ಮನುಷ್ಯನ ಬುದ್ಧಿಯೇ ಹಾಗೆ. ಎಷ್ಟೇ ತಿಳುವಳಿಕೆಯಿದ್ದರೂ, ತೋರಿಕೆಯ, ಹೊಗಳಿಕೆಯ ಗೊಡವೆಯಿಲ್ಲದಿದ್ದರು ಕೆಲವೊಮ್ಮೆ ಒಂದು ಸಣ್ಣ ಆಸೆ. (ನೋಟ್: ಇಲ್ಲಿ "ಎಷ್ಟೇ" ಎಂಬ ಪದವು ವೇರಿಯೇಬಲ್, ಹಾಗಾಗಿ ನಾನಿಲ್ಲಿ ನನ್ನ ತಿಳುವಳಿಕೆಯ ಬಗ್ಗೆ ಮಾತನಾಡುತ್ತಿಲ್ಲ) ತನ್ನ ಆಲೋಚನೆಯನ್ನು ಇನ್ನೊಬರಿಗೆ ತಿಳಿಸುವುದು, ತಿಳಿಸಿದನಂತರ ಚೆನ್ನಾಗಿದೆಯೆಂದು ಅವರಬಾಯಲ್ಲಿ ಕೇಳುವ ಬಯಕೆ. ಇದು ಕೇವಲ ಆಲೋಚನೆಗಳಿಗೆ ಸೀಮಿತವಲ್ಲ. ಖರೀದಿಸಿದ ಬಟ್ಟೆಯಾಗಲಿ, ಒಡವೆಯಾಗಲಿ, ನೋಡಿದ ಧಾರಾವಾಹಿಯಾಗಲಿ, ಹೀಗೆ ಹತ್ತು ಹಲವು ವಿಷಯಗಳಿಗನ್ವಯವಾಗುತ್ತದೆ.
ಹಾಗೆಯೆ ಮೊನ್ನೆಯೊಂದು ದಿನ ನನ್ನ ಬರವಣಿಗೆಯ ಬಗ್ಗೆ ವಯಸ್ಸಿನಲ್ಲಿ ಸ್ವಲ್ಪ ಹಿರಿಯರಾದ ನನ್ನ ಸ್ನೇಹಿತೆಯ ಬಳಿ ಮಾತನಾಡಿದ್ದೆ. ಅದನ್ನು ಮೆಚ್ಚಿ, ಚೆನ್ನಾಗಿದೆಯೆಂದು ಹೇಳಿ, ಸ್ವಲ್ಪ ದೊಡ್ಡ ಥ್ಯಾಂಕ್ಯೂ ಯೆಂದು ಹೇಳಿದರು. ಈ ಹೊಗಳಿಕೆಗೆ ನಾನು ಅರ್ಹಳೆ ಅಲ್ಲವೇ ಎಂದೆಲ್ಲಾ ಓವರ್ ಡವ್ ಮಾಡುವ ಮನಸಿಲ್ಲನನಗೆ, ಅವರ ಪ್ರತಿಕ್ರಿಯೆಯಿಂದ ನನಗೆ ಸ್ವಲ್ಪ ಹೆಚ್ಚೇ ಖುಷಿಯಾಯ್ತು. ಹಾಗಾಗಿ ನನ್ನ ಕಡೆಯಿಂದಲೂ ಅವರಿಗೆ ಸ್ವಲ್ಪ ಹೆಚ್ಚೇ ದೊಡ್ಡ ಥ್ಯಾಂಕ್ಯು.
ನೀವು ನೀಡಿದ ಖುಷಿಗಾಗಿ. ಈ ಲೇಖನ ನಿಮಗಾಗಿ.

No comments:
Post a Comment