Saturday, 17 July 2021

ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ

ಹಣವ ಕಂಡರೆ ಹೆಣವು ಬಾಯಿಬಿಡುವ ಕಾಲವಿದು. ಹೌದು ಸರಿ, ದುಡ್ಡು ಯಾರಿಗೆ ಬೇಡ ಹೇಳಿ? ನಿಮಗೆ ಬೇಕೋ ಬೇಡವೋ, ನನಗಂತೂ ಬೇಕು. ಮನುಷ್ಯ ಹಣ, ಚಿನ್ನಾಭರಣ ಏತ್ತಕಾದರು ಆವಿಷ್ಕರಿಸಿದನೋ ಎಂದು ಎಷ್ಟೋ ಬರಿ ಅನಿಸಿದುಂಟು. ಇದು ನನಗೆ ನಾನು ದುಡಿಯುವ ಹಣ ಸಾಲದೆಯೇ ಅಥವಾ ಬೇಕೆಂಬ ವಸ್ತುಗಳು ದುಭಾರಿ ಇರುವ ಕಾರಣದಿಂದ ಖರೀದಿ ಮಾಡಲಾಗುತ್ತಿಲ್ಲವೆಂಬ ಅಸಮಾನದಿಂದಲೋ ಅಥವಾ ಇನ್ನೊಬರಿಗೆ ಹೋಲಿಸಿದರೆ ನಾವು ಬಡವರು ಎಂಬ ಭಾವನೆ ಇಂದಲೋ ಹೇಳುತ್ತಿರುವುದಲ್ಲ. ನನಗೆ ಇದೆಲ್ಲದರಲ್ಲೂ ನನ್ನ ಜೀವನದ ಬಗ್ಗೆ ತೃಪ್ತಿ ಇದೆ. ನನ್ನ ಸಮಸ್ಯೆಯೇ ಬೇರೆ. ಜನಗಳು, ನಾವೇನಾದರೂ ಹಣದ ಬಗ್ಗೆ ಮಾತನಾಡಿದರೆ, ನಮ್ಮ ಗುಣವನ್ನು ಅದರಲ್ಲಿ ಅಳೆಯುತ್ತಾರೆ.! ಹಣಕ್ಕೆ ಹಣಕ್ಕೆ ಸಿಕ್ಕಬೇಕಾದ ಬೆಲೆ ಗಿಂತ ಯಾಕೋ ಹೆಚ್ಚೇ ಪ್ರಾಧ್ಯಾನತೆ ಸಿಕ್ಕಿದಂತಾಗಲಿಲ್ಲವೇ ಇದರಿಂದ? ಮನುಜನ ಮೌಲ್ಯಕ್ಕಿಂತ ಅವನ ದುಡಿಯುವ ಹಣಕ್ಕೆ ಬೆಲೆ ಹೆಚ್ಚು! ಹೆಣ್ಣು, ಹೊನ್ನು, ಮಣ್ಣಿಗಾಗಿ, ಶತ ಶತಮಾನದಿಂದಲೂ ಯುದ್ಧಗಳು ನಡೆಯುತ್ತಲೇ ಬಂದಿದೆ. ಯಾರು ಹೆಚ್ಚು ಶಕ್ತಿಯುತರು, ಬಲಶಾಲಿಗಳು ಎಂಬುದನ್ನು ಹಣವೇ ನಿರ್ಧರಿಸುತ್ತದೆ. ಹಣಕ್ಕಿಲ್ಲಿ ಸರ್ವಾಧಿಕಾರಿ ಪಟ್ಟ. ತಂದೆ ಮಕ್ಕಳ್ಳಲ್ಲಿ ಕಲಹ, ಅಣ್ಣ ತಮ್ಮಂದಿರಲ್ಲಿ ಜಗಳ, ಸ್ನೇಹಿತರ ನಡುವೆ ಕಲಹ, ದೇಶ ದೇಶಗಳ ಜೊತೆ ಜಿದ್ದಾ ಜಿದ್ದಿ ಅಯ್ಯೋ ಒಂದೇ ಎರೆಡೇ, ಹಣದಿಂದಾದ ಅನರ್ಥ? ನಮ್ಮವರೇ ಇಲ್ಲವೆಂದರೆ ಹಣ ಇದ್ದೂ ಏನು ಸುಖ? ಎಷ್ಟೇ ದುಡಿದರು, ಎಷ್ಟೇ ಶ್ರೀಮಂತನಾದರೂ ನೆಮ್ಮದಿಯ ನಿದ್ದೆಗಳಿರದ ರಾತ್ರಿ ಬಡತನವೇ ಸರಿ. 

ಪತಿಯೇ ಎಲ್ಲಾ, ನಾನೇ ಅವನು ಅವನೇ ನಾನು ಎಂಬ ಭಾವನೆಯಲ್ಲಿ ಸುಂದರವಾದ ಸಾಮಾನ್ಯ ಜೀವನ ನಡೆಸು ನನ್ನ ಹಾಗು ನನ್ನ ಗಂಡನಡುವೆಯೇ ಎಷ್ಟೋ ಸಲ ಈ ಕುರುಡು ಕಾಂಚಾಣ ತನ್ನ ಕೈಚಳಕ ತೋರಿಸಿದೆ. ಎಷ್ಟೋಸಲ ಅದರ ಕಾಲ್ತುಳಿತದಿಂದ ಭಾದೆ ಪಟ್ಟಿದ್ದೇವೆ. 

ಈಗ ಇಷ್ಟೆಲ್ಲ ಕಥೆ ಹೇಳುವುದು ಬೇಡ, ಕೆಲವು ಸಣ್ಣ ಸಣ್ಣ ಉದಾಹರಣೆಗಳನ್ನು ಹೇಳುತ್ತೇನೆ ಕೇಳಿ. 
೧. ಪ್ಲಾಸ್ಟಿಕ್ ಖುರ್ಚಿಯ ಮೇಲೆ ಹತ್ತಿ ಏನೋ ಸಾಹಸ ಮಾಡುವ ಮಗನ ನೋಡಿ ತಾಯಿ ಕುರ್ಚಿ ಮುರಿಯುತ್ತದೆ ಮಗ ಅನ್ನುವುದನ್ನು ನಾನು ಹೆಚ್ಚು ಕೇಳಿರುವೆ ಹೊರೆತು ಖುರ್ಚಿ ಮುರಿದರೆ ನೀನು ಬಿದ್ದು ನಿನಗೆ ನೋವಾಗುತ್ತೆದೆ ಎಂಬ ಮಾತು ಕೈಬೆರಳೆಣಿಕೆಸ್ಟೆ. 
೨. ಸ್ನೇಹಿತ ಹೋಟೆಲ್ ಬಿಲ್ ಭರಿಸುವ ಎಂದು ಮೂಗಿನ ಮಟ್ಟ ತಿನ್ನುವ ಗೆಳೆಯರು. 
೩. ಟಪ್ಪರ್ ವೆರ್ ಬಾಕ್ಸ್ ಅಲ್ಲಿ ಏಕೆ ಸ್ನೇಹಿತೆಗೆ ತಿಂಡಿ ಕೊಟ್ಟೆ ಎಂದು ಕೇಳುವ ಅಮ್ಮ. 
೪. ನೀರಿನ ಬಾಟಲಿಯನ್ನು ಜೋಪಾನವಾಗಿ ನೋಡಿಕೊಳ್ಳುವುದಲ್ಲವೇ ಎಂದು ಪತ್ನಿ ಪತಿಯನ್ನು ಕೇಳಿದರೆ, ಪತ್ನಿಗೆ ವಸ್ತುವಿನ ಮೇಲೆ ಹೆಚ್ಚು ಪ್ರೀತಿ ಎಂಬಂತೆ ಎಲ್ಲಾರ ಮುಂದೆ ಕೇವಲವಾಗಿ ಮಾತನಾಡುವ ಪತಿ. ಹೀಗೆ ಹತ್ತು ಹಲವು ಸಣ್ಣ ಸಣ್ಣ ಘಟನೆಗಳು ದಿನನಿತ್ಯ ನಡೆಯುತ್ತಲ್ಲೇ ಇರುತ್ತದೆ. ಎಷ್ಟೋ ಬರಿ ನಮ್ಮರಿವಿಗೆ ಬರದೇ ನಾವು ಸ್ವಾರ್ಥಿಗಳುತ್ತೇವೆ. ಕೇವಲರಾಗುತ್ತೇವೆ. 

ಇದಕ್ಕೆ ಕಾರಣ ನಾವು ಹಣಕ್ಕೆ, ಹಣಕ್ಕೆ ಇರುವ ಬೆಲೆಗಿಂತ ಹೆಚ್ಚು ಕೊಟ್ಟಿರುವ  ಬೆಲೆ. ಹಣವನ್ನು ಗಳಿಸಲು ನಾವು ಪಡುವ ಶ್ರಮ. ನಾನು ದುಡ್ಡಿದ್ದದ್ದು ಎಂಬ ಅಭಿಮಾನ. ಆದರೆ ಈ ಹಣದಿಂದಾಗಿ  ಅಣುಕಿಸಿ ಕೊಂಡರೆ ಆಗುವಷ್ಟು ಕೀಳರಿಮೆ ಬೇರೆ ಯಾವುದರಿಂದಲೂ ಆಗದೇನೋ? ಹೀಗೆ (ಅಂದುಕೊಳ್ಳುವುದು ಹಣಕ್ಕೆ ಸಲ್ಲುವವು ಮತ್ತೊಂದು ಬೆಲೆಯೇ ?.!!) ಜನಜೀವನ ಮಾಯಾಜಾಲ. 

ನಮ್ಮಪ್ಪ ಹೇಳುತ್ತಾರೆ 
"Money makes many things, man makes nothing. "

Sunday, 4 July 2021

ಆಷಾಢ ಮಾಸ ಬಂದಿತವ್ವ

ಗೂಗಲ್ ಪ್ರಕಾರ ಜೂಲೈ ೧೧ ರಿಂದ ಆಷಾಢ ಮಾಸ. ಮದುವೆ ಮಾಡಿ ಕಳುಹಿಸಿದ ಹೆಣ್ಣು ಮಗಳನ್ನು ಆಷಾಢ ಮಾಸದಲ್ಲಿ ತವರಿಗೆ ತಾಯಿ/ಅಣ್ಣ ಕರಿಸಿಕೊಳ್ಳುವ ಆಚರಣೆ ಘಟ್ಟದ ಮೇಲಣ ಎಷ್ಟೋ ಊರುಗಳ್ಳಿ ಒಂದು ಪದ್ಧತಿ ಇದೆ. (ಇದಕ್ಕೆ ಸೈಂಟಿಫಿಕ್ ಕಾರಣಗಳಿವೆ ಈಗ ಅದು ಬೇಡ). ಸಣ್ಣ ವಯಸ್ಸಿನಲ್ಲಿ (ಆರನೇ ತರಗತಿ ಅಂದರೆ ೧೨ ವರ್ಷ ವಯಸ್ಸು) ನನ್ನ ಒಬ್ಬನೇ ಅಣ್ಣ ಬೋರ್ಡಿಂಗ್ ಶಾಲೆಗೆ ಸೇರಿದ. ಅದಾದ ನಂತರ ಅವನು ನಮ್ಮೊಂದಿಗೆ ಉಳಿಯಲು ಶುರು ಮಾಡಿದ್ದೂ ಎಂಟೆಕ್ ಮುಗಿಸಿ ಕೆಲಸಕ್ಕೆ ಸೇರಿದ ಬಳಿಕವೇ. ಯಾವಾಗಲು ಒಬ್ಬನ್ನೇ ಇದ್ದು ಎಷ್ಟು ರೂಢಿಯಾಗಿದೆ ಯೆಂದರೆ ಸಂಸಾರ ಕೆಲವು ಪಾಶಗಳು ಅಷ್ಟೆಲ್ಲಾ ರಷನಲ್ ಅನ್ನಿಸುವುದಿಲ್ಲವೋ ಅಥವಾ ಅದರ ಬಗ್ಗೆ ಅನುಭವದ ಕೊರತೆಯೋ, ಸಮಯದ ಅಭಾವವೋ, ನನಗೆ ಗೊತ್ತಿಲ್ಲ. ಮನಸ್ಸಿನ್ನಲ್ಲಿ ತುಂಭಾ ಪ್ರೀತಿ ಇದ್ದರು ತಂಗಿ ಎಂದು ಎಷ್ಟೇ ಕೇರ್ ಇದ್ದರು, ಭಾಂದವ್ಯ ಎಷ್ಟೇ ಗಟ್ಟಿ ಇದ್ದರು, ನನ್ನ ಮದುವೆಯ ಬಳಿಕ ಒಡನಾಟ ನನ್ನೊಂದಿಗೆ ಸ್ವಲ್ಪ ಕಮ್ಮಿ.  

ನಾನು ೯ನೇ ತರಗತಿಯಲ್ಲಿ ಇದ್ದಾಗ ಕರ್ನಾಟಕ ಸರ್ಕಾರ ವರ್ಷಕೊಮ್ಮೆ ನಡೆಸುವ ಪ್ರತಿಭಾ ಕಾರಂಜಿಯಲ್ಲಿ ಜಾನಪದ ಹಾಡುಗಳ ಸ್ಪರ್ಧೆಯಲ್ಲಿ ನಾನು ಒಂದು ಹಾಡು ಹೇಳಿ ಮೊದಲನೇ ಬಹುಮಾನ ಗೆದ್ದಿದ್ದೆ. " ಆಷಾಢ ಮಾಸ ಬಂದಿತವ್ವ, ಅಣ್ಣ ಬರಲಿಲ್ಲ ಕರೆಯಾಕ". ಒಂದು ಹೆಣ್ಣು ಮಗಳು ತನ್ನ ತವರಿನ ಕರೆಗಾಗಿ ಕಾಯುವ ಸನ್ನಿವೇಶದಲ್ಲಿ ಹೇಳುವ ಹಾಡಿದು. 

ನಮ್ಮಲ್ಲಿ ಈ ಆಷಾಢದ ಪದ್ದತ್ತಿ ಈಗ ರೂಢಿಯಲ್ಲಿ ಇಲ್ಲ. ಮೊದಲಿಂದವು ಇಲ್ಲವಾ? ನನಗೆ ಗೊತ್ತಿಲ್ಲ. ನಾನಂತೂ ನಮ್ಮನ ಮನೆಗೆ ಯಾವಾಗ ಬೇಕವಾಗ ಹೋಗುತ್ತಲ್ಲೇ ಇರುತ್ತೇನೆ. ಆದರೆ ಆಷಾಢ ಮಾಸ ಬಂತು ಅಂತ ಯಾರಾದರೂ ಮಾತನಾಡುವುದ್ದನ್ನು ಕೇಳಿದಾಗ ಈ ಹಾಡು ನೆನಪಿಗೆ ಬಂದು ನನ್ನನ್ನು ಬಹಳವಾಗಿಯೇ ಕಾಡುತ್ತದ್ದೆ. ನನಗು ನನ್ನ ಅಣ್ಣ ನನ್ನ ಮನೆ ಗೆ ಬಂದು ನನ್ನನ್ನು ತನ್ನೊಂದಿಗೆ ನನ್ನ ತವರಿಗೆ ಕರೆದೊಯ್ಯಬಾರದೇ ಎಂಬ ಆಸೆ ಆಗುತ್ತದೆ. ಕಣ್ಣಚಿನಲ್ಲಿ  ಸಣ್ಣದೊಂದು ಹನಿ ನನ್ನ ಹೀಯಾಳಿಸಿ ನಕ್ಕು ಮರೆಯಾಗುತ್ತದೆ. ಒಡಹುಟ್ಟಿದವರು ಎಂದರೆ ಅದೆಂಥಾ ಮೋಹ. ಅದೆಂತಾ ಪ್ರೀತಿ. ಅಬ್ಬಾ.. ಬೇಗ ಹೋಗಿ ಅಣ್ಣನ್ನನ್ನು ಒಮ್ಮೆ ತಬ್ಬಿ ಖುಷಿಯಿಂದ ಅಳುವಾಸೆ. 

Mutual/ಪರಸ್ಪರ

ನೀನು ಎಷ್ಟು ಒಳ್ಳೆಯವನು ಎಂಬುದು ಸಂಬಂಧಿಕ. ಈ ಪ್ರಪಂಚದಲ್ಲಿ ಯಾವ್ದು ಪುಕ್ಕಟ್ಟೆ ಸಿಗೋದಿಲ್ಲ ಗುರು. ಹೇಗೆ ನನ್ನ ಅಪ್ಪ ಅಮ್ಮ ನಂತ ಪೋಷಕರನ್ನು ಪಡೆಯಲು ನಾನು ಮತ್ತು ನನ್ನ ಅಣ್ಣ ಪುಣ್ಯ ಮಾಡಿದ್ದೇವೋ ಹಾಗೆಯೆ ಅವರು ನಮ್ಮನ್ನು ಮಕ್ಕಳಾಗಿ ಪಡೆಯಲು ಪುಣ್ಯ ಮಾಡಿದ್ದಾರೆ. ಹೇಗೆ ನನ್ನ ಕೃಷ್ಣ ನನ್ನು ಪಡೆಯಲು ನಾನು ಪುಣ್ಯ ಮಾಡಿರುವೆ ಹಾಗೆಯೆ ಅವರು ನನ್ನನ್ನು ಪಡೆಯಲು ಪುಣ್ಯ ಮಾಡಿದ್ದಾರೆ. 

ನಾನು ಸಣ್ಣವಳಿದ್ದಾಗ ಹಾಥಿಮ್ ಅಂತ ಒಂದು ಧಾರಾವಾಹಿ ನೋಡುತಿದ್ದೆ. ಅದರಲ್ಲಿ ಹಾಥಿಮ್ ತನ್ನ ಪ್ರೇಯಸಿಯ ತಮ್ಮನನ್ನು ದಜ್ಜಾಲ್ ಎಂಬ ಕ್ರೂರಿಯಾ ಮಾಯಾಜಾಲದಿಂದ ಉಳಿಸಲು  ಏಳು ಪ್ರಶ್ನೆಗಳಿಗೆ/ಒಗಟಿಗೆ ಉತ್ತರಿಸ ಬೇಕಿತ್ತು. ಅದರಲ್ಲಿ ಒಂದು ಪ್ರಶ್ನೆ/ಒಗಟು  ಹೀಗಿತ್ತು "ಜೈಸೇ ಕರ್ನಿ ವೈಸೆ ಭರ್ನೀ". ಇದು ನಿಜ ಜೀವನದಲ್ಲೂ ಎಷ್ಟು ಸತ್ಯ ಅಲ್ಲವೇ? 


Comparison/ ಹೋಲಿಕೆ


ನಾ ನೋಡಿರುವ ಜನಗಳಲ್ಲಿ ೧೦೦ರಲ್ಲಿ ೯೦ರಷ್ಟು ಜನಗಳು ಎಲ್ಲವನ್ನು ಬೇರೆಯರ ಜೀವನಕ್ಕೆ/ ಬುದ್ದಿವಂತಿಗೆಗೆ/ ಜ್ಞಾನಕ್ಕೆ, ಹೀಗೆ ಹಲವಾರು ವಿಷಯಗಲ್ಲಿ ತಮ್ಮವರನ್ನು ಹೋಲಿಸಿಕೊಂಡು ತಮ್ಮವರಿ ಕೀಳರಿಮೆ ಮೂಡಿಸುವುದು ಅಥವಾ ಭೈಯುವುದನ್ನು ನೋಡಿದ್ದೇನೆ, ಅನುಭವಿಸಿಯೂ ಇದ್ದೇನೆ. ಈ ರೀತಿ ಹೋಲಿಕೆ ಮಾಡಿ ತಮ್ಮವರನ್ನೇ ತೆಗಳುವ ವ್ಯಕ್ತಿಗಳಿ ನನ್ನದೊಂದು ಪ್ರಶ್ನೆ, ಎಂದಾದರೂ ತಮ್ಮನು ತಾವು ಇನ್ನೊಬರಿಗೆ ಹೋಲಿಸಿ ತೆಗಳಿಕೊಡಿರುವರೇ? 

ಇದಕ್ಕೆ ಏನೋ "ಹೇಳುವುದಷ್ಟು ಕಾಶಿ ಕೆಂಡ, ತಿನ್ನುವುದು ಮಾತ್ರ ಮಸಿ ಕೆಂಡ" ಅಂತ ಹೆಂದಿನ ಕಾಲದವರು ಗಾದೆ ಮಾಡಿರುವುದು. 

Friday, 2 July 2021

Difference between showiness and cleanliness.

ನನಗೆ ಹರಗಣದಿಂದ ಮುಜುಗರವೇ ಹೊರತು ಬಡತನದಿಂದಲ್ಲ. ಅಥವಾ ಬ್ರ್ಯಾಂಡೆಡ್ ವಸ್ತುಗಳಿಲ್ಲವಲ್ಲ ಎಂಬ ನಾಚಿಕೆಯಲ್ಲ. ೧೦೦ ವರ್ಷಗಳ ಹಳೆ ಮನೆಯಾದರೂ, ಬಹಳ ಸುಂದರವಾಗಿದೆ. ನನಗೆ ಹೇಗೆ ಇಷ್ಟವೋ ಹಾಗೆ. ಆದರೆ ಮನೆ ಸ್ವಲ್ಪ ಕೂಡ ಅಚ್ಚುಕಟ್ಟಾಗಿಲ್ಲ. ಎಲ್ಲಂದರಲ್ಲಿ ಗೊಬ್ಬರದ ಗುಂಡಿಯ ಹಾಗೆ ಹರಗಿ ಕೊಂಡಿರುವ ವಸ್ತುಗಳು. ಧೂಳು ಹಿಡಿದಿರುವ ಪಾತ್ರೆ ಪಗಡಗಳು. ಜೇಡರ ಬಲೆ. ಅಯ್ಯೋ ರಾಮಾ. ಈ ಮನೆ ನೋಡಿದರೆ ತಲೆ ಕೆಟ್ಟುಹೋಗುತ್ತದೆ.  ಅಲ್ಲಾ ನನ್ನದೊಂದು ಪ್ರಶ್ನೆ, ಅಲ್ಲ ಅಲ್ಲ ಎರೆಡು ಪ್ರಶ್ನೆ, ಮಡಿ ಮೈಲಿಗೆ ಅನ್ನೋ ಜನಗಳಿಗೆ ಸ್ವಚತ್ತೆ, ಮನೆಯ ಶುಚಿತ್ವದ ಬಗ್ಗೆ ಯೋಚನೆ ಇಲ್ಲವೇ? ಮುಖಕ್ಕೆ ಪೌಡರ್ ಹಚ್ಚುವ ಜನಗಳಿಗೆ ಮನೆಯನ್ನು ಅಚ್ಚುಕಟ್ಟಾಗಿಡಲು ಸಮಯವಿಲ್ಲವೇ?  

ಕೇವಲ ಎಲ್ಲ ವಸ್ತುವನ್ನು ಅದರದರ ಜಾಗದಲ್ಲಿ ಇಡೀ ಎಂದರೆ ನಾನೇನೋ ಆಡಂಬರಮಾಡುತ್ತಿರುವಂತೆ ನೋಡುತ್ತಾರೆ!!

ಪರಿವಾರ


ತುಂಬು ಪರಿವಾರವೆಂದರೆ ಮೊದಲಿನಿಂದ ತುಂಬಾ ಕುತೂಹಲ ಹಾಗು, ನಾನು ತುಂಬು ಕುಟಂಬದಲ್ಲಿ ಇರಬೇಕೆಂಬ ಆಸೆ ಇದ್ದ ಕಾಲ ಒಂದಿತ್ತು. ಈಗ ನನ್ನನ್ನು ಪರಿವಾರದ ಜನರು ಕೆಣಕದೆ ಸುಮ್ಮನೆ ಬಿಟ್ಟರೆ ಸಾಕಪ್ಪ ಅನ್ನುವಷ್ಟು ನನ್ನ ಆಸೆಗಳು ಬದಲಾಗಿದೆ. ಜಾಗತೀಕರಣವಾದ ನಂತರ ಜಗತ್ತೆಲ್ಲ ಒಂದು ಪುಟ್ಟ ಊರಾಗಿದೆ. ಜನರೆಲ್ಲಾ ವಿದ್ಯಾವಂತರಾಗಿದ್ದರೆ. ಸರಿ ತಪ್ಪುಗಳ ಅರಿವಿದೆಯೋ ಇಲ್ಲವೋ ಅದು ಅವರವರ ಯೋಚನೆಗೆ ಬಿಟ್ಟುದ್ದು, ಆದರೆ ತಮ್ಮ ಜೀವನ ಹೇಗಿರಬೇಕು ಎಂಬ ಅರಿವಂತು ಇದ್ದೆ ಇರುತ್ತದೆ. ಒಂಟಿಯಾಗಿ ಜೀವಿಸುವುದು ಈಗಿನವರಿಗೆ ಕಷ್ಟವಲ್ಲ, ಬದಲಿಗೆ ಇಷ್ಟ. ಯಾರ ಉಪದ್ರವೂ ಇರುವುದಿಲ್ಲ. ಯಾರ ಆಸೆಗಳ ಒತ್ತೆಯಾಳಾಗಿ ಬದುಕಬೇಕಾದ ಅನಿವಾರ್ಯವಿರುವುದಿಲ್ಲ. ಇಷ್ಟವಿಲ್ಲದ್ದ ಆಚರಣೆಗಳನ್ನು ಪಾಲಿಸುವ ಹಿಂಸೆ ಇರುವುದಿಲ್ಲ. ಎಲ್ಲಾದಕ್ಕಿಂತ ಹೆಚ್ಚು ನಮ್ಮ ನಮ್ಮ ಪ್ರೀತಿ ಪಾತ್ರರಿಗೆ ಎಲ್ಲಿ ನೋವು ಕೊಟ್ಟುಬಿಡುತ್ತೇವೋ, ಅವರಿಗಿಷ್ಟ ವಿಲ್ಲದ ಕೆಲಸ ಮಾಡಿ ಅವರ ಮನ ನೋಯಿಸುವೆವೋ ಎಂಬ ಗೊಂದವಿಲ್ಲ. ನೀನಾಯಿತು ನಿನ್ನ ಕೆಲಸವಾಯಿತು ಅಷ್ಟೇ ಜೀವನ. 


ಎಲ್ಲರಲ್ಲೂ ಒಂದಲ್ಲ ಒಂದು ಸಾರಿ ಹೀಗೆ ಯೋಚನೆ ಮೂಡಿರುತ್ತದೆ. ಏನು ಮಾಡುವುದು, ಮನುಷ್ಯ ಸಂಘಜೀವಿ ಮಾತ್ರವಲ್ಲ, ಪರಿವಾರ, ವಂಶವಾಯಿ, ಪರಂಪರೆಯ ಕಟ್ಟುಪಾಡಿ. ಬಿಟ್ಟುಬರುವೆನೆಂದರು ಬಿಟ್ಟುಹೋಗದ ಪಾಶ. ಬಂಧಮುಕ್ತವಾಗುವುದು ಕಠಿಣ ಸಾಧನೆ ಸರಿ. 

Wednesday, 23 June 2021

ಕರೋನ


ಈ ಕರೋನ ಯಾಕಾದರೂ ಹುಟ್ಟಿಕೊಂಡಿತೋ? ಕರೋನದ ಬಾಹುಹಸ್ತದಿಂದ ನನ್ನ ಸಂಸಾರದವರನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ನಾನು ಸೋತು ಸುಣ್ಣವಾಗುತ್ತಿದ್ದೇನೆ. ಕರೋನದೊಂದಿಗೆಗಿನ ಹೊರಟವನ್ನಾದರೂ ನಾ ಜಯಿಸಬಲ್ಲೆ. ಆದರೆ ಅದರಿಂದ ನನ್ನವರನ್ನು ರಕ್ಷಿಸಿಕೊಳ್ಳುವ ಹೋರಾಟದಲ್ಲಿ ನನ್ನವರೊಂದಿಗಿನ ಈ ಹೋರಾಟವನ್ನು ಹೇಗೆ ಗೆಲ್ಲಲ್ಲಿ? ಕಪ್ಪೆಯನ್ನು ತೆಗೆದು ತಕ್ಕಡಿಯ ಮೇಲೆ ಕುರಿಸಿದಂತಾಗಿದೆ. ಒಬ್ಬರಿ ಮನೆ ಇಂದ ಆಚೆ ಹೋಗಿ ಊರಿಡೀ ಸುತ್ತಿ ಸ್ನೇಹಿತರೊಂದಿಗೆ ಆಟವಾಡುವಾಸೆ. ಎಳೆ ವಯಸ್ಸು. ತಿಳಿ ಹೇಳುವುದಾದರೂ ಎಷ್ಟು? ಇನ್ನೊಬರಿಗೆ ನೆಂಟರಿಸ್ಟುಗಳ ಮನೆಗೆ ಹೋಗಿ ಕಾರ್ಯಕ್ರಮಗಳ್ಳಿ ಭಾಗವಹಿಸುವಾಸೆ. ದೊಡ್ಡವರಿರಬಹುದು ಅವರು, ಆದರೆ ಅವರ ಭಾವನೆಗಳಿಗೆ ತಿಳುವಳಿಕೆ ಹೇಗೆ ತಾನೇ ಮೂಡಿಸಲಿ? ಮತ್ತೊಬರದ್ದು ಬೇರೆಯದೇ ಸಮಸ್ಯೆ. ೫ ಜನಕ್ಕೆ ಅಡಿಗೆ ಮಾಡಿ ಬಡಿಸುವುದೇ ದೊಡ್ಡ ಕೆಲಸ. ಸಹಾಯಕ್ಕೆ ಕೆಲಸದವರು ಬೇಕಂತೆ. ಎಷ್ಟು ದಿನವೆಂದು ಕೆಲಸದವರ ಮನೆಗೆ ಬರುವುದನ್ನು ತಡೆಯಲಿ? ಕರೋನ ಬೇಗ ಹೋಗು. ನನ್ನ ಮೇಲೆ ಕೃಪೆ ತೋರು.  

ಈ ಹೋರಾಟದಲ್ಲಿ ಸೋತು ಸತ್ತವರು ಅದೆಷ್ಟೋ! ನೆನೆದರೆ ತಾಳಲಾಗದ ಸಂಕಟ. 

ಇನ್ನು ಏನೇನೋ ಹೇಳಬೇಕೆನಿಸುತ್ತಿದೆ. ಆದರೆ ಈಗ ಸಮಯದ ಅಭಾವ. ಮತ್ತೆ ಸಿಗುತ್ತೇನೆ. ಅಲ್ಲಿವರೆಗೂ ಕ್ಷೇಮ. ಎಷ್ಟೇ ಸುಸ್ತಾದರು, ಸೋತು ಸುಣ್ಣವಾದರೂ, ಹೋರಾಟ ನಿಲ್ಲಿಸಬೇಡಿ. ನೀವು ಮಾಡುತ್ತಿರುವ ಹೋರಾಟ ನಿಮ್ಮವರಿಗಾಗಿ. ಮರೆಯಬೇಡಿ. 

ಸಣ್ಣ ವಿಷಯ ದೊಡ್ಡ ಪರಿಣಾಮ.


ಜಗತ್ತು ಎಷ್ಟೇ ದೊಡ್ಡದಿರಲಿ. ಸಣ್ಣ ಸಣ್ಣ ಅಣುವಿನಿಂದ ಮಾಡಲ್ಪಟ್ಟಿದೆ, ಅಲ್ಲವೇ? ಹಾಗೆಯೆ ಈ ಸಂಸಾರ ಸಾಗರವು ಸಣ್ಣ ಸಣ್ಣ ಸೂಕ್ಶ್ಮ ಭಾವನೆಗಳಿಂದ ಎಣೆಯಲ್ಪಟ್ಟಿದ್ದೇ. ಹೇಗೆ ನನಗೆ ಮನೆ ಮನವನ್ನು ಶುಚಿಯಾಗಿ ಇಡಬೇಕೆಂಬ ಆಸೆ ಇದೆಯೋ ಹಾಗೆ ನನ್ನ ಅತ್ತೆಗೆ ಹಳೆಯ ರೀತಿ ನೀತಿಗಳನ್ನು ನೀರಾಕಿ ಬೆಳೆಸುವಾಸೆ. ಮುಸರೆ ಯನ್ನು ಎಷ್ಟು ಶಿಸ್ತಿನಿಂದ ಪಾಲಿಸುತ್ತಾರೆಂದರೆ ನನಗೆ ಕೋಪದ ಜೊತೆಯಲ್ಲಿ ಕರುಣೆಯು ಮೂಡುತ್ತದೆ. ನನ್ನ ಆದರ್ಶಗಳ ವಿರುದ್ಧ ಹೋಗಬೇಕಲ್ಲ ಎಂಬ ಸಂಕಟ ಒಂದೆಡೆಯಾದರೆ, ನನ್ನ ಪ್ರೀತಿಯ ಅತ್ತೆ ವಿರುದ್ಧ ಹೋಗಿ ಅವರ ಮನನೋಯಿಸಿದರೆ ಎಂಬ ಆತಂಕ. ಅವರ ಆದರ್ಶಗಳ ವಿರುದ್ಧಹೋಗುವ ಪ್ರತಿಕ್ಷಣವೂ ಅವರಿಗೆ ನೋವಾಗುವುದಕ್ಕಿಂತ ಹೆಚ್ಚು ನನ್ನ ಎದೆ ನೋವಾಗುತ್ತದೆ. (ಇದು ರೂಪಕಾಲಂಕಾರವಲ್ಲ. ನಿಜವಾಗಿಯೂ ತಲೆ ಬಿಸಿ ಆಗಿ ಎದೆ ಬಡಿತ ಹೆಚ್ಚಾಗಿ ಎದೆ ನೋವು ಬರುತ್ತದೆ, ಒಂದಷ್ಟು ಖರ್ಚು ಮಾಡಿ ಒಳ್ಳೆಯ ಆಸ್ಪತ್ರೆ ವರಗೆ ಹೋಗಿ ಬಂದೆ. ಅಷ್ಟರಮಟ್ಟಿಗೆ ಇದೆ ಯೆಂದರೆ ನೀವೇ ಇದರ ತೀಕ್ಷ್ಣತೆಯನ್ನು ಅರಿಯಿರಿ).  ಹೋಗಲಿ ಬಿಡು ಅವರಿಚ್ಛೆಯಂತೆ ಇರೋಣ ಅಂದರೆ ಅದು ನನ್ನ ಆದರ್ಶಗಳ ವಿರೋಧ. ಆಯ್ತು ನನ್ನ ಆದರ್ಶವನ್ನೇ ಪಾಲಿಸೋಣವೆಂದರೆ  ನನ್ನ ಆರೋಗ್ಯ ನನ್ನ ಕೈಬಿಟ್ಟು ಎದೆ ನೋವು ತರಿಸಿಕೊಳ್ಳುತ್ತದೆ. ಇದೊಂತರ ನಿಲ್ಲದ ಉತ್ತರ ಸಿಗದ ಪ್ರಶ್ನೆ, ಈ ಪರೀಕ್ಷೆಗೆ ಕೊನೆ ಇಲ್ಲವೇ? 

Tuesday, 1 June 2021

Sorry for not feeling sorry.

ಬ್ರಾಹ್ಮಣ ಸಮಾಜಕ್ಕೆ ಸೇರಿದವಳು ಎಂದು ಕರೆಸಿಕೊಳ್ಳಲ್ಲು ಎಲ್ಲಿಲ್ಲದ ವಿಚಿತ್ರ ಕೋಪ ಅಥವಾ ಬೇಜಾರು? ಈ ಭಾವನೆಗೆ ಏನೆಂದು ಕರೆಯಬೇಕು ತಿಳಿಯುತ್ತಿಲ್ಲ. ಒಟ್ಟು ಹೇಳಬೇಕೆಂದರೆ ಹೃದಯಕ್ಕೆ ಯಾರೋ ಚೂರಿ ಹಿರಿದಂತಾಗುತ್ತದೆ. ಎಲ್ಲಾ ಸಹಾಯವನ್ನು ಮಾಡುವವರು ಶೂದ್ರರು, ಆದರೆ ಅವರಿಗೆ ಊಟ ನಮ್ಮ ಮನೆ ಬಚ್ಚಲ ಬಳಿ, ಅವರಿಗೆ ಕೆಲಸ ಮಾಡಲು ಸ್ಥಳ ಬಿಸಿಲಿನಲ್ಲಿ, ಮನೆಯ ಹೊರ ಜಗಲಿಯಲ್ಲಿ. ಕಸಗುಡಿಸಲು ಬರುವ ಕೆಲಸದವಳಿಗೆ ದೇವರ ಕೋಣೆ, ಅಡಿಗೆ ಮನೆಗೆ ಪ್ರವೇಷವಿಲ್ಲ. ಹೊರಗಿನ ಬಾಗಿಲಲ್ಲಿ ಹೊರ ಒಳ ಓಡಾಡಬೇಕು. ತಣ್ಣಗಾಗಿರುವ ಅನ್ನ ತಿನ್ನಬೇಕು. ನಾನು ಎಷ್ಟೋ ಬಾರಿ ಆಕೆಗೆ ನಮ್ಮ ಮನೆಯ ಒಳಗೆ ಊಟ ಮಾಡಲು ಹೇಳಿದ್ದೇನೆ. ಆದರೆ ಅವರೇ ಒಳಗೆ ಬರುವುದಿಲ್ಲ. ನಾನು, ಕೆಲಸದವರನ್ನು ತಲೆ ಮೇಲೆ ಕುರಿಸಿಕೊಳ್ಳಬೇಕು ಅಂತ ಹೇಳುವುದಲ್ಲವಾದರೂ  ದಯವಿಟ್ಟು ಕಾಲ ಬಳಿ ಇರಿಸಬೇಡಿ. ನನಗಂತೂ ಇತ್ತೀಚೆಗೆ ಯಾವುದು ಸರಿ, ಯಾಕೆ ಹೀಗೆಲ್ಲಾ ನಡೆಯುತ್ತಿದೆ ಎಂದು ಯೋಚಿಸಿದರೆ ಖಿನ್ನತೆ ಮೂಡುತ್ತದೆ. 

 

Tuesday, 25 May 2021

MOM WOW

 I feel proud of myself. coz I'm more like my mom.  

ಅಮ್ಮ

ಅಮ್ಮನೇಕೆ ನನಗೆ ಯಾವುದೇ ಕೆಲಸ ಕೊಡುತ್ತಿರಲಿಲ್ಲ? ಅವಳೇಕೆ ನನ್ನನ್ನು ಅಷ್ಟು ಪ್ರೀತಿಸಿದಳು? ಒಂದೇ ಒಂದು ದಿನವೂ ನನಗೆ ಒಂದೇಒಂದು ಕಷ್ಟವು ನನಗೆ ಕೊಡಲಿಲ್ಲ. ಯಾವುದೇ ಚಿಂತೆಯು ನನ್ನ ಬಳಿ ಸುಳಿಯದಂತೆ ನೋಡಿಕೊಂಡಳು. ಇಷ್ಟೆಲ್ಲ ಮಾಡಿದ ಅವಳು ನನ್ನನೇಕೆ ಮದುವೆ ಮಾಡಿ ಬೇರೇ ಯಾವುದೊ ಮನೆಗೆ ಕಳುಹಿಸಿದಳು? ನಾನೇಕೆ ಅವಳೊಂದಿಗೆ ಜೀವನ ನಡೆಸಬಾರದು? ಕೆಲಸ ಮಾಡುವ ಸೋಮಾರಿತನದಿಂದಲ್ಲ ಈ ಮಾತು. ನಾನು ನಿಜವಾಗಿಯೂ ಅವಲ್ಲನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವಳ ಬೆಚ್ಚನೆಯ ಪ್ರೀತಿ ಬೇಕು ನನಗೆ. ಅವಳ ನಗುವಿನ ಇಂಪು ಕೇಳುವಾಸೆ. ನನ್ನ ತಲೆಗೂದಲಿಗೆ ಅವಳ ಕೈ ಸೋಕದೆ ಸೊರಗಿ ಹೋಗಿದೆ. ಅವಳ ದನಿ ಕೇಳದೆ ಮನಸು ಕೊರಗಿದೆ. Take me back to my childhood...... :( :( :( 

Wednesday, 28 April 2021

F**K the "ಮುಸ್ರೆ, ಎಂಜಲು, ಶುದ್ಧ ಮತ್ತು ಮುಟ್ಟು"

ಮುಸ್ರೇ(ಉತ್ತರ ಕನ್ನಡ ಜಿಲ್ಲೆಯ ಭಾಷೆ )/ಕೊಳೆ(ಧಕ್ಷಿಣ ಕನ್ನಡ ಜಿಲ್ಲೆಯ ಭಾಷೆ); ಅಂದರೆ ಅನ್ನವನ್ನು ಮುಟ್ಟಿ ಬೇರೆ ಯಾವುದೇ ಪದಾರ್ಥ ಅಂದರೆ ಬೇರೆ ಅಡಿಗೆಗಳನ್ನೂ  (ಉದಾಹರಣೆಗೆ ಪಲ್ಯ, ಸಾಂಬಾರು, ಕೋಸಂಬರಿ, ಚಟ್ನಿ ಇತ್ಯಾದಿ.) ಮುಟ್ಟುವ/ ಬಡಿಸುವ ಮುನ್ನ ಕೈ ತೊಳೆದು ಮುಟ್ಟಬೇಕು/ ಬಡಿಸಬೇಕು (FYI:ಪ್ರತೀಸಲವೂ). ಹಾಗು ಅಕ್ಕಿ ಇಂದ ತಯಾರಿಸಿದ ಎಲ್ಲಾ ವಸ್ತುವಿಗಿ ಇದು ಅನ್ವಹಿಸುತ್ತದೆ. ಅಂದರೆ, ಅಕ್ಕಿ ಹಪ್ಪಲ್ಲ, ಅಕ್ಕಿ ರೊಟ್ಟಿ, ಅಕ್ಕಿ ಪಾಯಸ etc. ಅಲ್ಲದೆ ಇದರನ್ನು ತಯಾರಿಸಲು ಬಳಸಿದೆ ಎಣ್ಣೆ(ಆ ಉಳಿದ ಎಣ್ಣೆಯನ್ನು ಬೇರೇ ಯಾವುದೇ ಆಹಾರಕ್ಕೆ ಮತ್ತೆ ಬಳಸುವಂತಿಲ್ಲ, ಕೇವಲ ಮುಂದೆ ನೀವು ಮಾಡುವ ಅಕ್ಕಿ ಪದಾರ್ಥಕ್ಕೆ ಮಾತ್ರ ಬಳಸಬೇಕು), ಪಾತ್ರೆ, ಪಗಡ, ಎಲ್ಲವೂ ಮುಸ್ರೆಯೇ. ಅಕಸ್ಮಾತ್ ಈ ನಿಯಮ ಮರೆತು ನೀವು ಪಾಲಿಸದಿದ್ದಲ್ಲಿ, ನೀವು ಅನ್ನವನ್ನು/ಅಕ್ಕಿಯ ಅಡಿಗೆಗಳನ್ನು ಮುಟ್ಟಿ ಬೇರೆ ಯಾವ ತಿನ್ನುವ/ ಅಥವಾ ಪಾತ್ರೆ ಇತ್ಯಾದಿ ಮುಟ್ಟಿದರೆ ಅದೂ ಕೂಡ ಮುಸ್ರೆ ಆಗುತ್ತದೆ.  (ಯಾರು ಸತ್ತರು ಚಿಂತೆಯಿಲ್ಲ)

ಎಂಜಲು; ನೀವು ಊಟವನ್ನು ಬಲಗೈಯಲ್ಲೇ ಮಾಡು ತಿರಬಹುದು, ಆದರೂ ನಿಮ್ಮ ಎಡಗೈ ಎಂಜಲು(ನಿಮ್ಮ ಎಂಜಲು ತಟ್ಟೆಯನ್ನು ಮುಟ್ಟದ್ದಿದರು). ಹಾಗಾಗಿ ನಿಮಗೆ ಪ್ರತಿಸಲವೂ ಊಟವನ್ನು ಬೇರೆಯವರು, ಅಂದರೆ ಮಡದಿ, ತಾಯಿ, ಅಥವಾ ಇನ್ನೂಯಾರಾದರು ಬಡಿಸಬೇಕು. ಇಲ್ಲವಾದಲ್ಲಿ ನೀವು ನಿಮ್ಮ ಬಾಳೆ/ಊಟದ ತಟ್ಟೆ ಪಕ್ಕ ಒಂದು ಸ್ವಲ್ಪ ನೀರನ್ನು ಚೆಲ್ಲಿಕೊಂಡು, ಅದರಲ್ಲಿ ನಿಮ್ಮ ಎಡಗೈಯನ್ನು ಮುಟ್ಟಿ ನಂತರ ಅಡಿಗೆಯನ್ನು ಬಾಡಿಸಿಕೊಳ್ಳಬೇಕು. ಇದು ಪ್ರತಿಸಲವೂ ಅನ್ವಯವಾಗುತ್ತದೆ. ಅಂದರೆ, ಮೊದಲಿಗೆ ನೀವು ಅಣ್ಣ ಹಾಕಿಕೊಂಡು, ಕೈ ತೊಳೆದು ಸಾಂಭಾರ್ ಹಾಕಿಕೊಂಡು ಊಟ ಮಾಡುತ್ತಿರುವಾಗ ಉಪ್ಪು ಬೇಕೆನಿಸಿದರೆ ಮತ್ತೆ ನೀವು ಕೈ ತೊಳೆದು ಕೊಂಡು/ಅಥವಾ ನಿಮ್ಮ ತಟ್ಟೆಯ ಪಕ್ಕದಲ್ಲಿ ನಿರ್ಮಿಸಿರು ನೀರಿನ ಕೊಳ (ಪಕ್ಕದಲ್ಲಿ ಚೆಲ್ಲಿಕೊಂಡಿರು ನೀರು) ದಲ್ಲಿ ಕೈ ಅದ್ದಿ/ಮುಟ್ಟಿ ನಂತರೆವೆ ಹಾಕಿಕೊಳ್ಳಬೇಕು. ಈ ನಿಯಮ ಮರೆತಲ್ಲಿ, ನೀವು ಮುಟ್ಟಿದ ಎಲ್ಲ ಆಹರವು ನಿಮ್ಮದೇ, ಅದನ್ನು ನೀವೇ ತಿಂದು ಕಾಲಿ ಮಾಡಬೇಕು ಅಥವಾ ನಿಮ್ಮ ಎಂಜಲು ತಿಂದರೆ ತೊಂದರೆ ಇಲ್ಲದ ವ್ಯಕ್ತಿ ಅಂದರೆ ಗಂಡ ತನ್ನ ಹೆಂಡತಿ, ಮಗು ತನ್ನ ತಾಯಿಗೆ ಕೊಡಬಹುದು. ಬೇರೆಇನ್ಯಾರು ತಿನ್ನುವಂತಿಲ್ಲ. ಇಲ್ಲಿ ಒಂದು ಇನ್ನು ಒಂದು ವಿಷಯವಿದೇ, ಗಂಡ ತನ್ನ ಹಿಂಡತಿಗೆ ಕೊಡಬಹುದೇ ವಿನಃ ಹೆಂಡತಿ ಗಂಡನಿಗೆ ಕೊಡುವ ಹಾಗಿಲ್ಲ.  ಉಳಿದರೆ ಬಿಸಾಕಬೇಕು. (ಎಷ್ಟೇ ಸಮಯ ವ್ಯಾಯ್ವದರು ತೊಂದರೆ ಇಲ್ಲ)

ಶುದ್ಧ/ ಮಡಿ; ಇದರ ಕಥೆ ಎಷ್ಟು ದೊಡ್ಡದೆಂದರೆ, ನಾನು ಅರ್ಥಮಾಡಿಕೊಳ್ಳಲ್ಲು ಧೈರ್ಯವೇ ಮಾಡಿಲ್ಲ. ನಾನು ಅರ್ಥ ಮಾಡಿಕೊಂಡಿರುವುದೇ ಇಷ್ಟು, ಮಡಿಬಟ್ಟೆಯನ್ನು ಕೆಲಸದವರ ಬಳಿ ತೊಳಿಸುವುದಿಲ್ಲ, ನಾವೇ ತೊಳೆದು ತಂದು ಮಡಿ ಮೆತ್ತಿ/ಮಡಿ ಕೋಣೆ ಯಲ್ಲಿ ವನಾಗಕಬೇಕು. ಅದನ್ನು ನಂತರ ಯಾರುಸಹ ಯಾವುದೇ ಕಾರಣಕ್ಕೂ ಮುಟ್ಟಬಾರದು. ಕೇವಲ ಮಡಿಯಲ್ಲಿ ಇರುವವರು ಮಾತ್ರ ಅದರನ್ನು ತೆಗೆದುಕೊಂಡು ಹೋಗಿ ಈಗಷ್ಟೇ ಸ್ನಾನಮಾಡಿ ಬಚ್ಚಲಿನಿಂದ ಬಂದವರಿಗೆ ಕೊಡಬಹುದು, ಅಥವಾ ಸ್ನಾನ ಮಾಡಿಕೊಂಡು ಆ ವ್ಯಕ್ತಿಯೇ ಮಡಿ ಮೆತ್ತಿ/ಮಡಿ ಕೋಣೆಗೆ ಹೋಗಿ ಬಟ್ಟೆ ಧರಿಸಬೇಕು. ಈ ನಡುವೆ ಅವನು ಸಂಪೂರ್ಣ ಮಡಿಯಲ್ಲಿ ಏರಬೇಕು. ಅಂದರೆ ಬಚ್ಚಲಿನಿಂದ ಮಾಡಿ ಕೋಣೆಗೆ ಬರುವವರೆಗೂ ಯಾರನ್ನು, ಏನನ್ನನು ಮುಟ್ಟದೆ ಬಂದು ಮಡಿ ಧರಿಸ ಬೇಕು. (ನಿಮ್ಮನ್ನು ಯಾರು ನಿರ್ವಸ್ತ್ರದಲ್ಲಿ ನೋಡಿದರು ಚಿಂತೆ ಇಲ್ಲ)

 ಮುಟ್ಟು/ ಹೆರಗೆ; ತಿಂಗಳ ಮೂರು ದಿನ (ಋತುಚಕ್ರ ಪ್ರತಿಕ್ರಿಯೆಯ ದಿನ), ಅಡಿಗೆ ಮನೆಯ ಕೆಲಸಮಾಡಬಾರದು; ಅಡಿಗೆ. ಯಾವುದೇ ಪತ್ರೆ ಪಗಡ ಮುತ್ತ ಬಾರದು. ನಿಮಗೆ ದೂರದಿಂದಲೇ ನಿಮ್ಮ ಊಟದ ತಟ್ಟೆ/ಬಾಳೆಯೆಲೆ ಅವರಿಗೆ(ಊಟಬಡಿಸುವವರಿಗೆ) ಸ್ವಲ್ಪವೂ ತಗುಲದಂತೆ ಊಟ ಬಡಿಸುತ್ತಾರೆ. ಊಟ ಮಾಡಿದ ನಂತರ ನಿಮ್ಮ ಬಾಳೆಯನ್ನು ಅವಳೆಗೆ ಬಿಸುಡಬೇಕು (ಕಾರಣ ಅದನ್ನು ಎಲ್ಲರೂ ಬಳಸುವ ಕಸದ ಬುಟ್ಟಿಗೆ ಹಾಕುವಂತಿಲ್ಲ/ ಹಸುಗಳಿಗೆ ತಿನ್ನಲು ಕೊಡುವಂತಿಲ್ಲ, ಗಿಡಗಳ ಬುಡಕ್ಕೆ ಹಾಕುವಂತಿಲ್ಲ); ಊಟದ ತಟ್ಟೆಯಾದರೆ ನೀವು ಅದನ್ನು ತೊಳೆದು ಯಾರಿಗೂ ತೊಂದರೆ ಆಗದಂತೆ ದೂರ ಮನೆ ಇಂದ ಹೊರಗೋ ಅಥವಾ ಮನೆಯ ಯಾವುದೊ ಮೂಲೆಯೊ ಅಥವಾ ಬಚ್ಚಲುಮನೆಯಲ್ಲಿ ಇಡಬೇಕು. ತದನಂತರ ನೀವು ಊಟಕ್ಕೆ ಕುಳಿತ ಜಾಗವನ್ನು ಒಮ್ಮೆ ನಿಮ್ಮ ಕೈಗಳ್ಳಲ್ಲಿ ವರಸಿ, ನಂತರ ಸಗಣಿ ಹಾಕಿ ಒರಸಿ, ನಂತರ ಬಟ್ಟೆಯಲ್ಲಿ ಒರಸ ಬೇಕು. ಆ ಬಟ್ಟೆಯನ್ನು ತೊಳೆದು ಯಾರು ಮುಟ್ಟದ ಜಾಗದಲ್ಲಿ ಇಡಬೇಕು. (ಜಾಗರೂಕರಾಗಿ ಮಾಡಿ, ಸಣ್ಣದೊಂದು ಹನಿ ನೀರು ಕೂಡ ಉಳಿಯಬಾರದು; ದೂರ ಅದೆಲ್ಲೋ ಕೂತಿರುವ ಅಜ್ಜಿ ಕಣ್ಣಿಗೆ ಅದು ಕಂಡು, ಮಗ ಅಲ್ಲಿ ಒಂದು ಹನಿ ಹಾಗೆ ಇದೆ ವರೆಸು ಇನ್ನೊಮ್ಮೆ ಅಂದಾರು). ಇಲ್ಲಿಗೆ ಕಥೆ ಮುಗಿಯಲಿಲ್ಲ. ನೀವು ದೇವರ ಕೋಣೆಯಿಂದ ಹೇಗೂ ಬಹಿಷ್ಕಾರವೇ ಬಿಡಿ, ಆದರೆ ಮನೆಯ ಬೇರೆ ಯಾವುದೇ ಕೋಣೆಗೂ ಹೋಗುವಂತಿಲ್ಲ. ಹಾಸಿಗೆ ಯಲ್ಲಿ ಮಲಗುವು ಹಾಗಿಲ್ಲ, ಚಾಪೆಯಲ್ಲಿ ಮಲಗಬೇಕು. ಯಾವುದೇ ವಸ್ತ್ರಗಳನ್ನು ಮುಟ್ಟುವಹಾಗಿಲ್ಲ. ಗಂಡನನ್ನು ಮಗುವನ್ನು ಮುಟ್ಟುವಹಾಗಿಲ್ಲ, ಯಾವದೇ ಬೇರೆ ವ್ಯಕ್ತಿಯನ್ನು ಮುಟ್ಟುವಹಾಗಿಲ್ಲ. ಕಾಲುವರೆಸುವ mat ಮುಟ್ಟುವಂತಿಲ್ಲ. ''ಬೆಕ್ಕಿನ ಬಿಡಾರ ಬೇರೆ"ಅಂತ ಎಲ್ಲರಿಂದ ಎಲ್ಲಾವುದರಿಂದ ದೂರವಿರಬೇಕು. ಮನೆಗೆ ಹೋದವರು ಬಂದವರು ಅಕ್ಕ ಪಕ್ಕದವರು ಕೇರಿಯವಿರಿಗೆಲ್ಲ ನಿಮಗೆ ಮುಟ್ಟಾದರೆ ವಿಷಯ ತಿಳಿಯುತ್ತದೆ. ಬಂದವರೆಲ್ಲ ನಿನಗೆ ಮುಟ್ಟ ಅನ್ನುವುದೊಂದು ಬಾಕಿ. ಮಜವೆಂದರೆ ನಿಮ್ಮ ಕೆಲಸದವರು ನಿಮ್ಮ ಯಾವ ಕೆಲಸವನ್ನು ಮಾಡುವಂತಿಲ್ಲ. ಮೂರ ದಿನದ ಈ ಸುಂದರ ದಿನದ ನಂತರ ಬರುತ್ತದೆ ಮೀಯುವ ದಿನ. ಬೆಳಗ್ಗೆ ಬೇಗ ಎದ್ದು, ಮನೆಯ ಹಿರಿಯ ಹೆಂಗಸಿನ ಬಳಿ, ತೆಂಗಿನ ಎಣ್ಣೆ ತೆಗೆದುಕೊಂಡು, ತಲೆಗೂದಲಿಗೆ ಸವರಿ, ಅರಿಸಿನ ಪುಡಿ ಮುಖಕ್ಕೆ ಹಚ್ಚಿ, ಸ್ವಲ್ಪ ಅರಿಸಿನ ಮೀಯುವ ನೀರಿಗೂ ಹಾಕಿ ಸ್ನಾನ ಮಾಡಬೇಕು; ಅದಕ್ಕೂ ಮುಂಚೆ ನೀವು ಬಳಸಿದೆ ಚಾಪೆ, ವಸ್ತ್ರ, ತಟ್ಟೆ, ಬಟ್ಟಲ್ಲೂ ಏನೇನಿವೆ ಅವೆಲ್ಲವನ್ನು ತೊಳೆಯಬೇಕು. ಇಷ್ಟದಾ ನಂತರ tada, welcome to boring normal day.

 ಬೋನಸ್ ೧: ನಿಮ್ಮ ಸ್ಯಾನಿಟರಿ ಪ್ಯಾಡ್ ವ್ಯವಹಾರ/ ವಿಲೇವಾರಿ ಹೇಗೆ ಮಾಡುತ್ತಿರೋ ನೋಡಿ. ನನಗಂತೂ ಅದರ ಬಗ್ಗೆ ಬರೆಯಲು ಸಹ ಮನ್ನಸ್ಸಾಗುತ್ತಿಲ್ಲ. ನೆನಪಿನಲ್ಲಿಡಿ ಯಾರು ಮುಟ್ಟದ, ಹಾವುಗಳು ಓಡಾಡದ (ಸರ್ಪ ದೋಷ/ ನಿಮ್ಮ ಮುಂದಿನ ಪೀಳಿಗೆಗೆ ಕಣ್ಣಿನ ದೃಷ್ಟಿ ದೋಷ ಬರುವುದು), ಮುನಿಸಿಪಲ್ ವಾನ್ಗೆ ಕೊಡದ ಹಾಗೆ, ಹರಿವ ನೀರು ಕಲುಷಿತವಾಗಿ, ಅದನ್ನು ನಾವು ಕುಡಿದು ಸತ್ತರು ಚಿಂತೆಯೆಲ್ಲದ ಹಾಗೆ dispose ಮಾಡಬೇಕು. FYI: ಇದು ನಿಮ್ಮ ಕೇವಲ ಮೂರೂ ದಿನದ ಪ್ಯಾಡ್ಗೆ ಮಾತ್ರ ಅನ್ವಯ. ಅದರ ನಂತರದ ದಿನಗಲ್ಲಿ ಬಳಸುವ ಪ್ಯಾಡ್ ಪಂಚಾಂಬ್ರುತಕ್ಕೆ ಸಮ. ಅದನ್ನು dustbin ಹಾಕುವ ಅವಕಾಶವಿದೆ. ಅದು ತನ್ನ ಸ್ಥಾನವನ್ನು ಗಿಟ್ಟಿಸಿಕೊಡು ಬಾಹುಮನಾ ವಿಜೇತಳಾಗಿದ್ದಲ್ಲೇ. yay,, ಚಪ್ಪಾಳೆ. 

ಬೋನಸ್ ೨: ಮರೆಯದಿರಿ ನೀವು ಈ ಮೂರುದಿನ ಬಹಳಾನೇ ಶಕ್ತಿಯುತ ಮಹಿಳೆ. ನೀವು ಯಾವುದೇ ಹಸುಗೂಸು/ ಸಣ್ಣ ಮಕ್ಕಳನ್ನು ಮುಟ್ಟಿದರೆ/ ಹತ್ತಿರ ಸುಳಿದರೋ (ಅವರ ತಂದೆ ತಾಯಿಗೆ ನೀವು ಮುಟ್ಟು ಎಂಬ ವಿಷಯದ ಅರಿವಿಲ್ಲದೆಯೋ/ ಅಥವಾ ಪೇಟೆಯ ದಾರಿಯಲ್ಲಿ ಅಪರಿಚಿತರಾಗಿಯೋ), ಆ ಮಗುವಿಗೆ ಮುಟ್ಟು ದೋಷ ಕಾಣಿಸಬಹುದು. ಇದರಿಂದ ಮುಕ್ತ ಗೊಳ್ಳಲ್ಲು ಪಾಪ ಪಾಪು ಮೆಹೆಂದಿ ಕಷಾಯ ಕುಡಿಯ ಬೇಕಾದೀತು. 

Welcome aboard. you are now qualified enough.  

Monday, 12 April 2021

ಹಾಗೇಸುಮ್ಮನೆ

 ಯಾವಾಗ ನೋಡಿದರು ನನ್ನ ದೇಹದ ಬಗ್ಗೆ ಹೀಯಾಳಿಸುವುದನ್ನು ಕೇಳುತಿದ್ದೆ. ಈಗ ಜೊತೆಯಲ್ಲಿ ನನ್ನ ನಿರುದ್ಯೋಗವು ಸೇರಿಕೊಂಡಿದೆ. ಮನುಷ್ಯರೊಂದಿಗೆ ಜೀವಿಸುವುದೇ ಬೇಡವೆನಿಸುತ್ತಿದೆ. ಸುಂದರ ರೂಪವಿದ್ದರೂ ದಪ್ಪವಿರುವ ಕಾರಣದಿಂದ ಸಾಕಷ್ಟು ನೋವು ಅನುಭವಿಸ್ಸಿದಾಯ್ತು, ಈಗ ಒಳ್ಳೆಯ ಡಿಗ್ರಿ ಕೈಯಲ್ಲಿ ಇದ್ದರು ಕೆಲಸವಿಲ್ಲದೇ ತೆಗಳಿಕೆಗೆಗೆ ಕಾರಣವಾಗಿರುವೆ. ನನ್ನದೇ ನಿರ್ಧಾರಗಳು, ನಾನೇ ಕಾರಣ ನನ್ನೀಸ್ಥಿತಿಗೆ. ನಾನು ನನ್ನೊಂದಿಗೆ ಖುಷಿಯಾಗಿಯೇ ಇದ್ದೇನೆ, ಆದರೆ ಜನಗಳ ಮಾತು ನನ್ನನು ಬಹಳವಾಗಿ ನೋಯಿಸುತ್ತಿದ್ದೆ. 


  

Sunday, 28 March 2021

Why?

ನನಗಿಷ್ಟವಾದಂತೆ ನಾ ನಿನ್ನ ಪ್ರೀತಿಸಿದೆ. 

ನನ್ನನ್ನು ನೀನು ಹೇಗೆ ಪ್ರೀತಿಸಬೇಕೆಂಬ ಆಸೆ ನನಗಿದೆ ಹಾಗೆ ನಾ ನೀನ್ನ ಪ್ರೀತಿಸಿದೆ. 

ಆದರೆ ನೀ ಹೇಗೆ ಪ್ರೀತಿಸಿದೆ ನನ್ನ? 

ನಿನಗೆ ನಾ ನಿನ್ನ ಹೇಗೆ ಪ್ರೀತಿಸಬೇಕೆಂದಿದೆ ಆ ರೀತಿಯಲ್ಲೆ?

ನನಗಿದು ಅರಿವಾಯಿತು, ಆದರೆ ನಿನಗೆ?

Thursday, 25 February 2021

A soundless noise

ಯಾರ ಜೊತೆ ಮಾತನಾಡಲಿ ನಾನು ಯಾರ ಜೊತೆ?  ಮಾತನಾಡಲು ಇರುವರು ಹಲವಾರು. ಅವರೊಂದಿಗೆ ಮಾತನಾಡಲು ಮಾತಿಲ್ಲ ನನ್ನ ಬಳಿ. ಹೇಳಬೇಕಿರುವುದೆಲ್ಲ ನಿನಗೆ. ಮಾತನಾಡಲು ಬೇಕಿರುವವನು ನೀನೊಬ್ಬನೇ. ಕೀಳಿಸಿಕೊಳ್ಳ ಬೇಕಿರುವುದು ನೀ ತಾನೇ? ಏತಕ್ಕಾಗಿ ಕಾಡಿಸುವೆ, ಕಾಯಿಸುವೆ, ನೋಯಿಸುವೆ? ಅಂದು ನೀ ಕೇಳಿದ್ದೆ "ಏನು ಉಡುಗರೇ ಬೇಕೆಂದು", ನ ಹೇಳಿದ್ದೆ "ಕೊಡು ನಿನ್ನ ಸ್ವಲ್ಪ ಸಮಯವ ನನಗೆಂದು", ''ನನ್ನ ಎಲ್ಲ ಸಮಯವೂ ನಿನಗೆಯಲ್ಲವೇ"ಅಂದ್ದಿದ್ದೆ ನೀನು. ಈಗ ೧ ನಿಮಿಷವೂ ನನ್ನ ಮಾತ ಕೇಳಲು ಸಮಯವಿಲ್ಲ ನಿನಗೆ. ಅಥವಾ ಮನಸೇ ಇಲ್ಲವೇ? ದಿನಕ್ಕೆ ಆಗುವುದೇ ೪ ಭೇಟಿ. ತಿಂಡಿ, ಊಟ, ಕಾಫಿ, ನಿದ್ದೆ.! ತಿನ್ನುವಾಗಲು ಮೊಬೈಲ್ ಫೋನ್ ಬೇಕು. ಕಾಫಿ ಸಮಯದಿ ಅಮ್ಮ ಅಜ್ಜಿ ಸೊಸೆ ಸಾಕು. ಮಲುಗುವಾಗ ಒಂದು ಚೆಸ್ ಆಟ. ಜೊತೆಯಲ್ಲಿ ಸುಮ್ಮನೆ ಕುಳಿತಿರಬೇಕು ನಾನು. ಕೂದಲಿಗೆ ಎಣ್ಣೆ ಹಾಕುವುದೊಂದೇ ನೆನಪು, ಮರುಗಳಿಗೆಯಲ್ಲಿ ನಿನ್ನ ಗೊರಕೆಯ ಇಂಪು.  


 

Sunday, 21 February 2021

ಆಶ್ಚರ್ಯ ಹಾಗು ಕೋಪ

 ಆಶ್ಚರ್ಯ ಹಾಗು ಕೋಪ ಎರೆಡು ನನ್ನಮ್ಮನ ಮೇಲೆ! ಏತಕ್ಕಾಗಿ ಆಕೆ ತನಗೆಂದು ಏನನ್ನು ಮಾಡಲಿಲ್ಲ? ಎಂಬ ಪ್ರಶ್ನೆ? ಇದಕ್ಕೆ ನಾನು ಒಂದು ಕಾರಣವಿರಬಹುದೇ? ಎಂಬ ಒಂದು ಪ್ರಶ್ನೆ.  ಇಂದು ನಮ್ಮ ಮನೆ (ಗೋಕರ್ಣದಲ್ಲಿ) ಇದ್ದೇನೆ. ಇಲ್ಲಿ ನನ್ನ ಅತ್ತಿಗೆ ತನ್ನ ಮಗಳು (ಕೇವಲ ೧೦ ವರ್ಷ) ಕೇಳಿದರೆ ಒಂದು ಲೋಟ ನೀರು ಕಾಡುವುದಕ್ಕೂ ಮೀನಾ ಮೇಷ ಎಣೆಸುತ್ತಾರೆ. ನೀನೆ ತೇಗೋಳೇ ಮಗಳೇ ಅನ್ನುತ್ತಾರೆ!!! ((ಇದನ್ನು ನಾನು ತಪ್ಪು ಅಥವಾ ಸರಿ ಯೆಂದು ಹೇಳುವುದಿಲ್ಲ. ಆಕೆಯನ್ನು ದೂರುವ ಉದ್ದೇಶವು ನನಗಿಲ್ಲ.)) ಇದನ್ನೆಲ್ಲ ನೋಡಿದರೆ ನನಗೆ ಬಹಳಾನೇ ಆಶ್ಚರ್ಯವಾಗುತ್ತದೆ. ೨೧ವರ್ಷಗಳ ತನಕ ನನ್ನಮ್ಮ ನನಗೆ ಒಂದು ದಿನವೂ ಹಾಗನ್ನೇ ಇಲ್ಲವಲ್ಲ! ನಾನು ಕೇಳುವ ಮುನ್ನವೇ ನನಗೆ ಬೇಕಿರುವುದೆಲ್ಲ ತಯಾರಿರುತ್ತಿತ್ತು. ಎದ್ದಕೂಡಲೇ ಶುಚಿಯಾಗಲು ಬೇಕಾದ ಎಲ್ಲವೂ ಬಚ್ಚಲಲ್ಲಿ ತಯಾರಿರುತ್ತಿತ್ತು. ಶುಚಿಯಾಗಿ ಬಂದಕೂಡಲೇ ತಿನ್ನಲ್ಲು ರುಚಿಯಾದ ತಿಂಡಿ ತಯಾರಿರುತ್ತಿತ್ತು. ತಿಂಡಿ ತಿಂದಕೂಡಲೇ ನನ್ನ ತಲೆ ಕೂದಲನ್ನು ಬಾಚಿ ಜೆಡೆ ಹಾಕುತ್ತಿದ್ದಳು. ನಿಜಕ್ಕೂ!! ೨೧ ವರ್ಷಗಳ ತನಕ!! ಸಂಜೆ ಶಾಲೆ ಮುಗಿಸಿ ಮನೆಗೆ ಬರುವಷ್ಟರಲ್ಲಿ ಕುಡಿಯಲು ಹಾಲು, ತಿನ್ನಲು ತಿಂಡಿ ಮಾಡಿಟ್ಟುಕೊಂಡು ಕಾದಿರುತ್ತಿದಳು. ಒಂದೇ ಒಂದು ದಿನವೂ ಬಾಕಿ ಇಲ್ಲ. ಪ್ರತೀ ದಿನ. ನಾವೇನು ಶ್ರೀಮಂತರಾಗಿರಲಿಲ್ಲ. ಒಬ್ಬರು ಮನೆ ಕೆಲ್ಸದವರಿರಲಿಲ್ಲ. ಎಲ್ಲವನ್ನು ಅವಳೇ ಮಾಡುತಿದ್ದಳು. ಈಗ ಇಲ್ಲಿ (ಗೋಕರ್ಣದ ಮನೆಯಲ್ಲಿ) ಎಲ್ಲಾದಕ್ಕು ಮನೆಕೆಲಸಕ್ಕು ಕೆಲಸದವರಿದ್ದಾರೆ. ಆದರೂ ಇಲ್ಲಿಯ ವಾತಾವರಣ ನನ್ನನು ಪ್ರತಿದಿನವೂ ಪ್ರತಿ ಘಳಿಗೆಯೂ ಆಶ್ಚರ್ಯ ಗೊಳಿಸುತ್ತದೆ. ನಾನು ನನ್ನ ಜೀವನದಲ್ಲಿ ಕಳೆದ ಆ ಹಳೆಯದಿನಗಳು ಅಷ್ಟೊಂದು ಆರಾಮದಾಯಕವಿಗ್ಗಿದೆತೆ? ನಾನು ಅಷ್ಟೊಂದು ಅದೃಷ್ಟವಂತಳಾಗಿದ್ದೇನೆ? ನನ್ನಮ್ಮನಿಗೆ ನಾನು ಸಹಾಯ ಮಾಡಬದಿತ್ತೇ? ಅವಳಿಗೆ ನನ್ನಿಂದ ತೊಂದರೆ ಯಾಗಿದೆಯೇ? ಯಾಕೆ ಅವಳು ನನ್ನನು ಅಷ್ಟು ಚೆಂದಕ್ಕೆ ಬೆಳೆಸಿದಳು? ಒಂದು ದಿನವೂ ನಾನು ತಿಂದ ಬಟ್ಟಲ್ಲನ್ನು ತೊಳೆದಿಲ್ಲ, ನೀರು ಕುಡಿದ ಲೋಟವನ್ನು ಅದರ ಜಾಗದಲ್ಲಿ ಇಟ್ಟಿಲ್ಲ. ತೊಳೆದ ಬಟ್ಟೆಯನ್ನು ಮಡಿಚಿಟ್ಟಿಲ್ಲ. ಅದೆಲ್ಲಾ ಹೋಗಲಿ, ಕಾಲೇಜು ಗೆ ಯಾವ ಬಟ್ಟೆಯನ್ನು ಹಾಕಿಕೊಂಡು ಹೋಗಬೇಕೆಂದು ನಾನಾಗಿಯೇ ಬೀರು ಇಂದ ಬಟ್ಟೆಯನ್ನು ಒಂದು ದಿನವೂ ತೆಗೆದುಕೊಂಡಿಲ್ಲ. ನಾನು ಮಿಂದು ಬರುವಷ್ಟರಲ್ಲಿ ಇಸ್ತ್ರೀ ಯಾದ ಬಟ್ಟೆ ನನಗಾಗಿ ಕಾದಿರುತ್ತಿತ್ತು. ಶಾಲೆಗೆ ಬೇಕಿರುವ ಊಟದ ಬುತ್ತಿ, ಪುಸ್ತಕದ ಬ್ಯಾಗು, ಎಲ್ಲವೂ ಎ ಟು ಝೆಡ್  ತಯಾರಿರುತ್ತಿತ್ತು. ನನಗೆ ಸುಳಿವು ಕೂಡ ಸಿಕ್ಕಿರಲಿಲ್ಲ. ಇದನೆಲ್ಲ ತಯಾರುಮಾಡುಲೂ ಎಷ್ಟು ಶ್ರಮವಿರುತ್ತದೆ. ಶ್ರಮಕ್ಕಿಂತ ಹೆಚ್ಚು ಎಷ್ಟು ತಾಳ್ಮೆ ಹಾಗು ಪ್ರೀತಿ ಇರಬೇಕಾಗುತ್ತದೆ ಎಂದು. ಈಗ ನನಗೆ ಮದುವೆ ಆಗಿದೆ. ಆದರೂ ನಾನು ಆಕೆಯ ಮನೆಗೆ (ನನ್ನ ತವರು ಮನೆಗೆ) ಹೋದಾಗ, ನಾನು ಬರುತ್ತಿದ್ದೇನೆ ಎಂದು ಎಲ್ಲವನ್ನು ತಯಾರಿಡುತಲೇ. ಹಾಸಿಗೆಗೆ ತೊಳೆದು ಸೂಚಿಯ ಚಾದರ ಹಸಿ, ಕುಡಿಯಲು ಬಾಟಲಿಗೆ ನೀರು ತುಂಬಿಸಿ, ಹೋದಕೂಡಲೇ ಕೈಕಾಲು ತೊಳೆಯಲು ಚಳಿಗಾಲದಲ್ಲಿ ಬಿಸಿ ನೀರು/ ಸೆಕೆ ಕಾಲದಲ್ಲಿ ತಂಪಾದ ನೀರು ರೆಡಿ ಇಟ್ಟಿರುತ್ತಾಳೆ. ಜೀವನವನ್ನು ಸುಲಭಗೊಳಿಸುವ ಎಲ್ಲಾ ವ್ಯವಸ್ಥೆ ಮೊದಲೇ ಆಗಿರುತ್ತದೆ.! ಏನೆಂದು ಹೇಳಲಿ? ಹೇಳುತ್ತಾ ಹೋದಷ್ಟು ಹನುಮಂತನ ಬಲದ ಹಾಗೆ ಬೆಳೆಯುತ್ತಾ ಹೋಗುತ್ತದೆ ಆಕೆಯು ನನಗೆ ಮಾಡಿರುವ ಸೇವೆಯ ಪಟ್ಟಿ!! ಒಂದು ದಿನವೂ ಆಕೆ ನನಗೆ ಬಿದಿಲ್ಲ. ನಾನು ಎಷ್ಟೋ ಅಮ್ಮಂದಿರನ್ನು ನೋಡಿದ್ದೇನೆ, ಶಾಲೆಗೆ ಮಕ್ಕಳ್ಳನ್ನು ಬಿಟ್ಟು ಹೋಗಲು ಬಂದವರು ಗುರುಗಳ ಬಳಿ ಹೋಗಿ "ನನ್ನ ಮಗ/ಮಗಳು ತಪ್ಪುಮಾಡಿದರೆ ನಾಲ್ಕು ಪೆಟ್ಟು ಕೊಡಿ ನಮಗೇನು ಬೇಜಾರಿಲ್ಲ" ಎಂದು ಹೇಳಿ ಹೋಗುತ್ತಾರೆ. ಆದರೆ ನನ್ನಮ್ಮ ಶಾಲೆಯಲ್ಲಿ ಅಪ್ಪಿತಪ್ಪಿ ಏನಾದರು ಮೇಸ್ಟ್ರು ನನಗೆ ಒಂದೇ ಒಂದು ಪೆಟ್ಟುಕೊಟ್ಟರು, ಮೇಸ್ಟ್ರಬಳಿ ಹೋಗಿ ಏಕೆ ಹೊಡೆದಿರಿ ನನ್ನ ಮಗಳಿಗೆ ಎಂದು ಸವಾಲು ಹಾಕುವುದಲ್ಲದೇ ನನ್ನ ಮಗಳಿಂದು ಏನು ತಪ್ಪಿಲ್ಲ ಎಂದು ಹೇಳಿಬರುತ್ತಿದರು. ಇದು ಕೇವಲ ಒಂದು ನಿದರ್ಶನವಷ್ಟೇ, ಈ ರೀತಿ ಎಷ್ಟೋ ಮಂದಿಗೆ ಹೇಳಿದ್ದಾರೆ. ಅವಳ ಆ ನಂಬಿಕೆ ಇಂದಲೋ ಏನು, ನಾನು ಕೂಡ ಹಾಗೆಯೇ ಬೆಳಿದ್ದಿದೆ. ಯಾರ ತಂಟೆಗೂ ಹೋಗುತ್ತಿರಲಿಲ್ಲ. ಹಾಗು ನನ್ನಮ್ಮನಿಗೆ ಏನು ಕೊಡಸಿಲು ಕಷ್ಟವಾಗಬುದು ಅದನ್ನು ಎಂದಿಗೂ ಕೇಳುತಲ್ಲೂ ಇರಲಿಲ್ಲ. 

ಒಂದು ನಿಮಿಷ ಈ ಕತೆಗೆ ಇಲ್ಲಿ ಕಡಿವಾಣ ಹಾಕೋಣ. ನನಗೆ ಒಂದು ಪ್ರಸಂಗ ನೆನಪಾಗುತ್ತಿದೆ. ಅದರ ಬಗ್ಗೆ ಹೇಳಬೇಕಿನಿಸುತ್ತಿದೆ. 

ನನ್ನ ವಯಸ್ಸು ಸರಿಸುಮಾರು ೮-೯ ನ ಸಮಯವದು. ಆಗ ನಾವು ಚನ್ನರಾಯಪಟ್ಟಣದಲ್ಲಿ ವಾಸವಿದ್ದೆವು. ಚನ್ನರಾಯಪಟ್ಟಣದಲ್ಲಿ ಶನಿವಾರ ಸಂತೆ. ಪ್ರತಿ ಶನಿವಾರ ಅಮ್ಮ ತಪ್ಪದೆ ಸಂತೆಗೆ ಹೋಗಿ ಒಂದು ವಾರಕ್ಕೆ ಬೇಕಾದಷ್ಟು ಸಾಮಾನುಗಳನ್ನು ತರುತ್ತಿದ್ದಳು. ನಾನಾಗ ಚಿನ್ನವಳೆಂದು ನನ್ನನ್ನು ಕರೆದೊಯ್ಯುತ್ತಿರಲಿಲ್ಲ. ಅಲ್ಲಿಯೇ ಅಕ್ಕ ಪಕ್ಕದ ಮನೆಯೇ ಮಕ್ಕಳೊಂದಿಗೆ ಆಟವಾಡಯೆಂದು ಹೇಳಿ ಬಿಟ್ಟು ಹೋಗುತ್ತಿದ್ದಳು. ಹೇಗಿದ್ದಾಗ ಒಂದು ಶನಿವಾರ ನನಗೆ ಅಮ್ಮನ ಜೊತೆ ಸಂತೆಗೆ ಹೋಗಬೇಕೆಂಬ ಅಸೆ ಉಂಟಾಯಿತು. ನಾನು ಬರುತ್ತೇನೆ ಅಮ್ಮ ಎಂದೇ. ಅಮ್ಮ ಅದಕ್ಕೆ ಪ್ರತ್ಯುತ್ತರವಾಗಿ"ಬೇಡ ಮಗಳು ಅಲ್ಲಿ ಹಸುಗಳು ಎಲ್ಲಿ ಬೇಕೆಂದರಲ್ಲಿ ನುಗುತ್ತವೆ. ತರಕಾರಿ ಬುಟ್ಟಿ ಇಡಿದುಕೊಂಡು ನಿನ್ನನು ನೋಡಿಕೊಳ್ಳಲ್ಲು ಕಷ್ಟ" ಎಂದು ಏನೋ ಹೇಳಿದಳು, ಅಷ್ಟು ಸರಿ ನೆನಪಿಲ್ಲ, ಒಟ್ಟು ನನ್ನನ್ನು ಕರೆದೊಯ್ಯಲಿಲ್ಲ. ಅವಳ ಬೆನ್ನ ಹಿಂದೆಯೇ ಸ್ವಲ್ಪ ದೂರ ಹೋದೆ, ಹೀಗಮ್ಮ ಮನೆಗೆ ಎಂದರು. ನಾನು ಕೋಪದಲ್ಲಿ "ಕೋಳಿಮುನ್**" ಎಂದು ಬೈದೆ. ಎಲ್ಲಿತ್ತೊಯೇನೋ ಅಮ್ಮನ ಕೋಪ, ದರ ದರ ಯೆಂದು ಬೀದಿಯಲ್ಲಿ ಎಳೆದು ಕೊಂಡು ಬಂದು ಒಂದು ಪೆಟ್ಟು ರಾಪ್ ಅಂತ ಕೊಟ್ಟಳು", ಸ್ನೇಹಿತರೊಂದಿಗೆ ಆಟವಾಡು ಎಂದರೆ ಏನೆನೊನು ಕೆಟ್ಟ ಪದ ಮಾತನಾಡಲು ಕಲಿಯುತ್ತೀಯ ಎಂದು ಗದರಿಸಿದ್ದಳು. ನನಗೆ ಹೊಡೆದು ಅವಳೇ ಅತ್ತಿದಲ್ಲೂ. ಆ ದಿನ ಯಾರು ಸಂತೆಗೆ ಹೋಗಲೇ ಇಲ್ಲ. ನಾನು ಕೂಡ ಮತ್ತೆಂದೂ ಸಂತೆಗೆ ಕರೆದೊಯ್ಯುವಂತೆ ಹಠ ಮಾಡಲಿಲ್ಲ. ನನಗೆ ನೆನಪಿರುವಾಗೆ ಅದೇ ಮೊದಲು ಅದೇ ಕೊನೆ ಅವಳು ನನಗೆ ಹೊಡೆದದ್ದು ಹಾಗು ನಾ ಆ ರೀತಿ ಪದ ಬಳಸಿದ್ದು. ಈಗಲೂ ಕೂಡ ಆ ರೀತಿ ಪದ ಅಥವಾ ಯಾವುದೇ ಬಯ್ಯೋ ಶಬ್ದಗಳನ್ನು ಉಚ್ಚರಿಸಲು ಆಗುವುದೇ ಇಲ್ಲ. ಒಂದು ರೀತಿ ಕಷ್ಟ ಎನಿಸುತ್ತದೆ. 


ಉಳಿದ ವಿಷಯವನ್ನು ಇನ್ನು ಯಾವಾಗಲಾದರೂ ಮಾತನಾಡೋಣ. ಟಾಟಾ. 




Tuesday, 16 February 2021

Scary

ಎಷ್ಟು ವಿಚಿತ್ರ ಮನುಷ್ಯನ ಜೀವನ! ಎರೆಡು ವರ್ಷಗಳ ಹಿಂದೆಯಷ್ಟೆ ಒಬ್ಬಳೇ ಊರೂರು ಸುತ್ತಿದ್ದೆ. ಎರೆಡು ವರ್ಷಗಳ ನಂತರ ಮೊದಲ ಬಾರಿ ಇಂದು ಒಬ್ಬಳೇ ಇದ್ದೇನೆ. ಒಂದು ರೀತಿ ನಡುಕ. ಏನೋ! ಅರ್ಥವಾಗದ, ವಿಚಿತ್ರವಾದ ಹೆದರಿಕೆ. ಎಂತಾ ಬದಲಾವಣೆ ಕೇವಲ ಈ ಎರೆಡು ವರ್ಷಗಳಲ್ಲಿ.!ನಮ್ಮಮ್ಮ ಹೇಳುತ್ತಿರುತ್ತಾರೆ "ಮನುಷ್ಯರು ಇಂದು ಇದ್ದ ಹಾಗೆ ನಾಳೆ ಇರರು" ಅವರು ಹೇಳಿದ್ದು ಮನುಷ್ಯನ ವ್ಯವಹಾರದಬಗ್ಗೆ, ಆದರೆ ನನಗನಿಸುತ್ತದೆ, ನನ್ನಲ್ಲಿ ಕಾಣಸಿಗುವ ಬದಲಾವಣೆ ಹಾಗು ಅಮ್ಮ ಸಾಮಾಜಿಕವಾಗಿ ಹೇಳುವ ಆ ಬದಲಾವಣೆಗೂ ಮೂಲ ಒಂದೇ ಆಗಿರಬಹುದೇನೋ? ಯಂದು. ಮನುಷ್ಯನ ಮೆದುಳು ಯಾವರೀತಿ ಕೆಲಸಮಾಡುತ್ತದೆ ಹಾಗು ಭಾವನೆಗಳ ಹತೋಟಿ ಎಷ್ಟರಮಟ್ಟಿಗೆ ಇರುತ್ತದೆ ಎಂದು ಯಾರಿಗೂ ಅರಿವಿರುವುದಿಲ್ಲ. 

Sunday, 14 February 2021

Beauty lies in the eyes of the beholder

"Beauty lies in the eyes of the beholder'' ಅನ್ನೋ ಮಾತು ನೀವೆಲ್ಲರೂ ಕೇಳಿಯೇ ಇರುತ್ತೀರಿ. ಹಾಗೆ ಈ ಮಾತನ್ನು ಒಪ್ಪಿಯೂ ಇರಬಹುದು ಅಥವಾ ಒಪ್ಪದೆಯೂ ಇರಬಹುದು. 

ನಾನು ಅಷ್ಟೆಲ್ಲ ಇದರ ಬಗ್ಗೆ ಯೋಚಿಸಲು ಹೋಗಿಲ್ಲ. ಎಷ್ಟೋ ಮಂದಿ ಹಾಗೇ ಸುಮ್ಮನೆ ತುಂಬಾ ಚೆನ್ನಾಗಿ ಇದ್ದರೆಂದು ಅನಿಸಿದ್ದಿದೆ (symmetry ಕರಣ ವಿರಬಹುದು).  ಆದರೆ ನನ್ನ ಗಮನ ಸೆಳೆದ ವಿಷಯ ಏನಪ್ಪಾ ಎಂದರೆ ಸಾಮಾನ್ಯವಾಗಿ ಯಾವಾಗಲು ನನಗೆ ನನ್ನ ಅಣ್ಣ, ನನ್ನ ಅತ್ತಿಗೆ, ನನ್ನ ಅಪ್ಪ, ನನ್ನ ಗಂಡ, ನನ್ನ ಅತ್ತೆ, ನನ್ನ ಸ್ನೇಹಿತರು ಹೀಗೆ ನನ್ನ ಎಂಬ ಪದ ಎಲ್ಲಿಯೆಲ್ಲ ಇದೆಯೋ ಅವರುಗಳು ಬೇರೆಯವರಿಗಿಂತ ಚೆಂದ ಇದ್ದಾರೆ ಅಂತ ಅನಿಸುತ್ತದೆ. ನಾನು ಅಮ್ಮ ಯಾವುದಾದರು ಮದುವೆ ಮುಂಜಿ ಕಾರ್ಯಕ್ರಮಕ್ಕೆ ಹೋದರೆ ಎಷ್ಟೋ ಭಾರಿ ಅಮ್ಮನಿಗೆ ಹೇಳಿದುಂಟು "ಇಲ್ಲಿ ಇರುವ ಎಲ್ಲಾ ಹೆಂಗಸರಿಗಿಂತ ನೀವೇ ಬ್ಯೂಟಿಫುಲ್ ಅಮ್ಮ". ಅದು ಸುಳ್ಳು ಸುಳ್ಳು ಹೊಗಳಿಕೆಯಲ್ಲ, ನಿಜಕ್ಕೂ ಅವರು ನನ್ನ ಕಣ್ಣಿಗೆ ಯೆಲ್ಲರಿಗಿಂತ ಸುಂದರವಾಗಿ ಕಾಣಿಸುತ್ತಾರೆ. ಹಾಗೆಯೇ ನನ್ನ ಗಂಡನು ಕೂಡ. ಅವರ ಎಷ್ಟೋ ಸ್ನೇಹಿತರನ್ನು ಭೇಟಿ ಅದಾಗಲೆಲ್ಲ ಹಾಗೆ ಅನಿಸುತ್ತದೆ. ಇವರೇ ಚೆಂದವೆಂದು.!! ಯಾವುದೇ ವಿಷಯದಲ್ಲಾದರೂ (ರಿಲೇಟಿವ್) ಏನನ್ನು ಇನ್ನೊಂದಕ್ಕೆ ಹೋಲಿಸಿ ನಾನು ಹೇಳದಿದ್ದರೂ, ಈ ವಿಷಯ ಯಾಕೋ ಹೀಗಿದೆ!! ಚೆಂದ ಎಂಬ ವಿಷಯವು ಕೇವಲ ಆಪ್ಟಿಕಲ್ ನರ್ವ್ಸ್ ಮೆದುಳಿಗೆ ಕಳಿಸು ವಿದ್ಯುತ್ ಸಂಕೇತದ ಮೇಲಷ್ಟೇ ಅಲ್ಲ ನಿಮಗೆ ಆ ವಸ್ತು/ವ್ಯಕ್ತಿಯ ಮೇಲಿರುವ ಭಾವನೆಯು ಪ್ರಭಾವ ಬೀರುತದ್ದೇ.  

ಇದಕ್ಕೆ ಇನ್ನೊಂದು ಉದಾಹರಣೆ ಯೆಂದರೆ ಅಡಿಗೆಗಳು. ಕೆಲವರಿಗೆ ಕೆಲವು ಅಡಿಗೆ ಸೇರುವುದೇ ಇಲ್ಲ ಅಥವಾ ಕೆಲವು ಅಡಿಗೆಗಳು ಕೆಲವರಿಗೆ ಬಹಳಾನೇ ಇಷ್ಟ.! ಇದಕ್ಕೆ ಕರಣ ಕೇವಲ ಅಡಿಗೆಯ ರುಚಿ ಮಾತ್ರವಲ್ಲ. ಅದರ ಬಣ್ಣ, ಅದರ ವಿನ್ಯಾಸ/ಟೆಕ್ಸ್ಚರ್, ಪರಿಮಳ, ಅಥವಾ ಅದು ಯಾವುದಾದರು ಇಷ್ಟವಿರುವ/ವಿಲ್ಲದ ವಸ್ತುವಿನ ಹೋಲಿಕೆ, ಅಥವಾ ಅಡಿಗೆ ಮಾಡಿದವರ ಮೇಲಿನ ಭಾವನೆ ಹೀಗಿ ಹತ್ತು ಹಲವು ಕಾರಣಗಳ ಮಿಶ್ರಿತ ಫಲಿತಾಂಶವಾಗಿರುತ್ತದೆ. 

ಪಂಚೇಂದ್ರಿಯ ಪ್ರಚೋಧನೆ ಯೆನ್ನ ಬಹುದೇನೋ! ಗೊತ್ತಿಲ್ಲ. ಅಥವಾ ಅನುವಂಶಿಕ ಹಾಗು ನಮ್ಮ ಸುತ್ತಮುತ್ತಲಿನ ವಾತಾವರಣ/ಪರಿಸರವು ಪ್ರಭಾವಬೀರಬಹುದು. ಎಷ್ಟು ಸಂಕೀರ್ಣವಾದ ವಿಷಯವಿದು. ಯೋಚಿಸಿದಷ್ಟೂ ಗಾಢವಾಗುತ್ತ ಹೋಗುತ್ತದೆ. ಕೆಲವೊಮ್ಮೆ ಏನನ್ನು ಯೋಚಿಸುತ್ತಿದ್ದೇವೆ ಎಂಬುದೇ ಮರೆತು ಹೋಗುತ್ತದೆ. 

Friday, 12 February 2021

ಹೆಣ್ಣು ಮಕ್ಕಳಾಗಿ ಹುಟ್ಟಬಾರದು ಗುರು

ಮದುವೆ ಎಂಬುದು ಜೀವನವನ್ನು ಎಷ್ಟರಮಟ್ಟಿಗೆ ಬದಲಾವಣೆ ಮಾಡುತ್ತೆ ಅಯ್ಯೋ ದೇವರೇ. ಅಮ್ಮನ ಮನೆ ಅಮ್ಮನ ಮನೆ ಅನಿಸೋದೇ ಇಲ್ಲ, ಗಂಡನ ಮನೆ ನಮ್ಮ ಮನೆ ಅನಿಸೋದೇ ಇಲ್ಲ. ಎಲ್ಲಿಗೂ ಸಲ್ಲದವರಾಗಬೇಕು. 


Black was once white

ಮನಸ್ಸು ಮಹಾ ಮರ್ಕಟ. ಈಗ ಇದ್ದ ಹಾಗೆ ಮುಂದೆ ಇರದು. ಘಳಿಗೆಗೊಮ್ಮೆ ಬದಲಾಗುತ್ತಲೇ ಇರುವುದು. ಇಂದಿನ ಸತ್ಯ ನಾಳೆಗೆ ಸುಳ್ಳು. ಬದಲಾವಣೆ ಜಗದ ನಿಯಮ ಎಂದು ಎಲ್ಲರೂ ಹೇಳುತ್ತಾರೆ, ಆದರೂ ತಾವು ಬದಲಾಗೆವುಯೆಂಬ ಬಂಡ ನಂಬಿಕೆಯೋ ಅಥವಾ ಆ ತಕ್ಷಣಕ್ಕೆ ಹಾಗನಿಸುವುದೋ ಗೊತ್ತಿಲ್ಲ, ಜೀವನ ಪರಿಯ ಭಾಷೆ ಕೊಟ್ಟು ಬಿಡುತ್ತಾರೆ. ಜೀವನವನವನ್ನು ಒಮ್ಮೆ ಹಿಂತಿರುಗಿ ನೋಡಿದರೆ ತಿಳಿಯುತ್ತದೆ ಎಷ್ಟೋ ಸುಳ್ಳುಗಳ ಕಂತೆಯ ದಾರಿಯಲ್ಲಿ ನಾವು ನಡೆದು ಬಂದಿರುವೆವೆಯೆಂದು!! ಅಕ್ಕ ಪಕ್ಕದ ಮನೆಯವರಿಗೆ, ಜೊತೆಯಲ್ಲಿ ಓದಿದ ಗೆಳತಿಗೆ, ತುಂಬಾ ಇಷ್ಟಪಟ್ಟ ಶಿಕ್ಷಕಿಗೆ, ಯಾವಾಗಲು ಹೋಗುತ್ತಿದ್ದ ದೇವಸ್ಥಾನದ ಅರ್ಚಕರಿಗೆ, ಮೊದಲ ಪ್ರೀತಿಗೆ, ದೂರ ಅದೆಲ್ಲೋ ವಾಸಿಸುವ ಸ್ನೇಹಿತರಿಗೆ, ಎಲ್ಲರಿಗೂ ಒಂದು ಸುಳ್ಳು ಆಶ್ವಾಸನೆ. ಹುಟ್ಟಿದ ಊರೊಂದು, ಬೆಳೆದ ಊರೊಂದು, ಕಲಿತವೂರೊಂದು, ಕೆಲಸಮತ್ತೊಂದೂರು, ಮದುವೆಯಾದದ್ದು ಇನ್ನೊಂದೂರು, ಈ ನಡುವೆ ಹೇಳಿದ ಸುಳ್ಳುಗಳು ಬೆಟ್ಟದಷ್ಟು. ನಮಗೆ ನಾವು ಎಷ್ಟು ಸುಳ್ಳುಗಳನ್ನು ಹೇಳಿಕೊಂಡಿರುವೆವೋ. ಅದರ ಲೆಕ್ಕ ಆಕಾಶದಷ್ಟು. ಇವೆಲ್ಲವನ್ನು ಸುಳ್ಳು ಅನ್ನುವುದಕ್ಕಿಂತ ವಿಕಾಸನವೆನ್ನಬಹುದೇನೋ ಎಂಬ ಮತ್ತೊಂದು ಸುಳ್ಳು ಮನಸ್ಸಿನ ನೆಮ್ಮದಿಗಾಗಿ. ಅಥವಾ ಆ ಕ್ಷಣದ ಸತ್ಯವನ್ನು ಜೀವನದ ಸತ್ಯವೆಂದು ನಮಗೆ ನಾವು ಸಪ್ಸ್ಟಿಪಾಡಿಕೊಂಡ ಮತ್ತೊಬರಿಗೆ ಸುಳ್ಳನು ಹೇಳಲು ಪ್ರೇರೇಪಿಸಿದ ಸುಳ್ಳೊಏನೋ . ಸತ್ಯ ಸುಳ್ಳು ನೋವು ನಲಿವು ದುಃಖ್ಖ ದುಮ್ಮಾನ ನಗು ಅಳುಗಳೆಂಬ ನಾನಾ ಭಾವನೆಗಳಲ್ಲಿ ಸಿಲುಕಿ ಸರಿ ತಪ್ಪುಗಳೆಂಬ ಕಡಿವಾಣಗಲಾಕಿಕೊಂಡು, ಚಿಂತೆ ಎಂಬ ಚಿತೆ ಏರಿ,  ಜೀವನ ಲೈಟ್ ಆಗಿ ತಗೋಬೇಕು ಸ್ವಾಮಿ ಅಂತ ನಗುನಗುತ್ತಾ ಮತ್ತೊಬ್ಬರಿಗೆ ಸುಳ್ಳು ಬುದ್ದಿವಾದ ಹೇಳಿ, ಇರುವಷ್ಟು ದಿನ ಬದುಕಿ ಚಟ್ಟ ಕಟ್ಟಿಸಿಕೊಂಡು ಪ್ರತಿಯೊಬ್ಬ ಮನುಷ್ಯನು ಹೋಗಲೇ ಬೇಕು. 

"ಲೈಫು ಇಷ್ಟೇನೆ, ಫುಲ್ ಆಫ್ ಲೈಸ್"

ಪ್ರೇಮಿಗಳ ದಿನ ಹತ್ತಿರದಲ್ಲೇ ಬರುತ್ತಿದೆ. ನನ್ನ ಜೀವನದ ಏಕೈಕ ಸತ್ಯ ನನ್ನ ಕೃಷ್ಣನಿಗೆ ಸತ್ಯವೆಂಬ ಸುಳ್ಳು ಅಥವಾ ಸುಳ್ಳೆoಬ ಸತ್ಯವೋ, (ಯಾವುದೊ ಒಂದು) ಹೇಳಿ ಮುದ್ದುಮಾಡಬೇಕು, ಸಧ್ಯಕ್ಕೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳದೆ ಒಮ್ಮೆ ನಕ್ಕು ಬಿಡಿ. ಜೀವನ ಲೈಟ್ ಆಗಿ ತಗೋಬೇಕು ಸ್ವಾಮಿ. ಟಾಟಾ 

Wednesday, 3 February 2021

Fear of Success.

ಹೀಗೂ ಒಂದು ಇದೆಯೇ ಯೆಂದು ಭಾವಿಸಬೇಡಿ. ಇದು ಸತ್ಯ! ನನ್ನ ಕಥೆ ವಿಚಿತ್ರವೆನಿಸಬಹುದೇ ನಿಮಗೆ ಅಥವಾ ನಿಮ್ಮ ಕಥೆಯು ನನ್ನನ್ನ ಕಥೆಯೇ ಇರಬುದು! ಈ ಲೇಖನ ಯಾರನ್ನು ದೂಷಿಸುವುದಕ್ಕಲ್ಲ. ಇಲ್ಲಿ ಯಾವುದು ತಪ್ಪು ಯಾವುದು ಸರಿಯಂಬುದರ ಚರ್ಚೆಯ ಅಗತ್ಯವೂ ಇಲ್ಲ. ಅತಿರೇಖ ಅನ್ನಿಸಿದಲ್ಲಿ ಆಶ್ಚರ್ಯವಿಲ್ಲ. 

ನನ್ನನಣ್ಣ ಓದುವುದಲ್ಲಿ ಹುಷಾರಿ. ೫ನೇ ತರಗತಿಯಲ್ಲಿಯೇ ನವೋದಯ ಪರೀಕ್ಷೆ ಪಾಸ್ ಮಾಡಿದ. ಬೋರ್ಡಿಂಗ್ ಶಾಲೆ ಸೇರಿದ. ಅಮ್ಮನಿಗೆ ನಾನು ಹುಷಾರಿಯಾಗಬೇಕೆಂಬ ಹಂಬಲ. ಶಾಲೆಗೆ ದೂರ ಕಲಿಸುವ ಮನಸಿತ್ತೋ ಬಿಟ್ಟಿತೋ ಗೊತ್ತಿಲ್ಲ, ಆದರೆ ನಾನು ಪರೀಕ್ಷೆ ತೆಗೆದುಕೊಳ್ಳ ಬೇಕೆಂಬ ಆಸೆ. ನಾನು ತೆಗೆದು ಕೊಂಡೆ. ಅನುತೀರ್ಣಳಾದೆ. ಅಲ್ಲಿಂದ ಎಲ್ಲವೂ ಬದಲಾಯಿತು. ನನಗೆ ನನ್ನ ಮೇಲೆ ಖಿನ್ನತೆಯ ಭಾವ. ಅಥವಾ ನನಗೆ ಕಷ್ಟವಿರುವ ಯಾವುದೇ ಪರೀಕ್ಷೆ ಎದರಿಸುವುದೇ ಭಯ! ಎಲ್ಲಿ ಉತ್ತೀರ್ಣಳಾಗಿಬಿಡುವೆನೋ ಎಂಬ ಭಯ!! ಹೌದು. ನೀವು ಓದಿದ್ದು ಸರಿಯೇ ಇದೆ. ಉತ್ತೀರ್ಣಳಾಗಿಬಿಟ್ಟರೆ ಮುಂದೆ ಏನೋ, ದಾರಿ ಕಷ್ಟ ವಿರಬಹುದು. ನನ್ನಿಂದ ಜನ ಹೆಚ್ಚೇ ಅಪೇಕ್ಷಿಸಬಹುದೇನೋ. ಒಂದು ಸಲ ಉತ್ತೀರ್ಣಳಾದರೆ ಪ್ರತಿಭಾರಿಯೂ ಉತ್ತೀರ್ಣಳಾಗಲೇ ಬೇಕೆಂಬ ಅಪೇಕ್ಷೆ ಮೂಡಬಹುದೇನೋ. ಅಥವಾ ನನ್ನ ನನ್ನ ಗೆಲುವು ಆಕಸ್ಮಿಕ ಅನಿಸಬಹುದೇ ಹೀಗೆ ಬೇಡದ ಇಲ್ಲದ ಸಲ್ಲದ ಮಳ್ಳು ಯೋಚನೆಗಳು! ಆದಷ್ಟು ಲೊ ಪ್ರೊಫೈಲ್ ಮೈನ್ಟೈನ್ ಮಾಡಿಕೊಂಡೆ ಬಂದಿದ್ದೆ. ಇಂಜಿನಿಯರಿಂಗ್ ಸೆರೆಂದು ಸ್ನೇಹಿತರು ಎಷ್ಟೇ ಒತ್ತಾಯಮಾಡಿದರು ಸೇರಲಿಲ್ಲ. ಮುಂದೆ ಬಿ. ಯಸ್ ಸಿ. ಆದಮೇಲೆ ಯಾವುದೇ ಕೆಲ್ಸಕ್ಕೆ ಪರೀಕ್ಷೆ ತೆದುಕೊಳ್ಳಲಿಲ್ಲ. ಆಗಸ್ಟ್ ಅಣ್ಣ ಇಂಜಿನಿಯರಿಂಗ್ ಮುಗಿಸಿ ಗೇಟ್ ಪರೀಕ್ಷೆ ಉತ್ತೀರ್ಣವಾಗಿ ಭಾರತದ ಪ್ರತಿಷ್ಠಿತ ಇನ್ಸ್ಟಿಟ್ಯೂಟ್ ಐ ಐ ಯಸ್ ಸಿ ಯಲ್ಲಿ ಎಂ ಟೆಕ್ ಸೇರಿದ್ದ. ಆ ಸಮಯದಲ್ಲಿ ನಾನು ಕೆಲವು ಪರೀಕ್ಷೆ ಯನ್ನು ತೆಗೆದುಕೊಂಡಿದ್ದೆ. ಮತ್ತೆ ಉತ್ತೀರ್ಣವಾಗಲಿಲ್ಲ. ಇನ್ನಷ್ಟು ಕುಗ್ಗಿ ಹೋದೆ. ೨೨ ವರ್ಷ ಅಪ್ಪ ಅಮ್ಮನ ಜೊತೆಯಲ್ಲಿ ಇದ್ದ ನಾನು ಎಂ ಯಸ್ ಸಿ ಗಾಗಿ ಮೈಸೂರ್ ಸೇರಬೇಕಾಯಿತು. ಮನೆಯ ಸೆಳೆತ. ಪ್ರತಿ ವಾರವೂ ಮನೆಗೆ ಬರುತ್ತಿದ್ದೆ. ಓದಿನಲ್ಲಿ ಹಿಂದೇಟಾಯ್ತು ಮೊದಲನೇ ವರ್ಷ. ಎರಡನೇ ವರ್ಷ ಚೇತರಿಸಿಕೊಂಡೆ. ಆಗೆಲ್ಲ ಹುಡುಗಾಟದ ಜೀವನವಾಗಿತ್ತು. ಕೆಲಸಕ್ಕೆ ಸೇರುವುದೆಂದರೆ ಅಷ್ಟೆಲ್ಲ ಕಷ್ಟ ವೆಂಬ ಅರಿವಿರಲಿಲ್ಲ. ಯಾವುದೇ ಕಷ್ಟ ಪಡಲು ಹೆದರಿಕೆ. ಸೋತರೆ ಎಂಬ ಭಯ. ಈಗ ಗೆದ್ದರೆ ಎಂಬ ಭಯ ಮರೆಯಾಗಿತ್ತು. ಸೋತರೆ ಅಪಮಾನ ವೆಂಬ ಯೋಚನೆ ಷುರುವಾಗಿತ್ತು. ಹಾಗಾಗಿ ಯಾವುದಕ್ಕೂ ಪ್ರಯತ್ನಿಸಲಿಲ್ಲ. ಉಂಡಾಡಿ ಗುಂಡನಾದೆನೇನೋ ! ಈಗ ಅದರ ಬೆಲೆ ತೆರುತ್ತಿದೇನೆ. ಎಷ್ಟು ಕ್ಷಮತೆ ಇದ್ದರೇನು? ಎಷ್ಟು ಒಳ್ಳೆಯ ಅಂಕವಿದ್ದರೇನು? ಅಷ್ಟೇ ಒಳ್ಳೆಯ ಸ್ಥಾನಮಾನ ವಿರಬೇಕಲ್ಲವೇ ಎಂಬ ಅರಿವು ನನ್ನ ಗಂಡನಿಂದ ಮೂಡಿದೆ ಅಥವಾ ಇನ್ನಷ್ಟು ಜವಾಬ್ದಾರಿಗಳಿಂದ ಓಡಿ ಹೋಗುವು ಅವಕಾಶ ಮುಗಿದೋಗಿದೆ. ಈಗ ಡಾಕ್ಟಾರೇಟ್ ಕೂಡ ಮುಗಿಯಿತು. ಜೀವನದಲ್ಲಿ ಒಂದು ಐಡೆಂಟಿಟಿ ಎಷ್ಟು ಮುಖ್ಯವೆಂಬುದರ ಅರಿಮು ಸಹ ಮೂಡಿತು. ಅದಕ್ಕಾಗಿ ಶ್ರಮಿಸುತ್ತಿದೇನೆ ಕೂಡ. 

ನನಗಿನ್ನೂ ನೆನಪಿದೆ ೨೦೧೩-೧೪ ರಲ್ಲಿ IISc ಗೆ ಹೋದಾಗ ಅಣ್ಣನ ಡಿಪಾರ್ಟ್ಮೆಂಟ್ ಗೆ ಭೇಟಿಕೊಟ್ಟಿದ್ದೆ ಅಲ್ಲಿ ಅವನ ಸ್ನೇಹಿತರೊಬ್ಬರಿದ್ದರು ಅವರು ಹೀಗೆ ಹೇಳಿದರು " ಫಾಲೋವಿಂಗ್ ಯುವರ್ ಬ್ರದರ್ಸ್ ಫುಟ್ ಸ್ಟೆಪ್ಸ್ ?" ನಾನು ನಕ್ಕಿ ಹೂ ಅಂದ್ದಿದೆ. ಈಗ ಅನಿಸುತ್ತಿದೆ ಹಾಗೆ ಮಾಡಬೇಕಿತ್ತು ಯೆಂದು!!!!   ಮಿಂಚಿ ಹೋದ ಸಮಯಕ್ಕೆ ಚಿಂತಿಸಿ ಫಲವಿಲ್ಲ. ನಮ್ಮಮ್ಮ ಯಾವಾಗಲು ಹೇಳುತ್ತಾರೆ "ಧೈರ್ಯಮ್ ಸರ್ವಸ್ತ್ರ ಸಾಧನಂ" ಎಷ್ಟು ಸತ್ಯವಲ್ಲವೇ ಇದು. 


ನ ಮಕ್ಕಳಿಗೆ ಹೇಳುವುದಿಷ್ಟೇ "ನನ್ನಂತೆ ಆಗಬೇಡಿ". ಪೋಷಕರಿಗೆ ಹೇಳುವುದಿಷ್ಟೇ "ಮಕ್ಕಳ  ಮೇಲೆ ಹೆಚ್ಚು ನಿರೀಕ್ಷೆ ಇಡಬೇಡಿ. ಇಟ್ಟರೂ ಅದನ್ನು ಅವರ ಅರಿವಿಗೆ ಬರಲು ಬಿಡಬೇಡಿ. ಹೊರ ಜಗತ್ತಿನ ಅರಿವು ಆದಷ್ಟು ಮೂಡಿಸುವ ಪ್ರಯತ್ನದ ಜೊತೆಗೆ ಜೀವನವಿರುವುದು ಜೀವಿಸಲು ಎಂಬ ಪಾಠವನ್ನು ಹೇಳಿ "

Tension

ಎಷ್ಟು ಕಷ್ಟ ಈ ಟೆನ್ಷನ್ ಇಂದ ಹೊರ ಬರುವುದು. ಅಬ್ಬಬ್ಬಾ ಕರೆಯದ ಬರುವ ಈ ಅತಿಥಿ, ಹೋಗು ಎಂದರು ಹೋಗದ ಪರಿಸ್ಥಿತಿ. ಬುದ್ದಿಗೆ ಗೊತ್ತಿದೆ ಚಿಂತೆ ಚಿತೆ ಯೆಂದು, ಆದರೂ ಏಕಿಷ್ಟು ಹಟ ಈ ಬುದ್ದಿಗೆ? ಬುದ್ಧಿಯೇ ಬುದ್ದಿಯ ಮಾತು ಕೇಳುತ್ತಿಲ್ಲ. ಬೇಡ ಬೇಡ ಅಂದರು ಒತ್ತಡದ ಭಾವನೆ ಒತ್ತೊತ್ತಾಗಿ ಬರುತ್ತಲೇ ಇದೆ. ಸುತ್ತಮುತ್ತ ನಡೆಯುತ್ತಿರುವ ಘಟನೆಗಳು ಏಕಿಷ್ಟು ಪ್ರಭಾವ ಬೀರುತ್ತಿದೆ? ನನ್ನ ಜೀವನದಲ್ಲಿ ಎಲ್ಲವೂ ಕುಶಲ ಆದರೂ ಕ್ಷೇಮವಾಗಿಲ್ಲವೇಕೆ ನಾನು? ಯೋಗ ಪ್ರಾಣಾಯಾಮದ ಮೊರೆ ಹೋಗಾಯ್ತು, ಗೂಗಲ್ ಮಾಡಿ ಕಾಮ್ ಆಗುವುದು ಹೇಗೆ ಎಂದು ಸುಂದರವಾದ ಕೋಟ್ಸ್ ಓದಿಯಾಯಿತು. ಯುಟ್ಯೂಬ್ ನಲ್ಲಿ ರಿಲಾಕ್ಸಿಂಗ್ ಮ್ಯೂಸಿಕ್ ಕೇಳಿಯಾಯಿತು. ಆದರೂ ಹುಂ ಹುಂ. ಕೆತ್ತಬಾಜಿ ಈ ಟೆನ್ಷನ್. ಅಂಟಿ ಹಿಡಿದ ಎಣ್ಣೆ ಜಿಡ್ಡಿನ ಹಾಗೆ. ಹೋಗುವ ಲಕ್ಷಣವೇ ತೋರುತ್ತಿಲ್ಲ. ಹಾಗೆ ನೋಡಿದರೆ ನಾನು ಬಹಳಾನೇ ಆರಾಮವಾಗಿರಬೇಕಿರು ಸಮಯವಿದು. ಈಗಷ್ಟೇ ಪಿ ಹೆಚ್. ಡಿ. ಮುಗಿಯಿತು. ಸ್ವಲ್ಪ ವಿಶ್ರಮಿಸಿ ಕೆಲ್ಸಕ್ಕೆ ಹೋದರಾಯ್ತು. ಹಾಗು ಹೇಳಬೇಕೆಂದರೆ ಎಲ್ಲವೂ ಹಂತೋಪ ಹಂತವಾಗಿ ನಮ್ಮ ಜೀವನದಲ್ಲಿ ಅಭಿವೃದ್ಧಿಯೇ ಯಾಗುತ್ತಿದೆ. ನಾನು ಸಹ ನನ್ನ ಸ್ವ-ಅಭಿವೃದ್ಧಿಗೆ ಶ್ರಮಿಸುತ್ತಿದೇನೆ, ಎಲ್ಲವೂ ಒಳ್ಳೆಯದೇ ಆಗುತ್ತಿದೆ, ಆದರೂ ಯಾವುದೊ ಕಾಣದ, ತಿಳಿಯದ ಒತ್ತಡ. ಯಾರಿಗೂ ಹೇಳುವಂತಿಲ್ಲ. ಹೇಳಿದರೆ ಅರ್ಥವು ಆಗುವುದಿಲ್ಲ. ಅರ್ಥವಾದರೂ ಇದರಿಂದ ಹೊರಬರಲು ಯಾರು ಸಹಾಯ ಮಾಡುವುದಿಲ್ಲ. ಸಹಾಯ ಮಾಡುವ ನೆಪದಲ್ಲಿ ಬುದ್ದಿ ಮಾತು ಹೇಳಹೊರಡುವರು. "ಸ್ವಾಮಿ, ನನಗೆ ಬುದ್ದಿಮಾತು ಬೇಡ ಈಗ, ನನ್ನ ಮಾತು ಸ್ವಲ್ಪ ಕೇಳಿ ಸಾಕು. ಸುಮ್ಮನೆ ನನ್ನೊಂದಿಗೆ ಸ್ವಲ್ಪ ಕಾಲ ಕುಳಿತುಕೊಳ್ಳಿ ಸಾಕು, ಸ್ವಲ್ಪ ಒಳ್ಳೆಯ ಮಾತನಾಡಿ ಸಾಕು, ಸ್ವಲ್ಪ ನಕ್ಕು ನಲಿಯಿರಿ ಸಾಕು. " ಅಂತ ಹೇಗೆ ತಾನೇ ಹೇಳಲಿ ನಾನು? ನಿಮಿಷ ನಿಮಿಷಕ್ಕೂ, ಎಲ್ಲಾ ಮಾತಿಗೂ ಕೋಪ ತಾಪ. ಯಾಕೀಗೆ? "ನನ್ನನ್ನು ನನ್ನ ಪಾಡಿಗೆ ಬಿಟ್ಟರೆ ನಾನು ನನಗೆ ತಿಳಿದ ಮಟ್ಟಿಗೆ ಸರಿಯಾದ ಹಾದಿಯಲ್ಲೇ ಹೋಗುವೆ ಎಂಬ ನಂಬಿಕೆ. ಯಾರಿಗಿಷ್ಟವಿಲ್ಲ ಹೇಳಿ ಯಶಸ್ವಿಯಾಗುವುದು?   ಯಾಕೆ ನಾನು ಇಷ್ಟೆಲ್ಲ ವರಿ ಮಾಡುವಂತೆ ಪರಿಸ್ಥಿತಿಗಳ ನಿರ್ಮಾಣ ಮಾಡುತ್ತಿರುವರು??" ಅಂತೆಲ್ಲ ಅನಿಸುತ್ತದೆ. ಈ ಬರವಣಿಗೆ ಯಾದರು ಸ್ವಲ್ಪ ಮಟ್ಟಿಗೆ ನೆಮ್ಮದಿ ತರಬಹುದೇನೋ ಯೆಂಬ ನಂಬಿಕೆ, ಸ್ವಲ್ಪಮಟ್ಟಿಗಾದರೂ ಒಳ್ಳೆಯ ನಿದ್ರೆ ಬರಬಹುದೇನೋ ಯಂಬ ಆಸೆ. 

Saturday, 30 January 2021

ಸ್ನೇಹಿತೆ ಎಷ್ಟು ಮುಖ್ಯ?

ಹಾಗಾದರೆ ಸ್ವಾರ್ಥಕ್ಕಾಗಿ ಸ್ನೇಹಿತೆಯೇ? ಯೆಂದು ನಿಮಗನಿಸಿದರು ಚಿಂತೆಯಿಲ್ಲ . 

ನೆನ್ನೆ ಏಕೋ ಕಸಿಮಿಸಿ,  ಕಳೆದ  ೬ ವರ್ಷಗಳ ಜೀವನದ ಸಾರ್ತಕಥೆಯ ಪ್ರಶ್ನೆ. ಏನೇನೋ ಬೇಡದ ಯೋಚನೆಗಳ ಗೂಡಾದ ಮನಸ್ಸು. ಸ್ನೇಹಿತೆಗೆ ಮೆಸೇಜ್ ಮಾಡಿ ಬೇಜಾರು ನನಗೆ ಹೀಗೆಲ್ಲ ಅನ್ನಿಸುತ್ತಿದೆ ಎಂದು ಮಾನಸಿ ಅನ್ನಿಸಿದ್ದನು ಆದಷ್ಟು  ಒಳ್ಳೆಯ ರೂಪಾಂತರಿಸಿ ಎಷ್ಟು ಬೇಕೋ ಅಷ್ಟೇ ಅವಳಿಗೆ ಹೇಳಿದೆ. ಆಗ ಅವಳು ಹೇಳಿದ ಒಂದು ಮಾತು ಎಷ್ಟು ಸಮನಾದ ಕೊಟ್ಟಿತೆಂದರೆ ಬಾಯಾರಿದವನಿಗೆ ನೀರು ಸಿಕ್ಕಷ್ಟು. ಆಕೆ ಹೇಳಿದ್ದು ಇಷ್ಟೇ,

"ಮಧು, ಪರಿಸ್ಥಿತಿಗಳು ನಿಜವಾಗಿಯೂ ನೀನು ಹೇಳುವ ರೀತಿಯೇ ಇದಿಯೇ ಅಥವ ಕೇವಲ ನಿನಗೆ ಹಾಗನಿಸಿತ್ತುರುವುದೇಯೆಂದು ಸಮಾಧಾನದಿಂದ ಆಲೋಚಿಸು. ನಿನ್ನ ಮೇಲೆ ಮಾತ್ರ ನಿನ್ನ ಗಮನವಿರಲಿ, ಎಲ್ಲವೂ ತನ್ನಿಂದ ತಾನೇ ಸರಿಹೋಗುತ್ತದೆ. ನಾನು ಈ ಸವಾಲುಗಳ್ಳನ್ನು ಎದರಿಸಿ ಬಂದಿದ್ದೇನೆ" 

ಅನುಭವಗಳು ಕಲಿಸುವ ಪಾಠಕ್ಕೆ ಬೇರೆ ಸಾಟಿ ಇಲ್ಲ ಅನ್ನುವುದು ಇದಕ್ಕೆ ಇರಬೇಕು.   

ಹಾಗೆ ಸುಮ್ಮನೆ

ಅಮ್ಮನನ್ನೇ  ದಿಟ್ಟಿಸಿ ಏನನ್ನೋ ಯೋಚಿಸುತ್ತಿದ್ದ ಅಪ್ಪನಿಗೆ ಅಮ್ಮ "ಯಾಕ್ರೀ ಭಟ್ರೇ ನನ್ನನ್ನು ಹಾಗೆ ನೋಡ್ತೀರಾ" ಅಂದರು. ಅದಕ್ಕೆ ಉತ್ತರವಾಗಿ ಅಪ್ಪ ನೆನ್ನೆ ಏನು ಹೇಳಿದರು ಗೊತ್ತೇ?  

"ಹೆಂಡತಿ ಅನ್ನೋ ಹೆಸರಲ್ಲೇ ಹೆಂಡ ಇದೆ. ನಿನ್ನದೇ ಅಮಲು ನನಗೆ". ಎಂದು ನಕ್ಕಿ ಬಿಟ್ಟರು ನಮ್ಮ ಭಟ್ಟರು.  

Sunday, 10 January 2021

ಕೃಷ್ಣೇ

  ನಮ್ಮಜೊತೆಗಾರರ ಪ್ರಭಾವ ಎಷ್ಟರ ಮಟ್ಟಿಗೆ ಆಗುತ್ತದೆಂದರೆ ನನ್ನ ಕೃಷ್ಣನ ಪಡೆದ ಮೇಲೆ ನಾನು ಮಧುವಾಗಿಲ್ಲ ಕೃಷ್ಣೆಯಾಗಿದ್ದೇನೆ. 

ಕಳೆದು ಹೋದ ಸಮಯ - ೨

ಅಂದು ಅಮ್ಮನ ಬಗ್ಗೆ ಮಾತನಾಡುತ್ತಿದ್ದೆ. ಈಗ ಮಾತು ಮುಂದುವರಿಸುವೆ. 

ಎಷ್ಟೋ ದಿನಗಳ ನಂತರ ಕೇವಲ ನಾನು, ಅಮ್ಮ ಮತ್ತು ಅಪ್ಪ ಮನೆಯಲ್ಲಿ ಜೊತೆಯಲ್ಲಿ ಇರುವ ಸಂದರ್ಭ ಬಂದಿದೆ. ಇಲ್ಲದಿದ್ದಲ್ಲಿ ಕಳೆದ ೬ ವರ್ಷಗಳಲ್ಲಿ ನಾವು ಮೂವರು ಮಾತ್ರ ಜೊತೆ ಇದ್ದ ಸಂದರ್ಭ ಬೆರಳೆಣಿಕೆಯಷ್ಟು. ಅಣ್ಣ ಅತ್ತಿಗೆ, ನನ್ನ ಗಂಡ ಹೀಗೆ ಒಬ್ಬರಲ್ಲ ಒಬ್ಬರು ಇರುತ್ತಿದ್ದರು. ಅವರೆಲ್ಲ ಇರುವಾಗ ನಮ್ಮ ಮೂವರಿಗೆ ಮಾತ್ರ ಸೀಮಿತವಾದ ಹಳೆಯದಿನಗಳ ಸವಿಯನ್ನು ಮೆಲುಕುಹಾಕುವುದು ಸಾಧ್ಯವಾಗುವುದಿಲ್ಲ. ಕಳೆದ ೪-೫ ದು ದಿನಗಳಿಂದ ಈ ಸುಸಂದರ್ಭದ ನಮಗೊದಗಿ ಬಂದಿದೆ. ನಾವು ನಮ್ಮ ಹಳೆಯ ಜೀವನದಬಗ್ಗೆ ಮಾತನಾಡುತ್ತ ಜೋರ ಜೋರಾಗಿ ನಗುತ್ತ ಕಾಲ ಕಳೆಯುತ್ತಿದ್ದೇವೆ. ಒಂದು ರೀತಿ ನಿರಾಳ ವೆನಿಸುತ್ತದೆ. ನೆಮ್ಮದಿಯ ಅನುಭವ. ಜೀವನ ಎಷ್ಟು ಬದಲಾಗಿದೆ ಎಂಬುದರ ಸಣ್ಣ ಅರಿವು. ಕೊಂಚ ನಡುಕ ಅಯ್ಯೋ ಇಷ್ಟು ಬೇಗ ಅಷ್ಟು ದೊಡ್ಡವಳದೇನೆ ಎಂದು. ನೆನ್ನೆ ಮೊನ್ನೆ ಅಷ್ಟೇ ಯಾರೋ ಅಪರಿಚಿತರು ಏನು ಪುಟ್ಟಿ ಏನು ನಿನ್ನ ಹೆಸರು ಅಂತ ನನ್ನನ್ನು ಮುದ್ದು ಮುದ್ದಾಗಿ ಮಾತನಾಡಿಸಿದಾಗ ಅಮ್ಮನ ಸೆರಗ ಹಿಂದೆ ಅವಿತ ನೆನಪು. ಪಾಪ ಪಿನ್ನು ಹಾಕಿದ್ದ ಅವಳ ಸೆರಗ ಎಳೆದು ಎಷ್ಟು ಸಲ ನಾನು ತೊಂದರೆ ಕೊಟ್ಟಿರಬಹುದು ಎಂದು ನೆನೆದರೆ ನಗು ಬರುತ್ತದೆ. ಈಗ ಎಲ್ಲಿಗಾದರೂ ಹೋಗುವಾಗ ನನ್ನ ಸೀರೆ ಸ್ವಲ್ಪ ಸುಕ್ಕಾದರೂ ಕೋಪ ಬರುತ್ತದೆ!! ಅಮ್ಮಂದಿರು ಮಕ್ಕಳನ್ನು ದೊಡ್ಡಮಾಡಲು ಒಳ್ಳೆ ಸರ್ಕಸ್ ಮಾಡಿರುತ್ತಾರೆ ಅಲ್ಲವೇ? ಅಷ್ಟೇ ಅಲ್ಲದೆ ತಮ್ಮ ಜೀವನವೇ ಅವರು ಎಂಬಂತೆ ತಮ್ಮ ಜೀವನವನ್ನು ಬದಿಗಿರಿಸಿ ಬದುಕ್ಕುತ್ತಾರೆ. ಪ್ರಪಂಚದಲ್ಲಿ ಎಲ್ಲ ಅಮ್ಮಂದಿರು ಹೀಗೆ ಇರಬಹುದೇ ಎಂಬ ಒಂದು ಸಣ್ಣ ಪ್ರಶ್ನೆ. ಅದುವೆ ಜಗದ ನಿಯಮವೇ? ಜೇವನದ ಉದ್ದೇಶವೇ ಅದುವೇ? ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲವಾದರೂ ನನ್ನ ಗಂಡನ ಬಳಿ ಇದೆ. ಅವರು ಹೇಳುವುದು ಏನೆಂದರೆ ಮದುವೆಯ ಉದ್ದೇಶವೇ ಮಕ್ಕಳು, ಮಕ್ಕಳನ್ನು ಹಡೆದು ಅವರ ಭವಿಷ್ಯ ನಿರ್ಮಿಸುವುದು. ಈ ಉತ್ತರ ಸರಿ ಅನಿಸಬಹುದು ಏಕೆಂದರೆ ಜೀವನದಲ್ಲಿ ಯಾವುದಕ್ಕೂ ಅರ್ಥವಿಲ್ಲ. ಒಬ್ಬರಿಗೆ ಸಹಾಯ ಮಾಡುವುದು, ದುಡಿಯುವು, ತಿನ್ನುವುದು, ಸುತ್ತುಹೋಗುವುದು. ಅದು ಇದು ನಮ್ಮ ಎಂಟರ್ಟೈನ್ಮೆಂಟ್ಗಾಗಿ ಮಾಡುವುದು ಎಲ್ಲವೂ ಅಗತ್ಯವೂ ಹೌದು ಹಾಗೆ ಅನಗತ್ಯ. ಎಲ್ಲವೂ ಒಂದು ರೀತಿಯಲ್ಲಿ ವ್ಯರ್ಥ. ಹಾಗಾದರೆ ವ್ಯರ್ಥವಲ್ಲದ್ದು ಅಂದರೆ ಏನು ಎಂಬ ಪ್ರಶ್ನೆ ಬರುತ್ತದೆ ? ಅದಕ್ಕೆ ಉತ್ತರವಿಲ್ಲ. ಯಾವ ವ್ಯಕ್ತಿಯು ಜಗದ ನಿಯಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವರು ಹೇಳಬಹುದು ಜೀವನದಲ್ಲಿ ಒಂದಷ್ಟು ಜನಕ್ಕೆ ಸಹಾಯವಾಗುವಂತ , ಜೀವನ ಸುಲಭವಾಗುವತಹ ಕೆಲಸಮಾಡಿದರೆ/ಕಂಡುಹಿಡಿದರೆ ಜೀವನ ಸಫಲ ಅಂತ. ಆದರೆ ನನಗೆ ಮೂಡುವ ಪ್ರಶ್ನೆ ಎಂದರೆ, ಹೀಗೆ ಒಬ್ಬರ ಜೀವನ ಉದ್ದಾರ ಮಾಡಿರುವೆ ಅಂದ್ಕೊಂಡವರು ನಿಜವಾಗಿಯೂ ಉದ್ದಾರ ಮಾಡಿರುವರೋ  ಅಥವಾ ಹಾಳು ? ಬೇರೆ ಜೀವ ಪ್ರಬೇಧಗಳು ಹುಟ್ಟಿದ್ದೇವೆ ಹಾಗಾಗಿ ಬದುಕ ಬೇಕು, ಬದುಕ್ಕುತೇವೇ, ಹುಟ್ಟಿದ ಮೇಲೆ ಸಾವು ಸಹಜ, ಸಾಯುತ್ತೇವೆ. ಅಷ್ಟೇ. ಆದರೆ ಮನುಷ್ಯಮಾತ್ರ ಏಕೆ ಏನೇನೋ ಆವಿಷ್ಕಾರ ಮಾಡ ಹೊರಡುತ್ತಾರೇ? ಕಷ್ಟಗಲ್ಲನು ಸೃಷ್ಟಿಸುವವರು ನಾವೇ , ಅದಕ್ಕೆ ಪರಿಹಾರ ಕಂಡುಕೊಳ್ಳುವುದು ನಾವೇ. ಮನುಷ್ಯನೆಂಬ ಪ್ರಾಣಿಯ ಹುಟ್ಟೇ ತಪ್ಪು ಅನಿಸುತ್ತದೆ ಕೆಲವೊಮ್ಮೆ. ತನ್ನ ಯೋಚನಾಶಕ್ತಿಯಿಂದ ಇಚ್ಚಾಶಕ್ತಿಯಿಂದ ಎಲ್ಲವನ್ನು ಬದಲಿಸುತ್ತಾನೆ. ನಾವೆಲ್ಲರೂ ಈ ಮಾಯಾಜಾಲದಲ್ಲಿ ಎಷ್ಟರಮಟ್ಟಿಗೆ ಬಲಿಯಾಗಿದ್ದೇವೆಯೆಂದರೆ ಅದರಿಂದ ಹೊರಬರಲು ಅಸಾಧ್ಯ. ನಿಜವೆಂದರೆ ನಾವ್ಯಾರು ಹೊರಬರಲು ಬಯಸುವುದೇ ಇಲ್ಲ. ಇನ್ನು ಪ್ರಯತ್ನವೆಲ್ಲಿ ಮಾಡಿರುತ್ತೇವೆ? ಅಲ್ಲವೇ.? ಅಯ್ಯೋ ನಾನು ನನ್ನ ಮೂಲ ಉದ್ದೇಶದಿಂದ ದೂರಹೋಗುತಿದ್ದೇನೆ. ನಾವಿಲ್ಲಿ ಈಗ ಮಾತನಾಡಿತ್ತಿರುವುದು ನನ್ನಮ್ಮನ ಬಗ್ಗೆ. 

ನಂಬಿಕೆ ಎಂಬುದು ಎಷ್ಟು ಮುಖ್ಯ ಜೀವನ ನಡೆಸಲು. ಸಂಘಜೀವಿ ಯಾಗಿದ್ದೆ ಮನುಷ್ಯನ ತಪ್ಪೇ? 

ನನ್ನಮ್ಮ ಕೆಲಸಕ್ಕೆ ಹೋಗುವುದು ಅಪ್ಪನಿಗೆ ಇಷ್ಟ ಇರಲ್ಲಿಲ್ಲ ಯೆಂದು ಆಗಲೇ ಹೇಳಿದ್ದೆ. ನಮ್ಮಮ್ಮನಿಗೇಕೊ ಬರಿ ಮನೆಗೆಲಸ ಮಾಡಿಕೊಂಡು ಆರಾಮವಾಗಿ ಇರುವುದು ಅಷ್ಟೆಲ್ಲ ಇಷ್ಟವಿರಲಿಲ್ಲ. ನನಗೊಂದು ಹೆಣ್ಣು ಮಗಳಿದ್ದಾಳೆ, ಅವಳಿಗೆ ಮದುವೆ ಮಾಡಬೇಕು. ಒಂದು ಸರಿಯಾದ ದಡ ಸೇರಿಸಬೇಕೆಂದು ನಾನು ಹುಟ್ಟಿದಾಗಲೇ ನಿರ್ಧಾರ ಮಾಡಿರಬೇಕು ಅನಿಸುತ್ತದೆ. ಹಾಗಾಗಿ ತನ್ನ ಕೈಲಾದ ಎಲ್ಲ ಪ್ರಯತ್ನ ಪಟ್ಟಿದಾಳೆ. ಅಪ್ಪ ನಮಗೆ ಯಾವುದೇ ಕಮ್ಮಿ ಮಾಡಿಲ್ಲವಾದರೂ, ಅಮ್ಮ ಬುಟ್ಟಿ ಹೆಣೆದು ಮಾರುತ್ತಿದಳು, ಹೋಲಿಗೆ ಕಲಿತು ರವಕೆ, ಸೀರೆ ಜಿಗ್ ಝಗ್, ಫಾಲ್ಸ್, ಸೆರಗಿಗೆ ಕುಚ್ಚುಕಟ್ಟುವುದು ಹೀಗಿಲ್ಲ ಮಾಡಿ ಸಂಪಾದಿಸುತ್ತಿದಳು. ಹಪ್ಪಳ ಮಾಡಿ ಮಾರುತ್ತಿದಳು. ಬಿಡುವಿಲ್ಲದಷ್ಟು ಕೆಲಸ ಮಾಡುತಿದ್ದಳು. ಹೀಗೆ ಮಾಡಿ ಕುಡಿಸಿಟ್ಟ ಹಣವನ್ನು ಚೀಟಿ ಹಾಕುತ್ತಿದಳು. ಒಂದು ದೊಡ್ಡಮಟ್ಟಿನ ಹಣ ಸಂಗ್ರಹವಾದಮೇಲೆ ನನಗೆ ವಡವೆ ಗಲ್ಲುನು ಮಾಡಿಸುತ್ತಿದ್ದಳು. ಅವರಪ್ಪ ಅಂದರೆ ನನ್ನ ಅಜ್ಜ ಆಕೆಗೆ *** ಗ್ರಾಂ ಚಿನ್ನ ಮದುವೆ ಯಲ್ಲಿ ಹಾಕಿ ಕಳಿಸಿದ್ದರಂತೆ. ಅಷ್ಟೇ ಅವಳು ನನಗು ಕೊಡಬೇಕು ಅನ್ನುವುದು ಅವಳಿಷ್ಟವಾಗಿತ್ತು. ಎಲ್ಲವೂ ಸರಿಯಾಗಿಯೇ ಅವಳಂದುಕೊಂಡಂತೆ ಇತ್ತು.  ಚಿನ್ನವು ಅವಳಿಗನಿಸಿದಷ್ಟು ಮಾಡಿಸಿದಳು. ಸೊಸೆಗೆಂದು ಮಾಡತೊಡಗಿದಳು. ನಾನು ಶಾಲೆ ಮುಗಿಸಿ ಕಾಲೇಜು ಮೆಟ್ಟಿಲು ಹತ್ತಿದೆ. ಆಕೆಗೀಗ ನನ್ನ ಮದುವೆಗೆ ಹಣ ಸಂಗ್ರಹಿಸುವ ಯೋಚನೆ ಬಂತು. ಚಿನ್ನ ಗಿನ್ನ ಸಾಕು. ಮದುವೆಯ ಕರ್ಚಿಗಾಗಬೇಕಲ್ಲ ವೆಂದು ನನ್ನ ಕಾಲೇಜು ಗೆಳತಿಯ ಅಮ್ಮನ ಬಳಿ ಚೀಟಿ ಹಾಕಿದಳು. ನನ್ನ ಗೆಳತಿಯ ಅಪ್ಪ ನಮ್ಮ ಕಾಲೇಜು ನಲ್ಲಿಯೇ ಒಳ್ಳೆಯ ಉದ್ಯೋಗದಲ್ಲಿದ್ದರು. ಅವರಮ್ಮ ಏನೋ ತನ್ನ ಸಂತಾನದ ಉದ್ದಾರಕೆಂದು ಹೆಚ್ಚೇ ಆಮಿಷಕ್ಕೆ ಒಳಗಾಗಿ ಕೈಲಾಗಷ್ಟು ವ್ಯವಹಾರ ಮಾಡಿ ಶಾರ್ಟ್ ಕಟ್ ನಲ್ಲಿ ಬೇಗ ಹಣಗಳಿಸ ಹೋಗಿ ಎಡವಟ್ಟು ಮಾಡಿಕೊಂಡರು. ಅದನ್ನು ಸರಿಮಾಡಿಕೊಳ್ಳ ನಮ್ಮಮ್ಮನಂತ ಎಷ್ಟು ಅಮ್ಮಂದಿರ ಹಣಕ್ಕೆ ಟೊಪ್ಪಿ ಹಾಕಿಬಿಟ್ಟರು. ಅಮ್ಮನಿಗೆ ಬಹಳಾನೇ ನೋವಾಗಿತ್ತಾದರೂ, ಅವರ ಪರಿಸ್ಥಿತಿ ಅರ್ಥಮಾಡಿಕೊಂಡು ಕ್ಷಮಿಸಿದರು. ತಾನೇ ತಪ್ಪುಮಾಡಿದೆನೇ ಎಂದು ಅತ್ತರು. ಆದರೆ ಅವರು ಈಗಲೂ ನಮ್ಮಮ್ಮನ  ಹಣ ಹಿಂತಿರುಗಿಸಲು ತಯಾರಿಲ್ಲ. ತನ್ನ ಸಂತಾನವನ್ನು ಉದ್ಧರಿಸಿರುವಳು. ಎಲ್ಲರೂ ಸಮಾಜದಲ್ಲಿ ಒಳ್ಳೆ ಸ್ನಾನಮಾನದಲ್ಲಿದಾರೆ. ಅವರಿಗೆ ಸರ್ಕಾರದಿಂದ ಪೆನ್ಷನ್ ಸಹ ಬರುತ್ತದೆ. ಯಾಕೆ ಜನರು ನಂಬಿಕೆಯ ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಶಾಶ್ವತ! ನನಗೆ ಈಗಲೂ ನೆನಪಿದೆ. ಅಮ್ಮನ ಬಳಿ ಸೀರೆ ಜಿಗ್ಝಗ್ ಮಾಡಿಸಲು ಕೇವಲ ೩ ರೂಪಾಯಿ ಇದ್ದಿತು. ಬಂದವರು ಅದರಲ್ಲಿ ಡಿಸ್ಕೌಂಟ್ ಕೇಳುತ್ತಿದ್ದರು. ೩ ರುಪಾಯಿಗೆ ಕೆಲಸ ಮಾಡಿ ಹಣ ಒಟ್ಟು ಹಾಕಿದಲ್ಲೂ. ೧೦೦ ಹಪ್ಪಳಕ್ಕೆ ೧೦-೨೫ ದು ರು. ಗಳು. ಮನೆಗೆ ಹೊಡೆದ ಹಪ್ಪಳ, ಮಾರುವುದಕ್ಕೆ ಸರಿಯಾದ ಹಪ್ಪಳ. ಹನಿ ಹನಿ ಸೇರಿ ಕೊಳ್ಳ, ಕೊಳ್ಳಗಳು ಸೇರಿ ನದಿ, ನದಿಗಳು ಸೇರಿ ಸಮುದ್ರ ಎಂಬ ಮಾತು ಅವಳನೋಡಿದಾಗ ಸತ್ಯವೆನಿಸುತ್ತದೆ. ಅವಳಿಗಾದ ಅನ್ಯಾಯ ನೆನೆಸಿಕೊಂಡರೆ ಭಯಂಕರದ ದುಃಖ್ಖವಾಗುತ್ತದೆ. ಅವಳು ಕಳೆದುಕೊಂಡಷ್ಟು ಹಣ ಈಗ ಕೇವಲ ಒಂದು ತಿಂಗಳಿನಲ್ಲಿ ನಾವೆಲ್ಲ ದುಡಿಯುತ್ತಿರಬಹುದಾದರೂ, ಅವಳ ಆ ಹಣ ಅವಳ ಜೀವನದ ಒಂದು ಸತ್ಯವಾಗಿತ್ತು. ಅವಳ ಎಷ್ಟೋ ವರ್ಷಗಳ ತಪ್ಪಸಾಗಿದ್ದಿತು. ಅವಳ ಜೀವನದ ಎಷ್ಟೋ ಕ್ಶಣಗಳಾಗಿತ್ತು, ಎಷ್ಟೋ ತ್ಯಾಗಗಳಾಗಿತ್ತು, ಎಷ್ಟೋ ಕನಸುಗಳಾಗಿತ್ತು. ಅದಕ್ಕೆ ಬೆಲೆ ಇಲ್ಲ. ಅವಳನಿರ್ಧಾರಗಳೇ ಅವಳಿಗೆ ಖುಷಿ ಕೊಟ್ಟಿದ್ದು ಹಾಗು ದುಃಖ. 

ಮೋಹ ಪಾಶದ ಬಲೆಗೆ ಸಿಲುಕಿರುವ ನಾವುಗಳು ಸುಖ ದುಃಖ್ಖಗಳಿಂದ ಮುಕ್ತವಾಗಿ ಸಂಪೂರ್ಣ ಶಂತತೆ ಪಡೆಯಲು ಎಂದಿಗೂ ಸಾಧ್ಯವಿಲ್ಲ. ಇಲ್ಲಿ ಯಾರದ್ದು/ಯಾವುದು ತಪ್ಪಿ, ಸರಿ ಇಲ್ಲ. ಎಲ್ಲವೂ ಒಂದು ಮಾಯಾಜಾಲ. ತರ್ಕಕ್ಕೆ ಸಿಲುಕದ್ದು. 













Friday, 8 January 2021

ಮೂಗು ಬೊಟ್ಟು

ಆರ್ಥಿಕತೆ ಸ್ವಾತಂತ್ರ್ಯ (Financial independence) ಎಂಬುದು ಪ್ರತಿಯೊಂದು ಮನುಷ್ಯನಿಗೆ ಎಷ್ಟು ಅಗತ್ಯ? ನಿಮಗೆ ಕೆಲವು ಸಣ್ಣ ಸಣ್ಣ ಉಧಾರಣೆಗಳನ್ನು ಕೊಡುತ್ತೇನೆ. 

ನಾನೊಂದು ಮೂಗು ಬೊಟ್ಟು ತೆಗೆದುಕೊಳ್ಳಬೇಕೆಂದು ಕಳೆದ ೮ ವರ್ಷಗಳಿಂದ ಬಯಸಿದ್ದೇನೆ. ಆದರೆ ಈ ವರೆಗೂ ತೆಗುದುಕೊಳ್ಳಲಾಗಿಲ್ಲ. ೮ ವರ್ಷಗಳ ಹಿಂದೆ ೧೦೦೦ ರು. ಗೆ ಸಿಯುತ್ತಿತ್ತೇನೋ. ಈಗ ೧೦೦೦೦ ರು. ಆದರೂ ಬೇಕು. ನೋಡುವವರಿಗೆ ನಾನು ಬಡವಳಲ್ಲ. ತಕ್ಕಮಟ್ಟಿಗೆ ಹಣವುಳ್ಳವಳೇ. ೨೦೧೫-೧೮ ವರೆಗೆ ಸಣ್ಣ ಸಣ್ಣ ಉದ್ಯೋಗಳನ್ನುಮಾಡಿದ್ದೇನೆ. ಮನೆಗೆಂದು ಒಂದಷ್ಟು ಹಣವನ್ನು ಕೊಟ್ಟಿದ್ದೇನೆ. ಆದರೆ ನನಗೆ ಸಾಕಾಗುವಷ್ಟು ಅಂದರೆ ಮೂಲಭೂತವಾದ/ ದಿನ ನಿತ್ಯದ ಖರ್ಚು ವೆಚ್ಚಗಳ ಹೊರತಾಗಿ ಬೇರೇನೂ ನಿಭಾಯಿಸಲು ಸಾಧ್ಯವಾಗಿಲ್ಲ. ನನ್ನ ಮದುವೆ ಸಮಯದಲೊಂದಷ್ಟು ಕೂಡಿಟ್ಟ ಹಣವನ್ನು ಆಡಂಬರಕ್ಕಾಗಿ ಖರ್ಚು ಮಾಡಿದ್ದೂ ಹೊರತಾಗಿ ಬೇರೆ ಏನು ಮಾಡಿಲ್ಲ. ೮ ವರ್ಷಗ ಹಿಂದೆ ಒಮ್ಮೆ ಅಮ್ಮನ ಬಳಿ ನನಗೆ ಮೂಗು ಬೊಟ್ಟು ಬೇಕೆಂದಿದ್ದೆ. ನನ್ನ ಬಳಿ ಇರುವ ಎಲ್ಲಾ ಒಡವೆಯನ್ನು ಅಮ್ಮನೇ ಕೊಡಿಸಿದ್ದಾದರೂ ಯಾಕೋ ಇಷ್ಟು ಚಿಕ್ಕ ಮೂಗುಬೊಟ್ಟು ಕೊಡಿಸಲು ಅಂದು ಅವಳು ಮನಸು ಮಾಡಿರಲಿಲ್ಲ. ಅದಾದ ನಂತರ ಯಾವತ್ತೂ ಅದರ ಬಗ್ಗೆ ಅವಳಲ್ಲಿ ಪ್ರಸ್ತಾಪಿಸಲಿಲ್ಲ. ಮದುವೆ ಆದ ಮೇಲೆ ನನ್ನ ಗಂಡನ ಬಳಿ ಒಂದು ೪-೫ ಸಲ ಹೇಳಿದ್ದೆ ಏನು ಬೇಕು ಅಂತ ಕೇಳಿದಾಗಲೆಲ್ಲ!!! ಅವರು ಯಾಕೋ ಇನ್ನು ಮನಸೇ ಮಾಡಿಲ್ಲ ಕೊಡಿಸೋದಕ್ಕೆ!!! ಪಿಹೆಚ್.ಡಿ . ಡಿಫೆನ್ಸ್ ಆದನಂತರ ನನ್ನ ಸ್ನೇಹಿತರಿಗೆ ಹಾಗು ಡೆಪಾರ್ಮೆಂಟ್ ಮಂದಿಗೆ ಊಟ ಕೊಡಿಸಬೇಕೆಂದು, ಥೀಸಿಸ್ ಪ್ರಿಂಟ್ ಮಾಡಿಸಲೆಂದು ಹಾಗು ಒಂದು ಕ್ಯಾಮೆರಾ ತೆಗುದು ಕೊಳ್ಳಬೇಕೆಂದು  ಒಂದಷ್ಟು ಸಣ್ಣ ಮಟ್ಟಿನ ಹಣ ಕೂಡಿಟ್ಟಿದು ಹಾಗೆ ಇದೆ. ಆದರೂ ಅದನ್ನು ಮೂಗು ಬೊಟ್ಟು ತೆಗೆದು ಕೊಳ್ಳಲು ಬಳಸಿಲ್ಲ!! ಹೇಳಿಕೊಳ್ಳಲು ನಮ್ಮ ಮೂವರಿಗೂ  ಮೂಗು ಬೊಟ್ಟಿಗೆ ತೆಗೆದು ಕೊಳ್ಳುವುದು ಒಂದು ದೊಡ್ಡ ವಿಷಯವೇ ಅಲ್ಲ. ಆದರೂ ತೆಗೆದು ಕೊಳ್ಳಲಾಗುತ್ತಿಲ್ಲ. ಹಣಕಾಸಿನ ವ್ಯವಹಾರ ಗೌಪ್ಯವಾಗಿರಬೇಕು ಹೌದು ಆದರೆ ನಾನಿಲ್ಲಿ ಇಷ್ಟು ವಿವರಣೆ ಕೊಟ್ಟಿದ್ದು ಕೇವಲ ಫೈನಾನ್ಸಿಯಲ್ ಇಂಡಿಪೆಂಡೆನ್ಸ್ ಎಷ್ಟು ಮುಖ್ಯ ಎಂದು ಹೇಳಲು. 

ನಾ ಹೇಳುವುದಿಷ್ಟೇ, ಕಳೆದುಹೋದ ಸಮಯ ಕಳೆದು ಹೋಯಿತು. ಎಷ್ಟೇ ಹುಡುಕಿದರು ಮತ್ತೆ ಸಿಗದು. ಅವರವರ ಬಾಯಿಗೆ ಅವರವರ ಕೈ. ಆದಷ್ಟು ದುಡಿಯೋಣ. ನಾವು ಬೆಳೆಯೋಣ, ನಮ್ಮವರನ್ನು ಬೆಳೆಸೋಣ.  ಕೆಲಸಗಳಲ್ಲಿ ಸಣ್ಣದು ದೊಡ್ಡದು ಎಂಬ ಭೇದ ಬೇಡ. ಏನು ಇಲ್ಲ ಎಂಬುದಕ್ಕಿಂತ ಏನೋ ಸ್ವಲ್ಪವಾದರೂ ಇದೆ ಎಂಬುದು ನೆಮ್ಮದಿ ತರುತ್ತದೆ.!