ಫೇಸ್ಬುಕ್ ನಲ್ಲಿ ಹ್ಯಾಪಿನೆಸ್ ಪೇಜ್, ಹ್ಯಾಪಿನೆಸ್ ಇಸ್.. , ದಿ ಹ್ಯಾಪಿ ಪೇಜ್ ಹೀಗೆ ಸುಮಾರು ಪೇಜ್ಸ್ ಇದ್ದು, ಅವುಗಲ್ಲಿ ಖುಷಿ ಎಂದರೇನು ಅಂತ ಸಣ್ಣಸಣ್ಣ ಸರಳ ವಾಕ್ಯಗಳಲ್ಲಿ, ಮುದ್ದು ಮುದ್ದು ಡೂಡಲ್ ಆರ್ಟ್ ನೊಂದಿಗೆ ಪೇಜ್ ಅಡ್ಮಿನ್, ಅವರಿಗೆ ಖುಷಿ ಅಂದರೇನು ಅಂತ ಹೇಳಿಕೆಕೊಳುತ್ತಾರೆ ಈ ಮೂಲಕ ಓದುಗರಿಗೆ ಖುಷಿ ಹಂಚುತ್ತಾರೆ. ಅವುಗಲ್ಲಿ ಕೆಲವುಗಳು ಸಾಮಾನ್ಯವಾಗಿ ಎಲ್ಲರಿಗೂ ಅನ್ವಯಿಸುತ್ತದೆ. ಹಾಗಾಗಿ ಈ ಪೇಜ್ ಗಳು ಫಾಸಬುಕ್ನಲ್ಲಿ ಫೇಮಸ್.
ಇಂದೇಕೋ ಈ ಪೇಜ್ ಬಗ್ಗೆ ಯೋಚನೆ ಬಂತು, ಈ ಪೇಜ್ ನಲ್ಲಿ ಬರುವ ಪೋಸ್ಟ್ಗಳು ಅಡ್ಮಿನ್ ನ ಖುಷಿಗಳಾದರೆ ನನ್ನ ಖುಷಿಗಳು ಯಾವುವು? ನಾನು ನನ್ನ ಖುಷಿಗಳನ್ನು ಸಣ್ಣ ಸಣ್ಣ ಸರಳ ವಾಕ್ಯಗಳಲ್ಲಿ ಹೇಳುವುದಾದ್ರೆ ಹೇಗೆ ಹೇಳ್ತೀನಿ ?
ತಿಳ್ಕೊ ಬೇಕಾ? ಹಾಗಾದ್ರೆ ಮುಂದೆ ಓದಿ, ಬರಿತಾ ಬರಿತ ನಾನು ತಿಳ್ಕೋತೀನಿ.
ಬೋರಿಂಗ್ ಅನ್ನಿಸ್ತಾ ? ಹಾಗಾದ್ರೆ ಬ್ಲಾಗ್ ಕ್ಲೋಸ್ ಮಾಡಿ. ನಿಮ್ಗೆ ಇಂಟೆರೆಸ್ಟಿಂಗ್ ಅನ್ಸಿದುನ್ನ ಮಾಡಿ.
ಖುಷಿ ಅಂದಕೂಡ್ಲೇ ನೆನಪಾಗೋದು ಅಮ್ಮ, ನಾನು ಮನೆಗೆ ಬರ್ತೀನಿ ಅಂದಾಗೆಲ್ಲ ನಂಗಿಷ್ಟವಾದ ದೋಸೆ, ಬದ್ನೇಕಾಯಿ ಕೊದಿಲು ಮಾಡಿರ್ತರೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿನೇ ಅಲ್ವ? ಒಳ್ಳೆ ರುಚಿಕರ ಆಹಾರ ತಿನ್ನಕ್ಕೆ ಸಿಕ್ರೆ ನಂಗೆ ಖುಷಿ .
ನಮ್ಮಪ್ಪ ನಾನು ಮನೆಗೆ ಬರುವ ದಿನವನ್ನು ಕಾಯುತ್ತಾರಲ್ಲ, ಅದು ನಿಜವಾದ ಖುಷಿ. ಮನೆಯ ಬಾಗಿಲು ತಟ್ಟುವಮುನ್ನ ಮನೆಯ ಬಾಗಿಲು ತೆರೆದು 'ಮಗಳೇ, ಬಂದ್ಯಾ' ಅಂತರಲ್ಲ ಅದು ಸಾರ್ಥಕತೆಯ ಖುಷಿ. (ನಮ್ಮ ಅಪಾರ್ಟ್ಮೆಂಟ್ ಲಿಫ್ಟ್ ಸೌಂಡ್ ಇಂದಲೋ ಅಥವ ಇನ್ನ್ಹೆಗೊ ನಾನು ಬಂದದ್ದು ಬಾಗಿಲು ತಟ್ಟುವ ಮುನ್ನ ನಮ್ಮಪ್ಪನಿಗೆ ತಿಳಿಯುತ್ತದೆ).
ಇವಳು ನನ್ನ ತಂಗಿ ಅಂತ ಅಣ್ಣ ಹೇಳುವುದು ನನಗೆ ಹೆಮ್ಮೆಯ ಖುಷಿ.
ಹೀಗೆ ಹತ್ತು ಹಲವು ಖುಷಿಗಳು. ಜೀವನದ ಸಣ್ಣ ಸಣ್ಣ ಖುಷಿಗಳು.
ಹಳೆಯ ಗೆಳತಿಯಾ ಕರೆ, ಮಳೆಯಲ್ಲಿ ನೆನೆದು ಬಂದಾಗ ಅಮ್ಮನ ಬೈಗುಳ, ಅಪ್ಪನ ಕಿವಿ ಮಾತು, ಸ್ನೇಹಿತರ ಗಿಫ್ಟ್ಸ್, ಅಂದೆಲ್ಲೋ ಕೇಳಿದ ಹಾಡು, ಇಂದೆಲ್ಲೋ ಸುತ್ತಲೂ ಹೋದ ದಾರಿ, ಎಂದೋ ಗೀಚಿದ ಸಾಲುಗಳು ಏನನ್ನೋ ಹುಡುಕುವಾಗ ಸಿಕ್ಕರೆ ಆಗುವ ಖುಷಿಗಳು..
ಕಾರ್ತಿಕನ ನಗು,
ಆದಿಯ ಕವನ,
ಶಾಂಭವಿ ಮಾಡಿದ ಚಿತ್ರಾನ್ನ,
ಅಪ್ಪನ ಹಾಡುಗಳು,
ಅಣ್ಣ ಮಾಡಿಕೊಟ್ಟ ಟೀ,
ನ್ಯಾನೋ ಪಾರ್ಟಿಕಲ್ಸ ಮೊದಲ ಬರಿ ಮಾಡಿದ್ದೂ,
ಇಂಜಿನಿಯರ್ ಮಕ್ಕಳಿಗೆ ಪಾಠ ಮಾಡಿದ್ದೂ,
ನನ್ನ ಮೊದಲ ಶಿಷ್ಯವರ್ಗ,
ರಂಬೀರ್ನ ಕ್ಯೂಟೆನೆಸ್ಸ್,
ಟಾಮ್ ಕ್ರ್ಸ್ ನ ಹಾಟ್ನೆಸ್,
ಸುದೀಪ್ ನ ವಾಯ್ಸ್,
ಟ್ವಿನ್ಕುವಿನಾ ಸಿಲ್ವಿ(ಬೈಕ್),
ಕವಿಗೋಷ್ಠಿ, ಕಪಿಯೊಂದಿಗೆ (ಚನ್ನ),
ಪೋಲಾರ್ ಬೇರ್ ನ ಡಿಬಿಸಿ,
ಲಾವಣ್ಯನೊಂದಿಗಿನ ಪ್ರತಿ ದಿನ,
ರಘುವಿನ ಮಗಳ ಭೇಟಿ,
ಹೀಗೆ ಹತ್ತು ಅಲವು ...
ವಾ ಇದನ್ನೆಲ್ಲ ನೆನಪಿಸಿಕೊಂಡು, ಅದರ ಬಗ್ಗೆ ಈಗ ಬರೀಬೇಕಾರೆ ಆಗುತ್ತಿರುವ ಸಂತೃಪ್ತಿಯ ಖುಷಿ ..
ನನ್ನ ನಗು, ನನ್ನ ಮುದ್ದು (ಚಿಂಪಿ) ನಾನು ಖುಷಿಯ ಬಗ್ಗೆ ಬರೆಯುತ್ತಿರವಾಗ ಕರೆಮಾಡಿ ಮಾತನಾಡಿದಾಗ ಆಗುವ ನೆಮ್ಮದಿಯ ಖುಷಿ.
ತಂಪಾದ ಗಾಳಿಗೆ ಮೈಯೊಡ್ಡಿ ನಿಂತಾಗ, ಕಿವಿಯಲ್ಲಿ ಗಾಳಿ ಪಿಸುಗುಟ್ಟಿದಾಗ, ಆದಿ ಬರೆದ ಚಂದ್ರಮನ ಆರ್ಟಿಕಲ್ ಪದೇ ಪದೇ ಓದಿದಗಾ ( http://adarshabs.blogspot.in/2017/02/blog-post.html ) , ಫಣಿಯಾ ಫೋಟೋಗ್ರಫಿಯ ಬಗ್ಗೆ ಆದಿ ನಾನು ಜಗಳವಾಡಿದಾಗ, ಸಣ್ಣ ಸಣ್ಣ ಹುಸಿ ಮುನಿಸುಗಳು, ಮುದ್ದಾದ ಮಗುವೊಂದು ನಕ್ಕಾಗ, ನಾನೆಟ್ಟ ಗಿಡದಲ್ಲಿ ಹೂವೊಂದು ಅರಳಿದಾಗ, ಅತ್ತಿಗೆ ನಾನು ಸೇರಿ ಅಡಿಗೆ ಮಾಡಿದಾಗ, ಮನೆಯವರೆಲ್ಲ ಒಟ್ಟಿಗೆ ಶಾಪಿಂಗ್ ಮಾಡಿದಾಗ, ಅಬ್ಬಾ .... ಹೇಯ್ ನಾನು ತುಂಬಾ ಲಕ್ಕಿ ಅನ್ನಿಸುತ್ತಿದೆ :) ಖುಷಿ ಆಗ್ತಿದೆ, ಇಷ್ಟೆಲ್ಲ ವಿಷಯಗಳಿಗೆ ಖುಷಿ ಪಡುವ ನಾನು ನನ್ನ ಜೀವನದೊಂದಿಗೆ ಕೋಪ ಮಾಡಿಕೊಂಡಿರುವುದಾದರು ಯೇಕೆ? ಅಥವಾ ಇದು ಹುಸಿ ಕೋಪ ವಿರಬಹುದು (ಕೋಪವಲ್ಲದ ಕೋಪಕ್ಕೆ ಕೋಪವೆಂದು ಹೆಸರಿಟ್ಟಿರಬಹುದು) , ಅಥವಾ ಸಾಧನೆಯ ತುಡಿತದ ಕಿಚ್ಚಿರಬಹುದು. ಗೊತ್ತಿಲ್ಲ. ಸದ್ಯಕ್ಕೆ ಖುಷಿಯಾಗಿದ್ದೇನೆ. ನೀವು ಖುಷಿಯಾಗಿರಿ. ನಮ್ಮಲ್ಲೇ ಖುಷಿ ಅಡಗಿದೆ ನಮಗದು ತಿಳಿಯುವುದಿಲ್ಲ. ತಿಳಿದರು ಬೆಲೆ ಕೊಡುವುದಿಲ್ಲ, ತಿಳಿದರು ತಿಳಿಯದಂತೆ ವರ್ತಿಸಿ ಅವಮಾನಿಸುತ್ತೇವೆ. ಕಾಣದ, ಗೊತ್ತಿಲ್ಲ ಖುಷಿಯಲ್ಲದ ಖುಷಿಗೆ ಖುಷಿಯೆಂದು ಹೆಸರಿಟ್ಟು ಅದನ್ನು ಪಡೆವ ಹಂಬಲದಲ್ಲಿ ಶ್ರಮಿಸಿ ಸೋತು ಹತಾಷರಾಗುತ್ತೇವೆ.