'ನೀರಿಳಿಯದ ಗಂಟಲೋಳ್ ಕಡುಬು ತುರುಕಿದಂತೆ'
ನಾನು ಪ್ರೌಢಶಾಲೆಯಲ್ಲಿರುವಾಗ ಕನ್ನಡದ ಪಠ್ಯಪುಸ್ತಕದಲ್ಲಿ ಎಲ್ಲೊ ಓದಿದ ಮುದ್ದಣ್ಣ ಮನೋರಮೆಯರ ಪ್ರೇಮ ಸಲ್ಲಾಪ ಪ್ರಸಂಗದ ಈ ಸಾಲು ನೆನಪಾಗುತಿದೆ. ಒಂದು ರೀತಿಯಲ್ಲಿ ಈ ಸಾಲು ನನಗು ಅನ್ವಾಸಿತುದೇನೋ , ಕೆಲವು ತಿದ್ದುಪಡಿಗಳೊಂದಿಗೆ!! ನನ್ನ ರೂಪಾಂತರದ ಸಾಲುಗಳು 'ಸಾಮಾನ್ಯವಾದ ದಿನನಿತ್ಯದ ಮಾತುಗಳೇ ಹೊರಡದ ಬಾಯಲ್ಲಿ, ಕಷ್ಟಕರವಾದ ಮಾತು ಅಷ್ಟು ಬೇಗ ಹೊರಡೀತೇ', ಯಾ ಐ ನೋ ಇಟ್ ಕ್ಯಾನ್ ಬಿ ಫ್ರೇಮ್ಡ್ ಲಿಟಲ್ ಮೋರ್ ಗುಡ್ ವೆ!! ಆದರೆ ನಾನು ಮುದ್ದಣ್ಣನಲ್ಲ.
ಅವನಿಗೇನೊ ಕೇಳುವ ತಾಳ್ಮೆ ಇದೆ, ನಾನೆ ಸ್ವಲ್ಪ ಹೆಚ್ಚು ನಿದಾನ. ಮೊದಲಿಂದಲೂ ಹಾಗೆ, ನಾನು ಹೆಚ್ಚು ಗೌರವಿಸುವ ವ್ಯಕ್ತಿಗಳೊಂದಿಗೆ ಅಷ್ಟು ಸುಲಭವಾಗಿ ಮಾತನಾಡಲಾಗುವುದಿಲ್ಲ. ಎಷ್ಟೇ ಅವರ ಮೇಲೆ ಪ್ರೀತಿ ಇದ್ದರು, ಅವರಮೇಲಿರುವ ಅಭಿಮಾನದಿಂದ ಒಂದು ರೀತಿಯ ಅಂಜಿಕೆ ಹಾಗು ಭಯ. ತುಂಬಾ ಮಾನ್ಯತೆಯುಳ್ಳ, ತಿರುಳಿರುವ ವಿಷಯವಷ್ಟೇ ಅವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಕೆಲವು ವಿಷಯಗಳ್ಳನು ಹೇಳಬಯಸಿದರು ನಾಲಿಗೆ ಹೊರಳುವುದಿಲ್ಲ. ತುಂಬಾ ಕಷ್ಟ ಪಟ್ಟನಂತರ ಒಂದಷ್ಟು ಹೇಳುತ್ತೇನೆ. ಇಂದು ಈ ವಿಷಯ ಇಲ್ಲಿ ಹಂಚಿಕೊಳ್ಳುವ ಮನಸಾಯಿತು. ನನ್ನಲಿ ಹುದುಗಿಹೋಗಿರುವ ಎಷ್ಟೋ ಕಥೆಗಳಿವೆ. ಎಲ್ಲದಕ್ಕಲ್ಲದಿದ್ದರು ಕೆಲವೊಂದಕ್ಕೆ ಉಸಿರು ತುಂಬುವಾಸೆ. ಇನ್ನು ಕೆಲವೆಲ್ಲ ನನಗೆ ಮರೆತು ಹೋಗಿವೆ. ಹಹ..
ಹೆಚ್ಚಿನ ಸಂದರ್ಭದಲ್ಲಿ ತಪ್ಪು ನನ್ನದೇ ಆಗಿರುತ್ತದೆ. ತರ್ಕಬದ್ಧವಾದ ಕೆಲಸ ಮಾಡುವುದು ಬಿಟ್ಟು, ತಪ್ಪೆನಿಸಿದರು ನನ್ನೆದುರಿಗಿರುವವರ ಮಾತಿಗೆ ಸಮ್ಮತಿಸಿಬಿಡುತ್ತೇನೆ. ಇದರಿಂದಲೇ ಸಂಕಷ್ಟಕ್ಕೆ ಗುರಿಯಾಗುತ್ತೇನೆ. ತಪ್ಪಾದನಂತರ ಎಲ್ಲವನ್ನು ಹೇಳಲು ಮತ್ತೆ ಮತ್ತೆ ಅವನ ಬಳಿ ಹೋಗಿ ಅರ್ಧಬರ್ದ ವಿಷಯವೇಲಿ ಕೋಪ ಬರಿಸಿ ಬರುತ್ತೇನೆ. ನಾಯಿ ಬಾಲ ಎಷ್ಟಾದರೂ ಡೊಂಕೇ ಅಲ್ಲವೇ. ಇದನ್ನು ಅರ್ಥ ಮಾಡಿಕ್ಕೊಳಬೇಕಾದವರು ಜ್ಞಾನಿಗಳು. ಸುಮ್ಮನೆ ಮುದ್ದು ಮುಗ್ದ ನಾಯಿಯನ್ನೇಕೆ ದೂರಬೇಕು.
No comments:
Post a Comment