Wednesday, 13 September 2017

ಅಚ್ಚಾ!

ಅಚ್ಚಾ! - ದೀಪಕ್ ಪ್ರತಿಕ್ರಿಯಿಸಿದ.

(ಕೆಲವು ಕ್ಷಣಗಳ ನಿಶಬ್ಧ, ಯಾವುದೋ ಯೋಚನಾಲಹರಿಯಲ್ಲಿ ತೇಲಿಹೋದಂತೆ.. ಕಳೆದ ಎರೆಡು ತಿಂಗಳುಗಳಲ್ಲಿ ನಡೆದ ಎಲ್ಲಾ ನೆನಪುಗಳು ಕಣ್ಣಮುಂದೆ ಹಾಗೆ ಸುಳಿದು ಹೋದವು. ನೆನಪುಗಳೇ ಹಾಗೆ ನೆನಪಾಗುತ್ತಲೇ ಇರುತ್ತದೆ. ಮತ್ತೊಮ್ಮೆ ಕಳೆದು ಹೋದ ಸಮಯವನ್ನು ಹುಡಿಕಿ ಚೀಲ್ಲಕ್ಕೆ ತುಂಬಿಸಿ ಹೊತ್ತು ತರುತ್ತದೆ. ಒಂದು ನೆನಪಿನ ಜೊತೆ ಮಿಳಿತಗೊಂಡ ನೂರಾರು ನೆನಪುಗಳು. ಸಾಲು ಸಾಲು ನೆನಪುಗಳು. ಸುಂದರ ನೆನಪುಗಳು. ದುಃಖವೆಂದರೆ ಈ ರೀತಿಯ ಇನ್ನೊಂದಷ್ಟು ನೆನಪುಗಳ ಬುತ್ತಿ ಕಟ್ಟಲು ನಮ್ಮಿಬ್ಬರ ನಡುವೆ ಮೊದಲಿನಂತ ಸ್ನೇಹ ಉಳಿದಿಲ್ಲ.)

Wakad Pune,
೦೯/೦೯/೨೦೧೭.

ಕೆಲವು ಗಂಟೆಗಳ ಹಿಂದೆಯಷ್ಟೇ ನನ್ನ ಸಂಚಾರಿ ದೂರವಾಣಿಯನ್ನು ಕಳೆದುಕೊಂಡಿದ್ದೆ.
IISER ಅಲ್ಲಿ ಯಾವುದೊ ಕೆಲ್ಸದ ಮೇಲೆ ಪೂನೆಗೆ ಬಂದಿದ್ದೆ. ಮಹಾರಾಷ್ಟ್ರಕ್ಕೆ ಹೊರಡಬೇಕೆಂದಕೂಡಲೇ ನೆನಪಾದದ್ದು ಅಭಿ. (ಹೆಸರನ್ನು ಬದಲಾಯಿಸಿದ್ದೇನೆ).
ಮೊದಲೇ ನಿರ್ಧರಿಸಿದಂತೆ ಅರುಣನ ಸ್ನೇಹಿತ ದೀಪಕ್ ನನ್ನನ್ನು ಅವನ ಸಹೋದ್ಯೋಗಿ ರಾಧಾಳ ಮನೆಗೆ ಕರೆದುಕೊಂಡು ಹೋದ. ಅವನು ತನ್ನ suzuki access 125 ತಂದಿದ್ದ. ಅದನ್ನು ನೋಡಿಯೇ ಅಭಿಯ ನೆನಪು ಕಾಡಿತ್ತು. ದೀಪಕ್ನ ಕುಶಲೋಪರಿ ಯನ್ನು ವಿಚಾರಿಸುತ್ತಾ ನಮ್ಮ ಪಯಣ ಸಾಗಿತ್ತು. ನನ್ನ ಯಾವೊದೊ ಉತ್ತರಕ್ಕೆ, ಪ್ರತಿಕ್ರಿಯಿಸುತ್ತಾ 'ಅಚ್ಚಾ' ಎಂದ.

'ಅಚ್ಚಾ', ಕೇವಲ ಒಂದು ಸಾಮಾನ್ಯ ಪದ. ಮಹಾರಾಷ್ಟ್ರದಲ್ಲಿ ಸರ್ವೇಸಾಮಾನ್ಯ...

ಈ ಸಣ್ಣ ವಿಷಯವು ಯಾರದೋ ನೆನಪು ತರಿಸಲು ಸಾಧ್ಯವೇ? ಈಕೆಗೇನು ಹುಚ್ಚೇ ಎನಿಸಬಹುದು.
(It maybe nothing for others, but everything for some.)
ನಮ್ಮವರು ಅನಿಸಿದವರ ಸಣ್ಣ ಸಣ್ಣ ವಿಷಯವು ನಮಗೆ ಹೆಚ್ಚೇ. ಎಲ್ಲಾ ಸಣ್ಣ ವಿಷಯಗಳಲ್ಲೂ ತನ್ನದೆಯಾದ ಸುಖದುಃಖ್ಖ ಒಳಗೊಂಡಿರುತ್ತದೆ. ಎಲ್ಲೆಡೆ ತನ್ನ ಛಾಪ ಮೂಡಿಸುತ್ತದೆ.

ಇದೊಂದು ಕೇವಲ ನಿದರ್ಶನವಷ್ಟೇ. ಇಂತಹ ಎಷ್ಟೋ ವಿಷಯಗಳು ದಿನ ನಿತ್ಯ ಕಾಡುವುದುಂಟು.

ಮೊಗದಲ್ಲೊಂದು ಸಣ್ಣ ನಗು ಮೂಡಿಸುವುದುಂಟು. ಮನದಲ್ಲಿ ಸಾವಿರ ನೆನಪುಗಳು ಸುಳಿದು ಹೋಗುವುದುಂಟು.











No comments:

Post a Comment