Tuesday, 20 February 2018

ತುಂತುರು

ಪಿರಿ ಪಿರಿ ಮಳೆ,
ಒಮ್ಮೊಮೆ ಮೋಡದ ಮರೆಯಿಂದ ನಿಲ್ಕಿ ನೋಡುವ ಸೂರ್ಯ,
ಕಾಮನಬಿಲ್ಲು,
ದಿನ ಪೂರ್ತಿ ಮಳೆ,
ರಾತ್ರಿ ಪೂರ್ತಿ ಮಳೆ,
ಮಳೆ, ಮಳೆ, ತುಂತುರು ಮಳೆ,
ಜಡಿ ಮಳೆ,
ಜಿಗಣೆ, ಕಂಬಳಿ ಹುಳುಗಳು,
ಮಹಿಂದ್ರಾ ಜೀಪು,
ಮಣ್ಣು ಮೆತ್ತಿಕೊಂಡ ಕಾಲುಗಳು,
ಮೈಗಂಟಿದ ಕೆಸರು,
ಒದ್ದೆಯಾದ ಕೂದಲು; ಬಟ್ಟೆ!, ಮೈಗಂಟಿ ಕಿರಿಕಿರಿ.
ಒಂದೊಳ್ಳೆ ಬಿಸಿ ಬಿಸಿ ಕೆ.ಟಿ.
ಬಿಸಿ ಬಿಸಿ ಓಲೆ ಹಂಡೆ ನೀರಿನ ಮೀಯಾಣ.
ಕೆಂಪಕ್ಕಿ ಗಂಜಿ, ಜೊತೆಯಲ್ಲಿ ಕೆಂಪು ಕಾಯಿ ಚಟ್ನಿ, ತುಪ್ಪ, ಉಪ್ಪು!
ಆ ಚಳಿ ಚಳಿ ರಾತ್ರಿ, ಬೆಚ್ಚನೆಯೆ ಕಂಬಳಿ!
ಟೂಯ್ಯ್ ಯೆಂದು ಪದವಾಡುವ ನುಸಿ,
ಅದ ಓಡಿಸಲು ಅಡಿಕೆ ಸಿಪ್ಪೆಯ ಅಗುಷ್ಟೇ
ಕತ್ತಲೆ ಕೊಣೆ.
ಅಜ್ಜಿಯ ಕಥೆಗಳು. 
ಒಳ್ಳೆಯ ನಿದ್ದೆ.
ಶಾಂತಿ, ನೆಮ್ಮದಿ, ಖುಷಿ.




No comments:

Post a Comment