Monday, 14 January 2019

ಅತಿ ಸರ್ವತ್ರ ವರ್ಜಯೇತ್

ಅತಿ ಸರ್ವತ್ರ ವರ್ಜಯೇತ್ 

ನೆನ್ನೆಯಿಂದ ಅಪ್ಪನ ಸಲಹೆಗಳು ಯಾಕೋ ಹೆಚ್ಚಿದೆ, ಮನಸ್ಸಿಗೆ ಒಂದು ರೀತಿಯ ಸಂಕಟ ನೀಡುತ್ತಿದ್ದೆ. ನನ್ನಿಂದ ದೂರವಾಗುವೆ ಇನ್ನು ನೀನು ಅಂತೆಲ್ಲಾ ಹೇಳುತ್ತಿದ್ದಾರೆ. ಅದು ಹೇಗೆ ತಾನೇ ಸಾಧ್ಯ? ನನ್ನ ಅಸ್ಥಿತ್ವ ಅವರಿಂದ. ಅವರಿಲ್ಲದಿರೋ ಜೀವನದ ಕಲ್ಪನೆಯು ಅಸಾಧ್ಯ. "ಅತಿ ಸರ್ವತ್ರ ವರ್ಜಯೇತ್" ಯೆಂದು ತಿಳಿ ಹೇಳುವ ಅಪ್ಪನಿಗೆ, ನಾಲ್ಕು ಹುಸಿ ಪೆಟ್ಟುಕೊಟ್ಟು "ಅತಿ ಸರ್ವತ್ರ ವರ್ಜಯೇತ್" ಯೆಂದು ನಾನು ತಿಳಿ ಹೇಳಬೇಕೆನಿಸಿದೆ. ಹಾಗೆ ಹೇಳ ಹೋದರೆ ಮತ್ತೆ ವೇಂದಾಂತಿಯಾಗುವ ನನ್ನಪ್ಪ "ನೋಡು, ಈಗ ನೀನು ಎಷ್ಟು ಬೆಳೆದಿದ್ದೀಯ, ಅದು ಯಾವಾಗ ನನ್ನ ಪುಟ್ಟ ಕೂಸಕ್ಕ ದೊಡ್ಡವಳಾದಳೆಂದು ತಿಳಿಯಲೇ ಇಲ್ಲಾ. ನಿನ್ನ ಜೀವನವನ್ನು ನೀನೀಗ ಕಟ್ಟಿಕೊಳ್ಳುವಷ್ಟು ಸಾಮರ್ಥ್ಯ ಬಂದಿದೆ, ರೆಕ್ಕೆ ಬಲಿತ ಹಕ್ಕಿ ಗೂಡ ತೊರೆಯಲೇ ಬೇಕು. ಮುದ್ದಾಗಿ ಸಾಕಿದ ಮಗಳ ಒಂದಲ್ಲ ಒಂದು ದಿನ ಮನೆಯಿಂದ ಕಲಿಸಲೇ ಬೇಕು."

ಇದೊಂತರ ಬಿಡಿಸಲಾಗದ ಕಗ್ಗಂಟು. ಸಮಯಕ್ಕೆ ತಕ್ಕಂತೆ ಮಾತಿನ ಅರ್ಥಗಳು ಬದಲಾಗುತ್ತ ಹೋಗುತ್ತದ್ದೆ. Some statement contradicts itself. Its a paradox. ನೀವು ಓದಿದಷ್ಟು ಸುಲಭದ ಮಾತಲ್ಲವಿದು. ಇದರ ಘಾಡತೆ ತಿಳಿಯಲು ನೀವು ಇದನ್ನು ಜೀವಿಸಿರಬೇಕು. 

No comments:

Post a Comment