ಯಾರದ್ದು ತಪ್ಪು?
ಇಲ್ಲಿ ಯಾರದ್ದು ತಪ್ಪಿಲ್ಲ. ಹೌದು.
ತಾಯಿ ಮಕ್ಕಳ್ಳ ಸಂಬಂಧವೇ ಹಾಗೆ.
ಓದುಗರಿಗೆ ಸೂಚನೆ: ಒಂದಕೊಂದು ಬೆಸೆಯುವ ಪ್ರಯತ್ನ ಬೇಡ.
ಬೇರೆ ಬೇರೆ ಫ್ಲೇವರ್ ಪೇಸ್ಟ್ರೀಸ್ ಇವು.
👉ಮನೆಗೆ ತಲುಪಿದ ಕೂಡಲೇ ಅಪ್ಪನ ಹತ್ತಿರ ಕೇಳುವ ಮೊದಲ ಪ್ರಶ್ನೆ,
ಏನ್ ಭಟ್ರೇ, ಅಮ್ಮ ಯೆಲ್ಲಿ ?
ಈ ಪ್ರಶ್ನೆ ಏಕೆ ಕೇಳಿದೆ ಅನ್ನುವದ್ದಕ್ಕೆ ಉತ್ತರವಿಲ್ಲ.
👉ನಮ್ಮಪ್ಪ ಅವಾಗವಾಗ ನನಗೆ ಹೇಳುವುದುಂಟು,
'ತಾಯಿಯ ಕಂಡರೆ ತಲೆ ನೋವು.'
ಇದಕ್ಕೆ ಬೇಕಾದಷ್ಟು ಅರ್ಥಕಲ್ಪಿಸಬಹುದು. ಅವರವರ ಭಾವಕ್ಕೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ.
ನನ್ನ ಮತ್ತು ಅಪ್ಪನ ಭಾವಕ್ಕೆ ತಕ್ಕಂತೆ ಹೇಳುವುದಾದರೆ, ಈ ಗಾದೆಗೆ ಎರೆಡು ಅರ್ಥ,
ಮೊದಲನೆಯದು,
ಅಮ್ಮನ ಕಂಡ ಕೂಡಲೇ ಇಡೀ ದಿನದ ಕಥೆ ಉರುಗುತ್ತೇನೆ, ಜೊತೆಯಲ್ಲಿ ಅಮ್ಮ ಅಲ್ಲಿ ನೋವು ಇಲ್ಲಿ ನೋವ, ಸುಸ್ತಾಯ್ತು ಅಂತ ಬೇರೆ ಒಂದಷ್ಟು ವದರುತ್ತೇನೆ. ಆಗ ಅಪ್ಪ 'ತಾಯಿಯ ಕಂಡರೆ ತಲೆ ನೋವು' ನನ್ನ ಮಗಳಿಗೆ ಅಂತಾರೆ. 😅😆... ನಮ್ಮಪ್ಪನ ಸಾರ್ಕ್ಯಾಸ್ಮ್ ಸಹಿಸುವುದು ಅಷ್ಟು ಸುಲಭದ ಮಾತಲ್ಲ.
ಮತ್ತೊಂದೂ..... ಬಿಡಿ ಬೇಡ. ಹೇಳೊದುಕ್ಕು ಕೇಳೊದುಕ್ಕು ಇದೊಂದು ವಿಷಯವೇ ಅಲ್ಲ.
👉 'ಬಾಯಿಗಡ್ಡ ಬಾಲೆಲು', ಮತ್ತೊಂದು ಡೈಲಾಗ್, ಅಯ್ಯೋ ಬಿಡಿ ನಮ್ಮಪ್ಪನ ಬಿಟ್ಟು ಬೇರೆ ಯಾರ್ತನೆ ಗಾದೆಗಳಲ್ಲಿ ನನ್ನಜೊತೆ ಮಾತಾಡ್ತಾರೆ?
ಇದು ತುಳು ಭಾಷೆಯಲ್ಲಿದೆ. ನಮ್ಮಪ್ಪ ಈ ನುಡಿಮುತ್ತುನ್ನ ಉದುರಿಸುವುದು ಯಾವಾಗ? , ಕೇಳ್ರಿ ಹೇಳ್ತೀನಿ.
ಬ್ರಾಹ್ಮಣ ಕುಟಂಬಕ್ಕೆ ಸೇರಿದ ನಮ್ಮಮ್ಮ , ಶ್ರದ್ಧೆ, ಭಕ್ತಿಗೆ ನಮ್ಮ ಮನೆಯಲ್ಲೇ ವರ್ಲ್ಡ್ ಫೇಮಸ್. ಆಚಾರವಂತರು, ವಿಚಾರವಂತರು. ಕೊಳೆ, ಮೈಲಿಗೆ, ಶುದ್ಧ ಈ ಪದಗಳಿಗೆ ನಮ್ಮ ಎಡಬಿಡಂಗಿತನದ (so called my rationalism) ಧೂಳುತಾಕಿ ದಮ್ಮುಕಟ್ಟುವಾಗ ನಮ್ಮಮ್ಮ ಉಸಿರು ದಾನ ಮಾಡಿ ಅವುಗಳನ್ನು ಜೀವಂತವಾಗಿರಿಸಿಕ್ಕೊಳ್ಳುತ್ತಾರೆ.
ಅದೇನೋ ಗೊತ್ತಿಲ್ಲ, ನಮ್ಮಮ್ಮನ ಊಟದ ತಟ್ಟೆಯಲ್ಲಿ ಇರುವ ಕುಸುಗಲಿಕ್ಕಿಯ ಪದಾರ್ಥವಾಗಲಿ (ಹವ್ಯಕ ಭಾಷೆಯಲ್ಲಿ ಪದಾರ್ಥವೆಂದರೆ ಸಾಂಬಾರ್, ಪಲ್ಯ ಹೀಗೆ... ) ಅಥವಾ ಬೇರೆ ಯಾವುದೇ ತಿಂಡಿ ತಿನಿಸಾಗಲಿ ಒಂದು ನಮೂನೆ ಯಮ್ಮಿಯಾಗಿ ಕಾಣಿಸುತ್ತದೆ. ಟ್ರಸ್ಟ್ ಮೀ, ಇದು ಸತ್ಯ. ನಾನಾಗಿಯೇ ಮಿಶ್ರಮಾಡಿದ ಅಶನ ಪದಾರ್ಥಗಳ ಪಾಕ ಅಷ್ಟು ಚೆಂದ ಹಾಗು ರುಚಿಕರವಾಗಿ ಕಾಣುವುದಿಲ್ಲ. ಹಾಗಾಗಿ ಯಾವಾಗಲು ಅಮ್ಮನ ತಟ್ಟೆಯಿಂದ ನನಗೆ ಊಟ ಬೇಕು, ಕೇಳುತ್ತೇನೆ. ಆಗಲೇ ನಮ್ಮಪ್ಪನ ಡೈಲಾಗ್ ಬರೋದು. ಬಾಯಿಗಡ್ಡ ಬಾಲೆಲು, ಅಂದ್ರೆ ತಿನ್ನುವ ತುತ್ತಿಗೆ ಮಕ್ಕಳು ಅಡ್ಡ ಬರ್ತಾರೆ ಅಂತ. ನೀವೇ ಹೇಳಿ ಇದ್ರಲ್ಲಿ ನನ್ನ ತಪ್ಪೇನಾದ್ರು ಇದಿಯಾ? ನಾನು ಎಷ್ಟು ಮುಗ್ದೆ. ಹಾಹಾ :)
ಮುಂದುವರಿಯಲಿದೆ.....

No comments:
Post a Comment