Monday, 2 April 2018

Gel well

ನೀರಿನಂತಾಗು ನೀರೆ.
ಅಪ್ಪ ಹೇಳುತ್ತಿದ್ರು ನೀರಿನಂತಾಗು ಮಗಳೇ ಎಂದು.
ಅಂದು ಅಪ್ಪ ಹಾಗೆ ಹೇಳಲು ಕಾರಣವೆ ಬೇರೇ ಇತ್ತು. (ಅಥವಾ ನನಗದು ಸಂಪೂರ್ಣವಾಗಿ ಅರ್ಥವಾಗಿರಲ್ಲಿಲ್ಲವೇನೋ)
ಎಲ್ಲಾದಕ್ಕೂ ಹೊಂದಿಕೊಂಡು ಹೋಗು ಮಗಳೇ ಎನ್ನುವ ಅರ್ಥ ಅವರದಾಗಿತ್ತು. (ಅಥವಾ ಯಾವುದಕ್ಕೂ ಅಂಜದೆ ಮುನ್ನುಗ್ಗು ಎಂಬುವಂತೆಯೇ?)

ಮೊದಲ ಬಾರಿಗೆ ನನ್ನನು ಒಬ್ಬಂಟಿಯಾಗಿ ಹಾಸ್ಟೆಲ್ ನಲ್ಲಿ ಬಿಟ್ಟುಹೋಗುತ್ತಿದ್ದ ಸಂದರ್ಭವದು.
ಬಹಳಾನೇ ಅತ್ತಿದ್ದೆ ಅಂದು ರಾತ್ರಿ. ತಿಳಿಯದ ಊರು, ತಿಳಿಯದ ಒಂಟಿತನ. ಅರ್ಥವಾಗದ ಭಾವನೆಗಳು.
*****
ನನಗೆ ತಿಳಿದ ಮಟ್ಟಿಗೆ ಇಂದಿಗೂ ಅಪ್ಪ ಹೇಳಿಕೊಟ್ಟಂತೆ, ನನಗರ್ಥವದಂತೆಯೇ ನಡೆದು ಕೊಳ್ಳುತ್ತಾ ಬಂದಿದ್ದೇನೆ.
ಆದರೆ ಇತ್ತೀಚಿಗೆ ಯಾವುದು ಮೊದಲಿನಂತಿಲ್ಲ. (ಅಥವಾ ಅಪ್ಪನ ಮಾತಿನ ಗಾಢತೆಯ ಆಳಕ್ಕೆ ಸ್ವಲ್ಪ ಸ್ವಲ್ಪವೇ ಇಳೆಯುತ್ತಿರುವೆನೇ?)
ಶಾಂತತೆಯಿಂದ ನೀರಿನಂತಿದ್ದರು, ನೀರು ಎಣ್ಣೆಯೊಂದಿಗೆ ಬೆರೆಯುವುದಿಲ್ಲವಲ್ಲವೇ?



No comments:

Post a Comment