ಅತಿವೃಷ್ಟಿಯು ಕಷ್ಟ, ಅನಾವೃಷ್ಟಿಯೂ ಕಷ್ಟ.
ಜೀವನವನ್ನು ಸಮತೋಲನವಾಗಿ ಸಾಗಿಸುವುದು ಒಂದು ಕಲೆಯೇ ಸರಿ.
ಇಷ್ಟಲ್ಲದೆಯೇ ಹಿರಿಯರು ಹೇಳಿಯರೇ "ಅತಿಯಾದರೆ ಅಮೃತವು ವಿಷವೆಂದು".
ಹೌದು ಯಾವುದೆ ಆಗಲಿ ಅತಿಯಾದರೆ ಅದು ತನ್ನ ಮಹತ್ವವನ್ನು ಕಳೆದು ಕೊಳ್ಳುತ್ತದೆ.
ಹಾಗಂತ ತೀರಾ ಕಮ್ಮಿಯಾದರೂ ಅದು ಯಾರ ಗಮನಕ್ಕೂ ಬಾರದೆ ತನ್ನಲ್ಲಿಯೇ ಕಳೆದು ಹೋಗುತ್ತದೆ.
ನಿಮ್ಮ ಜೀವನವನ್ನು ಎಷ್ಟು ಸರಳ ಹಾಗು ಸುಂದರ ಗೊಳಿಸುವೆ ಎಂಬುದು ನಿಮ್ಮ ಕೈಯಲ್ಲಿದೆ.
ನೀನೊಬ್ಬ ಕಲಾವಿದ.
ನೀನೊಂದು ಸುಂದರ ಕಲಾಕುಸುರಿ.
ಅಡಿಗೆ ರುಚಿಸ ಬೇಕಾದರೆ ಉಪ್ಪಿನ ಪ್ರಮಾಣ ಬಹಳಾನೇ ಮುಖ್ಯ.
ಮರೆಯದಿರಿ.
No comments:
Post a Comment