Wednesday 23 June 2021

ಸಣ್ಣ ವಿಷಯ ದೊಡ್ಡ ಪರಿಣಾಮ.


ಜಗತ್ತು ಎಷ್ಟೇ ದೊಡ್ಡದಿರಲಿ. ಸಣ್ಣ ಸಣ್ಣ ಅಣುವಿನಿಂದ ಮಾಡಲ್ಪಟ್ಟಿದೆ, ಅಲ್ಲವೇ? ಹಾಗೆಯೆ ಈ ಸಂಸಾರ ಸಾಗರವು ಸಣ್ಣ ಸಣ್ಣ ಸೂಕ್ಶ್ಮ ಭಾವನೆಗಳಿಂದ ಎಣೆಯಲ್ಪಟ್ಟಿದ್ದೇ. ಹೇಗೆ ನನಗೆ ಮನೆ ಮನವನ್ನು ಶುಚಿಯಾಗಿ ಇಡಬೇಕೆಂಬ ಆಸೆ ಇದೆಯೋ ಹಾಗೆ ನನ್ನ ಅತ್ತೆಗೆ ಹಳೆಯ ರೀತಿ ನೀತಿಗಳನ್ನು ನೀರಾಕಿ ಬೆಳೆಸುವಾಸೆ. ಮುಸರೆ ಯನ್ನು ಎಷ್ಟು ಶಿಸ್ತಿನಿಂದ ಪಾಲಿಸುತ್ತಾರೆಂದರೆ ನನಗೆ ಕೋಪದ ಜೊತೆಯಲ್ಲಿ ಕರುಣೆಯು ಮೂಡುತ್ತದೆ. ನನ್ನ ಆದರ್ಶಗಳ ವಿರುದ್ಧ ಹೋಗಬೇಕಲ್ಲ ಎಂಬ ಸಂಕಟ ಒಂದೆಡೆಯಾದರೆ, ನನ್ನ ಪ್ರೀತಿಯ ಅತ್ತೆ ವಿರುದ್ಧ ಹೋಗಿ ಅವರ ಮನನೋಯಿಸಿದರೆ ಎಂಬ ಆತಂಕ. ಅವರ ಆದರ್ಶಗಳ ವಿರುದ್ಧಹೋಗುವ ಪ್ರತಿಕ್ಷಣವೂ ಅವರಿಗೆ ನೋವಾಗುವುದಕ್ಕಿಂತ ಹೆಚ್ಚು ನನ್ನ ಎದೆ ನೋವಾಗುತ್ತದೆ. (ಇದು ರೂಪಕಾಲಂಕಾರವಲ್ಲ. ನಿಜವಾಗಿಯೂ ತಲೆ ಬಿಸಿ ಆಗಿ ಎದೆ ಬಡಿತ ಹೆಚ್ಚಾಗಿ ಎದೆ ನೋವು ಬರುತ್ತದೆ, ಒಂದಷ್ಟು ಖರ್ಚು ಮಾಡಿ ಒಳ್ಳೆಯ ಆಸ್ಪತ್ರೆ ವರಗೆ ಹೋಗಿ ಬಂದೆ. ಅಷ್ಟರಮಟ್ಟಿಗೆ ಇದೆ ಯೆಂದರೆ ನೀವೇ ಇದರ ತೀಕ್ಷ್ಣತೆಯನ್ನು ಅರಿಯಿರಿ).  ಹೋಗಲಿ ಬಿಡು ಅವರಿಚ್ಛೆಯಂತೆ ಇರೋಣ ಅಂದರೆ ಅದು ನನ್ನ ಆದರ್ಶಗಳ ವಿರೋಧ. ಆಯ್ತು ನನ್ನ ಆದರ್ಶವನ್ನೇ ಪಾಲಿಸೋಣವೆಂದರೆ  ನನ್ನ ಆರೋಗ್ಯ ನನ್ನ ಕೈಬಿಟ್ಟು ಎದೆ ನೋವು ತರಿಸಿಕೊಳ್ಳುತ್ತದೆ. ಇದೊಂತರ ನಿಲ್ಲದ ಉತ್ತರ ಸಿಗದ ಪ್ರಶ್ನೆ, ಈ ಪರೀಕ್ಷೆಗೆ ಕೊನೆ ಇಲ್ಲವೇ? 

No comments:

Post a Comment