Monday 1 January 2018

ಹೀಗೊಂದು ಯೋಚನೆ.

"ಕೈಲಾಗದವ್ನು ಮೈಪರಚಿಕೊಂಡನಂತೆ"
ನಾನು ಯಾವುದಾದ್ರೂ ವಿಷಯಕ್ಕೆ ಕೋಪ ಮಾಡ್ಕೊಂಡು ಕಿರ್ಚಾಡಿದ್ರೆ ಅಪ್ಪ ಈ ಮಾತು ಹೇಳ್ತಿದ್ರು.
ನಿನ್ನೆ ಅಮ್ಮನ ಮೇಲೆ ಸಿಕ್ಕಾಪಟ್ಟೆ ಕೋಪಮಾಡಿಕೊಂಡು ಗುರ್ ಅಂತಿದ್ದೆ(ಅವರದ್ದೇನು ತಪ್ಪಿರಲಿಲ್ಲವಾದರೂ). ಆಗ ಯಾವತ್ತೂ ಏನು ಹೇಳದಿದ್ದ ನನ್ನಣ್ಣ ಹೇಳ್ದ, "ಇತ್ತೀಚಿಗೆ ತುಂಬಾ ಕೋಪ ಮಾಡ್ಕೋತಿಯಲ್ಲ ಯಾಕೆ ಅಂತ".

ಹೌದಾ ? ನನ್ನಲ್ಲೇ ಪ್ರಶ್ನೆಯೊಂದು ಹುಟ್ಟಿತ್ತು.
ತಾಳ್ಮೆ ಕಮ್ಮಿ ಆಗಿದಿಯ? ಸಹನಾ ಶಕ್ತಿ ಕಮ್ಮಿ ಆಗಿದಿಯ?
ಯೋಚನಮಾಡಿದೆ.

ಇಲ್ಲಾ! ನನ್ನ ಸಹನಾ ಶಕ್ತಿ ಕಮ್ಮಿಯಾಗಿಲ್ಲ.

ಬಗ್ಗಿದವನಿಗೆ ಒಂದು ಗುದ್ದು ಹೆಚ್ಚು.
ನಾನು ಸಹಿಸಿಗೊಂಡದ್ದು ಹೆಚ್ಚಾಯ್ತು. ಈಗ ಅರ್ಥ ಆಯ್ತು.
ಆದರೆ ಕೋಪಮಾಡಿಕೊಳ್ಳುವುದು ಅದಕ್ಕೆ ಉತ್ತರವಲ್ಲ.

ಕೋಪಮಾಡಿಕೊಂಡರೆ, ನಾನು ಯಾರ ಮೇಲೆ, ಏತ್ತಕ್ಕಾಗಿ ಕೋಪಮಾಡಿಕೊಂಡೆನೋ ಅದೇ ತಪ್ಪು ನಾನು ಮಾಡಿದಂತೆ. ನನಗು ಅವರಿಗೂ ಆಗ ವ್ಯತ್ಯಾಸವೇನು? ಹಾಗಾದರೆ ನಾನು ನನ್ನ ಮೇಲೆಯೇ ಕೋಪ ಮಾಡಿಕೊಳ್ಳಬೆಕ್ಕಲ್ಲವೇ?
ಮೌಢ್ಯ!

ನನ್ನಣ್ಣ ಇನ್ನುಒಂದು ಮಾತು ಅವಾಗವಾಗ ಹೇಳ್ತಾನೆ,"ನಾನೇನು ದೇವರಲ್ಲ, ಮನಸಿನ್ನಲ್ಲಿ ಏನಿದೆ ಅಂತ ಹೇಳ್ಬೇಕು. ಬೇಕು ಅನ್ಸಿದನ್ನು ಕೇಳಿ ತಗೊಂಡು ಬಿಡ್ಬೇಕು. ಮನುಷ್ಯಂಗೆ ಕ್ಲ್ಯಾರಿಟಿ ತುಂಬಾ ಮುಖ್ಯ. ನಿನ್ನ ಮನಸ್ಸಿನ ಮಾತಿಗೆ ಧ್ವನಿ ಕೊಡ್ಬೇಕು, ಸುಮ್ನಿದ್ರೆ ಏನು ಆಗಲ್ಲ. ಬೇರೆಯವರು ಅವರಾಗಿಯೇ ಅರ್ಥ ಮಾಡ್ಕೊಳ್ಳಿ ಅಂತ ಬಿಟ್ರೆ, ಅವರು ಅವರವರಿಗೆ ಬೇಕಾದ ಹಾಗೆ ಅರ್ಥ ಮಾಡ್ಕೋತಾರೆ, ನೀನು ಯೋಚ್ನೆ ಮಾಡಿದತರ ಅವ್ರು ಯೋಚ್ನೆ ಮಾಡ್ಬೇಕು ಅಂತ ಏನು ಇಲ್ವಲ್ಲ. ಅದುಕ್ಕೆ ಬಿ ವೋಕಲ್. ನೀನು ಏನು ಅಂದ್ಕೊಂಡಿದೀಯ ಅದುನ್ನ ಅರ್ಥ ಮಾಡ್ಸು." 

ತಲೆಕೆಡುತ್ತೆ ಹೀಗೆಲ್ಲ ಒಂದೋಂದುಸಲ ನನ್ಗೆ. 

ನ್ನನ್ನೊಬ್ಬ ಸ್ನೇಹಿತ ಹೇಳಿದ್ದ,'ಯೋಚಿಸಿದಷ್ಟು ಗೊಂದಲ ಹೆಚ್ಚು', ನಿಜವಾದ ಮಾತು.
ಹಾಗಾಗಿ ಸದ್ಯಕ್ಕೆ ಸುಮ್ಮನಿರುವುದು ವಾಸಿ.








No comments:

Post a Comment