Sunday, 20 August 2017

ಕೆಂಪು ಮುದ್ದಣ

Mirror, mirror, on the wall who is the prettiest of them all? ಎಂದು ಆಕೆ ಕೇಳಿದಳು.
ಕನ್ನಡಿಗೆ ಇಂದೇಕೊ ಗರ್ವ ಆಕೆಯನ್ನು ಪ್ರತಿಬಿಂಭಿಸಲು. ಆಕೆಯ ಸೌಂದರ್ಯಕಿಂದದೇನೋ ಗರಿಮೂಡಿದೆ. ಸುಂದರ ಮೊಗದಲ್ಲೆರೆಡು ಕೆಂಪು ಮುದ್ದಣ (ಮೊಡವೆ) ನಿಲುಕಿ ನೋಡಿವೆ.

ಎಂದಿನಂತೆ ಇಂದುಸಹ  ಆಕೆಯ ಪಯಣ ತನ್ನ ಗೆಳೆಯನ ನೋಡಿ, ಮಾತನಾಡಿಸಿ ದಿನದ ಶುಭಾರಂಭದೆಡೆಗೆ ಸಾಗಿದೆ.
ನಿರ್ಧರಿಸಿದ ಸ್ಥಳದಲ್ಲಿ ಅವರಿಬ್ಬರ ಭೇಟಿ. ಎಂದಿನಂತೆ ಅವಳ ಕಂಗಳು ಹೊಳೆದಿವೆ, ತುಟಿಗಳು ಅರಳಿವೆ,ಕೆನ್ನೆಯಲ್ಲಿ ಗುಳಿಬೇರೆ.

ಗೆಳೆಯನ ತುಂಟತನದ ಪೆಟ್ಟೊಂದು ತಿಳಿಯದೆ ಮುದ್ದಣ್ಣಿಗೆ ತಾಕಿರಲು, ಅವಳಿಗೆ ಬಲು ಬೇನೆ. ಹುಸಿಕೋಪದಿಂದ ಅವನನ್ನು ಆಕೆ ದಿಟ್ಟಿಸಿರಲು, ನಸುನಕ್ಕನವನು. ಎಂದಿನಂತೆ ಅವನ ಕೈ ಅವಳ ಕೆನ್ನೆ ಸೋಕಿರಲು, ಮುದ್ದಣ ನಾಚಿ ಅವನ ಕೈಗೆ ಚುಂಬಿಸಿತು. ಗೆಳೆಯನ ಬೆಚ್ಚಗಿನ ಕೈಶಾಖದಿಂದ ಮುದ್ದಣ ಕೆಂಪಾಯಿತು. ಹಿತವಾದ ನೋವೆಂದರೆ ಇದುವೆಯಾ? ಗ್ರೇಶಿ ನಕ್ಕಾಳು ಅವಳು.

ಅವಳು ಕೆಲಸಕ್ಕೆ ಹೊರಡುವ ಸಮಯ. ಜೀವನದ ಅತ್ಯಂತ ಕ್ರೂರ ಕ್ಷಣಗಳು. ವಿಧಾಯದ ಸಿಹಿಯೊಂದ ಕೆನ್ನೆಗಿತ್ತ. ಅವನ ಬಿಸಿ ಉಸಿರಿಗೆ ಮುದ್ದಣ ಹಣ್ಣಾಯಿತು. ಅವಳು ಹೊರಟಳು.

ದೂರವಿದ್ದಷ್ಟೂ ಹತ್ತಿರಕ್ಕೆ ಹೋಗಲು ಮನ ಚಡಪಡಿಸುತ್ತದೆ. ಹತ್ತಿರವಾದಾಗ ಸಮಯ ಬೇಗ ಸಾಗುತ್ತದೆ. ಮತ್ತೆ ದೂರಹೋಗುವ ಸಮಯ. ದೂರಹೋಗುವ ಸಮಯ ಎಷ್ಟೇ ಬೇನೆ ನೀಡಿದರು ಮತ್ತೆ ಸಿಗುವೆವೆಂಬ ಖುಷಿ ನೀಡುತ್ತದೆ. 

No comments:

Post a Comment