Thursday 31 January 2019

A question, Just one.

Can I ask you a question? just one. - He said.
Ask as many as you wish too! But don't expect answers to all your questions. -without knowing the seriousness of the situation she said and laughed.
Why he? - his face looked pale and hushed voice.
You meet many people before him and said no. why you said yes to him. -He continued.
She could only gaze at him.
He wasn't the only one who asked this question in the last few days. -She pondered.
She will never have a particular answer to this question. She just knew he is the one.
How and why?! She will never have a particular answer to this question.
There was a deep silence. 

Tuesday 29 January 2019

ಗೆಜ್ಜೆಯಾ ನಾದವಲ್ಲವಿದು ಮಿಡಿವ ಹೃದಯದ ನಿನಾದ

ನಿನ್ನೆಡೆಗೆ ಬರುವಾಗ ಶೃಂಗಾರದ ಹೊರೆ ಏಕೆ? ಯೆಂದು ರಾಷ್ಟ್ರಕವಿ ಕುವೆಂಪಜ್ಜ ಹೇಳಿರುವ ಮಾತು ಈಗಲೂ ಕಿವಿಯಲ್ಲಿ ಗುನುಗುಟ್ಟಿದಂತನ್ನಿಸುತ್ತದೆ. ಎಷ್ಟು ಸತ್ಯದ ಮಾತಲ್ಲವೇ ಇದು. ಹೃದಯದ್ದಲ್ಲಿ ಪ್ರೀತಿಯ ಅಲಂಕಾರವಿರಲು ಮುಂದೊಂದು ದಿನ ಮಾಸಿಹೋಗುವ ಮುಖಕ್ಕೇಕೆ ಅಲಂಕಾರ. ಅಲ್ಲವೇ?
ಫೇಸ್ಬುಕ್ಕಿನಲ್ಲಿ, ಅಲ್ಲಿ ಇಲ್ಲಿ ಆಗೊಮ್ಮೆ ಈಗೊಮ್ಮೆ ಓದ ಸಿಗುವ ಬಹಳಾನೇ ಪ್ರಸಿದ್ದವಾಗಿರುವ ಮೀಮ್ ಒಂದು ಹೀಗಿದೆ, "ನಿನಗಾಗಿ ನೀನು ಶೃಂಗಾರ ಮಾಡಿಕೋ, ಬೇರೆಯವರು ಏನಂದಾರು ಎಂಬುದ ಬಿಡು". ಇದು ಒಂದು ರೀತಿಯಲ್ಲಿ ಒಪ್ಪಬೇಕಾದ ವಿಷಯವೇ. ಆದರೆ ನಮಗೆ ನಾವು ಹೇಗಿದ್ದರೂ ಇಷ್ಟವೇ. ನಮ್ಮವರಿಗೂ ಹಾಗೆಯೇ, ನಾವು ಹೇಗೆ ಕಂಡರೂ ಪ್ರೀತಿಯೇ.
ಆದರೆ ನನಗನಿಸುವಂತೆ ಆಗೊಮ್ಮೆ ಈಗೊಮ್ಮೆ ಅವರಿಗಾಗಿ, ನಮ್ಮವರಿಗಾಗಿ ಶೃಂಗರಿಸಿಕೊಳ್ಳುವ ಮಜವೇ ಬೇರೆ.
ಹುಬ್ಬುಗಳ ನಡುವೆ ಗುಂಡನೆಯೇ ಕೆಂಪು ಬೊಟ್ಟು ಇಟ್ಟಾಗ  ಅವರ ನೆನೆದು ಕೆನ್ನೆಗಳಲ್ಲಿ ಗುಳಿ ಬೀಳುವುದೇ ಒಂದು ಚೆಂದ.
ಕಿವಿಯಲ್ಲಿ ನೇಲುವ ಮುತ್ತಿನ ಜುಮ್ಕಿ ಆಟಗಳು ಅವರ ತುಂಟತನವ ಬಿಂಬಿಸಿ ಕೆನ್ನೆಯನ್ನು ಕೆಂಪಾಗಿಸಿ ಕಣ್ಣಲ್ಲಿ ಮಿಂಚಾಗಿ ಹರಿದು ಹೋಗುವುದೆ ಒಂದು ಸೊಗಸು. ಮೂಗಿನಲ್ಲಿ ಇರುವ ಬೊಟ್ಟು, ಕೊರಳಿನ  ಮಾಲೆ, ಕಾಲಿನಾ ಬೆಳ್ಳಿ ಗೆಜ್ಜೆ, ಕಣ್ಣಲ್ಲಿ ಹಚ್ಚಿದ ಕಪ್ಪು ಕಾಡಿಗೆ, ತುಟಿಯಲ್ಲಿನ ನಗು, ಅಬ್ಬಾ ಹೀಗೆ ಹತ್ತು ಹಲವು ಅಲಂಕಾರಗಳು ಅವರನ್ನೇ ನೆನಪಿಸಿ ಕಾಡುತದ್ದೆ. ಹೃದಯಾಲಂಕಾರದೊಡನೆ ದೇಹಾಲಂಕಾರ ಬೆರೆತು ಶೃಂಗಾರಕಾವ್ಯ ಮಿಡಿದಾಗ, ಅವರಿಗೆ ನಾನು ಚೆಂದ ಕಾಣಿಸಿಯಾನೆಯೆಂಬ ಪ್ರಶ್ನೆ ಹಣೆಯ ಮೇಲೆ ಸಣ್ಣದೊಂದು ನೆರಿಗೆ ಮೂಡಿಸುತ್ತದೆ.

Sunday 27 January 2019

ಸಣ್ಣದೊಂದು ಮಾತು ಕಥೆ

ಎಂದಿಲ್ಲದ್ದ ಸಣ್ಣದಾದ ದೊಡ್ಡದೊಂದು ಮಾತು ಕಥೆ ಇಂದು.
ಸಾಹೇಬರಿಗೆ ಸಮಯಾವಕಾಶ ಬಹಳಾನೇ ಸಿಕ್ಕಿರುವಂತಿದೆ.
ಒಂಟಿಯಾಗಿ ಕುಳಿತ ನನ್ನನ್ನು ನೋಡಿ, ಜಂಟಿಯಾಗಿ ಹಾರುವ ಜೋಡಿ ಹಕ್ಕಿಗಳ ನಿನ್ನವನ್ನೆಲ್ಲೆಯೆಂದು ಹೀಯಾಳಿಸುತ್ತಿರಲು,
ಆಗ ಬಂದಿತ್ತು ಅವರ ಸಂದೇಶಗಳು.
ನನಗೆ ಇಂದು ಎಲ್ಲಿಲ್ಲದ ಸಂಭ್ರಮ. ಗರ್ವದಿ ಆ ಜೋಡಿ ಹಕ್ಕಿಗಳೆಡೆಗೆ ಮುಖ ಮಾಡಿ ಮೂತಿ ಮುರಿದೆ.
ಕ್ಷಣಕೊಮ್ಮೆ ಕನಸಿನಾ ಲೋಕಕ್ಕೆ ಜಾರಿ, ಮೈಯೆಲ್ಲಾ ಪುಳಕಿತಗೊಂಡು ಮತ್ತೆ ವಾಸ್ತವತೆಗೆ ಬಂದಂತೆ. ಈಗ ಇಲ್ಲಿರುವೆ, ಕ್ಷಣ ಕಾಲದಲ್ಲಿ ಮತ್ತೆಲ್ಲೋ. ಅವನ ಉಸಿರೊಂದು ಎಲ್ಲಿಂದಲೋ ತೇಲಿಬಂದು ನನ್ನ ಬಲಗಿವಿಯ ನೇವರಿಸಿ ಮಾಯವಾದಂತೆ. ಹೀಗೆ ಎಂದಿಲ್ಲದ್ದ ಸಣ್ಣದಾದ ದೊಡ್ಡದೊಂದು ಮಾತು ಕಥೆ ಇಂದು ನಡೆದಿತ್ತು. ನನ್ನನ್ನು ಪ್ರೀತಿಸಿತ್ತು, ಕಾಡಿಸಿತ್ತು, ನಗಿಸಿತ್ತು, ಪೀಡಿಸಿತ್ತು. ಜೊತೆಯಲ್ಲಿ ಮೋಡಗಳ ಅಂಚಿಂದ ಮಿಂಚುತ್ತಾ, ನನ್ನ ಮೈಯನ್ನೆಲ್ಲ ಹೊನ್ನು ಮಾಡಿ ಸೂರ್ಯ ಅಸ್ತಮವಾಗಿತ್ತು.   

Cheesy......

He is so cheesy,
and tells me not to get fat.


Thursday 24 January 2019

ಒಂದು ಸಾಲು.

ಕತ್ತಲೆಯ ಕೋಣೆಯಲ್ಲಿ ಮುದ್ದಾಗಿ ಮಲಗಿದ್ದ ಆ ನನ್ನ ಕಂದ, ಚುಂಬಿಸಿದ್ದು ನನ್ನ ಮನವ.  

Thursday 17 January 2019

ನಶೆ

ಇದಕ್ಕಿಂತ ಹೆಚ್ಚಿನ ನಶೆ ಬೇರೆಯೊಂದಿರಬಹುದೇ?
ಅಬ್ಬೊ...  ಅವನೆಂಬ ಈ ನಶೆ ನನ್ನಿಂದ ಇಳಿಯುವ ಮನಸ್ಸೇ ಮಾಡುತ್ತಿಲ್ಲಾ. 

Besotted

ಇದರಿಂದ ಹೊರಬರಲು ಸಾಧ್ಯವಿಲ್ಲ.
ಮನಸ್ಸಂತೂ ಮೊದಲೇ ಇಲ್ಲ.
ಕೃಷ್ಣ ಧ್ಯಾನ ನಿರಂತರ. 

Ha Ha Ha

ಇತ್ತೀಚೆಗೆ ಹಗಲುಗನಿಸಿನ ಕಾಟ ಹೆಚ್ಚುತ್ತಿದೆ.
ಎಲ್ಲಂದರಲ್ಲಿ, ಯಾವಾಗಂದರವಾಗ ಹೇಳದೆ ಕೇಳದೆ ಅನುಮತಿ ಪಡೆಯದೇ ಬಂದು ಬಿಡುತ್ತದ್ದೆ.
ಮೊದಮೊದಲು ಅವನ ಪ್ರೀತಿಯ ಸ್ಪರ್ಶ ನೆನೆ ನೆನೆದು ಮುಗುಳ್ನಗುತ್ತಿದ್ದೆ.
ಈಗಿಗೀಗ ಅವನ ತುಂಟತನವ ನೆನೆದು ಜೋರು ಜೋರಾಗಿ ನಗುತ್ತಿರುತ್ತೇನೆ.
ಇತ್ತೀಚೆಗೆ ಹಗಲುಗನಿಸಿನ ಕಾಟ ಹೆಚ್ಚುತ್ತಿದೆ.
ಎಲ್ಲಂದರಲ್ಲಿ, ಯಾವಾಗಂದರವಾಗ ಹೇಳದೆ ಕೇಳದೆ ಅನುಮತಿ ಪಡೆಯದೇ ಬಂದು ಬಿಡುತ್ತದ್ದೆ.

Wednesday 16 January 2019

ಪದೇ ಪದೇ

ಪದೇ ಪದೇ ಓದಿದೆ.
ಒಂದು ಬಾರಿ, ಎರೆಡು ಬಾರಿ, ಮೂರು ಬಾರಿ,
ಮತ್ತೆ ಮತ್ತೆ.
ಓದಬೇಕೆನಿಸಿದಾಗೆಲ್ಲಾ ಓದಿದೆ.
ಇನ್ನೊಮ್ಮೆ ಓದಲ್ಲಿದ್ದೇನೆ.
ನನ್ನಿನಿಯನ ಆ ಸಂದೇಶವ.
ಅವ ಕಳಿಹಿಸುವ ಆ ಪದ ಪುಂಜವ.
ಅವನ ಮುಖ, ಅವನ ದನಿ, ಅವನ ನಗು,
ಅವನ ಭಾವನೆಗಳಡಗಿರುವ ಆ ಸಾಲುಗಳ.
ಪದೇ ಪದೇ ಓದಿದೆ.
ಪದೇ ಪದೇ ಓದಲಿದ್ದೇನೆ. 

Monday 14 January 2019

ಅತಿ ಸರ್ವತ್ರ ವರ್ಜಯೇತ್

ಅತಿ ಸರ್ವತ್ರ ವರ್ಜಯೇತ್ 

ನೆನ್ನೆಯಿಂದ ಅಪ್ಪನ ಸಲಹೆಗಳು ಯಾಕೋ ಹೆಚ್ಚಿದೆ, ಮನಸ್ಸಿಗೆ ಒಂದು ರೀತಿಯ ಸಂಕಟ ನೀಡುತ್ತಿದ್ದೆ. ನನ್ನಿಂದ ದೂರವಾಗುವೆ ಇನ್ನು ನೀನು ಅಂತೆಲ್ಲಾ ಹೇಳುತ್ತಿದ್ದಾರೆ. ಅದು ಹೇಗೆ ತಾನೇ ಸಾಧ್ಯ? ನನ್ನ ಅಸ್ಥಿತ್ವ ಅವರಿಂದ. ಅವರಿಲ್ಲದಿರೋ ಜೀವನದ ಕಲ್ಪನೆಯು ಅಸಾಧ್ಯ. "ಅತಿ ಸರ್ವತ್ರ ವರ್ಜಯೇತ್" ಯೆಂದು ತಿಳಿ ಹೇಳುವ ಅಪ್ಪನಿಗೆ, ನಾಲ್ಕು ಹುಸಿ ಪೆಟ್ಟುಕೊಟ್ಟು "ಅತಿ ಸರ್ವತ್ರ ವರ್ಜಯೇತ್" ಯೆಂದು ನಾನು ತಿಳಿ ಹೇಳಬೇಕೆನಿಸಿದೆ. ಹಾಗೆ ಹೇಳ ಹೋದರೆ ಮತ್ತೆ ವೇಂದಾಂತಿಯಾಗುವ ನನ್ನಪ್ಪ "ನೋಡು, ಈಗ ನೀನು ಎಷ್ಟು ಬೆಳೆದಿದ್ದೀಯ, ಅದು ಯಾವಾಗ ನನ್ನ ಪುಟ್ಟ ಕೂಸಕ್ಕ ದೊಡ್ಡವಳಾದಳೆಂದು ತಿಳಿಯಲೇ ಇಲ್ಲಾ. ನಿನ್ನ ಜೀವನವನ್ನು ನೀನೀಗ ಕಟ್ಟಿಕೊಳ್ಳುವಷ್ಟು ಸಾಮರ್ಥ್ಯ ಬಂದಿದೆ, ರೆಕ್ಕೆ ಬಲಿತ ಹಕ್ಕಿ ಗೂಡ ತೊರೆಯಲೇ ಬೇಕು. ಮುದ್ದಾಗಿ ಸಾಕಿದ ಮಗಳ ಒಂದಲ್ಲ ಒಂದು ದಿನ ಮನೆಯಿಂದ ಕಲಿಸಲೇ ಬೇಕು."

ಇದೊಂತರ ಬಿಡಿಸಲಾಗದ ಕಗ್ಗಂಟು. ಸಮಯಕ್ಕೆ ತಕ್ಕಂತೆ ಮಾತಿನ ಅರ್ಥಗಳು ಬದಲಾಗುತ್ತ ಹೋಗುತ್ತದ್ದೆ. Some statement contradicts itself. Its a paradox. ನೀವು ಓದಿದಷ್ಟು ಸುಲಭದ ಮಾತಲ್ಲವಿದು. ಇದರ ಘಾಡತೆ ತಿಳಿಯಲು ನೀವು ಇದನ್ನು ಜೀವಿಸಿರಬೇಕು. 

Wednesday 9 January 2019

All I wanted

All I wanted is, I have to be;
A reason for his grin
A reason for a sparkle in his eyes
That's it.

Tuesday 8 January 2019

Girl with a golden heart

She is a girl with a golden heart.
People extracted the gold for once own benefit.
She is a girl with a mother heart.
Which suffered, yet forgiven the sins of the human race. 



Saturday 5 January 2019

ಅಳುವು-೨

Have you ever missed someone very much, that you find it very difficult to breath also?
if you never experienced it, you missed the beautiful part of the true emotions. 
Run run run,
Go now itself and love someone unconditionally. 
doesn't matter whoever they may be.
Your mom, dad, brother, sister in law, best friend or your fiance. 
Love someone/something for yourself by being selfless, experience the beauty of life.
it's pristine, it's divine. 
Soulful. 

Trust

trusted you,
now it's your time to prove me right. 

Surrendered

ಕುರುಡಿಯೇ ನಾನು?
ಗೊತ್ತಿಲ್ಲ.!
ದಡ್ಡಿಯೇ ನಾನು?
ತಿಳಿದಿಲ್ಲ.!
ಮೊದಲ ನಗುವಿಗೆ ಸೋತು ಮರುಳಾದೆ.
ಮೊದಲ ನಗುವಿಗೆ ಅವನನ್ನು ಒಪ್ಪಿ ಶರಣಾದೆ.



Balancing art

ಅತಿವೃಷ್ಟಿಯು ಕಷ್ಟ, ಅನಾವೃಷ್ಟಿಯೂ ಕಷ್ಟ. 
ಜೀವನವನ್ನು ಸಮತೋಲನವಾಗಿ ಸಾಗಿಸುವುದು ಒಂದು ಕಲೆಯೇ ಸರಿ. 
ಇಷ್ಟಲ್ಲದೆಯೇ ಹಿರಿಯರು ಹೇಳಿಯರೇ "ಅತಿಯಾದರೆ ಅಮೃತವು ವಿಷವೆಂದು". 
ಹೌದು ಯಾವುದೆ ಆಗಲಿ ಅತಿಯಾದರೆ ಅದು ತನ್ನ ಮಹತ್ವವನ್ನು ಕಳೆದು ಕೊಳ್ಳುತ್ತದೆ. 
ಹಾಗಂತ ತೀರಾ ಕಮ್ಮಿಯಾದರೂ ಅದು ಯಾರ ಗಮನಕ್ಕೂ ಬಾರದೆ ತನ್ನಲ್ಲಿಯೇ ಕಳೆದು ಹೋಗುತ್ತದೆ. 
ನಿಮ್ಮ ಜೀವನವನ್ನು ಎಷ್ಟು ಸರಳ ಹಾಗು ಸುಂದರ ಗೊಳಿಸುವೆ ಎಂಬುದು ನಿಮ್ಮ ಕೈಯಲ್ಲಿದೆ. 
ನೀನೊಬ್ಬ ಕಲಾವಿದ. 
ನೀನೊಂದು ಸುಂದರ ಕಲಾಕುಸುರಿ.  
ಅಡಿಗೆ ರುಚಿಸ ಬೇಕಾದರೆ ಉಪ್ಪಿನ ಪ್ರಮಾಣ ಬಹಳಾನೇ ಮುಖ್ಯ. 
ಮರೆಯದಿರಿ. 

Friday 4 January 2019

ಯಾರಿಗಿಷ್ಟವಿಲ್ಲ.

ಯಾರಿಗಿಷ್ಟವಿಲ್ಲ
ನಕ್ಕು ನಗಿಸುವಾತ.
ಯಾರಿಗಿಷ್ಟವಿಲ್ಲ
ಪೆದ್ದು ಪೆದ್ದಾಗಿ ಮುದ್ದು ಮಾತನಾಡುವಾತ.
ಯಾರಿಗಿಷ್ಟವಿಲ್ಲ
ಮರೆಯಲ್ಲಿ ಅವಿತಿರುವ ಅವನ ಬುದ್ದಿವಂತಿಗೆ.

ಅರವತ್ತರ ಮುದುಕನು ಅವನೇ,
ಆರುವರ್ಷದ ಮಗುವು.
ಹದಿನಾರರ ತುಂಟ ಹುಡುಗ,
ಇಪ್ಪತ್ತಾರರ ಪ್ರಭುದ್ದ ವ್ಯಕ್ತಿ.

ನನ್ನವನಿಗೆ ನನ್ನವನೇ ಸಾಟಿ.

ಸಣ್ಣದೊಂದು ಕಪ್ಪು ಬೊಟ್ಟು ಅವನ ಕಿವಿಯ ಹಿಂದೆ ಹಚ್ಚ ಬೇಕಿದೆ.
ನನ್ನೀ ಹುಚ್ಚು ಪ್ರೀತಿಗೆ ದೃಷ್ಟಿ ತಾಕುವಂತಿದೆ.