Monday, 18 September 2017

ಪ್ರಶ್ನೆಯೇ? ಗೊತ್ತಿಲ್ಲ.

ಕಾರ್ಮೋಡ.
ಎಲ್ಲೆಡೆ ಕತ್ತಲು.
ಮಳೆಯಾದೀತೆ?
ನೋವ ಮರೆಸೀತೆ?
ಗಾಳಿಯದೆ ಚಿಂತೆ.
ನೋವ ದೂರ ಕೊಂಡೊಯ್ಯುವ ನೆಪದಲ್ಲಿ ಮಳೆಯ ತಡೆದೀತೆ?
ಸಂಶಯ.
ಒಂದು ವೇಳೆ ಮಳೆಯೂ ಇಳೆಯ ಸೇರಿದರೆ?
ಮತ್ತೊಂದು ಸುಂದರವಾದ ಪಾಪಸ್ಕಳ್ಳಿಯು ಚಿಗುರೊಡೆದೀತೆ ? ಹೂ ಅರಳಿತೇ?
ಗೊಂದಲ.
ಕಡೆಯಿಲ್ಲದ ಗೊಂದಲ.
ಸರಿತಪ್ಪುಗಳ ಎಲ್ಲೇ ಮೀರಿ.
ಬೇರ್ಪಡಿಸಲಾಗದ ಬಣ್ಣಗಳು.
ಬಿಳಿಯ ಹಾಳೆ.
ಬೇರಾವುದೋ ಲೋಕ.
ಒಬ್ಬಳೇ ನಾನ್ಲಿಲ್ಲಿ.
ಹೆಚ್ಚೇನ ಹೇಳಲಾರೆ.
ಅಮ್ಮ ಮಾಡಿಕೊಟ್ಟ ಚಹಾಗಿಂದು ಮೋಸ ಮಾಡಿದೆ. ಅದೀಗ ತಣ್ಣಗಾಗಿದೆ.
ಸುತ್ತಲೂ ತಣ್ಣನೆಯ ವಾತಾವರ್ಣ.
ಮಂಜುಗಡ್ಡೆಯ ಮನುಸುಗಳು.
ಕಲ್ಲು.
ಹೃದಯ ಬಡಿತವಿಲ್ಲ.
ಬೆಚ್ಚನೆಯ ಭಾವವಿಲ್ಲ.
ಮಾನವೀಯತೆ?
ಅವಳೊಂದು ಮುದ್ದು ಯಕ್ಷಿಣಿ.
ಚಳಿಗೆ ಬೆಚ್ಚಗೆ ಹೊದೆದು ಮಲಗಿ ವರ್ಷಗಳಾಗಿವೆ.
ಹೋದಕೆಯ ಮೇಲೆ ಮಂಜಿನ ರಾಶಿ.
ಶಿಥಿಲ.
ನಿಶಬ್ಧ.
ಅಯ್ಯೋ. ಮತ್ತೆ ಮತ್ತೆ ಕಾಡುತಿಹ ಪ್ರಶ್ನೆ!?

ಕೊನೆಯೆಲ್ಲಿ ?
ಕೂತು ಮಾತಾಡಬೇಕಿದೆ.
ಯಾರಿಹರಿಲ್ಲಿ?
ಕನ್ನಡಿಯು ಇಲ್ಲ.
ಮಳೆಯೂ ಇಲ್ಲ.
ನೀರು ಹಿಂಗಿದ ಬರಡು ನೆಲ.
ಜೊತೆಯಲ್ಲಿ ನನ್ನ ಕಿವುಡು ಕಿವಿ.

ಸಾಕಾಯ್ತು.








 




No comments:

Post a Comment