Tuesday, 20 March 2018

ಅತಿಶಯೋಕ್ತಿಯೇ?

ಅಂದೆಂದೋ ನಾನೋದಿದ ಪುಸ್ತಕ, ಇಂದು ಅವನ ಬಳಿಯಲ್ಲಿ; ನಾ ಸೋಕಿದ ಪುಟಗಳ್ಳೆವ ತನ್ನ ಬೇರುಳುಗಳಲ್ಲಿ ಸ್ಪರ್ಶಿಸುತ್ತ .
ನನ್ನ ಕಂಗಳು ಮುದ್ದಿಸಿದ್ದ ಅವಳ ಅದೇ ಅಕ್ಷರಗಳು, ಇಂದು ಅವನ್ನನ್ನು ಮುದ್ದಿಸುತ್ತಿರುವವೇ?
ಕುತೂಹಲ ತಡೆಯಲಾರದೆ ಧಡಬಡ ಎಂದು ಒಂದೇ ಉಸಿರನಲ್ಲಿ ಓದಿ ಪಟಪಟನೆ ತಿರುವಿ ಹಾಕಿದ ನನ್ನ ಪುಟ್ಟಕ್ಕನ ಪುಟಗಳು, ಇಂದು ಅದೇ ಗದ್ದಲ್ಲವಾ ಮಾಡಿರುವುದೇ?
ಕೆಲವೊಮ್ಮೆ ಓದುವುದ ನಿಲ್ಲಿಸಿ ಘಾಡ ಯೋಚನೆಗೆ ನನ್ನನ್ನು ಕರೆದೊಯ್ದ ಕಥೆಯ ಸನ್ನಿವೇಶಗಳಿಂದೂಕೂಡಾ ನಿಶಬ್ದದಿ ಅವನ್ನನು ದಿಟ್ಟಿಸಿಹುದೇ?
ಹುಚ್ಚಿಯಂತೆ ಕಿಲಕಿಲನೆ ನನ್ನ ನಗಿಸಿದ ಆ ಮೋಹಕ ಮಾಯೆ, ಅವನ ಕೆನ್ನೆಯಲ್ಲಿ ಸಣ್ಣದೊಂದು ಗುಳಿಯನ್ನಾರು ಬೀಳಿಸಿರಬಹುದೇ?
ತನ್ನ ಕಥೆಯ ಹೇಳುತಿಹ ಅವಳು, ಜೊತೆಯಲ್ಲಿ ನನ್ನ ಕಥೆಯನ್ನ ಅವನಿಗೆ ಹೇಳಿರುವಳೇ? ನನ್ನ ನೆನಪ ತರಿಸಿರುವಳೇ?  ಕಡೇಪಕ್ಷ ನನ್ನ ಉಸಿರ ಗಾಳಿಯ ಬಚ್ಚಿಟ್ಟುಕೊಂಡು ನನ್ನದೆಯ ಮೇಲೆಯೇ ಮಗುವಂತೆ ಬೆಚ್ಚನೆ ಮಲಗಿದ್ದ ಅವಳು ನನ್ನ ಪರಿಮಳ ಪಸರಿಸಿರುವಳೇ?
.......
.......
.......
.......



3 comments: