Tuesday, 17 July 2018

Understanding


ನಿನಗೆ ಕಾಟ ಕೊಡುವಾಸೆ, ಕೋಪ ಭರಿಸುವಾಸೆ, ತೀಟಲೆ ಮಾಡುವಾಸೆ.
ಕೊಟ್ಟ ಕಾಟದಿಂದ ನಿನಗಾದ ಕಾಟ, ಬಂದ ಕೋಪ, ಆದ ಹಿಂಸೆ,
ಅದರಿಂದ ನನಗಾದ ನೋವು, ಸಂಕಟ,
ಸ್ವಲ್ಪ ಮಟ್ಟಿಗೆ ನನಗರಿವಾಯಿತು ನಾನು ಯಾರೆಂದು, ನಾನು ಏನೆಂದು.
ನಿನಗರ್ಥವಾಯಿತೇ ನಾನುಯಾರೆಂದು? ನಾನುಯೇನೆಂದು?

ನಿನ್ನೊಂದಿಗೆ ಮುನಿಸಿ ಕೊಳ್ಳುವಾಸೆ, ನಿಂನ್ನಿಂದ ದೂರ ಹೋಗಿ ನಿನ್ನ ಚಡಪಡಿಸುವಾಸೆ,
ನಾಲ್ಕು ಪೆಟ್ಟು ಕೊಡುವಾಸೆ, ಒಂದಷ್ಟು ಕಣ್ಣೀರು ಬಾರಿಸುವಾಸೆ,
ನನ್ನ ಈ ವರ್ತನೆಗೆ ನಿನ್ನಲ್ಲಿ ಏನು ಬದಲಾಗದ ಭಾವನೆಯಕಂಡು,
ಸ್ವಲ್ಪ ಮಟ್ಟಿಗೆ ನನಗರಿವಾಯಿತು ನಾನು ಯಾರೆಂದು, ನಾನು ಏನೆಂದು.
ನಿನಗರ್ಥವಾಯಿತೇ ನಾನುಯಾರೆಂದು? ನಾನುಯೇನೆಂದು?

ಮಮತೆಯಿಂದ ನಿನ್ನ ತಾಯಾಗುವಾಸೆ, ಶಿಸ್ತಿನ ತಂದೆಯಾಗುವಾಸೆ,
ಉಪದ್ರ ಕೊಡುವ, ನಕ್ಕು ನಗಿಸುವ ಗೆಳತಿಯಾಗುವಾಸೆ,
ಕಷ್ಟ ನಷ್ಟದಿ ಸಂಗಾತಿಯಾಗುವಾಸೆ, ಮತ್ತೆ ಕೆಲವುಮ್ಮೆ ನಿನ್ನ ಮಗಳಾಗುವಾಸೆ.
ಆದರೆ ನಾನು ನಿನಗಾಗಿ ಹಂಬಲಿಸಬಾರದೆಂಬ ನಿನ್ನ ಮಾತುಕೇಳಿ,
ಸ್ವಲ್ಪ ಮಟ್ಟಿಗೆ ನನಗರಿವಾಯಿತು ನಾನು ಯಾರೆಂದು, ನಾನು ಏನೆಂದು.
ನಿನಗರ್ಥವಾಯಿತೇ ನಾನುಯಾರೆಂದು? ನಾನುಯೇನೆಂದು?

ನನ್ನ ಮೇಲೆ ನಿನಗೆ ತಪ್ಪು ಕಲ್ಪನೆ ಮೂಡಿಸುವಾಸೆ,
ಮೂಡಿಸಿಯು ನಿನಗೆ ತಪ್ಪು ಕಲ್ಪನೆ ಮೂಡಬಾರದೆಂಬ ಆಸೆ,
ತಪ್ಪು ಕಲ್ಪನೆ ಮುಡಿದರು ಬಿಡದೆ ನೀನನ್ನ ಕೈ ಹಿಡಿದಿರಬೇನೆಂಬ ಆಸೆ,
ನೀ ನನ್ನನ್ನು ಕ್ಷಮಿಸಬೇಕೆಂಬ ಆಸೆ, ನಾನು ನಿನ್ನವಳಾಗಿಯೇ ಇದ್ದು ಹೋಗಬೇಕೆಂಬ ಆಸೆ.
ನನ್ನ ಈ ಎಲ್ಲಾ ಭಾವನೆಯು ನಿನಗೆ ನಾ ಹೇಳದೆಯೇ ತಿಳಿಯಬೇಕೆಂಬ ಆಸೆ.
ನಿನ್ನೊಂದಿಗಿದ್ದು ನನ್ನ ನಾ ಸಂಪೂರ್ಣ ಅರಿತುಕೊಳ್ಳುವಾಸೆ.

ನೀನೆಂಬುದು ನನ್ನ ಕಲ್ಪನೆಯಷ್ಟೇಯಾದರೂ, ನನ್ನ ಭಾವನೆಗಳ ಅಸ್ಥಿತ್ವ ನಿಜವಾದವು.
ಸ್ವಲ್ಪ ಮಟ್ಟಿಗೆ ನಾನೇನೆಂಬ ಅರಿವಿನ ಜೊತೆಗೆ, ನೀನು ನನಗೇನೆಂಬ ಅರಿವಾಗಿದೆ.


No comments:

Post a Comment