Friday, 26 January 2018

ಮಾಧುರಿ ಶಂಕರ್

ನಿನ್ನ ಫೇಸ್ಬುಕ್ ಹೆಸರು ಮಾಧುರಿ ಶಂಕರ್ ಯಾಕೆ? ನೀನು ಮಾಧುರಿ ಭಟ್ ಅಲ್ವ? ಅಂತ ನನ್ನ ಸ್ನೇಹಿತೆ ಕೇಳಿದಳು.
ಮತ್ತೆ ಹಲವು ಹಳೆಯ ಶಾಲಾ ಸ್ನೇಹಿತರು ನನಗೆ ಮದುವೆಯಾಗಿದೆ ಎಂದು ಮೆಸೇಜ್ ಕಳುಹಿಸಿದರು. ಇದು ಕೇವಲ ಇಂದು ನೆನ್ನೆಯ ವಿಷಯವಲ್ಲ, ಅವಾಗವಾಗ ಅವರಿವರು ಕೇಳುವ ಪ್ರಶ್ನೆ, ಹೊಸದಾಗಿ ಪರಿಚಯವಾದವರನ್ನು ಹೊರೆತು ಪಡಿಸಿ.
ಅವರೆಲ್ಲರ ಪ್ರಶ್ನೆಗೆ ಕೇವಲ ನನ್ನ ನಗುವೊಂದೇ ಉತ್ತರವಾಗಿತ್ತು. ಒಂದು ಹುಡುಗಿಯ ಮುಂದಿರುವ ಹುಡುಗನ ಹೆಸರಿಗೆ ಅಷ್ಟು ಮಹತ್ವವಿದೆಯೆ? ನನಗದೆಲ್ಲ ತಿಳಿದಿಲ್ಲ. ನನ್ನ ಫೇಸ್ಬುಕ್ ಹೆಸರಿನ ಹಿಂದುರುವುದು ಒಂದು ಸಿಂಪಲ್ ಲಾಜಿಕ್ ಇಷ್ಟೇ, ಬೇರೇನೂ ಕಥೆಯಿಲ್ಲ. ನನ್ನಪ್ಪನ ಹೆಸರು ಶಂಕರ ನಾರಾಯಣ ಭಟ್. ನನ್ನ ಅಣ್ಣ ನನಗಿಂತ ಮೊದಲೇ ಫೇಸ್ಬುಕ್ ಅಕೌಂಟ್ ತೆರೆದಿದ್ದ. ಫೇಸ್ಬುಕ್ ಹೆಸರು ಮುರಳಿ ನಾರಾಯಣ ಅಂತ ಕೊಟ್ಟಿದ್ದ. ಅದಕ್ಕೂ ಬೇರೇನೂ ಕಾಥೆಯಿಲ್ಲ, ಸುಮ್ಮನೆ ಶೋಕಿಗಷ್ಟೇ. (ಈ ಫೇಸ್ಬುಕ್ನಾವೂರು ಸಹ ಸರಿಯಿಲ್ಲ. ಅಕೌಂಟ್ ಕ್ರಿಯೇಟ್ ಮಾಡ್ಬೇಕಾದ್ರೆ, ಫಸ್ಟ್ ನೇಮ್, ಲಾಸ್ಟ ನೇಮ್, ಸುರನಮ್ ಅಂತ ಎಲ್ಲಾ ತಲೆ ತಿಂದ್ರೆ, ಪಾಪ ನನ್ನಣ್ಣ ಇನ್ನೇನು ಮಾಡ್ತಾನೆ, ಫುಲ್ ಬುದ್ಧಿವಂತಬೇರೆ, ಎಲ್ಲೋ ಲಾಸ್ಟ ನೇಮ್ ಅಂತ ಕೇಳಿರ್ಬೇಕು, ಅವನ ಲಾಸ್ಟ ನೇಮ್ ನಾರಾಯಣ್ ತಾನೆ, ಅದಕ್ಕೆ ಹಾಗೆ ಕೊಟ್ಟಿರ್ತಾನೆ.) ನನ್ನಪ್ಪನ ಅರ್ಧ ಹೆಸರನ್ನು ಮಾತ್ರ ಅವನಲ್ಲಿ ಹಾಕಿಕೊಂಡಿದ್ದ, ಬಾಕಿ ಇರುವ ಇನ್ನರ್ದ ಯಾರದ್ದು? ನನ್ನದೇ ಅಲ್ಲವೇ? ಹಾಗಾಗಿ ನಾನು ಮಾಧುರಿ ಶಂಕರ್ ಅದೇ ಅಷ್ಟೇ. ನನ್ನ ನಿಜ ಹೆಸರು ಮಾಧುರಿ ಶಂಕರ್ ಅಲ್ಲ, ಮಾಧುರಿ ಭಟ್ ಸಹ ಅಲ್ಲ. ನಾನು ಮಾಧುರಿ ಶಂಕರ್ ನಾರಾಯಣ್ (ಮಾಧುರಿ ಎಸ್ ಎನ್). ಇದನ್ನೆಲ್ಲ ಯಾರಿಗೆ ಹೇಳ್ಕೊಂಡು ಕೂರೋದು, ತುಂಬ ಬೋರಿಂಗ್ ಆಗಿದೆ.
ಆದ್ರೆ ಇಷ್ಟೆಲ್ಲದರ ಮದ್ಯೆ, ನನಗೆ ನನ್ನ ಫೇಸ್ಬುಕ್ ನೇಮ್ ಬಹಳಾನೇ ಇಷ್ಟವಾಗೊಕ್ಕೆ ಶುರುವಾಗಿದೆ. ನನ್ನ ಸ್ನೇಹಿತ ನನ್ನನ್ನು ಮಿಸ್ ಶಂಕರ್ ಎಂದು ಕರೆದಾಗಲೆಲ್ಲ ಒಂತರ ಖುಷಿಯಾಗುತ್ತದೆ. ನನ್ನ ಹೆಸರು ಮುದ್ದಾಗಿದೆ ಅನಿಸುತ್ತದೆ, ನನ್ನ ಅಪ್ಪನ ಹಾಗೆ.

ನನಗೆ ಇನ್ನೊಂದು ಡೌಟ್, ನನ್ನ ಬ್ಲಾಗ್ ಅನ್ನು ಯಾರಾದರೂ ಓದಲು ಶುರುಮಾಡಿದರೆ, ಅವರು ನನ್ನ ಬ್ಲಾಗ್ ನೇಮ್ ಮಧುರ ಅಂತ ಯಾಕಿದೆ ಎಂದು ಕೇಳಬಹುದು. ಅಥವಾ ನನ್ನ ಕಾವ್ಯ/ಅಂಕಿತ ನಾಮವೇ ಎಂದು ಕೇಳಬಹುದು. ಆ ಹೆಸರಿಂದಿರು ವಿಷಯವನ್ನು ಮುಂದೊಂದು ದಿನ ಹೇಳುವೆ. 

No comments:

Post a Comment