ಬೆಳ್ಳಿಗೆ ೭ ಘಂಟೆಗೆ ಮನೆ ಇಂದ ಹೊರೆಟು ಲ್ಯಾಬ್ ಗೆ ಬಂದಿದ್ದೆ.
ಗೇಟಿನ ಬಳಿ ಕಾರ್ತಿಕನ ಕುದುರೆ (ಅವನ ಬೈಕ್) ಕಂಡು, ಅವುನು ಡಿಪಾರ್ಟ್ಮೆಂಟ್ ಗೆ ಬಂದಿದ್ದನೆಂದು ತಿಳಿಯಿತು.
ಕ್ಯಾಂಟೀನ್ ಮಹೇಶಣ್ಣ ೨ ಲೋಟ ಶುಗರ್ಲೆಸ್ ಹಾಲು ಕೊಡಿ ಅಂದೇ.
ಕಾರ್ತಿಕ್ ಗೆ ಕರೆ ಮಾಡಿ ಕ್ಯಾಂಟೀನ್ ಬಳಿಬಾ ಅಂದೇ.
ಕಾಯುವಿಕೆಗೂ ಮುಪ್ಪು ಬಂದಿತ್ತು.
ಮನಸಲ್ಲಿ ನೂರಾರು ಭಾವ ಮನೆ ಮಾಡಿತ್ತು.
ಕಣ್ಣಂಚಲಿ ಹನಿಯೊಂದು ಜಿನುಗಿತ್ತು.
ತುಟಿಯಂಚಲಿ ಸಣ್ಣದೊಂದು ನಗೆಯಿತ್ತು.
ಹಾಲು ತಣ್ಣಗಾಗಿ ಕೆನೆಕಟ್ಟಿತು.
ಕಡೆಗೆ ೨ ಲೋಟ ಹಾಲನ್ನು ಒಬ್ಬಳೇ ಕುಡಿದು ಬಂದೆ 😋😉😐
No comments:
Post a Comment