ಮಳೆಗಾಲ ಬಂತಯ್ಯ, ಮಳೆಗಾಲ.
ಹಳೆಯ ಶಾಲಾದಿನಗಳು ನೆನಪಾಗುತ್ತಿದೆ. ರಜೆಯ ದಿನಗಳು ಮುಗಿದು ಶಾಲೆ ಶುರುವಾಗುವ ಸಮಯವದು. ರೈನಕೋಟ್ ಧರಿಸಿ, ಪುಟ್ಟ ಪುಟ್ಟ ಕೈಗಳಲ್ಲಿ ದೊಡ್ಡ ಕೊಡೆಹಿಡಿದು, ತೂಕದ ಚೀಲವ ಹೆಗಲಿಗೇರಿಸಿ ಕೆಸರು ನೀರಿನಲ್ಲಿ ಪಚಪಚ ಮಾಡುತ್ತ ಶಾಲೆಗೋಗುವುದು, ಮನೆಗೆ ವಾಪಾಸ್ ಬರುವುದು ಇದುವೇ ದಿನಚರಿ!! ಮಳೆಗಾಲವೆಂದರೆ ಆಗಿನಿಂದಲೇ ಪ್ರೀತಿ. ಮಳೆಯಲ್ಲಿ ನೆನೆಯುವುದು, ಅಮ್ಮನ ಬಳಿ ಬೈಸಿಕೊಳ್ಳುವುದು. ಒದ್ದೆಯಾದ ಪುಸ್ತಕಗಳು, ಕಿತ್ತು ಹೋಗುತಿದ್ದೆ ಹೊಸ ಶೂಗಳು, ಮಳೆ ನೀರಿನಿಂದ ವಾಸನೆ ಬರುತ್ತಿದ್ದ ಸಾಕ್ಸ್ಗಳು ಎಲ್ಲವೂ ಖುಷಿಯೇ. ಈ ಖುಷಿಯ ನಡುವೆ ಮಳೆಗಾಲವೆಂದರೇನೋ ಭಯ! ಈಗಲೂ ಈ ಭಯ ಹಾಗೆಯೇ ಇದೆ. ಸೂರ್ಯನ ಸುಳಿವಿವೆ ಇಲ್ಲ, ಆದರೂ ನೆರಳೊಂದು ಹಿಂಬಾಲಿಸಿದಂತೆ. ಸಣ್ಣ ವಾಸಿನಿಂದಲೇ ಈ ಭಯ ಹಾಗೆಯೇ ಮನಸಿನ್ನಲ್ಲಿ ಬೇರೂರಿಬಿಟ್ಟಿದೆ. ಈ ಭಯಕ್ಕೆ ಕರಣವೇನಿರಬಹುದೆಂದು ಈಗಲೂ ಕೆಲವೊಮ್ಮೆ ಯೋಚಿಸುವುದುಂಟು.
ನನಗನಿಸಿದ ಪ್ರಕಾರ:
ಸಣ್ಣವಲ್ಲಿದಾಗ ಬದಲಾವಣೆಯೆಂದರೆ ನನಗಷ್ಟು ಇಷ್ಟವಿರಲ್ಲಿಲ್ಲ. ಮಳೆಗಾಲದಲ್ಲಿ ಶಾಲೆ ಶುರುವಾಗುತ್ತಿದ್ದದ್ದು. ಮಳೆಗಾಲವೆಂದರೆ ಬದಲಾವಣೆಯ ಸಮಯವೆಂದೇ ಆ ಪುಟ್ಟ ವಯಸ್ಸಿನ್ನ ಮುಗ್ದಮಗುವಿನ ಅನಿಸಿಕೆಯಾಗಿತ್ತು. ವರ್ಷಕೊಮ್ಮೆ ಬದಲಾಗುತಿಯಿದ್ದ ಶಾಲಾ ಶಿಕ್ಷಕರು, ಹೊಸ ಪಠ್ಯ ಪುಸ್ತಕ, ಹೊಸ ಹೊಸ ಪಾಠಗಳು, ಬರಬರುತ್ತ ಹೆಸರುಗಳು ನೆನಪಿನ್ನಲ್ಲಿಡಲು ಕಷ್ಟವಾಗಿ ಸೋಶಿಯಲ್ ಸ್ಟಡೀಸ್ ಪಾಠಗಳು ಕಠಿಣವಾಗುತ್ತಿದ್ದದ್ದು, ಶಾಲೆಯಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲ್ಲಿಲ್ಲವೆಂದರೆ ಅಮ್ಮನಿಗೆ ಬೇಜಾರಾಗುವುದೆಂಬ ಯೋಚನೆಗಳು, ಹೀಗೆ ಸುಮಾರು ಸಣ್ಣ ಸಣ್ಣ ವಿಷಯಗಳು ಸೇರಿ ದೊಡ್ಡದಾಗಿ ನನ್ನನ್ನು ಹೆದರಿಸುತ್ತಿದ್ದವು. ಪ್ರೈಮರಿ ಕ್ಲಾಸ್ ಮುಗಿದು ಸೆಕೆಂಡರಿ ಕ್ಲಾಸ್ ಸೇರುವಾಗ ಶಾಲೆ ಬದಲಾಯಿತು, ಗೆಳೆಯರು ಬದಲಾದರು. ನಾನು ದೊಡ್ಡವಳಾದರು ನನ್ನ ಸಣ್ಣವಸಿನ್ನ ಭಯವನ್ನು ಹಾಗೆ ನನ್ನೊಂದಿಗೆ ಬಚ್ಚಿಟ್ಟುಕೊಂಡು ಮುಂದೆ ಸಾಗಿದ್ದೇ. ಹೊರಪ್ರಪಂಚಕ್ಕೆ ಹೆಚ್ಚು ಪರಿಚಯವಾಗುತ್ತಾ ಹೋದಂತೆ ಸಣ್ಣದಾಗಿದ್ದ ಭಯಗಳು ಬರಬರುತ್ತ ದೊಡ್ಡಗುತ್ತಿತೇನೋ ಒಳಗೊಳಗೇ, ಅಪ್ಪ ಅಮ್ಮನಿದ್ದ ಕಾರಣ ಅಷ್ಟಾಗಿ ಗೊತ್ತಾಗುತ್ತಿರಲ್ಲಿಲ್ಲ. ಈರೀತಿಯ ಭಯ ಈಗಲೂ ನನ್ನಲ್ಲಿಯೇ ಕೊಂಚ ಉಳಿದು ಹೋಗಿದೆ. ಹೆದರುವ ಅವಶ್ಯಕತೆಯಿಲ್ಲವೆಂಬ ಅರಿವಿದ್ದರೂ, ಅರಿವಿಗೆ ನಿಲುಕದ ಭಾವವೊಂದು ನನ್ನೊಳಗೆಯೇ ಶಾಶ್ವತವಾಗಿ ಗೂಡುಕಟ್ಟಿ ಮಲಗಿದೆ. ಹಾಗಾಗಿ ಮಳೆಗಾಲವೆಂದರೆ ಖುಷಿಯ ಜೊತೆಗೆ ಕೊಂಚ ಭಯವನ್ನು ಹೊತ್ತುತರುತ್ತದೆ.
ಕತ್ತಲ್ಲು ಗಟ್ಟಿದ ಸಂಜೆಯ ಮೋಡವೊಂದು ಅತ್ತಾಗ, ಇಹಲೋಕ ತೊರೆದ ಅಜ್ಜನ ನೆನಪು ಕಾಡುತ್ತದೆ. ಕಿಟಕಿಯ ಬಳಿ ಕಾಲುಮಡಚಿ ಕೂತಿರಲು ತಂಪಾದ ಗಾಳಿ ಮೈಸೋಕಿ ನನ್ನಜ್ಜಿಯೇ ತೊಟ್ಟಿಲ್ಲ ತೂಗುತ್ತ ಪದವಾಡಿಹಳು ಎನ್ನಿಸುತ್ತದೆ.
ಕಿರುಗುಟ್ಟುವ ಬಾಗಿಲುಗಳು ಹಳ್ಳಿ ಮನೆಯ ಕತ್ತಲೆ ಕೋಣೆಯ ನೆನಪು ತರಿಸುತ್ತದ್ದೆ. ಹೀಗೆ ಏನೇನೋ ಮಿಶ್ರಿತ ಭಾವನೆಗಳು ತಲೆತುಂಬೆಲ್ಲ ಸುಳಿದಾಡುವಾಗ, ಒಂದೊಳ್ಳೆ ಸಣ್ಣ ನಿದ್ದೆ ಕೂತಲ್ಲಿಯೇ ಮುಗಿದಿರುತ್ತದೆ.

No comments:
Post a Comment