ಮೊದಲೇ ಒಮ್ಮೆ ನಾನು ಹೇಳಿದಂತೆ ಈ ಚಹಾ ಸಮಯ ಬಹಳಾನೇ ಇಷ್ಟ ನನಗೆ. ವಿಶೇಷವಾಗಿ ಅದು ಅಪ್ಪ ಅಮ್ಮನ ಜೊತೆ ಇನ್ನು ಮಜವಾಗಿರುತ್ತದೆ. ಕಳೆದ ರವಿವಾರ ಸಂಜೆ ಚಹಾದ ಜೊತೆಗೆ ಅಮ್ಮ ಮೆಣಸಿನಕಾಯಿ ಬಜ್ಜಿ ಮಾಡುತ್ತಿದ್ದರು. ನಾನು ಮತ್ತು ಅಪ್ಪ ಅಡಿಗೆ ಮನೆಯಲ್ಲಿ ಅಮ್ಮನೊಂದಿಗೆ ಮಾತನಾಡುತ್ತ ಬಿಸಿ ಬಿಸಿ ಬಜ್ಜಿ ಮಡಿದ ಕೂಡಲೇ ತಿನ್ನಲ್ಲು ಕಾಯುತ್ತ ಕುಳಿತ್ತಿದ್ದೆವು.
ಮಾತನಾಡುತ್ತ ಮಾತನಾಡುತ್ತ ನಮ್ಮ ಮೂವರ ಮಾತು ಒಂದು ಚರ್ಚೆಯಾಗಿ ಬದಲಾಯಿತು.
ಅಮ್ಮ: ಈಗಿನ ಮಕ್ಕಳ್ಳಿಗೆ ಯಾವುದೇ ಆಚರೆಣೆಗಳಿಲ್ಲ. ದೇವರ ಪೂಜೆ ಮಾಡಬೇಕೆಂಬುದಿಲ್ಲ. ಹಿರಿಯರ ಮಾತಿಗೆ ಬೆಲೆ ಕೊಡುವುದಿಲ್ಲ. ನಮ್ಮ ಕಾಲದಲ್ಲಿ ಹಾಗಿರಲಿಲ್ಲ. ಹಿರಿಯರು ಹೇಳಿದರೆ ಅಲ್ಲಿಗೆ ಮುಗಿಯಿತು. ಒಂದು ಎದುರುಮಾತನಾಡದೆ ಅವರು ಹೇಳಿದಂತೆ ಮಾಡುತ್ತಿದ್ದೆವು. (ಇದು ಅಮ್ಮನ ಮಾಮೂಲಿ ಡೈಲಾಗ್).
ನಾನು: (ವೇದಾಂತಿಯಂತೆ) ವಯಸ್ಸಿನ್ನಲ್ಲಿ ಹಿರಿಯರಾದವರು ಏನೇ ಹೇಳಿದರು ಹೂ ಎನ್ನಬೇಕೇ? ಹಾಗಾದರೆ ಇಲ್ಲಿ ಬೆಲೆಯಿರುವುದು ವಯಸ್ಸಿಗೆ ವರತು ಬುದ್ಧಿವಂತಿಗೆಗಲ್ಲ.?
ಅಮ್ಮ: ಹಿರಿಯರ ಅನುಭವದ ಮಾತುಗಳು ಎಂದು ಸುಳ್ಳಾಗುವುದಿಲ್ಲ.
ನಾನು: ಅನುಭವದ ಮಾತುಗಳು ಸುಳ್ಳು ಎಂಬಹುದಲ್ಲ ನನ್ನ ವಾದ. ಯಾವುದೇ ಒಂದು ರೀತಿ ನೀತಿ ಆಚರಣೆಗಳ್ಳನ್ನು ಪಾಲಿಸಲು ಅಮ್ಮನಾದವರು ಮಕ್ಕಲ್ಲಿ ಹೇಳಿಕೊಡಬೇಕು. ಅದರೆ ಹಿಂದಿರುವ ಉದ್ದೇಶಗಳ್ಳ ಬಗ್ಗೆ ತೀಹೇಳಬೇಕು. ಅರ್ಥ ಮಾಡಿಸಬೇಕು. ಆಗ ಯಾಕೆ ನಾವುಗಳು ಪಾಲಿಸೋಲ್ಲ ಎಂದು ಹೇಳುತ್ತೇವೆ?.
ಅಮ್ಮ: ಕೆಲವೊಂದು ಆಚರಣೆಗಳ ಹಿಂದಿರುವ ವಿಚಾರಗಳು ನಮಗೆ ತಿಳಿದಿರುವುದಿಲ್ಲ. ಹಿರಿಯರು ನಡಿಸಿ ಬಂದ ಸಂಪ್ರದಾಯವನ್ನು ಪ್ರಶ್ನೆ ಮಾಡದೇ ನಾವುಗಳು ನಡಿಸಿಗೊಂಡು ಬಂದಿರುತ್ತೇವೆ. ಎಲ್ಲಾದಕ್ಕು ಉತ್ತರ ಬೇಕೆಂದರೆ ಹೇಗೆ?
ಅಪ್ಪ: ನನ್ನ ಪ್ರಕಾರ ಎಲ್ಲಾ ಆಚರಣೆಗಳ ಹಿಂದೆಯೂ ಗಾಢವಾದ ಉದ್ದೇಶವಿರಬೇಕೆಂಬುದೇನು ಇಲ್ಲ. ಕೆಲವೆಲ್ಲ ಕೇವಲ ಮನುಷ್ಯನನ್ನು ಒಂದು ಆರೋಗ್ಯಕರ ಸಮಾಜದ ಹಾದಿಯಲ್ಲಿ ಹಿಡಿದಿಡಲು ಮಾಡಿರುವು ನಿಯಮಗಳು ಆಗಿರುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಅಷ್ಟೊಂದು ಪ್ರಶ್ನೆ ಕೇಳುವ ಅವಶ್ಯಕತೆಯೇ ಬರುವುದಿಲ್ಲ. ನಿನಗೆ ಅರ್ಥವಾಗುತ್ತದೆ ಮಗಳೇ.
ಉದಾಹರಣೆಗೆ ನಮ್ಮ ಹವ್ಯಕ ಸಂಪ್ರದಾಯದ ಮದುವೆಯನ್ನೇ ತೆಗೆದುಕೋ. ಎಷ್ಟೊಂದು ವಿಧಿವಿಧಾನಗಳಿವೆ. ಹಳೆಯ ಕಾಲದಲ್ಲಿ ವಾರಗಟ್ಟಲ್ಲೇ ಮದುವೆ ನಡೆಯುತ್ತಿತ್ತು. ಅದರ ಉದ್ದೇಶ ಹುಡುಗ ಹುಡುಗಿ ಒಬ್ಬರನ್ನೊಬ್ಬರು ಅರಿತುಕೊಂಡು ಬೇರೆಯಲಿ ಎಂಬುದು ಒಂದಷ್ಟು ಕಾರಣಗಲ್ಲಿ ಒಂದು ಕಾರಣ.
ಇನ್ನು ಈಗಿನ ಕಾಲದಂತ್ತೆ ಸಂಪರ್ಕವಾಹಿನಿ ಯಾವುದು ಆಗಿನ ಕಾಲದಲ್ಲಿ ಇರಲ್ಲಿಲ್ಲ. ಎಲ್ಲರೊಂದಿಗೆ (ಬಂದು ಭಾಂದವರು) ಬೆರೆಯುವ ಅವಕಾಶಗಳು ಕಡಿಮೆ. ದುಡಿಮೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದರು. ಹಬ್ಬ, ಹರಿದಿನಗಳ ಹೆಸರಿನಲ್ಲಿ ಜೊತೆ ಸೇರಿ ಸಂತೋಷದಿ ಬೆರೆತು ನಲಿಯುತ್ತಿದ್ದರು.
ಹೀಗೆ ನಮಗೆ ಅರಿವಿಲ್ಲದ್ದ ಹತ್ತು ಹಲವು ವಿಷಯಗಳಿರುತ್ತವೆ.
ಮಂಕುತ್ತಿಮ್ಮ ಒಂದೆಡೆ ಹೀಗೆ ಹೇಳಿದ್ದಾನೆ,
"ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು.
ಹೊಸ ಯುಕ್ತಿ ಹಳೆತತ್ವದೊಡಗೂಡೆ ಧರ್ಮ.
ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸೆ,
ಜಸವು ಜನಜೀವನಕೆ."

ನೀವು ಈಗಿನ ಮಕ್ಕಳ್ಳು ಕೇಳುವ ಪ್ರಶ್ನೆಗಳು ತಪ್ಪೆಂದು ನಾನು ಹೇಳುವುದಲ್ಲ. ಸ್ವಲ್ಪ ತಾಳ್ಮೆ ಹಾಗು ಸಹನೆಯಿಂದ, ಹಿರಿಯರು ಏನು ಹೇಳುತ್ತಿದ್ದಾರೆ ಎಂಬುದನ್ನು ಕೆಲುವು ವ್ಯವಧಾನ ಬೆಳೆಸಿಕೊಳ್ಳಬೇಕು. ಅದನ್ನು ಆಚರಣೆಗೆ ತರುವುದು ಬಿಡುವುದು ಮುಂದಿನ ಪ್ರಶ್ನೆ. ನಿಮಗೆ ನಿಮ್ಮದೆಯಾದ ಆಲೋಚನಾ ಶಕ್ತಿಯಿದೆ. ವಿವೇಚನೆ ಇದೆ. ಯಾವುದಕ್ಕೂ ದುಡುಕದೆ ಯೋಚಿಸಿ, ಯೋಜನೆಗಳ್ಳನ್ನು ಮಾಡಿ. ಜೀವನದಲ್ಲಿ ಸಂತೋಷದಿಂದಿರಿ. ಮಕ್ಕಳ್ಳು ಚೆನ್ನಾಗಿರಗಿರಬೇಕು ಎಂಬುದೊಂದೇ ನಮ್ಮ (ತಂದೆ ತಾಯಿಯ) ಆಸೆ ಅಲ್ಲವೇ.
ನಾನು: ಅಲ್ಲ. ನಿಮ್ಮ ಆಸೆ ಮಸಾಲೆದೋಸೆ ಎಂದೇ. (ಹಳೆಯ ಲೇಖನ "ದೋಸೆ" ಓದಿ ನೆನಪಿನಲ್ಲಿದ್ದರೆ ನೀವು ರಿಲೇಟ್ ಮಾಡಬಹುದು.)
ಅಪ್ಪ: ಅಲ್ಲ ಅಲ್ಲ. ಸದ್ಯಕೀಗ ಮೆಣಸಿನಕಾಯಿ ಬಜ್ಜಿ.
ಮೂವರು ನಕ್ಕೆವು.
ಅಣ್ಣ ಅತ್ತಿಗೆಯನ್ನು ಬಜ್ಜಿ ತಿನ್ನಲ್ಲು ಕರೆದೆವು.

No comments:
Post a Comment