Tuesday, 23 January 2018

ಪಾಪದ ಮಾಣಿ

೨೩-೦೧-೨೦೧೮

ಸುಂದರವಾದ ಕಪ್ಪು ಬಿಳುಪಿನ ಭಾವಚಿತ್ರವೊಂದು ಇಂದು ಅವನ ಡಿಸ್ಪ್ಲೇ ಪಿಕ್ಚರ್ ಆಗಿತ್ತು, ಜೀವನದ ತನ್ನೆಲ್ಲಾ ಬಣ್ಣಗಳ ಹೊತ್ತು. ಹೆತ್ತಮ್ಮನಿಗೆ ಹೆಗ್ಗಣ್ಣ ಮುದ್ದು ಅನ್ನುವ ಹಾಗೆ, ನಮಗಿಷ್ಟ ಆದವರು ಹೇಗಿದ್ದರೂ ಚೆಂದ. ಆದರೆ ನನಗೆ ಬಲು ನಂಬಿಕೆಯಿದೆ ಇವನು ಹೆಗ್ಗಣ ಅಲ್ಲ, ನಾನಂತು ಹೆತ್ತಮ್ಮನಲ್ಲ, ಇವನೆಂದರೆ ಇಷ್ಟ ಅಷ್ಟೇ. ಹಾಗಾಗಿ ನಿಜವಾಗಿಯೂ ಇವ ಚೆಂದವೇ ಇರುವ. ಸಪೂರವಾಗಿ ಉದ್ದ ಉದ್ದವಿರು ಎರೆಡು ಕೈಯ್ಯ ಬೆರಳುಗಳನ್ನು ಒಟ್ಟಿಗೆ ಸೇರಿಸಿ, ಮಡಚ್ಚಿದ್ದ  ತನ್ನ ಉದ್ದಾನೆಯೇ ಕಾಲುಗಳ ಮಂಡಿಯಮೇಲೆ ಇರಿಸಿದ್ದ. ರಸವೀರಿದ ಕಬ್ಬಿಣ್ಣ ಜಲ್ಲೆಯೇ ಹಾಗೆ ನಡುಬಾಗಿಲಿನ ಮೂಲೆಯಲ್ಲಿ ಕುಳಿತು ಕೊಂಚ ಗಾಂಭೀರ್ಯದಿಂದ ತನ್ನ ದೃಷ್ಟಿಯನ್ನು ಮತ್ತೆಲ್ಲೋ ಹಾಯಿಸಿದ್ದ, ಛೇ ಒಬ್ಬ ಒಳ್ಳೆಯ ಫೋಟೋಗ್ರಾಫರ್ ಅನ್ನು ನೋಡಿ, ಅವನ ಕ್ಯಾಮೆರಾ ಕಣ್ಣುಗಳ್ಳನು ಕಂಡು ನಕ್ಕು ಅಣುಕಿಸಲಾರೆ ಎಂಬಂತೆ. ಆದರೆ ನನ್ನಕಣ್ಣಿಗದು ಬೇರೆಯ ರೀತಿಯಲ್ಲಿ ಕಂಡಿತ್ತು. ಒಬ್ಬ ಪಾಪದ ಮಣಿಯ ಹಾಗೆ, ಭಾವಚಿತ್ರ ನೋಡಿದ ಕೂಡಲೇ ಸ್ವಲ್ಪ ಹೆಚ್ಚೇ ಮುದ್ದು ಮುದ್ದು ಅನಿಸಿದ್ದ.  ಅವನ ಕಣ್ಣಿನಲ್ಲಿ ಏನೋ ಅಸಮಾಧಾನ, ನನ್ನನ್ನು ಬಿಟ್ಟುಬಿಡಿ ದಯವಿಟ್ಟು ಎಂಬ ಸಣ್ಣನೆಯ ಕೋಪ. ಇವಾ ಕೂತ ಶ್ಯಲಿ, ಆ ಜಾಗ, ಆ ನೋಟ, ಏನೋ ನನಗಂತೂ ಏನು ಹೇಳಬೇಕು ತೋಚುತ್ತಿಲ್ಲ. ಮನೆಗಳಲ್ಲಿ ನಡೆವ ವಾದವಿವಾದದ ಚಿತ್ರಒಂದು ಕಣ್ಮುಂದೆ ಬಂದು ಓಡಿ ಹೋಗಿತ್ತು. ತನ್ನವಾದ ಮಂಡಿಸಿಲಾಗದೆ ಪೇಚಾಡುತ್ತಿದ್ದ ಪಾಪದ ಮಾಣಿಯಾಗಿ ಇವಾ ಕಂಡಿದ್ದ. 

No comments:

Post a Comment