Friday, 23 March 2018

Just because she doesn't say anything!

ಅವಳೊಂದು ಬೆಳಕು.
ತನ್ನೊಳಗೆ ಸಾವಿರ ನೋವನ್ನು ತುಂಭಿಕೊಂಡಿಹಳು,
ಹಾಗಂತ ನಲಿವೇಗೇನು ಕಮ್ಮಿ ಇಲ್ಲ.
ತನ್ನೊಳಗೆ ಬೆಳಕಿದ್ದರು, ತಾನೇ ಒಂದು ಬೆಳಕಾದರು,
ಯಾವೋದು ಕಾಣದ ಕತ್ತಲೊಂದು ಬೆನ್ನ ಹಿಂದೆ ನಿಂತಂತೆ.
ಹೇಳಲಾಗದೊಂದು ಸಂಕಟ. ಏನೋ ಕೊರತೆ!! ಆದರೆ ಕೊರಗಿಲ್ಲ.
ಇದನರಿಯದ ಜನಕೆ ಕಾಣುವುದೆಲ್ಲ ಬರಿ ಬೆಳಕು.
ಕತ್ತಲೆಯ ಕಾಣಲವಕಾಶವೇ ನೀಡದ ಬೆಳಕು.
ಸದ್ದಿಲ್ಲದೇ ತನ್ನ ಕೆಲಸವೂ ಮಾಡುವ ಬೆಳಕು.
ಕೆಲಸದ ಹೊಗಳಿಕೆ ಅವಳಿಗೆ ಬೇಡ, ಬೇಕಿರುವುದೊಂದು ಮುದ್ದಾದ ನಗು,
ಅವಳ ಚೆಂದವ ನೋಡಿ ತುಟಿಗಳರಳಿದರೆ ಸಾಕಷ್ಟೆ.
ಕಷ್ಟಗಳ ಕಂಡು, ನೀಡುವ ಮರುಕ ಅವಳಿಗೆ ಬೇಡ, ಬೇಕಿರುವುದೊಂದು ಅರಿವು,
ಅವಳಿಗಿರುವ ಕಷ್ಟಗಳ ಅರಿವು, ತಾ ಮೂಡಿಸಿದ ಬೆಳಕಿನಾ ಅರಿವು.

No comments:

Post a Comment