Friday, 10 August 2018

ಹೋಗಿರದ ಹೊಸ ದಾರಿಯಲ್ಲೊಂದು ಸಂಜೆಯ ಪಯಣ

ಪದಗಲ್ಲಿ ಇಳಿಸುವುದಾದರೂ ಹೇಗೆ?
ಆ ನನ್ನ ಭಾವನೆಗಳ.
ನನ್ನೊಳು ಬಚ್ಚಿಡುವುದಾದರೂ ಹೇಗೆ?
ಉದಯಿಸುವ ಆ ಆಸೆಯ.
ಹಿಂಬಾಲಿಸಿದಷ್ಟು ದೂರವಾಗುವ ಆಕಾಶ.
ಸಾಗಿದಷ್ಟು ಮುಗಿಯದ ಹಾದಿ.
ಮುಸ್ಸಂಜೆಯ ಅರೆ ಕತ್ತಲಾ ಹಾದಿಯ ಚೀರಿಕೊಂಡು ಮುನ್ನುಗುವ ಬಂಡಿ.
ಗಾಳಿಯ ರಭಸಕ್ಕೆ ಕುಣಿಯುವ ಮರಗಿಡ.
ಅರೆ!, ಗಾಳಿ ಹಾಡುತಿಹ ಪದಗಳು ನನ್ನೊಬಳಿಗೆ ಮಾತ್ರ ಕೇಳಿಸುತ್ತಿರುವುದಲ್ಲ!
ಮರಗಿಡಕ್ಕೂ ಕೇಳಿಹುದೆ? ಅದೆಕ್ಕೆ ಇರಬಹುದೇ ಆ ಕುಣಿತ?
ಮುಳುಗುತಿಹ ಸೂರ್ಯನ ಮರೆಮಾಚುತ್ತಾ,ಮೋಡವೊಂದು ಆವರಿಸುತ್ತಿದೆ.
ಮಳೆಯೇನಾದರೂ ಬರಬಹುದೇ?
ಗೂಡು ಸೇರೆತಿಹ ಬೆಳ್ಳಕ್ಕಿಯ ಸಾಲೊಂದು ಕಣ್ಣಮುಂದೆ ಹಾದು ಹೋಯಿತು.
ಮಿಶ್ರ ಭಾವನೆಗಳ ಗೂಡಾದ ನನ್ನ ತಲೆ,
ತನ್ನೆಲ್ಲಾ ಭಾವನೆಗಳ ಗಾಳಿಯಲ್ಲಿ ತೇಲಿಬಿಟ್ಟು ಬಹಳ ಹಗುರಾಗಿ ನಲಿದಿತ್ತು.





No comments:

Post a Comment