Tuesday, 11 July 2017

ತೋಚಿದ್ದನ್ನು ಗೀಚು

ಅದೊಂದು ಸುಂದರ ಸಂಜೆ (೨೪-೧-೨೦೧೭). ಎಂದಿನಂತೆ ಚನ್ನ ನನ್ನೊಂದಿಗೆ ಚಹಾ ಕುಡಿಯಲೆಂದು ನಮ್ಮ physics department ಕ್ಯಾಂಟೀನ್ಗೆ  ಬಂದ. ನಮ್ಮ ಕ್ಯಾಂಟೀನ್ ಓನರ್ ಮಹೇಶಣ್ಣನ್ನ ಜೊತೆ ಒಂದ್ದಷ್ಟು ತರಲೆ ಮಾತಾಡಿ ಚಹಾ ಕುಡಿದು ಅಲ್ಲಿಂದ ಹೊರೆಟೆವು.

ನನ್ನದು, ಚನ್ನದು ಒಂದು ಅಭ್ಯಾಸವಿತ್ತು.
ದಿನ ಸಂಜೆ ಜೊತೆಯಲಿ ಚಹಾ ಕುಡಿದು, ಒಂದಷ್ಟು ಸಾಮಾಜಿಕ ಹಾಗು ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡುತ್ತ, ನಡೆಯುತ್ತಾ ಬಸ್ ಸ್ಟಾಪ್ ವರೆಗೂ ಹೋಗಿ ಚನ್ನನನ್ನು ಬಸ್ ಹತ್ತಿಸಿ ಬರುವುದು.

ಅದರಂತೆ ನಮ್ಮ ಆ ದಿನದ ಚರ್ಚೆ ನೊಬೆಲ್ ಪ್ರಶಸ್ತಿಯಬಗ್ಗೆ.
ಚರ್ಚಿಸುತ್ತ ನಡೆಯುತ್ತಿದ್ದ ನಮಗೆ ದಾರಿ ಕಳೆದ್ದದೆ ತಿಳಿಯಲಿಲ್ಲ. ನಮ್ಮ ಚರ್ಚೆಗೆ ತೆರೆ ಎಳೆಯುವ ಸಮಯ ಬಂದಾಯ್ತು. ಆದರೆ ಅಂದೇಕೋ ಅಷ್ಟು ಬೇಗ ವಿದಾಯ ಹೇಳಲು ಮನಸಾಗದೆ ಅಡ್ಮಿನ್ ಬ್ಲಾಕ್ ಬಳಿ ಕಟ್ಟುತಿದ್ದ ಕಾಂಪೌಂಡ್ ಮೇಲೆ ಕುಳಿತೆವು. ಬಾಯಾಡಿಸಲು ಅಲ್ಲಿಯೇ ಮಾರುತಿದ್ದ ಪಾನಿ ಪುರಿ ಕೊಂಡೆವು.
ತಂಪಾದ ಗಾಳಿ,
ಕಣ್ಣಮುಂದೆ ಸೂರ್ಯಾಸ್ತಮದ ಸುಂದರ ನೋಟ.
ಬಣ್ಣ ಬದಲಾಯಿಸುತ್ತಿದ್ದ ಬಾನು.
ಎಲ್ಲವೂ ಸುಂದರವಾಗಿತ್ತು.
ಮುಖ ಪ್ರೇಕ್ಷರಂತೆ ಸುಮ್ಮನೆ ಕುಳಿತು ಪ್ರಕೃತಿ ಸೌಂದರ್ಯವನ್ನು ಸವಿದೆವು.
ಕೈಯ್ಯಲ್ಲಿದ್ದ ಪಾನಿ ಪೂರಿ ತಣ್ಣಗಾಗಿತ್ತು.
ಕೈ ಘಡಿಯಾರ ಸಮಯ ೬.೧೫ ಪಿಎಂ ಎಂದು ತೋರಿಸುತ್ತಿತ್ತು.
ಸರಿ ಪಾನಿ ಪುರಿ ನೀನೆ ಕಾಲಿಮಾಡು ಬೇಗ, ಹೋಗಣ, ಲೇಟ್ ಅಯ್ತು ಅಂದೇ.
ಅದೇಕೋ ಏನೋ, ಇದ್ದಕಿದಂತೆ ಚನ್ನ ಹೇಳಿದ "ಮಧು, ನಿನಗೆ ತೋಚಿದ್ದನ್ನು ಗೀಚಿಡು"

ಸರಿ ಎನಿಸಿತ್ತು.
ಆದರೆ ವ್ಯಕ್ತ ಪಡಿಸದೆ ನಕ್ಕು ಸುಮ್ಮನಾಗಿದ್ದೆ. 

No comments:

Post a Comment