Tuesday, 9 October 2018

ಚಹಾ ವಿರಾಮ [ಭಾಗ-೧]

ಇಂದು ಸಂಜೆ ಚಹಾ ವಿರಾಮದಲ್ಲಿ ನನ್ನ ಮತ್ತು ನನ್ನ ಸ್ನೇಹಿತೆ ಅಶ್ವಿನಿಯ ನಡುವೆ ನಡೆದ ಹಾಳು ಹರಟೆಯ ಕುರಿತು ತಲೆಯಲ್ಲಿ ಒಂದಷ್ಟು ವಿಷಯಗಳು ಹರಿದಾಡುತ್ತಿರುವಾಗ ಮೊದಲಿಗೆ ಅನಿಸ್ಸಿದ್ದು ಈ ವಿಷಯಗಳ ಮೇಲೆ ಒಂದಷ್ಟು ನನ್ನನಿಸಿಕೆಯ ಬೆಳಕ ಚೆಲ್ಲಬೇಕೆಂದು. ಸರಿ, ಹಾಗಾದರೆ ಬರೆಯೋಣವೆಂದು ಲ್ಯಾಪ್ಟಾಪ್ ತೆಗೆದು ಕುಳಿತೆ.
ಅರೇ ಮ್ಹಾರಾಯ್ರೆ, ಏನಿದು ವಿಪರಿಯಾಸ.? ಬರಿಯಬೇಕೆಂದಿರುವ ವಿಷಯಕ್ಕೆ ಶೀರ್ಷಿಕೆಯಾಗಿ ತಟ್ ಎಂದು ಬಂದ ಪದ, ಕಾಪಿ ಕಟ್ಟೆ.! ಆದರೆ ಈಗಾಗಲೇ ಕಾಪಿ ಕಟ್ಟೆಎಂದು ಹೆಸರಿಟ್ಟು ಜನರಿಗೆ ಕಾಪಿ, ಚಹಾ, ತಿಂಡಿ ತಿನಿಸುತ್ತಿರುವ ಹೋಟೆಲ್ ಗಳಿವೆ. ಹಾಗಾಗಿ ಈ ಹೆಸರನ್ನು ಬಳಸುವುದು ಬೇಡ ಎನಿಸಿತು. ಹಾಗಾದರೆ ಮತ್ತೇನು? ಸರಿ ಕಾಫಿ ಬ್ರೇಕ್ ಅಂದ್ಕೊಂಡೆ. ಇದರದ್ದು ಅದೇ ಹಣೆಬರಹ. ಯಾವುದು ಬೇಡ, ಕಟ್ಟೆ ಪುರಾಣ? ಹುಂ ಹು .. ಈ ಹೆಸರಿನೊಂದಿಗೆ ಈಗಾಗಲೇ ಒಂದಷ್ಟು ಫ್ಲರ್ಟಿಂಗ್ ಆಗಿದೆ. ಲಂಕೇಶ ಪತ್ರಿಕೆಯಲ್ಲಿ, ಬಯಲು ರಂಗಮಂದಿರದಲ್ಲಿ, ಸಿನಿಮಾಗಲ್ಲಿ! ಈಗಿನ್ನು ನನ್ನ ಬಳಿ ಉಳಿದಿರುವುದು ಒಂದೇ. ಚಹಾ ವಿರಾಮ. ಇದನ್ನು ಸಹ ಬಳಸಿ ಬೇಕಾದಷ್ಟು ವಿಷಯ ವಿಮರ್ಶೆಗಳು ನಡೆದಿರಬಹುದು. ನನಗದು ಗೊತ್ತಿಲ್ಲ. ಒಂದು ರೀತಿಯಲ್ಲಿ ಈ ಎಲ್ಲಾ ಶೀರ್ಷಿಕೆ ಇಲ್ಲಿ ಹೊಂದಾಣಿಕೆಯಾಗುತ್ತದೆ. ಮರಗಳ ಕೆಳಗಾಗೆ ಕಲ್ಲು ಬೆಂಚ್ಗಳ ಹಾಕಿರುವ ನಮ್ಮ ಡಿಪಾರ್ಟ್ಮೆಂಟ್ ಕ್ಯಾಂಟೀನ್ ನಲ್ಲಿ ನಾವು ಆಗಾಗ ಚಹಾ ವಿರಾಮಕೆಂದು ಹೋಗಿ, ಚಹಾ, ಕಾಪಿ ಕುಡಿಯುತ್ತ ಜಗತ್ತಿಲಿನ ಆಗುಹೋಗುಗಳ್ಳನ್ನು ನಮ್ಮಿಂದ ಏನು ಮಾಡಲಾಗದಿದ್ದರೂ ಬಡಿಯಿ ಕೊಚ್ಚಿಕೊಳ್ಳುತ್ತ, ಒಂದಷ್ಟು ಅವರಿವರ ಮೇಲೆ ದೂರು ಹಾಕುತ್ತ, ನಗುತ್ತ ಮಾತನಾಡಿ ಬರುತ್ತೇವೆ. ಇದೊಂತರ ಕೆಲಸದ ಒತ್ತಡಗಳ ನಡುವೆ ಮರಳುಗಾಡಿನ ಮದ್ಯಾಹ್ನದ ಉರಿಬಿಸಿಲನ್ನಲ್ಲಿ ಬೀಸಿ ಹೋಗುವ ತಂಗಾಳಿಯಂತೆ. ಹೇಳಬೇಕೆಂದರೆ ಲ್ಯಾಬ್ನಲ್ಲಿ ಕುಳಿತು ಕಲಿಯುವುದಕ್ಕಿಂತ ಹೆಚ್ಚೇ ವಿಷಯಗಳ ವಿನಿಮಯ ಈ ಚಹಾ ವಿರಾಮದಲ್ಲಿ ಆ ಕಲ್ಲು ಬೆಂಚ್ಗಳಲ್ಲಿ ನಡೆಯುತ್ತದೆ.




1 comment: