Wednesday 3 April 2019

ಅಮ್ಮ

ಅಪ್ಪನ ಬುದ್ಧಿ ಮಾತುಗಳ ಬಗ್ಗೆ ಬಹಳ ಸಾರಿ ಹೇಳಿದ್ದೇನೆ.
ಅಪ್ಪನ ಬಗ್ಗೆ ಹೆಚ್ಚಾಗಿ ಮಾತನಾಡುತ್ತಲ್ಲೇ ಇರುತ್ತೇನೆ.
ಎಲ್ಲರೂ ನನ್ನನ್ನು ಅಪ್ಪನ ಮಗಳು ಎಂದೇ ಕರೆಯುತ್ತಾರೆ.
ಮನೆಯಲ್ಲಿಯೂ ಯಾವದಾದರೂ ವಿಷಯಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುವಾಗ ಅಪ್ಪನ ಪರವಹಿಸುವುದೇ ಹೆಚ್ಚು ನಾನು. ಅಮ್ಮ ಯಾವಾಗಲು ಹೇಳುವುದುಂಟು, "ನೀನು ಅಪ್ಪನ್ನನುಯೆಲ್ಲಿ ಬಿಟ್ಟುಕೊಡುವೆ. ಅಪ್ಪನ ಮಗಳಲ್ಲವೇ. ಅಮ್ಮನನ್ನು ಪಾಪ ಯೆಂದು ಎಂದಿಗೂ ನಿನ್ನ ಬಾಯಲ್ಲಿ ಬರುವುದಿಲ್ಲ."
ಅದು ನಿಜವಾಗಿವು ದಿನನಿತ್ಯದ ಸತ್ಯದ ಮಾತೆ. ನಾನು ಮಾಡುವುದನ್ನೇ ಅಮ್ಮ ಹೇಳುವುದು.
ಆದರೆ ಅಪ್ಪನ ಮೇಲೆ ಅಷ್ಟು ಪ್ರೀತಿ, ಗೌರವ, ವಿಶ್ವಾಸ ಬರಲು ಕಾರಣವೇ ನನ್ನಮ್ಮ. ಆಕೆಯ ಗುಣ. ಏನೆ ಆದರೂ ಎಷ್ಟೇ ಕಷ್ಟವಾದರೂ, ಎಷ್ಟೇ ತೊಂದರೆಯಲ್ಲಿದ್ದರು, ನೋವಾದರೂ, ಅಪ್ಪನನ್ನು ಅಮ್ಮ ಯೆಂದಿಗೂ ಬಿಟ್ಟು ಕೊಟ್ಟಿಲ್ಲ. ಹೊರ ಜನರು ಹೋಗಲಿ, ಮನೆಯವರಾದ ನಮ್ಮ ಮುಂದೆಯೂ ಅಪ್ಪನ ಗೌರವವಯೆತ್ತಿ ಹಿಡಿಯುವುದು ನನ್ನಮ್ಮ, ಆಕೆ ನನ್ನ ನಿಜವಾದ ಹೆಮ್ಮೆ.
***************************
ಅಮ್ಮ ಒಂದು ಮಾತು ಯಾವಾಗಲು ಹೇಳುವುದುಂಟು, "ಅವರವರಿಗೆ ಬಂದಾಗಲೇ ಕಷ್ಟಗಳ ತೀವ್ರತೆ ಅರ್ಥವಾಗುವುದು, ಸುಮ್ಮನೆ ನಾವು ಹೇಳಬಹುದಷ್ಟೆ, ಆದರೆ ಅನುಭವಿಸುವವರಿಗೆ ಮಾತ್ರ ಅದು ತಿಳಿಯುವುದು".
ಹೌದು. ನನಗು ಇದು ನಿಜವೆನಿಸುತ್ತದೆ.
ನಾನು ಈಗ (ಪ್ರಸ್ತುತ ಪರಿಸ್ಥಿತಿ) ಅನುಭವಿಸುತ್ತಿರು ಯಾತನೆಗಳಾಗಲಿ, ಅಥವಾ ನನ್ನ ತಳಮಳಗಳಾಗಲಿ ಯಾರಬಳಿಯು ನನಗೆ ಹೇಳಲು ಅಸಾಧ್ಯ, ಅಕಸ್ಮಾತ್ ನಾನಿದನು ಯಾರಬಲಿಯಾದರು ಹಂಚಿ ಕೊಂಡರು ಇದರ ತೀವ್ರತೆಯ ಅರಿವು ಅವರಿಗೆ ಅರಿವಾಗದು. ಅರಿವಾದರೂ ಬುದ್ಧಿವಾದ ಹೇಳುವವರೇ ಎಲ್ಲರೂ. ಸಾವುಧಾನದಿಂದ ಕೇಳಿ ಸಾಂತ್ವನ ಹೇಳುವುದಕ್ಕಿಂತ, ಅಥವಾ ಒಂದೊಳ್ಳೆ ಮೌನದಿ ಸುಮ್ಮನ್ನೆ ನಮ್ಮ ಜೊತೆ ನೀಡುವುದಕ್ಕಿಂತ, ತಮ್ಮ ಜಾಣ್ಮೆಯ ತೋರಿಕೆಯೇ ಹೆಚ್ಚಾಗಿರುತ್ತದೆ.
****************************
"ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧುವಿಲ್ಲ".
ನಮ್ಮ ಎಲ್ಲಾ ಸತ್ಯವನ್ನು ತಾಯಿಯ ಬಲಿಯಾಗಲಿ, ಅಥವಾ ಮತ್ತೊಬರ ಬಲಿಯಾಗಲಿ ಹೇಳುವುದು ಅಸಾಧ್ಯವೇ ಹೌದು. ನಮ್ಮೆಲ್ಲರಲ್ಲಿ ಒಬ್ಬ ಕಳ್ಳನಿದ್ದಾನೆ. ಎಲ್ಲರೂ ಮುಖವಾಡ ಧರಿಸಿರುವವರೇ. ಅದು ತಪ್ಪು ಅಲ್ಲ. ಸ್ವಂತಿಕೆ ಬಹಳ ಮುಖ್ಯ. ಆದರೆ ೧೦೦ ರಲ್ಲಿ ೬೦ ರಿಂದ ೭೦ ರಷ್ಟು ನಾನೇನೇದು ಅಮ್ಮನಿಗೆ ತಿಳಿದಿದೆ, ಅರ್ಥವಾಗುತ್ತದೆ. ನನ್ನನು ಒಂದಷ್ಟರಮಟ್ಟಿಗೆ ಸರಿಯಾಗಿ ಅರ್ಥ ಮಾಡಿಕೊಳ್ಳುವುದು ನನ್ನಮ್ಮನೇ.
*****************************
ಹೇಗೆ ಕೃತಜ್ಞತೇ ಹೇಳುವುದು ತಿಳಿಯುತ್ತಿಲ್ಲ.
ಅದು ಅಲ್ಲದೆ, ಎಂದಿಗೂ ಏನಕ್ಕೂ ಕೃತಜ್ಞತೇಯಾಗಲಿ ಪ್ರಶಂಶೆಯಾಗಲಿ ಬಯಸದೆ ಇರುವು ತಾಯಿ ಒಬ್ಬಳೇ.
*****************************
ನನ್ನಪ್ಪ ಪುಣ್ಯವಂತರು.
ನಾನು ಪುಣ್ಯವಂತೆ.
*****************************
ಐ ಲವ್ ಯು ಅಮ್ಮ.

ತಳಮಳ

ಬೇರೆಯವರ ಬಳಿ ಏನೆಂದು ನಾ ಹೇಳಲಿ ನನ್ನವನ ವಿಷಯವ. ನನ್ನ ವಿಷಯವ.
ಕೇಳುವವರಿಗೂ ಅದು ಅರ್ಥವಾಗದು, ಹೇಳುವ ನನಗು ಅದೇನೆಂದು ಸರಿಯಾಗಿ ಅರ್ಥವಾಗಿಲ್ಲದ್ದು.
ಬಹಳಾನೇ ತಳಮಳಗೊಂಡಿರುವ ಈ ನನ್ನ ಮನಕೆ ಶಾಂತಿ ನಾನೇ ನೀಡಬೇಕಿದೆ. ಒಮ್ಮೆ ಸುಮ್ಮನೆ ನಕ್ಕು ಎಲ್ಲವ ಮರೆತು ಬಿಡಬೇಕಿದೆ.