Monday, 10 July 2017

ಟಿಕ್ ಟಿಕ್

ನಾನು ಸುಮ್ನೆ ಟಿವಿ ಮುಂದೆ ಕುಡ್ಕೊಂಡು ಸಮಯ ಹಾಳು ಮಾಡ್ತಿದ್ರೆ ನಮ್ಮಪ್ಪ ಅದುನ್ನ ಗಮನಿಸಿ ಆವಗಾವಾಗ  ಒಂದು ಹಾಡೆಳ್ತಾರೆ "ಜಿಪುಣ ಅಂದ್ರೆ ಜಿಪುಣ ಈ ಕಾಲ".
ಅವತೊಂದು ದಿನ ನ ಕೇಳ್ತಿದ್ದೆ , ಯಾಕಪ್ಪ ನಾನು ಕುಡ್ಕೊಂಡು ಟಿವಿ ನೋಡ್ತಿದ್ರೆ ಹಾಡ್ಹೇಳ್ತೀರಾಆಆ .
ನೋಡ್ಬಾರ್ದ ಟಿವಿನ ಹಾಗದ್ರೆ ನಾನು?
ಟಿವಿ ನೋಡ್ಬಾರ್ದು ಅಂತಲ್ಲ ಮಗಳೇ,
ನಾವು ಏನ್ ಮಾಡ್ತಿದಿವಿ ಯಾಕೆ ಮಾಡ್ತಿದೀವಿ ಅಂತ ಗೊತಿರ್ಬೇಕು ಅಷ್ಟೇ.
ಸಮಯದ ಬೆಲೆ ಅರಿತು ನಡೆದರೆ ಕಾರ್ಯ ಸಿದ್ಧಿಯು ಖಂಡಿತಾ ಅಂತಾರೆ ಅಪ್ಪ.
ಹೋ ಹಾಗಾದ್ರೆ ಟಿವಿ ನೋಡದೆ ನಾನು ಯಾವಾಗ್ಲೂ ಓದ್ಕೊಂಡು ಕುರ್ತಿಬೇಕಾ?
ಅನ್ನೋ ನನ್ನ ವಿತಂಡ ವಾದಕ್ಕೆ ನಮ್ಮಪ್ಪ ಹೀಗೆ ಹೇಳ್ತಾರೆ,
ನಿನ್ನ ಜೀವನದಿಂದ ನಿಂಗೇನು ಬೇಕು ಅಂತ ನೀನೆ ನಿರ್ಧಾರ ಮಾಡಬೇಕು.
ಟಿವಿ ನೋಡ್ಬೇಕು ಅನ್ಸಿದ್ರೆ ನೋಡು.
ನಂಗೇನು ತೊಂದ್ರೆ ಇಲ್ಲ.
ಮಗಳು ಮುಂದೆ ಬಂದ್ರೆ, ಖುಷಿಯಾಗಿದ್ರೆ ನಂಗೆ ಖುಷಿ, ಅಷ್ಟುಬಿಟ್ಟು ನಂಗೆ ಬೇರೆ ಏನು ಲಾಭ ಇಲ್ಲ.
ಲಾಭ ಏನಾದ್ರು ಇದ್ರೆ ಅದು ನಿಂಗೇನೇ ಹೊರೆತು ನಂಗು ಹಾಗು ನಿನ್ನ ಅಮ್ಮಂಗಲ್ಲ.
ಕಳೆದು ಹೋದ ಸಮಯ ಎಷ್ಟೇ ಹುಡ್ಕಿದ್ರು ಸಿಗಲ್ಲ.
ಮತ್ತೆ ವಾಪಾಸ್ ಬರಲ್ಲ.
ಟಿವಿ ನೋಡ್ಬೇಡ, ಕುತ್ಕೊಂಡು ಓದು ಅಂತ ಅಲ್ಲ ನನ್ನ ಮಾತಿನ ಅರ್ಥ,
ಓದೋದುನ್ನು ಬಿಟ್ಟು ಅದರ ಹೊರಗೂ ಸಾವಿರ ಕೆಲಸ ಇದೆ ಕಲಿಯೋಕ್ಕೆ ಹಾಗು ಮಾಡೋಕ್ಕೆ, ಆಸಕ್ತಿ ಇದ್ರೆ.

ಇಲ್ಲಿಗೆ ನಂದು ಅಪ್ಪಂದು ಈ ವಿಷಯದ ಬಗ್ಗೆ ಕಿತ್ತಾಟ ನಿಲಿಲ್ಲ.
ಒಂದಿನ ನಮ್ಮಪ್ಪ ಏನೋ  ಒಂದು ಕೆಲಸ ಮಾಡಕ್ಕೆ ಹೇಳಿದ್ರು ನಂಗೆ.
ಆಗ ನ ಹೇಳ್ದೆ, ಏ ಹೋಗಪ್ಪ ಟೈಮ್ ವೇಸ್ಟ್ , ನಾ ಮಾಡಲ್ಲ ಆ ಕೆಲ್ಸಯೆಲ್ಲ.
ಅವಾಗ ನಮ್ಮಪ್ಪ ನಂಗೆ ಹೇಳಿದ ಮಾತಿಗೆ ಎಷ್ಟು ತುಕವಿತ್ತು ಅಂದ್ರೆ, ಇಡೀ ರಾತ್ರಿ ನಮ್ಮಪ್ಪನ ಮತಿನ  ಬಗ್ಗೆ ಯೋಚನೆ ಮಾಡಿದ್ದೆ.
ಅವರು ಹೇಳಿದ್ದು ಇಷ್ಟೇ , "ಟೈಮ್ ವೇಸ್ಟ್ ಅಂದ್ಯಲ್ಲ, ಹಾಗಾದ್ರೆ  ಫ಼ಾರ್ ವಾಟ್ ಪರ್ಪಸ್ ಯೂ ಆರ್ ಯೂಸಿಂಗ್ ದಿಸ್ ಟೈಮ್ ಫಾರ್ ? ಎನಿ ಪ್ರೊಡೆಕ್ಟಿವ್ ತಿಂಗ್? ಫಸ್ಟ್ ಆಫ್ ಆಲ್ ವಾಟ್ ಡು ಯು ಮೀನ್ ಬೈ ವೇಸ್ಟ್ ಅಪ್ ಟೈಮ್? ಟೈಮ್ ವೇಸ್ಟ್ ಅಂದ್ರೆ ಏನು ಅಂತ ಮೊದ್ಲು ನೀನು ಸರಿಯಾಗಿ ಅರ್ಥ ಮಾಡ್ಕೋಬೇಕು"

ಅವರ ಮಾತು ನಿಜ.
ನಮಗೆ ಇಷ್ಟವಾದದ್ದು ಏನಾದ್ರು ಮಾಡ್ತಾ ಇರ್ಬೇಕು ಸುಮ್ನೆ ಕೂರಬಾರದು ಅನ್ನೋದು ನಮ್ಮಪನ ವದ ಅಂತ ಅರ್ಥ ಆಯಿತು. ಆದ್ರೆ ನಾಯಿ ಬಾಲ ಡೊಂಕೇ. ಐ ಲವ್ ಟು ವೇಸ್ಟ್ ಟೈಮ್. ಸುಮ್ನೆ ಕೂತಿರ್ತಿನಿ ಕೆಲವೊಮ್ಮೆ,  ಯಾವುದೋ ಯೋಚನೆಯಲ್ಲಿ ಮುಳುಗಿ ಹೋಗಿರ್ತಿನಿ .
ಯಾಕೋ ಗೊತ್ತಿಲ್ಲ, ಇದ್ರು ಬಗ್ಗೆ ಅಪ್ಪನ ಹತ್ರ ಮಾತಾಡ್ಬೇಕು ಅನ್ಸಿ ಕೇಳ್ದೆ,
ಏನು ಮಾಡದೇ ಸುಮ್ನೆ  ಕುತ್ಕೊಳದು ಟೈಮ್ ವೇಸ್ಟ್ ಆ ?
ಹಿಸ್ ಆನ್ಸರ್ ವಾಸ್ ಬಿಟ್ ಷಾಕಿಂಗ್, ಹಿ ಟೋಲ್ಡ್,
ಇಲ್ಲ ಮಗಳೇ. ನಮ್ಮೊಂದಿ ನಾವು ಸುಮ್ಮನೆ ಕೂತು ಸ್ವಲ್ಪ ಕಾಲ ಕಳೆಯಬೇಕು. ಅದು ಒಳ್ಳೆಯ ಅಭ್ಯಾಸ.
ಸಮಯದ ಒಳ್ಳೆಯ ಉಪಯೋಗ ಹೀಗೆ ಮಾಡ್ಬೇಕು ಹಾಗೆ ಮಾಡ್ಬೇಕು ಅಂತ ಇರೋದಿಲ್ಲ, ಕಾಲಕ್ಕೆ ತಕ್ಕಂತೆ ಸಮಯದ ಒಳ್ಳೆಯ ರೀತಿಯ ಬಳಕೆಯ ವ್ಯಾಖ್ಯಾನವು ಬದಲಾಗುತ್ತದೆ. ಇಟ್ಸ್ ಆಲ್ ಅಬೌಟ್ ಪ್ರಿಯೋರಿಟಿಸ್ ಅಂಡ್ ಹೌ ಯು ಡೆಫಿನೇ ಇಟ್.

ಇಟ್ ಮೇಕ್ಸ್ ಸೆನ್ಸ್. ಸುಮ್ನಾದೆ.

ಈ ಘಟನೆಗಳೆಲ್ಲ ನಡೆದು ಬಹಳ ವರ್ಷಗಳೇ ಆದವು.

ಯಾಕೋ ಗೊತ್ತಿಲ್ಲ ಈ ಸಂದರ್ಭದಲ್ಲಿ ರಣಬೀರ್ ಕಪೂರ್ "yeh jawaani hai deewani" ಫಿಲ್ಮ್ ಅಲ್ಲಿ ಹೇಳಿದ ಡೈಲಾಗ್ ನೆನಪಾಗತಿದೆ  "ಮೈ ವುಡ್ನ ಚಾಹ್ತಾ ಹ್ಞೂ, ದೌಡ್ನ ಚಾಹ್ತಾ ಹ್ಞೂ, ಗಿರ್ನ ಭೀ ಚಾಹ್ತಾ ಹ್ಞೂ, ಬಸ್ ರುಕ್ನ ನಹಿ ಚಾಹ್ತಾ ಹ್ಞೂ ". ಎಷ್ಟು ಸತ್ಯ ಅಲ್ವ ಇದು ?  ಈ ಡೈಲಾಗ್ ತುಂಬಾನೇ ಇಂಪ್ರೆಸ್ ಮಾಡಿತ್ತು ನನಗೆ. ದಿನ ನಮ್ಮ ಜೀವನದಲ್ಲಿ ಹೊಸತೇನರು ಕಲಿತ ಇರ್ಬೇಕು, ಆವಾಗ್ಲೇ ಮಜಾ. ಅಲ್ವ ?

ಟಿಕ್ ಟಿಕ್ ಅಂತ ಶಬ್ಧ ಮಾಡ್ತಾ ಓಡೋ ಸಮಯದ ಬಗ್ಗೆ ಇಂದು ಇದ್ದಕಿದಂತೆ ನಾನು ಬರಿಯಾಕ್ಕೆ ಕಾರಣವಿದೆ. ಒಂದು ವಾರದಿಂದ ಯೂನಿವರ್ಸಿಟಿ ಕಡೆ ತಲೆ ಹಾಕಿರಲಿಲ್ಲ. IISc ಯಲ್ಲಿ ಯಾವುದೊ ರೆಸೆರ್ಚ್ ವರ್ಕ್ ನಲ್ಲಿ ಬಿಜಿಯಾಗಿದ್ದೆ. ಇಂದು ಯೂನಿವರ್ಸಿಟಿ ಗೆ ಬಂದ ನಾನು ನನ್ನ ಮುದ್ದುವಿನ (ನನ್ನ ಸ್ನೇಹಿತ, ಅವನಂದ್ರೆ ತುಂಬಾ ಪ್ರೀತಿ) ದರ್ಶನ ಮಾಡಲೆಂದು ಅವನ ಲ್ಯಾಬ್ ಗೆ ತೆರಳಿದೆ. ಕೇವಲ ಹಯ್ ಹೇಳಿ, ರಘು (ನನ್ನ ಸ್ನೇಹಿತ) ಹೇಳಿದ ಕೆಲವು ವಿಷಯದ (exam invigilation duty) ಬಗ್ಗೆ ಮಾತಾಡಿ ಐದು ನಿಮಿಷಕ್ಕೆ ವಾಪಸು ಬರಬೇಕೆಂದುಕೊಂಡಿದ್ದೆ. ಆದರೆ ಸುಮಾರು ಎರೆಡು ಘಂಟೆಗಳ ಕಾಲ ಕೂತು ಮಾತಾಡಿ ಬಂದೆ. ರಿಸರ್ಚ್ ವರ್ಕ್ ಬಗ್ಗೆಯಲ್ಲ, ಜೀವನದ ಬಗ್ಗೆಯೂ ಅಲ್ಲ, ಸಮಾಜದ ಆಗು ಹೋಗುಗಳ ಬಗ್ಗೆ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಘಟನೆಯ ಬಗ್ಗೆ (University administration).
ಮಾತು ಮುಗಿಸುವ ಮುನ್ನ ಕಪೀಶ ಹೇಳಿದ, ನನ್ನ ಸಮಯ ನಿನ್ನ ಸಮಯ ಇಬ್ರುದು ವೇಸ್ಟ್ ಅಯ್ತು, ಹೋಗು ಕೆಲಸ ಮಡ್ಹೋಗು ಅಂದ. ಸರಿ ಎಂದು ನಾನು ಹೊರಟು ಬಂದೆ.

ಅವನೊಂದಿಗೆ ಕಳೆದ ಯಾವ ಸಮಯವೂ ವ್ಯರ್ಥವಲ್ಲ ಅಂತ ಯಾರು ಅವನಿಗೆ ಬಿಡಿಸಿ ಹೇಳ್ತಾರೆ?


No comments:

Post a Comment