ಅಪ್ಪ ಯಾವಾಗ್ಲೂ ಹೇಳ್ತಾರೆ. ಒಳ್ಳೆಯ ಊಟ, ಒಳ್ಳೆಯ ಜೀವನ ಸಂಗಾತಿ, ಒಳ್ಳೆಯ ಸ್ನೇಹಿತರು, ಒಳ್ಳೆಯ ಗುರುಗಳು, ಒಳ್ಳೆಯ ಜೊತೆಗಾರರು (ಕೆಲಸ ಮಾಡುವ ಸ್ಥಳದಲ್ಲಾಗಲಿ, ಅಕ್ಕಪಕ್ಕದ ಮನೆಯವರಾಗಲಿ, ಹೀಗೆ .. ), ........ ಸಿಗಲು ಪುಣ್ಯ ಮಾಡಿರಬೇಕು ಅಂತ. ಹೌದು ಅಂತ ಅನಿಸುತ್ತಿದೆ, ನಿಮಗೆ ತೊಂದರೆ ಕೊಡುವುದೇ ನನಗೆ ಸುಖ ಅನ್ನುವಹಾಗೆ ನಡೆದುಕೊಳ್ಳುವ, ಒಂದೇ ರೂಮ್ನಲ್ಲಿರುವ ರೂಮಿಯನ್ನು ಸಹಿಸಿಕೊಂಡು ಸಹಿಸಿಕೊಂಡು, ಸಹನಶಕ್ತಿಯ ಕಟ್ಟೆಯೊಡೆದು ಅತಿಯಾದ ಕೋಪವೊಂದು ಬರುತಿದೆ, ಕೋಪಕ್ಕಿಂತಲೂ ಹೆಚ್ಚು ನೋವಾಗುತ್ತಿದೆ. ಹಾಗಂತ ಚೆಂಡಿಯಂತೆ ಅವಳ ಮೇಲೆ ಎಗರಾಡಿ ಕಿರುಚಾಡಿ ರಚ್ಚೆ ಮಾಡಲು ನನಗೆ ಸಾಧ್ಯವಿಲ್ಲ. ಬೇಕಿದ್ರೆ ನಾಲ್ಕು ಪೆಟ್ಟೇ ಕೊಡೋದು. ದಂಡಂ ದಶಗುಣಮ. ಹಾಹಾ.
ನನಗನಿಸುತ್ತದೆ,
ನನ್ನ ಪಾಲಿನ ಪುಣ್ಯವೆಲ್ಲಾ ಒಳ್ಳೆಯ ಅಪ್ಪ ಅಮ್ಮನ ಪಡೆಯುವುದರಲ್ಲಿಯೇ ಖರ್ಚಾಗಿ ಹೋಗಿರಬೇಕು. ಒಳ್ಳೆಯ ರೂಮಿ ಪಡೆಯಲು ಏನು ಉಳಿದಿಲ್ಲವೆಂದೆನಿಸುತ್ತದೆ. ಆಫ್ಟರ್ ಆಲ್ ಅತ್ಯಮೂಲ್ಯವಾದದ್ದು ನನ್ನ ಬಳಿಇರುವಾಗ ಎಲ್ಲಾ ಪುಣ್ಯವು ಅದರಲ್ಲಿಯೇ ಖರ್ಚಾಗಳೇ ಬೇಕಿತ್ತು.

ha ha ha... 😀
ReplyDelete