Tuesday, 31 October 2017

Winter is coming.

೩೧-೧೦-೨೦೧೭

ಹಾಳು ಖಾಯಿಲೆ.
ಚಳಿಗಾಲವಿನ್ನು ಶುರುವಾಗುವುದುವೆನ್ನುವಷ್ಟರಲ್ಲಿ ಶೀತ ಶುರುವಾಗಿದೆ.
ನನಗೆ ಶೀತವಿದ್ದರು ಇಷ್ಟು ತಲೆ ಕೆಡುವುದಿಲ್ಲ.
ನನ್ನ ಮಗುವಿಗೇಕೆ ಶೀತ?, ಎಂದು ಅಮ್ಮನ ಗೊಣಗಾಟ.
ಚಳಿಗಾಲವೆಂದರೆ, ಮಳೆಬರುವ ಮುನ್ನ ಗರಿಬಿಚ್ಚಿ ಕುಣಿವ ನವಿಲಿನಂತೆ ಖುಷಿಯಿಂದ ಅರಳುವ ಅಮ್ಮನ ಮೊಗವಿಂದು ಬಾಡಿದೆ. ಶೀತಕ್ಕೆ ಒಂದಷ್ಟು ಇಡಿ ಶಾಪವಕುತ್ತ ತಲೆಕೆಡಿಸಿಕೊಂಡು ಕುಳಿತಿದ್ದಾಳೆ.
ಅಮ್ಮನ ಈ ಗೊಣಗಾಟ ಕಂಡು ನಗಬೇಕೋ? ಶೀತದ ತಲೆನೋವಿಗೆ ಅಳಬೇಕೊ? ಎಷ್ಟು ಮಾಡಿದರು ಮುಗಿಯದ ಕೆಲಸಕ್ಕೆ ರಜೆಯಾಕಿ ಬೆಚ್ಚನೆ ಹೊದೆದು ಮಲಗಬೇಕೋ?



No comments:

Post a Comment