್ಲಿ ಲಕ್ಷ ಸಂಬಳ ಕೊಡ್ತಿನಿ ಅಂದ್ರು ನಾನಂತು ಕೆಲಸ ಮಾಡಲ್ಲ. ಒಂದು ವೇಳೆ ಮಾಡ್ತಿನಿ ಅಂದ್ರು ನಮ್ಮಪ್ಪ ಬಿಡಲ್ಲ.

ಲೇ, ಮಧು, ಇನ್ನ ಎಸ್ಟೋತ್ತೆ ಬಸ್ ಬರಕ್ಕೆ? ಹರ್ಷಾ ಕೇಳಿದಳು. ಯಾವುದೊ ಯೋಚನಾಲಹರಿಯಲ್ಲಿ ಮುಳುಗಿದ್ದ ನಾನು, ಅವಳ ಮಾತು ಕೇಳಿ ಅದರಿಂದ ಹೊರಬಂದೆ.  ಬೇಕಾದಷ್ಟು ಬಸ್ ಇದೆ, ಬೇಗ ಬರುತ್ತೆ ಇರೆ ಅಂದೇ.
ಕೆಲವೇ ನಿಮಿಷಗಳಲ್ಲಿ ಕೆ.ಆರ್.ಮಾರ್ಕೆಟ್ ಬಸ್ ಬಂತು. ಬಸ್ ಹತ್ತಿದ್ವಿ, ನಾಯಂಡನಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಇಳಿದು, ಸ್ಟೇಷನ್ ಒಳಬಂದು, ಹರ್ಷಾಳಿಗೆ ಮೆಟ್ರೋ ಸ್ಮಾರ್ಟ್ ಕಾರ್ಡ್ ಕೊಂಡೆವು. ನಂತರ ಮೆಟ್ರೋ ಟ್ರೈನ್ ಹತ್ತಿ ಕುಳಿತೆವು. ಹಾಯ್ ಅನಿಸಿತು. ಧೂಳು, ವಾಹನ ದಟ್ಟಣೆ, ಶಬ್ಧ ಮಾಲಿನ್ಯದಿಂದ ದೂರ ಇದ್ಯಾವುದೋ ಬೇರೆ ಲೋಕವೆ ಕಣ್ಣಮುಂದೆ ತೆರೆದಿಟ್ಟಂತೆ ಭಾಸವಾಯಿತು.  ಆಗ ಮನದಲ್ಲಿ ಮೂಡಿದ ಭಾವವೇ, ಮೆಟ್ರೋ ಕಾರ್ಮಿಕರ, ಹಾಗು ಮೆಟ್ರೋವನ್ನು ಅನುಷ್ಠಾನಕ್ಕೆ ತಂದ ವ್ಯಕ್ತಿಗಳ ಮೇಲೆ ಅತೀವವಾದ ಗೌರವ!! ಮೆಟ್ರೋ  ಇಂದಿರಾನಗರ ತಲುಪಿತು. ಅಲ್ಲಿಂದ ಮನೆಗೆ ಉಬರ್ ಬುಕ್ ಮಾಡಿಕೊಂಡು ಮನೆಗೆ ಹೊರೆಟೆವು.

ನಾನಿಷ್ಟು ಆರಾಮವಾಗಿ ನೆಮ್ಮದಿಯ ಜೀವನ ನಡೆಸಲು ಕಾರಣ ನಮ್ಮಪ್ಪ. ಅವರಂದ್ರೆ ನನ್ನ ಧ್ಯರ್ಯ. ನನ್ನ ಹೆಮ್ಮೆ. ನನ್ನ ಗೌರವ.  ಅವರಿಲ್ಲ ಅಂದ್ರೆ ನಾನು ಹೇಗಿರ್ತಿದ್ದೆ??