Tuesday, 20 February 2018

ಏಕಿಷ್ಟು ಚೆಂದ?

ಪ್ರತಿದಿನ ನಾ ನಡೆದು ಬರುವ ಹಾದಿಯ ಅಂಚಿನಲ್ಲಿರು, ಅಷ್ಟುದ್ದ ಬೆಳೆದುನಿಂತು ಬಾನ ಚುಂಬಿಸುತ್ತಿರುವ ಈ ಮರಗಳೇಕೆ, ಇಷ್ಟು ಚೆಂದ? ಈ ನೀಲಿ ನೀಲಿ ಬಾನೇಕೆ, ಇಷ್ಟು ಚೆಂದ? ನೀಲಿ ಬಾನಲಿ ಹತ್ತಿಯಂತೆ ಮೆದ್ದುಕೊಂಡಿರುವ ಈ ಮೋಡಗಳೇಕೆ,
ಇಷ್ಟು ಚೆಂದ? ಈ ಮೋಡಗಳ ಅಂಚಿನಿಂದ ಕದ್ದು ಮುಚ್ಚಿ ಆಟವಾಡುವ ಈ ಸೂರ್ಯನೇಕೆ, ಇಷ್ಟು ಚೆಂದ? ಸೂರ್ಯನ ಕಂಡು ಮುದ್ದಾಗಿ ಅರಳುವ ಈ ತಾವರೆ ಹೂವೇಕೆ, ಇಷ್ಟು ಚೆಂದ? ಬಣ್ಣ ಬಣ್ಣದಾ ಹೂಗಳು, ಮುದ್ದು ಮುದ್ದು ಮಗುವಂತೆ ನಗುತ್ತಾ,
ಆಕರ್ಶಿ ಮನಕೆ ಮುದ ನೀಡುವುದು.  ಎಲ್ಲಿಂದಲೋ ಕಡೆ ಇಲ್ಲದ ಕೊಡಿ ಇಲ್ಲದ ತಂಗಾಳಿ ಕೆನ್ನೆ ಸೋಕಿ, ಕಿವಿಯಲ್ಲೊಂದು ಗುಟ್ಟನೇಳಿ ಹೂಗುವುದೇಕೆ? ಅಬ್ಬಾ!!! ನಾನಿರುವ ಈ ಭೂಮಿ ಏಕಿಷ್ಟು ಚೆಂದ? ಚಿಗುರಿದ ಎಳೆಗಳು, ಬಾಡಿ ಮುದುಡಿ ವಣಗಿ ಬಿದ್ದ ಎಳೆಗಳು,  ಹೂಗಳು, ಹಣ್ಣುಗಳು, ಹಾರಾಡುತ ಹಾಡುವ ಹಕ್ಕಿಗಳು, ತಣ್ಣಗೆ ಬೀಸುವ ಗಾಳಿ,  ಹರಿವ ನದಿ, ನಿಂತ ನೀರು, ಸಾಗರದ ಅಲೆಗಳು, ಬೆಟ್ಟ ಗುಡ್ಡಗಳು, ಜಡಿಗಟ್ಟಿ ಸುರಿವ ಮಳೆನೀರು, ಸೋರುವ ಸೂರು, ಅಜ್ಜಿ ಇದ್ದ ಹಳೆಯ ಮಣ್ಣಿನ ಮನೆಯ ನೆನಪು, ನನ್ನಜ್ಜ, ನನ್ನಪ್ಪ, ಅಬ್ಬಾ! ಎಲ್ಲವೂ ಏಕಿಷ್ಟು ಚೆಂದ?  ಗರಿಬಿಚ್ಚಿ ನಲಿವ ನವಿಲು, ಆ ಗರಿಗಳಾ ಬಣ್ಣ, ಕೋಗಿಲೆಯ ಕುಹು ಕುಹೂ ಗಾನಾ, ಸಪ್ತ ಸ್ವರ, ಆ ಹಂಸ, ಅಯ್ಯೋ ಅಜ್ಜನ ಮನೆಯ ಆ ಕುರುಗಳು, ಕಯ್ಯೊಡ್ಡಿದರೆ ದೊರಗು ನಾಲಿಗೆಯಿಂದ ಮುದ್ದಿಸುವ ಚೆಂದ! ಅದು ಕೊಡುವ ಹಾಲು. ಸಕ್ಕರೆಯ ಪಾಕ. ಜೇನಿನ ಜಲ್ಲೆ. ಅಜ್ಜಿಯ ಕೋಣೆ ಕಿಟಕಿಯಿಂದ ಬರುವ ಬೆಳಕು, ನನ್ನ ಕೈಯ್ಯಿ ನೇವರಿಸುತ್ತಾ ಅವಳಾಡುತ್ತಿದ್ದ ಆ ಹಾಡುಗಳು, ಅವಳ ಪ್ರೀತಿಭರಿತ ನೋಟ, ಹಾನ್ !! ಕಾಡಮಧ್ಯವಿರುವ ಮನೆ, ಜೀರಿಂಬೆಯ ಶಬ್ಧ. ಕಾಡುವ ನಕ್ಷತ್ರ ಲೋಕ, ಅವಗಳ ಮಧ್ಯದಿ ನಗುವ ಚೆಂದಿರ.  ದೇವರೇ, ಎಲ್ಲವೂ ಏಕಿಷ್ಟು ಚೆಂದ?..... ಏಕಿಷ್ಟು ಚೆಂದ?


No comments:

Post a Comment