Friday, 20 October 2017

ಹುಗ್ಗಾಟ

ಕತ್ತಲ್ಲಲ್ಲದಾ ಕತ್ತಲು,
ಬೆಳಕ್ಕಲ್ಲದಾ ಬೆಳಕು,
ಮುಂಜಾವು,
ಬಾಹ್ಯಲೋಕದಿಂದ ಹುಗ್ಗುತ್ತ,
ಬೇರೆಲ್ಲೋ ತೇಲುತ,
ನಮ್ಮದೇ ಲೋಕದಲಿ ಜಾರಿ,
ಹುಗ್ಗಾಟ ನಡೆದಿತ್ತು.

ಮೃದುವಾದ ಸ್ಪರ್ಶ,
ಹಿತವಾದ ಅಪ್ಪುಗೆ,
ಉದರದಲ್ಲೇನೋ ಒಂದುತರ ಕಚಗುಳಿ,
ಕೊಂಚ ನಾಚಿಕೆ,
ಕೊಂಚ ಬೇಡದ ಗಾಂಭೀರ್ಯ,
ಕೊಂಚ ನಡುಕ.
ಒಂದಷ್ಟು ತುಂಟಾಟ,
ಒಂದಷ್ಟು ಹುಸಿ ಕೋಪ.

ನಿಗೂಢಕರ ಕಂಗಳು,..!
ಕೆಲವೊಮ್ಮೆ ಮುಗ್ದ ಮಗು, ಕೆಲವೊಮ್ಮೆ ತುಂಟ ರಾಕ್ಷಸ,
ಹುಡುಕ್ಕುತ್ತ ಹೋದಷ್ಟು ಕಳೆದೆ ಹೋಗುವಷ್ಟು ಗಾಢ.
ಬಿಡಿಸ ಹೋದಷ್ಟು ಕಗಂಟಾಗುವ ಸುಂದರ ಒಗಟು.

ಕಾಡದಾರಿಯಲ್ಲಿ ಬೆರಳುಗಳ ಪಯಣ, ನಿಲ್ಲದ ಪಯಣ.
ದಾರಿಯಲ್ಲೊಂದು ತಡೆ,
ಕೊಳದ ಸಿಹಿ ನೀರು. ನನಗೆಂದೇ ಹೇಳಿಮಾಡಿಸಿದಂತೆ.
ವಿಚಿತ್ರ! ನೀರು ಕುಡಿದಷ್ಟು ಬಾಯಾರಿಕೆ. 
ಕೊಳದ ಪೂಜೆಯ ಪ್ರಸಾದ, ತಿನ್ನಲಾಗ ಹಣ್ಣು.
ಸಂಪೂರ್ಣ ಧೈವೀಕ ನೆಮ್ಮದಿ.

ಅಪೂರ್ಣ,
ಆದರೂ ಸಂಪೂರ್ಣ.











No comments:

Post a Comment