೧೩-೦೨-೨೦೧೭:
ಯಪ್ಪಾ ಮಧು, ಬೇಗ ಛತ್ರಿ ತಗಿಯೇ ಅಂದ್ಲು ಹರ್ಷಾ. ಹೌದು ನಂಗು ಹಾಗೆ ಅನ್ನಿಸ್ತಿತ್ತು. ಸಿಕ್ಕಪ್ಪಟ್ಟೆ ಬಿಸಿಲು. ಒಂದೇ ನಿಮಿಷದಲ್ಲಿ ಬೆಂದೋಗುವಸ್ಟು ಶಾಖ, ಸೆಖೆ. ಜೊತೆಯಲ್ಲಿ ಧಟ್ಟ ಹೋಗೆ ಬಿಡುತ್ತ ಪೀ ಪೀ ಯೆಂದು ಹಾರ್ನ್ ಹಾಕುತ್ತ ಶಬ್ದ ಮಾಡುತ್ತಿರುವ ವಾಹನಗಳು. ಮತ್ತೊಂದು ಕಡೆ ಮೆಟ್ರೋ ಕಾಮಗಾರಿ.
ಇದು ಮಧ್ಯಾಹ್ನ ಸರಿ ಸುಮಾರು ೨ ಘಂಟೇ , ಬೆಂಗಳೂರಿನ ರಾಜರಾಜೇಶ್ವರಿ ವೃತ್ತದ ಬಳಿಯ ಚಿತ್ರಣ. ನಾನು ಹರ್ಷಾ ನಾಯಂಡನಹಳ್ಳಿ ಮೆಟ್ರೋ ಸ್ಟೇಷನ್ ಹೋಗುವ ಸಲುವಾಗಿ ಬಸ್ಗಾಗಿ ಕಾಯುತ್ತ ನಿಂತಿದ್ದೆವು. ನಮ್ಮ ಮೆಟ್ರೋ ಪರ್ಪಲ್ ಲೈನ್ ಸದ್ಯಕ್ಕೆ ನಾಯಂಡನಹಳ್ಳಿಯಿಂದ ಬೈಯ್ಯಪ್ಪನಹಳ್ಳಿವರೆಗೂ ಸಾರ್ವಜನಿಕರ ಪ್ರಯಾಣಕ್ಕೆ ತೆರೆದಿದೆ. ಇದರ ಎಕ್ಸಟೆನ್ಶನ್ ವರ್ಕ್ ಭರದಿಂದ ಸಾಗಿದೆ.
{ ಅಕಸ್ಮಾತಾಗಿ ಇಂದು (೧೩-೦೨-೨೦೧೭) ಹರ್ಷಾ, ಅವಳ ಯಾವುದೊ ಕೆಲಸದ ಸಲುವಾಗಿ ಯೂನಿವರ್ಸಿಟಿ ಕಡೆ ಬಂದಿದ್ದಳು , ಒಂದು ವಾರದ ಹಿಂದೆ ಅಂದರೆ ೦೭-೦೨-೨೦೧೭ ರಂದು ಕೆಲವು ವಯಕ್ತಿಕ ವಿಷಯಗಲ್ಲಿಂದ ಬಹಳವಾಗಿ ನೊಂದಿದ್ದೆ. ಈ ಕಾರಣ, ಡೆಪಾರ್ಮೆಂಟ್ಗೆ ಒಂದೆರೆಡು ದಿನ ರಜೆ ಹಾಕಿ ಹರ್ಷಾಳೊಂದಿಗೆ ನಮ್ಮ ಮನೆಯಲ್ಲಿ ಕಾಲ ಕಳೆಯಲು ನಿಶ್ಚಯಿಸಿ ಅವಳೊಂದಿಗೆ ಮಾರತಹಳ್ಳಿ ಬಳಿ ಇರುವ ನಮ್ಮ ಮನೆಗೆ ಹೊರಟ್ಟಿದೆವು. }
ಪಾಪ ಕಣ್ರೀ ಸಿವಿಲ್ ಇಂಜಿನಿಯರ್ಸ್ ಮತ್ತು ಈ ಗಾರೆ ಕೆಲ್ಸದವರು. ಎಷ್ಟು ಕಷ್ಟದ ಕೆಲಸ ಅವರ್ದು.
ಈ ಉರಿ ಬಿಸಿಲಲ್ಲಿ ಲಕ್ಷ ಸಂಬಳ ಕೊಡ್ತಿನಿ ಅಂದ್ರು ನಾನಂತು ಕೆಲಸ ಮಾಡಲ್ಲ. ಒಂದು ವೇಳೆ ಮಾಡ್ತಿನಿ ಅಂದ್ರು ನಮ್ಮಪ್ಪ ಬಿಡಲ್ಲ.
ಲೇ, ಮಧು, ಇನ್ನ ಎಸ್ಟೋತ್ತೆ ಬಸ್ ಬರಕ್ಕೆ? ಹರ್ಷಾ ಕೇಳಿದಳು. ಯಾವುದೊ ಯೋಚನಾಲಹರಿಯಲ್ಲಿ ಮುಳುಗಿದ್ದ ನಾನು, ಅವಳ ಮಾತು ಕೇಳಿ ಅದರಿಂದ ಹೊರಬಂದೆ. ಬೇಕಾದಷ್ಟು ಬಸ್ ಇದೆ, ಬೇಗ ಬರುತ್ತೆ ಇರೆ ಅಂದೇ.
ಕೆಲವೇ ನಿಮಿಷಗಳಲ್ಲಿ ಕೆ.ಆರ್.ಮಾರ್ಕೆಟ್ ಬಸ್ ಬಂತು. ಬಸ್ ಹತ್ತಿದ್ವಿ, ನಾಯಂಡನಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಇಳಿದು, ಸ್ಟೇಷನ್ ಒಳಬಂದು, ಹರ್ಷಾಳಿಗೆ ಮೆಟ್ರೋ ಸ್ಮಾರ್ಟ್ ಕಾರ್ಡ್ ಕೊಂಡೆವು. ನಂತರ ಮೆಟ್ರೋ ಟ್ರೈನ್ ಹತ್ತಿ ಕುಳಿತೆವು. ಹಾಯ್ ಅನಿಸಿತು. ಧೂಳು, ವಾಹನ ದಟ್ಟಣೆ, ಶಬ್ಧ ಮಾಲಿನ್ಯದಿಂದ ದೂರ ಇದ್ಯಾವುದೋ ಬೇರೆ ಲೋಕವೆ ಕಣ್ಣಮುಂದೆ ತೆರೆದಿಟ್ಟಂತೆ ಭಾಸವಾಯಿತು. ಆಗ ಮನದಲ್ಲಿ ಮೂಡಿದ ಭಾವವೇ, ಮೆಟ್ರೋ ಕಾರ್ಮಿಕರ, ಹಾಗು ಮೆಟ್ರೋವನ್ನು ಅನುಷ್ಠಾನಕ್ಕೆ ತಂದ ವ್ಯಕ್ತಿಗಳ ಮೇಲೆ ಅತೀವವಾದ ಗೌರವ!! ಮೆಟ್ರೋ ಇಂದಿರಾನಗರ ತಲುಪಿತು. ಅಲ್ಲಿಂದ ಮನೆಗೆ ಉಬರ್ ಬುಕ್ ಮಾಡಿಕೊಂಡು ಮನೆಗೆ ಹೊರೆಟೆವು.
ನಾನಿಷ್ಟು ಆರಾಮವಾಗಿ ನೆಮ್ಮದಿಯ ಜೀವನ ನಡೆಸಲು ಕಾರಣ ನಮ್ಮಪ್ಪ. ಅವರಂದ್ರೆ ನನ್ನ ಧ್ಯರ್ಯ. ನನ್ನ ಹೆಮ್ಮೆ. ನನ್ನ ಗೌರವ. ಅವರಿಲ್ಲ ಅಂದ್ರೆ ನಾನು ಹೇಗಿರ್ತಿದ್ದೆ??

No comments:
Post a Comment