Sunday 28 October 2018

ಪ್ರೀತಿ

ನನಗೆ ಹುಚ್ಚುಯೆಂದು ಅವನು ಸಾವಿರ ಸಲ ಹೇಳಿದುಂಟು.
ಇದು ಹುಚ್ಚುಯೆಂದು ಎನಿಸಿದರೆ ಹುಚ್ಚೇ ಸರಿ, ಹೌದು ನನಗೆ ಹುಚ್ಚು.

ನಿನ್ನದಲ್ಲದವರನ್ನು ಯಾಕಿಷ್ಟು ಪ್ರೀತಿಸುವೆ? ಎಂದು ಕೇಳುವವರಿಗೇನೆನ್ನ ಬೇಕು?
ಸ್ವಾಮಿ, ಇಲ್ಲಿ ಯಾರು ಯಾರಿಗೂ ಸ್ವಂತವಲ್ಲ. ನೀನು ಒಬ್ಬರನ್ನು ಪ್ರೀತಿಸಲು ಅವರು ನಿನ್ನವರು ಯೆಂಬ ಹಣೆ ಪಟ್ಟಿ ಹೊತ್ತು ಈ ಭೂಮಿಗೆ ಬಂದಿರಬೇಕಿಲ್ಲ. ಪ್ರೀತಿಯ ಉದ್ದೇಶ ಪ್ರೀತಿಸಿದವರನ್ನು ಪಡೆದು ಕೊಳ್ಳುವುದಲ್ಲ. ಪ್ರೀತಿಯನ್ನು ಕೊಡುವುದು.

ಇಲ್ಲಿ ಒಂದು ಸಮಸ್ಯೆ ಏನಪ್ಪಾ ಯೆಂದರೆ, ನೀನೇನೋ ಪ್ರೀತಿಯನ್ನು ಕೊಡುವೆ, ಆದರೆ ಆ ಪ್ರೀತಿಯನ್ನು ಅವರು ಸ್ವೀಕರಿಸದಿದ್ದರೆ? ಸ್ವೀಕರಿಸದಿದ್ದರೆ ನಿನ್ನ ಪ್ರೀತಿ ವ್ಯರ್ತವಾಗಿಬಿಡುವುದೇ? ಈ ಪ್ರೆಶ್ನೆಗೆ ಸರಿಯಾದ ಉತ್ತರ ಕಂಡುಕೊಳ್ಳಲ್ಲು ನನಗೆ ಸ್ವಲ್ಪ ಕಾಲಾವಕಾಶ ಬೇಕು.

ಕೆಲವೊಮ್ಮೆ ಅನಿಸುತ್ತದೆ, ಇಲ್ಲಿ ಯಾರು ಯಾರನ್ನು ಸಂಪೂರ್ಣವಾಗಿ ಪ್ರೀತಿಸಿಲ್ಲ, ಪ್ರೀತಿಸಲು ಸಾಧ್ಯವಿಲ್ಲವೆಂದು. ಪ್ರೀತಿಯಂಬುದು ಅಂದುಕೊಂಡಷ್ಟು ಕಷ್ಟದ ವಿಷಯವೇನಲ್ಲ. ಪ್ರೀತಿಯೊಂದಿಗೆ ಅಂಟಿಕೊಂಡಿರುವ ಆಸೆ, ಸ್ವಾರ್ಥವೆಂಬ ಪೆಡಂಭೂತಗಳೇ ಜೀವನವನ್ನು ಕಷ್ಟಮಯಗೊಳಿಸುವುದು.


No comments:

Post a Comment