ಸಂಗಾತಿಯೊಡನೆ ಲೈಂಗಿಕ ಆಕರ್ಷಣೆ ಬಲುಮುಖ್ಯ. ಇದು ಜೀವಸಂಕುಲನಾಭಿವೃದ್ದಿಗೆ ಎಲ್ಲಾ ಜೀವಿಗಳಲ್ಲಿಯೂ ಕಂಡು ಬರುವ ಸಾಮಾನ್ಯ ಪ್ರಕ್ರಿಯೆ. ಮನುಷ್ಯ ಬುದ್ದಿಜೀವಿ. ತನ್ನದೆಯಾದ ಸುಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದಾನೆ. ಆಚಾರವಂತ ವಿಚಾರವಂತ. ಮನುಷ್ಯನು ಈ ಕಾರಣದಿಂದಲೇ ಬೇರೆಲ್ಲಾ ಜೀವಿಗಳಿಂತ ಉತ್ಕ್ರಷ್ಟ ಮಟ್ಟದಲ್ಲಿರುವುದು. ಮಾನವನನ್ನು ಮಾನವನಾಗಿಸುವುದು ಅವನ ಈ ಮಾನವೀಯತೆ ಹಾಗು ಅವನ ವಿಚಾರವಂತಿಕೆಯೇ. ಹೀಗಿರುವಾಗ ಕೆಲವರೇಕೆ ಮನುಷ್ಯರಾಗಿ ಮನುಷ್ಯರನ್ನು ಇಷ್ಟುಕಟುವಾಗಿ,ಕೆಟ್ಟದಾಗಿ ನಡಿಸಿಕೊಳ್ಳುತ್ತಾರೆ? ಈ ದುಷ್ಟ ಮನಃಸ್ಥಿತಿ ಇರುವ ಮನುಷ್ಯರನ್ನು ಏನೆಂದು ಕರೆಯಬೇಕು? ಅವರನ್ನು ಹೇಗೆ ನಡಿಸಿಕೊಳ್ಳಬೇಕು? ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು?
:( :( :(
:( :( :(
No comments:
Post a Comment