Tuesday, 24 July 2018

ಕಥೆಯೊಂದ ಕೇಳಿದೆ.

ಬೆಚ್ಚನೆಯ ಗೂಡಲ್ಲಿ ಬಚ್ಚಿಟ್ಟಿದ ಹೃದಯವ ಅವಳ ನಗುವಿಗೆ ಉಡುಗರೆಯಾಗಿ ನೀಡಿದ್ದ ಮೂರ್ಖನೊಬ್ಬ.
ಅವಳನುಗುವಿನೊಂದಿಗೆ ಮಿಡಿಯುತ್ತಿದ್ದ ಆ ಹೃದಯ ತನ್ನಸ್ತಿತ್ವವ ಮರೆತ್ತಿತ್ತು. ಜೀವಿಸಲು ಬೆಚ್ಚನ್ನೆಯ ಗೂಡೊಂದ್ದು ಬೇಕೆಂಬುದರ ಕಲ್ಪನೆಯಿಲ್ಲದೆ ಅವಳ ನಗುವಿನೊಂದಿಗೆ ಚಲಿಸುತ್ತ ಚಲಿಸುತ್ತ ಹೊರಜಗ್ಗತ್ತಿನ ತಣ್ಣನೆಯ ಗಾಳಿ ಸೋಕಿ ಶೀತವಾಗುತ್ತಾ ಹೋಗಿತ್ತು. ಇಂದೀಗ ಅದು ಸಂಪೂರ್ಣವಾಗಿ ಶಿಥಿಲಗೊಂಡಿದೆ. 
ಮಂಜುಗಡ್ಡೆಯಾಗಿದೆ. ನಗುವಿನಿಂದೆ ಸುತ್ತುವ ಭರದಿ ಜಾರಿಬಿದ್ದು ಪುಡಿ ಪುಡಿಯಾಗಿ ಅವ ನಡೆವ ದಾರಿಯಲ್ಲಿ ಎಲ್ಲೆಡೆ ಹರಡಿದೆ.   ಅದರ ಚೂಪಾದ ತುಣುಕೊಂದು ಅವನ ಕಾಲಿಗೆ ತಾಕಿ ನೆತ್ತರು ಸುರಿದರು ಈಗವನಿಗೆ ನೋವಿನ ಅನುಭವವಾಗುತ್ತಿಲ್ಲ. ಮಿಡಿಯುವ ಹೃದಯವೇ ಜೊತೆಗಿಲ್ಲ.


No comments:

Post a Comment