Tuesday 5 March 2019

ನನಗೇನೋ ಆಗಿದೆ.

ಅಂದೊಮ್ಮೆ ಹೇಳಿದ್ದೆ,
ನಾ ಕಳೆದು ಹೋದರೆ ನನ್ನ ಹುಡುಕಿ ತರುವವನ ನೀರೀಕ್ಷೆ ನನಗಿಲ್ಲ.
ಬದಲಿಗೆ ನನ್ನೊಡನೆ ಕಳೆದು ಹೋಗುವವ ಬೇಕೆಂದು.

ಇತ್ತೀಚೆಗೆ,
ಏನಾಗುತ್ತಿದೆ ನನಗೆಂದು ತಿಳಿಯುತ್ತಿಲ್ಲ.
ನಾನಂತೂ ತಿಳಿಯದ ಹಾದಿಯಲ್ಲಿ ಚಲಿಸುತ್ತ ಅದೆಲ್ಲಿಯೋ ಕಳೆದು ಹೋಗುತ್ತಿದ್ದೇನೆ.
ಆದರೂ ಸ್ವಲ್ಪವೂ ಭಯವಿಲ್ಲ, ನಡುಕವಿಲ್ಲ.
ನನ್ನ ಹೆಗಲ ಮೇಲೊಂದು ಕೈ ಸದಾಕಾಲ ನನ್ನೊಂದಿಗಿದೆ.
ನನ್ನ ಹೆಜ್ಜೆ ಜೊತೆ ಅವನಹೆಜ್ಜೆ ಗುರುತು ಮೂಡಿಸುತ್ತಿದ್ದೆ.
ಹಾದಿಯ ಅರಿವಂತೂ ಮೊದಲೇ ಇರಲ್ಲಿಲ್ಲ. ಈಗೀಗ ಸಮಯದ ಪರಿವು ಇಲ್ಲದಾಗಿದೆ.
ಎಷ್ಟು ದೂರ ಜೊತೆಯಾಗಿ ಬಂದೆವೆಂಬ ಕುತೂಹಲ.  ಆ ನಮ್ಮ ಹೆಜ್ಜೆಗುರುತುಗಳ ತಿರುಗಿ ನೋಡೋಣವೆನಿಸಿತು.

ಅರೆ! ಅವುಗಳ್ಳನ್ನು ಯಾರೋ ಅಳಿಸಿರುವರಲ್ಲ!!!!!

ಅನಿಸಿತು ನನ್ನೊಳಗಿನ ಮರೆವೆಂಬ ಸಮುದ್ರದಾ ಅಲೆಯ ಕೆಲಸವಿದಿರಬಹುದೆಂದು.
ನಂತರ ಅರಿವಾಯಿತು, ನಮ್ಮನ್ನು ಯಾರು ಹಿಂಬಾಲಿಸದಿರಲೆಂದು ಅವನು ಮಾಡಿದ ಕೆಲಸವಿದು.
ನನ್ನೊಂದಿಗೆ ಕಳೆದುಹೋಗಲು ಅವನ ಉಪಾಯವಿದು.