ಬೆಕ್ಕು ಕಣ್ಣಮುಚ್ಚಿ ಹಾಲು ಕುಡಿದರೆ, ಲೋಕಕ್ಕೆ ಕಾಣಿಸದೆ?
ಎಷ್ಟು ಸುಂದರ ಈ ಗಾದೆಮಾತು. ಈ ಗಾದೆಮಾತಿನ ಒಂದು ರೂಪವನ್ನು ಎಲ್ಲರೂ ಅರ್ಥೈಸಿಕೊಂಡಿರುತ್ತಾರೆ, ಆದರೆ ಇಂದೇಕೋ ನನ್ನಲ್ಲಿ ಬೇರೆಯದೇ ಗೊಂದಲ. ಇಲ್ಲಿ ಬೆಕ್ಕು ಬುದ್ಧಿವಂತ! ಕೆಲವೊಮ್ಮೆ ಜಾಣ ಕುರುಡುತನವು ಅಗತ್ಯ, ನಮ್ಮ ಕಾರ್ಯ ಸಾಧನೆಗೆ, ಅಲ್ಲವೇ? ಬೆಕ್ಕಿಗೆ ಹಾಲು ಬೇಕಿತ್ತು, ಕುಡಿಯಿತು. ಲೋಕಕ್ಕೆ ಕಂಡರೇನಂತೆ? ಅದನ್ನು ದಂಡಿಸಿಯಾರೇ? ದಂಡಿಸಿ, ಎಂಜಲು ಹಾಲ ಬಳಸಿಯಾರೇ? ಬೆಕ್ಕಿಗೆ ಅದರ ಚಿಂತೆಯಿಲ್ಲ. ಅದರ ಪ್ರಕಾರ ಲೋಕದ ಕಣ್ಣಿನಿಂದ ಅದು ದೂರ. ಅದು ಮಾಡುತ್ತಿರುವುದು ತಪ್ಪು ಅಲ್ಲ, ಯಾರಕಣ್ಣಿಗು ನಾನು ಕಾಣಿಸುವುದೂವಿಲ್ಲವೆಂಬ ನೆಮ್ಮದಿ ಅದಕ್ಕೆ. ಅಹಂ ಭ್ರಮಾಸ್ಮಿ ಎಷ್ಟು ಸತ್ಯ. ದಿನದ ಅಂತ್ಯದಲ್ಲಿ ನಮಗೆ ಬೇಕಾಗಿರುವು ನಮ್ಮ ಆತ್ಮಕ್ಕೆ ನೆಮ್ಮದಿ, ಸಂತೃಪ್ತಿ. ನಾನಿದ್ದರೆಯೆ ನನಗೆ ಜಗತ್ತು. ಹಾಗಂತ ಸಂಪೂರ್ಣವಾಗಿ ಲೋಕದ ನಿಯಮಾವಳಿಯಿಂದ ದೂರಗಬೇಕೆಂಬುದು ನನ್ನ ವಾದವಲ್ಲ. ಅದು ಸಾಧ್ಯವೂ ಇಲ್ಲ. ಮನುಷ್ಯ ಸಂಗಾ ಜೀವಿ. ನಾವು ಬದುಕ್ಕುತಿರುವ ಸಮಾಜದ ಕಟ್ಟುಪಾಡಿಗೆ ನಮ್ಮನನ್ನು ಬಂದಿಸಿಕೊಳ್ಳುವ ಅವಶ್ಯಕಥೆ ಇಲ್ಲವೆಂಬುದಷ್ಟೇ ನನ್ನ ವಾದ. ಅದರ ಪರವೂ ಬೇಡ, ವಿರೋದವು ಬೇಡ. ನಿಯಮಗಳು, ಕಟ್ಟುಪಾಡುಗಳು ನಾವೇ ಮಾಡಿಕೊಂಡಿರುವುದು. ಅವುಗಳು ತಪ್ಪು ಅಲ್ಲ. ಒಂದು ಆರೋಗ್ಯಕರ ಸಮಾಜಕ್ಕೆ ಅದರವಶ್ಯಕಥೆ ಇದೆ. ಹಾಗಂತೂ ಅದುವೇ ನಮ್ಮ ಸಂಪೂರ್ಣ ಜೀವನವಲ್ಲ. ಆಫ್ಟರ್ ಆಲ್ ರೂಲ್ಸ್ ಆರ್ ಮೇಡ್ ಟು ಬ್ರೇಕ್, ರೈಟ್?.
ಇಷ್ಟೆಲ್ಲಾ ಗೊಂದಲದ ನಡುವೆ ನನಗೆ ಇನ್ನೊಂದು ಪ್ರಶ್ನೆ ಮೂಡುತಿದೆ. ನಾನು ಮಾಡುತ್ತಿರುವುದು ತಪ್ಪಲ್ಲವೆಂದು ಬೆಕ್ಕಿಗೆ ಗೊತ್ತೇ? ಗೊತ್ತಿದ್ದರೆ ಕಣ್ಣೇಕೆ ಮುಚ್ಚಿಕೊಂಡು ಹಾಲು ಕುಡಿಯ ಬೇಕಿತ್ತು?
ಕಾರಣ, ಜಗತ್ತು ಅದನ್ನು ತಪ್ಪೆಂದು ಪರಿಗಣಿಸಬಹುದೆಂಬ ಕಲ್ಪನೆಯಿಂದಿರಬಹುದು.
No comments:
Post a Comment