ಮನೆಗೆ ಹೋಗಬೇಕೆಂದು ತುಂಬಾ ಅನಿಸುತ್ತಿದೆ. ಆದರೆ ನನ್ನ ಮನೆ ಎಲ್ಲಿದೆ?
ಅಪ್ಪನಿಲ್ಲದ ತವರು ಮನೆ, ಅಣ್ಣ ಅತ್ತಿಗೆಯ ಮನೆ.
ಅತ್ತೆ ಇರುವ ಮನೆ, ಗಂಡನ ಮನೆ.
ನನ್ನದು ಎಂದಿದ್ದ ನನ್ನ ದೇಹವೆಂಬ ಮನೆಯು ನನ್ನ ಮಗಳ ಮನೆ.
ನನ್ನಾತ್ಮ ಪರಮಾತ್ಮನಾ ಮನೆ.
ಎಲ್ಲಿದೆ ನನ್ನ ಮನೆ?
ಅಪ್ಪನಿರುವ ಎಂಬ ಕಲ್ಪನೆಯ ಮನೆ, ಶಿತಿಲ ಗೊಂಡಿರುವ ಮನೆ! ಅಪ್ಪನ ನೆನಪೆಂಬ ಬೆಚ್ಚನೆಯ ಹೊದಿಕೆ ಹೊತ್ತು ಇರುವಲ್ಲಿಯೇ ನಿದ್ರೆಗೆ ಜಾರಿ, ನನ್ನ ಮನೆಯನ್ನು ಕಂಡುಕೊಳ್ಳಬೇಕಿದೆ!