ನಿನ್ನೆಡೆಗೆ ಬರುವಾಗ ಶೃಂಗಾರದ ಹೊರೆ ಏಕೆ? ಯೆಂದು ರಾಷ್ಟ್ರಕವಿ ಕುವೆಂಪಜ್ಜ ಹೇಳಿರುವ ಮಾತು ಈಗಲೂ ಕಿವಿಯಲ್ಲಿ ಗುನುಗುಟ್ಟಿದಂತನ್ನಿಸುತ್ತದೆ. ಎಷ್ಟು ಸತ್ಯದ ಮಾತಲ್ಲವೇ ಇದು. ಹೃದಯದ್ದಲ್ಲಿ ಪ್ರೀತಿಯ ಅಲಂಕಾರವಿರಲು ಮುಂದೊಂದು ದಿನ ಮಾಸಿಹೋಗುವ ಮುಖಕ್ಕೇಕೆ ಅಲಂಕಾರ. ಅಲ್ಲವೇ?
ಫೇಸ್ಬುಕ್ಕಿನಲ್ಲಿ, ಅಲ್ಲಿ ಇಲ್ಲಿ ಆಗೊಮ್ಮೆ ಈಗೊಮ್ಮೆ ಓದ ಸಿಗುವ ಬಹಳಾನೇ ಪ್ರಸಿದ್ದವಾಗಿರುವ ಮೀಮ್ ಒಂದು ಹೀಗಿದೆ, "ನಿನಗಾಗಿ ನೀನು ಶೃಂಗಾರ ಮಾಡಿಕೋ, ಬೇರೆಯವರು ಏನಂದಾರು ಎಂಬುದ ಬಿಡು". ಇದು ಒಂದು ರೀತಿಯಲ್ಲಿ ಒಪ್ಪಬೇಕಾದ ವಿಷಯವೇ. ಆದರೆ ನಮಗೆ ನಾವು ಹೇಗಿದ್ದರೂ ಇಷ್ಟವೇ. ನಮ್ಮವರಿಗೂ ಹಾಗೆಯೇ, ನಾವು ಹೇಗೆ ಕಂಡರೂ ಪ್ರೀತಿಯೇ.
ಆದರೆ ನನಗನಿಸುವಂತೆ ಆಗೊಮ್ಮೆ ಈಗೊಮ್ಮೆ ಅವರಿಗಾಗಿ, ನಮ್ಮವರಿಗಾಗಿ ಶೃಂಗರಿಸಿಕೊಳ್ಳುವ ಮಜವೇ ಬೇರೆ.
ಹುಬ್ಬುಗಳ ನಡುವೆ ಗುಂಡನೆಯೇ ಕೆಂಪು ಬೊಟ್ಟು ಇಟ್ಟಾಗ ಅವರ ನೆನೆದು ಕೆನ್ನೆಗಳಲ್ಲಿ ಗುಳಿ ಬೀಳುವುದೇ ಒಂದು ಚೆಂದ.

ಕಿವಿಯಲ್ಲಿ ನೇಲುವ ಮುತ್ತಿನ ಜುಮ್ಕಿ ಆಟಗಳು ಅವರ ತುಂಟತನವ ಬಿಂಬಿಸಿ ಕೆನ್ನೆಯನ್ನು ಕೆಂಪಾಗಿಸಿ ಕಣ್ಣಲ್ಲಿ ಮಿಂಚಾಗಿ ಹರಿದು ಹೋಗುವುದೆ ಒಂದು ಸೊಗಸು. ಮೂಗಿನಲ್ಲಿ ಇರುವ ಬೊಟ್ಟು, ಕೊರಳಿನ ಮಾಲೆ, ಕಾಲಿನಾ ಬೆಳ್ಳಿ ಗೆಜ್ಜೆ, ಕಣ್ಣಲ್ಲಿ ಹಚ್ಚಿದ ಕಪ್ಪು ಕಾಡಿಗೆ, ತುಟಿಯಲ್ಲಿನ ನಗು, ಅಬ್ಬಾ ಹೀಗೆ ಹತ್ತು ಹಲವು ಅಲಂಕಾರಗಳು ಅವರನ್ನೇ ನೆನಪಿಸಿ ಕಾಡುತದ್ದೆ. ಹೃದಯಾಲಂಕಾರದೊಡನೆ ದೇಹಾಲಂಕಾರ ಬೆರೆತು ಶೃಂಗಾರಕಾವ್ಯ ಮಿಡಿದಾಗ, ಅವರಿಗೆ ನಾನು ಚೆಂದ ಕಾಣಿಸಿಯಾನೆಯೆಂಬ ಪ್ರಶ್ನೆ ಹಣೆಯ ಮೇಲೆ ಸಣ್ಣದೊಂದು ನೆರಿಗೆ ಮೂಡಿಸುತ್ತದೆ.
No comments:
Post a Comment